ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

‘ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್’ (ಪಿಎಂಜಿಕೆಪಿ) ಅಡಿಯಲ್ಲಿ: ಕೋವಿಡ್ -19 ರ ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆ - ಪ್ರಕ್ರಿಯೆಯನ್ನು ಸುಗಮಗೊಳಿಸಲು ಪರಿಚಯಿಸಲಾದ ವಿಮಾ ಹಕ್ಕುಕೋರಿಕೆಗಳ ಪ್ರಕ್ರಿಯೆಯ ಹೊಸ ವ್ಯವಸ್ಥೆ


ಜಿಲ್ಲಾಧಿಕಾರಿಯಿಂದ ಪ್ರಮಾಣೀಕರಿಸಬೇಕಾದ ಹಕ್ಕುಕೋರಿಕೆಗಳು;  ವಿಮಾ ಕಂಪನಿಯು 48 ಗಂಟೆಗಳ ಅವಧಿಯಲ್ಲಿ ಹಕ್ಕುಕೋರಿಕೆಗಳನ್ನು ಅನುಮೋದಿಸುವುದು ಮತ್ತು ಇತ್ಯರ್ಥಗೊಳಿಸುವುದು

ಮುಂಚೂಣಿ ಆರೋಗ್ಯ ಕಾರ್ಯಕರ್ತರ ಸುರಕ್ಷತೆಯು ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ

Posted On: 01 JUN 2021 3:30PM by PIB Bengaluru

ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರವು ಮುಂಚೂಣಿಯಲ್ಲಿದೆ ಮತ್ತು ವೋಲ್ ಆಫ್ ಗವರ್ನಮೆಂಟ್ವಿಧಾನದಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳಿಗೆ ಬೆಂಬಲ ನೀಡುತ್ತಿದೆ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ಕೋವಿಡ್ -19 ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ವಿಮಾ ಯೋಜನೆಯನ್ನು 24.4.2021ರಿಂದ ಜಾರಿಯಾಗುವಂತೆ ಈಗಾಗಲೇ ಒಂದು ವರ್ಷದವರೆಗೆ ವಿಸ್ತರಿಸಿದೆ

ಮುಂಚೂಣಿ ಆರೋಗ್ಯ ಕಾರ್ಯಕರ್ತರ  ಸುರಕ್ಷತೆಯು ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ, ಆದ್ದರಿಂದ ಕೇಂದ್ರ ಸರ್ಕಾರವು ವಿಮಾ ಪಾಲಿಸಿಯನ್ನು ಒಂದು ವರ್ಷದ ಅವಧಿಗೆ ನವೀಕರಿಸಿತ್ತು, ಇದರಿಂದಾಗಿ ಕೋವಿಡ್ -19 ರೋಗಿಗಳನ್ನು ನೋಡಿಕೊಳ್ಳುತ್ತಿರುವ ಆರೋಗ್ಯ ಕಾರ್ಯಕರ್ತರನ್ನು ಆಶ್ರಯಿಸಿದವರಿಗೆ ಸುರಕ್ಷತೆಯನ್ನು ಒದಗಿಸುವುದನ್ನು ಮುಂದುವರಿಸಲಾಗುತ್ತದೆ.

ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ಆರೋಗ್ಯ ಕಾರ್ಯಕರ್ತರಿಗೆ ಹೋರಾಡುವ ಕೋವಿಡ್ -19 ವಿಮಾ ಯೋಜನೆಅನ್ನು 30.3.2020 ರಿಂದ ಆರಂಭದಲ್ಲಿ 90 ದಿನಗಳ ಅವಧಿಗೆ ಕೋವಿಡ್ -19 ರೋಗಿಗಳ ಆರೈಕೆಗಾಗಿ ಇರುವ ಮತ್ತು  ಕೋವಿಡ್ -19 ರೋಗಿಗಳ ನೇರ ಸಂಪರ್ಕಕ್ಕೆ ಬರಬಹುದಾದ ಮತ್ತು ಅದರಿಂದ ಅಪಾಯಕ್ಕೊಳಗಾಗುವ ಸಂಭವವಿರುವ ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ಖಾಸಗಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಎಲ್ಲಾ ಆರೋಗ್ಯ ಸೇವೆ ಒದಗಿಸುವವರಿಗೆ 50 ಲಕ್ಷ ರೂ.ಗಳ ಸಮಗ್ರ ವೈಯಕ್ತಿಕ ಅಪಘಾತ ವಿಮೆವನ್ನು ಒದಗಿಸಿತು. ಸರ್ಕಾರದಿಂದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ (ಎನ್ಐಎಸಿಎಲ್) ಯಿಂದ ವಿಮಾ ಪಾಲಿಸಿಯ ಮೂಲಕ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ವಿಮಾ ಪಾಲಿಸಿಯನ್ನು ಇಲ್ಲಿಯವರೆಗೆ ಎರಡು ಬಾರಿ ವಿಸ್ತರಿಸಲಾಗಿದೆ.

