ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ತಾಜಾ  ಮಾಹಿತಿ

Posted On: 01 JUN 2021 9:15AM by PIB Bengaluru

ಭಾರತದಲ್ಲಿ 54 ದಿನಗಳಲ್ಲೇ ಅತ್ಯಂತ ಕನಿಷ್ಠ, 1.27 ಲಕ್ಷ ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ; ಹೊಸ ಪ್ರಕರಣಗಳಲ್ಲಿ ಇಳಿಕೆ ಪ್ರವೃತ್ತಿ ಮುಂದುವರಿದಿದೆ.

ಭಾರತದ ಸಕ್ರಿಯ ಪ್ರಕರಣಗಳ ಹೊರೆ ಮತ್ತಷ್ಟು ತಗ್ಗಿ 18,95,520ಕ್ಕೆ ಕುಸಿದಿದೆ. 43 ದಿನಗಳ ನಂತರ ಪ್ರಮಾಣ 20 ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ.

ಸಕ್ರಿಯ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ 1,30,572 ರಷ್ಟು ಕಡಿಮೆಯಾಗಿವೆ.

ದೇಶಾದ್ಯಂತ ಈವರೆಗೆ 2,59,47,629 ಮಂದಿ ಗುಣಮುಖರಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ 2,55,287 ರೋಗಿಗಳು ಚೇತರಿಸಿಕೊಂಡಿದ್ದಾರೆ.

ಸತತ 19 ದಿನಗಳಿಂದಲೂ ಚೇತರಿಕೆ ಪ್ರಕರಣಗಳ ಸಂಖ್ಯೆ ಹೊಸ ಸೋಂಕಿನ ಪ್ರಕರಣಗಳಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಮುಂದುವರಿದಿದೆ.

ಚೇತರಿಕೆ ದರದಲ್ಲಿ ಹೆಚ್ಚಳ ಮುಂದುವರಿದಿದ್ದು, ಇಂದು 92.09% ರಷ್ಟು ದಾಖಲಾಗಿದೆ.

ಸಾಪ್ತಾಹಿಕ ಧನಾತ್ಮಕತೆಯ ದರವು ಪ್ರಸ್ತುತ 8.64% ಗೆ ನಿಗದಿಪಡಿಸಲಾಗಿದೆ.

ದೈನಂದಿನ ಪಾಸಿಟಿವಿಟಿ ದರವು 6.62%ಗೆ ಇಳಿಕೆಯಾಗಿದ್ದು, ಇದು ಸತತ 8 ದಿನಗಳಿಂದಲೂ ಶೇ. 10ಕ್ಕಿಂತ ಕಡಿಮೆ ದರದಲ್ಲಿ ಮುಂದುವರಿದಿದೆ.

ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಒಟ್ಟು 34.67 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೂ 21.6 ಕೋಟಿ ಲಸಿಕೆ ಡೋಸ್ಗಳನ್ನು ನೀಡಲಾಗಿದೆ.

***


(Release ID: 1723384) Visitor Counter : 277