ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಾ. ಹರ್ಷ ವರ್ಧನ್ ಅವರು 2021 ‘ವಿಶ್ವ ತಂಬಾಕು ರಹಿತ ದಿನ’ ದಂದು ತಂಬಾಕಿನಿಂದ ದೂರವಿರುವುದಾಗಿ ಪ್ರತಿಜ್ಞೆ ಕೈಗೊಳ್ಳುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು


“ತಂಬಾಕು ರಹಿತ ವಿಶ್ವ ದಿನ” 2021 ರ ಧ್ಯೇಯವಾಕ್ಯ - “ತ್ಯಜಿಸಲು ಬದ್ಧರಾಗಿರಿ”

"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇ-ಸಿಗರೇಟ್ ಭೀತಿಯ ವಿರುದ್ಧ ದೇಶಾದ್ಯಂತ ಚಳವಳಿಯನ್ನು ಮುನ್ನಡೆಸಿದರು"

"ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸತತ ಪ್ರಯತ್ನದಿಂದಾಗಿ, ತಂಬಾಕು ಬಳಕೆಯ ಪ್ರಮಾಣವು 2009-10 ರಲ್ಲಿ 34.6% ರಿಂದ 2016-17ರಲ್ಲಿ 28.6% ಕ್ಕೆ ಶೇಕಡಾ ಆರರಷ್ಟು ಕಡಿಮೆಯಾಗಿದೆ"

"ಶುಲ್ಕ ರಹಿತ ಕ್ಟಿಟ್ ಲೈನ್ ಸೇವೆಗಳು ಈಗ 16 ಭಾಷೆಗಳಲ್ಲಿ ಲಭ್ಯವಿದೆ. ಜನರು ತಮ್ಮ ನಡವಳಿಕೆಯನ್ನು ಬದಲಾಯಿಸಲು ಮತ್ತು ತಂಬಾಕು ಬಳಕೆಯನ್ನು ತ್ಯಜಿಸುವಂತೆ ನಾನು ಮನವಿ ಮಾಡುತ್ತೇನೆ”: ಡಾ. ಹರ್ಷ ವರ್ಧನ್

Posted On: 31 MAY 2021 3:03PM by PIB Bengaluru

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ ವರ್ಧನ್ ಅವರು ಇಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಮತ್ತು ತಂಬಾಕಿನಿಂದ ದೂರವಿರಲು ಹಾಜರಿದ್ದ ಪ್ರತಿಯೊಬ್ಬರ ಪ್ರತಿಜ್ಞೆಯ ಕಾರ್ಯವನ್ನು ಮುನ್ನಡೆಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರು ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಮುಖಾಂತರ ಭಾಗವಹಿಸಿದರು.

ಸಮಾರಂಭದಲ್ಲಿ ತಮ್ಮ ಸಮಾಧಾನ ವ್ಯಕ್ತಪಡಿಸಿದ ಸಚಿವರು, “ಭಾರತದಲ್ಲಿ, ತಂಬಾಕು ಬಳಕೆಯಿಂದ ಪ್ರತಿವರ್ಷ 1.3 ದಶಲಕ್ಷಕ್ಕೂ ಹೆಚ್ಚು ಸಾವುಗಳು ಹಾಗು ದಿನಕ್ಕೆ 3500 ಸಾವುಗಳು ಸಂಭವಿಸುತ್ತಿದ್ದು, ಸಾಮಾಜಿಕ-ಆರ್ಥಿಕ ಹೊರೆಗಳಿಗೆ ಕಾರಣವಾಗಿವೆ. ಸಾವು ಮತ್ತು ತಂಬಾಕು ಉಂಟುಮಾಡುವ ರೋಗಗಳ ಜೊತೆಗೆ, ದೇಶದ ಆರ್ಥಿಕ ಅಭಿವೃದ್ಧಿಯ ಮೇಲೂ ಪರಿಣಾಮ ಬೀರುತ್ತದೆ. ” ಕೋವಿಡ್-19 ನಿಂದ ಧೂಮಪಾನಿಗಳು ತೀವ್ರ ರೋಗ ಮತ್ತು ಸಾವುಗಳ ಅಪಾಯವನ್ನು ಶೇ.40-50% ಹೆಚ್ಚು ಎದುರಿಸುತ್ತಾರೆ ಎಂದು ಅವರು ಗಮನಸೆಳೆದರು. "ಭಾರತದಲ್ಲಿ ತಂಬಾಕು ಬಳಕೆಗೆ ಕಾರಣವಾದ ರೋಗಗಳು ಮತ್ತು ಸಾವುಗಳ ಆರ್ಥಿಕ ವೆಚ್ಚಗಳು" ಎಂಬ ಶೀರ್ಷಿಕೆಯ ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ಪ್ರಕಾರ, ಭಾರತದಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗಗಳು ಮತ್ತು ಸಾವುಗಳ ಆರ್ಥಿಕ ಹೊರೆಯು ರೂ. 1.77 ಲಕ್ಷ ಕೋಟಿಯಾಗಿದ್ದು, ಇದು ಜಿಡಿಪಿಯ ಅಂದಾಜು ಪ್ರತಿಶತ ಒಂದರಷ್ಟಿದೆ.

