ಹಣಕಾಸು ಸಚಿವಾಲಯ

ತುರ್ತು ಸಾಲ ಖಾತ್ರಿ ಯೋಜನೆ (ಇಸಿಎಲ್‌ಜಿಎಸ್) ವಿಸ್ತರಣೆ – ನಿರ್ದಿಷ್ಟ ಸ್ಥಳದಲ್ಲಿ ಆಮ್ಲಜನಕ ಉತ್ಪಾದನೆಗೆ ಇಸಿಎಲ್‌ಜಿಎಸ್ 4.0, ಇಸಿಎಲ್‌ಜಿಎಸ್ 3.0 ರ ವ್ಯಾಪ್ತಿ ಮತ್ತು  ಇಸಿಎಲ್‌ಜಿಎಸ್ 1.0ರ ಅವಧಿ ಹೆಚ್ಚಳ

Posted On: 30 MAY 2021 11:37AM by PIB Bengaluru

ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದ ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿ ಉಂಟಾಗಿರುವ ಪರಿಣಾಮಗಳ ಹಿನ್ನೆಲೆಯಲ್ಲಿ, ಸರ್ಕಾರವು ತುರ್ತು ಸಾಲ ಖಾತರಿ ಯೋಜನೆಯ ವ್ಯಾಪ್ತಿಯನ್ನು ಕೆಳಗಿನಂತೆ ವಿಸ್ತರಿಸಿದೆ:

  1. ಇಸಿಎಲ್ಜಿಎಸ್ 4.0: ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಆಸ್ಪತ್ರೆಗಳು / ನರ್ಸಿಂಗ್ ಹೋಂಗಳು / ಚಿಕಿತ್ಸಾಲಯಗಳು / ವೈದ್ಯಕೀಯ ಕಾಲೇಜುಗಳಿಗೆ.2 ಕೋಟಿ ರೂ. ವರೆಗಿನ ಸಾಲಗಳಿಗೆ ಶೇ. 100 ಖಾತ್ರಿ, ಬಡ್ಡಿದರವನ್ನು ಶೇ.7.5 ಕ್ಕೆ ನಿಗದಿಪಡಿಸಲಾಗಿದೆ.
  2. ಮೇ 05, 2021 ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಪುನರ್ರಚನೆಗೆ ಅರ್ಹರಾಗಿರುವ ಸಾಲಗಾರರು ಮತ್ತು ಮೊದಲ ನಾಲ್ಕು ತಿಂಗಳಲ್ಲಿ ಬಡ್ಡಿಯನ್ನು ಮಾತ್ರ ಮರುಪಾವತಿಸುವುದು ಮತ್ತು ನಂತರದ 36 ತಿಂಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಮರುಪಾವತಿಯನ್ನು ಒಳಗೊಂಡಂತೆ ನಾಲ್ಕು ವರ್ಷಗಳ ಒಟ್ಟಾರೆ ಅವಧಿಯ ಇಸಿಎಲ್ಜಿಎಸ್ 1.0 ಅಡಿಯಲ್ಲಿ ಸಾಲಗಳನ್ನು ಪಡೆದಿರುವವರು, ಈಗ ತಮ್ಮ ಇಸಿಎಲ್ಜಿಎಸ್ ಸಾಲಕ್ಕಾಗಿ ಮೊದಲ 24 ತಿಂಗಳು ಬಡ್ಡಿಯನ್ನು ಮಾತ್ರ ಮರುಪಾವತಿಸುವುದು ಮತ್ತು ನಂತರದ 36 ತಿಂಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಮರುಪಾವತಿಗಾಗಿ ಐದು ವರ್ಷಗಳ ಅವಧಿಯನ್ನು ಪಡೆಯಬಹುದು.
  • III. ಮೇ 05, 2021 ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಪುನರ್ರಚನೆಗಾಗಿ ಇಸಿಎಲ್ಜಿಎಸ್ 1.0 ಅಡಿಯಲ್ಲಿ ಸಾಲ ಪಡೆಯುವವರಿಗೆ ಫೆಬ್ರವರಿ 29, 2020 ರವರಗೆ ಇರುವ ಬಾಕಿಗೆ ಶೇ. 10 ರವರೆಗೆ ಹೆಚ್ಚುವರಿ ಇಸಿಎಲ್ಜಿಎಸ್ ನೆರವು.
  • IV. ಇಸಿಎಲ್ಜಿಎಸ್ 3.0 ಅಡಿಯಲ್ಲಿ ಅರ್ಹತೆಗಾಗಿ ಬಾಕಿ ಉಳಿದಿರುವ ಸಾಲದ ಪ್ರಸ್ತುತ ಮಿತಿ 500 ಕೋಟಿ ರೂ. ತೆಗೆದುಹಾಕಲಾಗುವುದು. ಪ್ರತಿ ಸಾಲಗಾರನಿಗೆ ಗರಿಷ್ಠ ಹೆಚ್ಚುವರಿ ಇಸಿಎಲ್ಜಿಎಸ್ ನೆರವು ಶೇ. 40% ಅಥವಾ 200 ಕೋಟಿ ರೂ. ಗಳಲ್ಲಿ ಯಾವುದು ಕಡಿಮೆಯೋ ಅಷ್ಟಕ್ಕೆ ಮಿತಿಗೊಳಿಸಲಾಗಿದೆ.
  1. ನಾಗರಿಕ ವಿಮಾನಯಾನ ಕ್ಷೇತ್ರವು ಇಸಿಎಲ್ಜಿಎಸ್ 3.0 ಅಡಿಯಲ್ಲಿ ಅರ್ಹತೆ ಪಡೆಯಲಿದೆ.
  • VI. ಇಸಿಎಲ್ಜಿಎಸ್ ಮಾನ್ಯತೆಯನ್ನು 30.09.2021 ರವರೆಗೆ ಅಥವಾ ರೂ .3 ಲಕ್ಷ ಕೋಟಿ ಮೊತ್ತದ ಖಾತ್ರಿ ನೀಡುವವರೆಗೆ ಕ್ಕೆ ವಿಸ್ತರಿಸಲಾಗಿದೆ. 31.12.2021 ವರೆಗೆ ಯೋಜನೆಯಡಿ ಸಾಲ ವಿತರಿಸಲು ಅನುಮತಿ ನೀಡಲಾಗಿದೆ.