ವಿಮಾ ಹಕ್ಕುಕೋರಿಕೆಗಳ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ವಿಷಯವನ್ನು ರಾಜ್ಯಗಳು ಮತ್ತು ಇತರ ಮಧ್ಯಸ್ಥಗಾರರು ಗಮನಕ್ಕೆ ತಂದಿದ್ದರು. ವಿಳಂಬಗಳನ್ನು ಕಡಿಮೆ ಮಾಡಲು ಮತ್ತು ವಿಮಾ ಹಕ್ಕುಕೋರಿಕೆಗಳ ಪ್ರಕ್ರಿಯೆಯನ್ನು ಮತ್ತಷ್ಟು ಸುಗಮಗೊಳಿಸಲು ಮತ್ತು ಸರಳೀಕರಿಸಲು, ಹಕ್ಕುಕೋರಿಕೆಗಳ ಅನುಮೋದನೆಗಾಗಿ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ, ಅದರ ಪ್ರಕಾರ ರಾಜ್ಯ ಸರ್ಕಾರಗಳು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ  ಕಾರ್ಯ ನಿರ್ವಹಿಸಲಿವೆ. ಪ್ರತಿ ಪ್ರಕರಣದಲ್ಲೂ ಜಿಲ್ಲಾಧಿಕಾರಿಯು ಹಕ್ಕುಕೋರಿಕೆ ಯೋಜನೆಯ  ಕಾರ್ಯವಿಧಾನಕ್ಕೆ ಅನುಗುಣವಾಗಿದೆ ಎಂದು ಪ್ರಮಾಣೀಕರಿಸುತ್ತಾರೆಜಿಲ್ಲಾಧಿಕಾರಿಯವರ ಪ್ರಮಾಣಪತ್ರದ ಆಧಾರದ ಮೇಲೆ, ವಿಮಾ ಕಂಪನಿಯು 48 ಗಂಟೆಗಳ ಅವಧಿಯಲ್ಲಿ ಹಕ್ಕುಕೋರಿಕೆಗಳನ್ನು ಅನುಮೋದಿಸುತ್ತದೆ ಮತ್ತು ಇತ್ಯರ್ಥಪಡಿಸುತ್ತದೆ. ಇದಲ್ಲದೆ, ಏಕರೂಪತೆ ಮತ್ತು ತ್ವರಿತ ವಿಲೇವಾರಿಗಾಗಿ, ಜಿಲ್ಲಾಧಿಕಾರಿಗಳು ತಕ್ಕುದಾದ ಕಾರ್ಯವನ್ನು ಮಾಡುತ್ತಾರೆ ಮತ್ತು ಕೇಂದ್ರ ಸರ್ಕಾರದ ಆಸ್ಪತ್ರೆಗಳು / ಏಮ್ಸ್ / ರೈಲ್ವೆ ಇತ್ಯಾದಿಗಳಲ್ಲೂ ಸಹ ಹಕ್ಕುಕೋರಿಕೆಗಳನ್ನು ಪ್ರಮಾಣೀಕರಿಸುತ್ತಾರೆ.

ತಕ್ಷಣವೇ ಜಾರಿಗೆ ಬರುವ ಹೊಸ ವ್ಯವಸ್ಥೆಯ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ.

***


(Release ID: 1723440) Visitor Counter : 374