ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಸೋಂಕಿತ ಮಕ್ಕಳಿಗೆ ಅಗತ್ಯವಾದ ಆರೈಕೆ ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದರಲ್ಲಿ ಯಾವುದೇ ಕೊರತೆ ಇರುವುದಿಲ್ಲ:  ನೀತಿ ಆಯೋಗದ ಸದಸ್ಯರು


ಸೋಂಕಿಗೆ ಒಳಗಾದ ಶೇ. 2 - ಶೇ. 3 ಮಕ್ಕಳಿಗೆ ಆಸ್ಪತ್ರೆಯ ಅಗತ್ಯವಿರಬಹುದು: ಡಾ.ವಿ.ಕೆ. ಪಾಲ್

ಕೋವಿಡ್ ಸೋಂಕಿತ ಮಕ್ಕಳೊಂದಿಗೆ ವ್ಯವಹರಿಸುವ ಮಾರ್ಗಸೂಚಿಗಳು ಶೀಘ್ರದಲ್ಲೇ ಹೊರಬರಲಿವೆ

Posted On: 01 JUN 2021 6:09PM by PIB Bengaluru

ಮಕ್ಕಳಲ್ಲಿ ಕೋವಿಡ್ -19 ಸೋಂಕು ಪರಿಶೀಲಿಸಲು ಮತ್ತು ಸಾಂಕ್ರಾಮಿಕ ರೋಗವನ್ನು ಹೊಸ ರೀತಿಯಲ್ಲಿ ಪರಿಶೀಲಿಸಲು, ರಾಷ್ಟ್ರದ ಸನ್ನದ್ಧತೆಯನ್ನು ಬಲಪಡಿಸಲು ರಾಷ್ಟ್ರೀಯ ತಜ್ಞರ ಗುಂಪನ್ನು ರಚಿಸಲಾಗಿದೆ.  4 - 5 ತಿಂಗಳ ಮೊದಲು ಲಭ್ಯವಿಲ್ಲದಿದ್ದ  ಚಿಹ್ನೆಗಳನ್ನು ಗುಂಪು ಪರಿಶೀಲಿಸಿದೆ. ಇದು ಲಭ್ಯವಿರುವ ದತ್ತಾಂಶ, ಕ್ಲಿನಿಕಲ್ ಪ್ರೊಫೈಲ್, ದೇಶದ ಅನುಭವ, ರೋಗದ ಲಕ್ಷಣ, ವೈರಸ್ ಮತ್ತು ಸಾಂಕ್ರಾಮಿಕ ರೋಗಗಳನ್ನೂ ಸಹ ಪರಿಗಣಿಸಿ ಮಾರ್ಗಸೂಚಿಗಳೊಂದಿಗೆ ಬಂದಿದ್ದು, ಶೀಘ್ರದಲ್ಲೇ ಸಾರ್ವಜನಿಕವಾಗಿ ಬಿಡುಗಡೆಯಾಗಲಿದೆಪಿಐಬಿ ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಇಂದು ನಡೆದ ಕೋವಿಡ್ -19 ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಮಾಧ್ಯಮಗೋಷ್ಠಿಯಲ್ಲಿ ಬಗ್ಗೆ ನೀತಿ ಆಯೋಗದ ಸದಸ್ಯರಾದ (ಆರೋಗ್ಯ) ಡಾ.ವಿ.ಕೆ. ಪಾಲ್ ತಿಳಿಸಿದರು "ನಾವು ಪ್ರದೇಶದಲ್ಲಿನ ವೈಜ್ಞಾನಿಕ ಬೆಳವಣಿಗೆಗಳನ್ನು ವ್ಯವಸ್ಥಿತವಾಗಿ ಪರಿಶೀಲಿಸುತ್ತಿದ್ದರೂ, ಪರಿಸ್ಥಿತಿಯ ತಾಜಾ ವಿವರಗಳನ್ನು ಪಡೆಯಲು ತಂಡವನ್ನು ರಚಿಸಲಾಗಿದೆ."

ಪೀಡಿಯಾಟ್ರಿಕ್ (ಮಕ್ಕಳ) ಕೋವಿಡ್ -19 ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ ಅವರು, ಸೋಂಕಿಗೆ ಒಳಗಾಗುವ ಮಕ್ಕಳಿಗೆ ಅಗತ್ಯವಾದ ಆರೈಕೆ ಮತ್ತು ಮೂಲಸೌಕರ್ಯಗಳಲ್ಲಿ ಯಾವುದೇ ಕೊರತೆ ಇರುವುದಿಲ್ಲ ಎಂದು ತಿಳಿಸಿದರು. "ಮಕ್ಕಳಲ್ಲಿ ಕೋವಿಡ್-19 ಸಾಮಾನ್ಯವಾಗಿ ಲಕ್ಷಣರಹಿತವಾಗಿರುತ್ತದೆ ಮತ್ತು ವಿರಳವಾಗಿ ಆಸ್ಪತ್ರೆಗೆ ಸೇರಿಸುವ ಅಗತ್ಯವಿರುತ್ತದೆ. ಆದರೂ, ಸಾಂಕ್ರಾಮಿಕ  ಮಾದರಿಗಳು ಅಥವಾ ವೈರಾಣುವಿನ ನಡವಳಿಕೆಯ ಬದಲಾವಣೆಗಳು ಪರಿಸ್ಥಿತಿಯನ್ನು ಬದಲಾಯಿಸಬಹುದು ಮತ್ತು ಸೋಂಕಿನ ಹರಡುವಿಕೆಯನ್ನು ಹೆಚ್ಚಿಸಬಹುದು. ಮಕ್ಕಳ ಆರೈಕೆಯ ಮೂಲಸೌಕರ್ಯಗಳ ಮೇಲೆ ಇದುವರೆಗೆ ಯಾವುದೇ ಅನಗತ್ಯ ಹೊರೆ ಹಾಕಲಾಗಿಲ್ಲ. ಆದಾಗ್ಯೂ, ಸೋಂಕಿಗೆ ಒಳಗಾದ ಶೇ. 2- 3 ಮಕ್ಕಳಿಗೆ ಆಸ್ಪತ್ರೆಗೆ ದಾಖಲು ಮಾಡುವ ಸಾಧ್ಯತೆಯಿದೆ.