ಡಾ. ಹರ್ಷ್ ವರ್ಧನ್ ಅವರು ಕಾನೂನು ಮತ್ತು ಆಡಳಿತಾತ್ಮಕ ವಿಧಾನಗಳ ಮೂಲಕ ಹೇಗೆ ತಂಬಾಕು ಸೇವಿಸುವವರ ಪ್ರಮಾಣವನ್ನು ತಗ್ಗಿಸಲಾಯಿತು ಎಂದು ದೇಶದ ಸುದೀರ್ಘ ಇತಿಹಾಸವನ್ನು ವಿವರಿಸಿದರು.

"ಭಾರತದಲ್ಲಿ ತಂಬಾಕು ನಿಯಂತ್ರಣ ಶಾಸನವು" ಸಿಗರೇಟ್ ಕಾಯ್ದೆ, 1975 " ಕ್ಕೂ ಹಿಂದಿನದು, ಇದು ಜಾಹೀರಾತಿನಲ್ಲಿ ಮತ್ತು ಪೆಟ್ಟಿಗೆಗಳು ಮತ್ತು ಸಿಗರೇಟ್ ಪ್ಯಾಕೇಟುಗಳಲ್ಲಿ ಶಾಸನಬದ್ಧ ಆರೋಗ್ಯ ಎಚ್ಚರಿಕೆಗಳನ್ನು ಪ್ರದರ್ಶಿಸಲು ಆದೇಶಿಸುತ್ತದೆ" ಎಂದು ಅವರು ಹೇಳಿದರು.

ಕೇಂದ್ರ ಆರೋಗ್ಯ ಸಚಿವರು ತಮ್ಮ ವೃತ್ತಿಜೀವನದ ಪ್ರತಿಯೊಂದು ಹಂತದಲ್ಲೂ ತಂಬಾಕು ವಿರುದ್ಧದ ಸುದೀರ್ಘ ಹೋರಾಟವನ್ನು ನೆನಪಿಸಿಕೊಂಡರು: “ದೆಹಲಿ ಆರೋಗ್ಯ ಸಚಿವರಾಗಿ, 'ದೆಹಲಿ ಧೂಮಪಾನ ನಿಷೇಧ ಮತ್ತು ಧೂಮಪಾನಿಗಳ ಆರೋಗ್ಯ ಸಂರಕ್ಷಣಾ ಕಾಯ್ದೆ' ಯನ್ನು ರೂಪಿಸಲು ತಮಗೆ ಸಿಕ್ಕ ಅವಕಾಶ ಮತ್ತು ಅದನ್ನು 1997 ರಲ್ಲಿ ದೆಹಲಿ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಬಗ್ಗೆ ತಿಳಿಸಿದರು. ಈ ಶಾಸನವು ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸುವ ಕೇಂದ್ರ ಶಾಸನಕ್ಕೆ ಮಾದರಿಯಾಯಿತು. ಇದರ ನಂತರ 2003 ರಲ್ಲಿ ಸಮಗ್ರ ತಂಬಾಕು ನಿಯಂತ್ರಣ ಶಾಸನವು [ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ವ್ಯಾಪಾರ, ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ಜಾಹೀರಾತು ಮತ್ತು ನಿಯಂತ್ರಣ ನಿಷೇಧ) ಕಾಯ್ದೆ -ಸಿಒಟಿಪಿಎ, 2003] ಇದು ಧೂಮಪಾನ ಮುಕ್ತ ಸಾರ್ವಜನಿಕ ಸ್ಥಳಗಳನ್ನು ಹಾಗೂ ತಂಬಾಕು ಜಾಹೀರಾತು ಮತ್ತು ಪ್ರಚಾರಗಳಿಗೆ ಸ್ಥಳಗಳನ್ನು ಒದಗಿಸುವುದಕ್ಕೆ ನಿರ್ಬಂದ ಹೇರುವ ಗುರಿ ಹೊಂದಿದೆ. ” ಡಾ. ಹರ್ಷ್ ವರ್ಧನ್ ಅವರ ಕೊಡುಗೆಯಿಂದಾಗಿ ಅವರು ವಿಶ್ವಾದ್ಯಂತ ಮೆಚ್ಚುಗೆಯನ್ನು ಪಡೆದರು ಮತ್ತು ಈ ಐತಿಹಾಸಿಕ ಪ್ರಯತ್ನಕ್ಕಾಗಿ, ಅವರು ತಂಬಾಕು ಮುಕ್ತ ಸಮಾಜಕ್ಕಾಗಿ ಕೆಲಸ ಮಾಡಿದ್ದಕ್ಕಾಗಿ ರಿಯೊ-ಡಿ-ಜನೈರೊ ಬ್ರೆಜಿಲ್ ನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರ ಮೆಚ್ಚುಗೆಯ ಪದಕ ಮತ್ತು ಪ್ರಮಾಣಪತ್ರವನ್ನು ಮೇ -1989 ರಲ್ಲಿ ಪಡೆದರು. 