ಇಸಿಎಲ್ಜಿಎಸ್ನಲ್ಲಿನ ಮಾರ್ಪಾಡುಗಳು, ಎಂಎಸ್ಎಂಇಗಳಿಗೆ ಹೆಚ್ಚುವರಿ ಬೆಂಬಲವನ್ನು ನೀಡುವ ಮೂಲಕ ಜೀವನೋಪಾಯವನ್ನು ಸಂರಕ್ಷಿಸಿ, ವ್ಯವಹಾರ ಚಟುವಟಿಕೆಯನ್ನು ಪುನರಾರಂಭಿಸಲು ಇಸಿಎಲ್ಜಿಎಸ್ ಪ್ರಯೋಜನ ಮತ್ತು ಪರಿಣಾಮವನ್ನು ಹೆಚ್ಚಿಸುತ್ತವೆ. ಬದಲಾವಣೆಗಳು ಸಾಂಸ್ಥಿಕ ಸಾಲವನ್ನು ಹರಿವನ್ನು ಹೆಚ್ಚಿಸುತ್ತವೆ.

ನಿಟ್ಟಿನಲ್ಲಿ ವಿವರವಾದ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ರಾಷ್ಟ್ರೀಯ ಸಾಲ ಖಾತ್ರಿ ಟ್ರಸ್ಟಿ ಕಂಪನಿ (ಎನ್ಸಿಜಿಟಿಸಿ) ಪ್ರತ್ಯೇಕವಾಗಿ ಪ್ರಕಟಿಸುತ್ತದೆ.

***(Release ID: 1723020) Visitor Counter : 55