ಪೀಡಿಯಾಟ್ರಿಕ್ ಕೋವಿಡ್ -19 ಎರಡು ರೂಪಗಳು

ಮಕ್ಕಳಲ್ಲಿ ಕೋವಿಡ್ -19 ಎರಡು ರೂಪಗಳನ್ನು ಪಡೆದುಕೊಳ್ಳಬಹುದು ಎಂದು ಡಾ. ಪಾಲ್ ತಿಳಿಸುತ್ತಾರೆ:

1. ಒಂದನೆಯ ರೂಪದಲ್ಲಿ, ಸೋಂಕು, ಕೆಮ್ಮು, ಜ್ವರ ಮತ್ತು ನ್ಯುಮೋನಿಯಾದಂತಹ ಲಕ್ಷಣಗಳು ಸಂಭವಿಸಬಹುದು, ಕೆಲವು ಸಂದರ್ಭಗಳಲ್ಲಿ ಆಸ್ಪತ್ರೆಗೆ ದಾಖಲಾಗ ಬೇಕಾಗುತ್ತದೆ.

2. ಎರಡನೆಯದರಲ್ಲಿ, ಕೋವಿಡ್  ಸೋಂಕಿನ 2-6 ವಾರಗಳ ನಂತರ, ಇದು ಹೆಚ್ಚಾಗಿ ಲಕ್ಷಣ ರಹಿತವಾಗಿರಬಹುದು, ಮಕ್ಕಳಲ್ಲಿ ಸಣ್ಣ ಪ್ರಮಾಣದ ಜ್ವರ, ದೇಹದಲ್ಲಿ ದದ್ದು, ಮತ್ತು ಕಣ್ಣುಗಳ ಉರಿಯೂತ ಅಥವಾ ಕಂಜಂಕ್ಟಿವಿಟಿಸ್ (ಕಣ್ಣು ಉರಿ), ಉಸಿರಾಟದ ತೊಂದರೆಗಳು, ಅತಿಸಾರ, ವಾಂತಿ, ಇತ್ಯಾದಿ ಕಾಣಿಸಿಕೊಳ್ಳುವುದು. ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ನ್ಯುಮೋನಿಯಾದಂತೆ ಒಂದೇ ಕಡೆ ಉಳಿಯುವುದಿಲ್ಲ. ಇದು ದೇಹದ ವಿವಿಧ ಭಾಗಗಳಿಗೆ ಹರಡುತ್ತದೆ. ಇದನ್ನು ಮಲ್ಟಿ-ಸಿಸ್ಟಮ್ ಇನ್ಫ್ಲಮೇಟರಿ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದು ಕೋವಿಡ್ ನಂತರದ ಲಕ್ಷಣವಾಗಿದೆ. ಸಮಯದಲ್ಲಿ, ದೇಹದಲ್ಲಿ ವೈರಸ್ (ವೈರಾಣು) ಕಂಡುಬರುವುದಿಲ್ಲ ಮತ್ತು ಆರ್ ಟಿ-ಪಿಸಿಆರ್ ಪರೀಕ್ಷೆಯು ಸಹ  ನೆಗಟಿವ್ ಆಗಿರುತ್ತದೆ. ಆದರೆ ಪ್ರತಿಕಾಯ ಪರೀಕ್ಷೆಯು ಮಗುವಿಗೆ ಕೋವಿಡ್ ಸೋಂಕು ಇತ್ತು ಎಂದು ತೋರಿಸುತ್ತದೆ.

ಕೆಲವು ಮಕ್ಕಳಲ್ಲಿ ಕಂಡುಬರುವ ವಿಶಿಷ್ಟ ಕಾಯಿಲೆಗೆ ಚಿಕಿತ್ಸೆ ನೀಡಲು ಮಾರ್ಗಸೂಚಿಗಳನ್ನು ರೂಪಿಸಲಾಗುತ್ತಿದೆ ಕಾಯಿಲೆಗೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ.. ಚಿಕಿತ್ಸೆಯು ಕಷ್ಟಕರವಲ್ಲವಾದರೂ, ಅದು ಸಮಯೋಚಿತವಾಗಿರಬೇಕು ಎಂದು ಡಾ. ಪಾಲ್ ಹೇಳುತ್ತಾರೆ.

***(Release ID: 1723514) Visitor Counter : 207