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸತತ ಪ್ರಯತ್ನದಿಂದಾಗಿ, ತಂಬಾಕು ಬಳಕೆಯ ಪ್ರಮಾಣವು 2009-10 ರಲ್ಲಿ 34.6% ರಿಂದ 2016-17ರಲ್ಲಿ 28.6% ಕ್ಕೆ ಶೇಕಡಾ ಆರರಷ್ಟು ಕಡಿಮೆಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ತಂಬಾಕು ಬಳಕೆಯನ್ನು ನಿಗ್ರಹಿಸುವಲ್ಲಿ ಸರ್ಕಾರದ ದೃಢವಾದ ರಾಜಕೀಯ ಬದ್ಧತೆಯ ಕುರಿತು ಮಾತನಾಡಿದ ಅವರು, “ನಾನು ಕೇಂದ್ರ ಆರೋಗ್ಯ ಸಚಿವನಾದಾಗ, ಇ-ಸಿಗರೆಟ್ ಗಳನ್ನು ನಿಷೇಧಿಸಿದರೆ ಉಂಟಾಗಬಹುದಾದ ಅಪಾಯವನ್ನು ಎದುರಿಸಲು ನಿರ್ಧರಿಸಿದೆ ಮತ್ತು ನಿಷೇಧಿಸುವ 'ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಮಸೂದೆ, 2019' ಅನ್ನು ರೂಪಿಸಿದೆ. ಇದು ಇ-ಸಿಗರೆಟ್ ಗಳ ಉತ್ಪಾದನೆ, ಆಮದು, ರಫ್ತು, ಸಾರಿಗೆ, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತನ್ನು ನಿಷೇಧಿಸುತ್ತದೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅನುಕರಣೀಯ ನಾಯಕತ್ವವು ವಿವಿಧ ಪಾಲುದಾರರಿಗೆ ಮನವರಿಕೆ ಮಾಡಿಕೊಟ್ಟಿತು ಮತ್ತು 2019 ರಲ್ಲಿ ಸಂಸತ್ತು ಮಸೂದೆಯನ್ನು ಸುಗಮವಾಗಿ ಅಂಗೀಕರಿಸಲು ಅವಕಾಶ ಮಾಡಿಕೊಟ್ಟಿತು. ಅಸಮರ್ಪಕವಾಗಿ ಹದಿಹರೆಯದವರ ಮೇಲೆ ಪರಿಣಾಮ ಬೀರುವ ಇ-ಸಿಗರೆಟ್ ಗಳ ಅಪಾಯದಿಂದ ದೇಶವನ್ನು ರಕ್ಷಿಸಲು ಸರ್ಕಾರದ ನಿರಂತರ ಪ್ರಯತ್ನಗಳು ಕಾರಣವಾಗಿವೆ."

ಡಾ. ಹರ್ಷ ವರ್ಧನ್ ಅವರು ತಂಬಾಕು ಕ್ವಿಟ್ ಲೈನ್ ಸೇವೆಗಳಿಗೆ ಕರೆಗಳ ಪ್ರಸರಣವನ್ನು ಎತ್ತಿ ತೋರಿಸಿದರು: “ನಾವು ಟೋಲ್ ಫ್ರೀ ಕ್ವಿಟ್ ಲೈನ್ ಸೇವೆ -1800-112-356, ಅನ್ನು 2016 ರಲ್ಲಿ ಪ್ರಾರಂಭಿಸಲಾಯಿತು, ಇದನ್ನು 2018 ರ ಸೆಪ್ಟೆಂಬರ್ ನಲ್ಲಿ ವಿಸ್ತರಿಸಲಾಗಿದೆ. ಕ್ವಿಟ್ ಲೈನ್ ಸೇವೆಗಳು ಈಗ 4 ಕೇಂದ್ರಗಳಿಂದ 16 ಭಾಷೆಗಳು ಮತ್ತು ಇತರ ಸ್ಥಳೀಯ ಉಪಭಾಷೆಗಳಲ್ಲಿ ಲಭ್ಯವಿದೆ. ವಿಸ್ತರಣೆಯ ಮೊದಲು ಕ್ವಿಟ್ ಲೈನ್ ನಲ್ಲಿ ಕರೆಗಳ ಸಂಖ್ಯೆ ತಿಂಗಳಿಗೆ 20,500 ಇದ್ದವು, ವಿಸ್ತರಣೆಯ ನಂತರ ತಿಂಗಳಿಗೆ 2.50 ಲಕ್ಷ ಕರೆಗಳಿಗೆ ಏರಿದೆ”. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಬಳಕೆಯನ್ನು ತ್ಯಜಿಸಬೇಕೆಂಬ ತಮ್ಮ ಮನವಿಯನ್ನು ಅವರು ಪುನರುಚ್ಚರಿಸಿದರು.

ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವರು ರಾಷ್ಟ್ರೀಯ ಆರೋಗ್ಯ ನೀತಿ 2017 ರ ಮಹತ್ವಾಕಾಂಕ್ಷೆಯ ಗುರಿಗಳ ಕುರಿತು ಮಾತನಾಡಿದರು: “ನಾವು 2025 ರ ವೇಳೆಗೆ ತಂಬಾಕು ಬಳಕೆಯನ್ನು ಶೇ.30ರಷ್ಟು ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದೇವೆ. ಗುರಿಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ತಂಬಾಕು ನಿಯಂತ್ರಣ ಗುರಿಗಳನ್ನು ರೂಪಿಸಲಾಗಿದೆ. ಇವು ಸಾಂಕ್ರಾಮಿಕವಲ್ಲದ ಕಾಯಿಲೆಗಳ ನಿಯಂತ್ರಣಕ್ಕಾಗಿ ಮತ್ತು ಎಸ್ ಡಿಜಿಗಳ ಅಡಿಯಲ್ಲಿ ನಿಗದಿಪಡಿಸಿದ ಗುರಿಗಳಿಗೆ ಅನುಗುಣವಾಗಿರುತ್ತವೆ. 13 - 15 ವರ್ಷದ ಶಾಲೆಗೆ ಹೋಗುವ ವಿದ್ಯಾರ್ಥಿಗಳೊಡನೆ ನಡೆಸಿದ ನಾಲ್ಕನೇ ಸುತ್ತಿನ ಜಾಗತಿಕ ಯುವ ತಂಬಾಕು ಸಮೀಕ್ಷೆಯ ವಿವರಗಳನ್ನು ನಾವು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ. ” ಎಂದು ಹೇಳಿದರು.

ಇತರ ಎಲ್ಲ ಪಾಲುದಾರ ಸಂಸ್ಥೆಗಳು, ಸಚಿವಾಲಯದ ಅಧಿಕಾರಿಗಳು, ತಳಮಟ್ಟದ ಕೆಲಸಗಾರರು ಮತ್ತು ಮುಖ್ಯವಾಗಿ ಇದುವರೆಗಿನ ತಂಬಾಕು ಬಳಕೆಯನ್ನು ತಡೆಯುವುದರಿಂದ ಗಳಿಸಿದ ಪ್ರಯೋಜನಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಅವರು ಧನ್ಯವಾದಗಳನ್ನು ಅರ್ಪಿಸಿದರು. 

ಡಾ. ಹರ್ಷ್ ವರ್ಧನ್ ತಮ್ಮ ಸೇವೆಗಳನ್ನು ಹಾಗೂ 2021 ರಲ್ಲಿ ಆರೋಗ್ಯ ಸಚಿವಾಲಯದ ತಂಬಾಕು ನಿಯಂತ್ರಣದ ಕಾರ್ಯವನ್ನು ಗುರುತಿಸಿದ್ದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕರಿಗೆ ಮತ್ತು 2021 ರಲ್ಲಿ ಮಹಾನಿರ್ದೇಶಕರ ವಿಶೇಷ ಮಾನ್ಯತೆ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಪ್ರತಿ ವರ್ಷ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಆರು ಡಬ್ಲ್ಯುಎಚ್ಒ ಪ್ರದೇಶಗಳಲ್ಲಿ (AFRO, AMRO, EURO, WPRO, EMRO ಮತ್ತು SEAR) ತಂಬಾಕು ನಿಯಂತ್ರಣ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಯೊಂದು ವ್ಯಕ್ತಿ ಅಥವಾ ಸಂಸ್ಥೆಗಳನ್ನು ಗುರುತಿಸುತ್ತದೆ.

ಮಿಸ್ ಆರತಿ ಅಹುಜಾ, ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ), ಶ್ರೀ ವಿಕಾಶ್ ಶೀಲ್, ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಮತ್ತು ಇತರ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

***



(Release ID: 1723197) Visitor Counter : 449