ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಕೋವಿಡ್ ಸೋಂಕಿನ ಇಳಿಕೆ ಪ್ರವೃತ್ತಿ ಮುಂದುವರಿದಿದ್ದು, ದೇಶದ ಸಕ್ರಿಯ ಪ್ರಕರಣಗಳ ಹೊರೆ ಕುಸಿದು 23,43,152ಕ್ಕೆ ತಲುಪಿದೆ; ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 76,755 ಪ್ರಕರಣಗಳಷ್ಟು ಇಳಿಕೆಯಾಗಿದೆ


ದೇಶದಲ್ಲಿ 1.86 ಲಕ್ಷ ಹೊಸ ದೈನಂದಿನ ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ 44 ದಿನಗಳಲ್ಲಿ ಅತ್ಯಂತ ಕನಿಷ್ಠ

ಸತತ 12ನೇ ದಿನವೂ 3 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು

ಸತತ 15ನೇ ದಿನವೂ ಸೋಂಕಿನ ಸಂಖ್ಯೆಯನ್ನು ಮೀರಿಸಿದ ಚೇತರಿಕೆ ಪ್ರಕರಣಗಳು

ಚೇತರಿಕೆ ದರ 90.34%ಕ್ಕೆ ಏರಿಕೆ

ಶೇ. 9.00ಕ್ಕೆ ಇಳಿದ ಪಾಸಿಟಿವಿಟಿ ದರ; ಸತತ 4ನೇ ದಿನವೂ ಶೇ. 10% ಕ್ಕಿಂತಲೂ ಕಡಿಮೆ ದೈನಂದಿನ ಪಾಸಿಟಿವಿಟಿ ದರ

Posted On: 28 MAY 2021 10:43AM by PIB Bengaluru

ಭಾರತದ ಸಕ್ರಿಯ ಪ್ರಕರಣಗಳ ಹೊರೆ ಈಗ 23,43,152ಕ್ಕೆ ಇಳಿದಿದೆ. ಮೇ 10 2021ರಂದು ಉತ್ತುಂಗಕ್ಕೆ ತಲುಪಿದ ನಂತರ ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ.

ಕಳೆದ 24 ಗಂಟೆಗಳಲ್ಲಿಸಕ್ರಿಯ ಪ್ರಕರಣಗಳಲ್ಲಿ ನಿವ್ವಳ 76,755 ಪ್ರಕರಣಗಳಷ್ಟು ಕುಸಿತ ಕಂಡುಬಂದಿದ್ದು, ಈಗ ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ ಶೇ. 8.50 ಮಾತ್ರ.

https://static.pib.gov.in/WriteReadData/userfiles/image/image001DTEV.jpg

ದೈನಂದಿನ ಹೊಸ ಪ್ರಕರಣಗಳ ನಿರಂತರ ಕುಸಿತದ ಹಿನ್ನೆಲೆಯಲ್ಲಿ, ದೇಶದಲ್ಲಿ ಈಗ ಸತತ ಹನ್ನೆರಡು ದಿನಗಳಿಂದ 3 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು  ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ 1,86,364 ದೈನಂದಿನ ಹೊಸ ಪ್ರಕರಣಗಳು ದಾಖಲಾಗಿವೆ.

https://static.pib.gov.in/WriteReadData/userfiles/image/image002OUZG.jpg

ಭಾರತದ ದೈನಂದಿನ ಚೇತರಿಕೆ ಪ್ರಕರಣಗಳ ಸಂಖ್ಯೆ ಸತತ 15ನೇ ದಿನವೂ ನಿತ್ಯ ಹೊಸ ಪ್ರಕರಣಗಳಿಗಿಂತಲೂ ಅಧಿಕ ಪ್ರಮಾಣದಲ್ಲಿದೆ. ಕಳೆದ 24 ಗಂಟೆಗಳಲ್ಲಿ 2,59,459  ಚೇತರಿಕೆ ಪ್ರಕರಣಗಳು ದಾಖಲಾಗಿವೆ.

ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ 73,095 ಹೆಚ್ಚಿನ ಚೇತರಿಕೆ ಪ್ರಕರಣಗಳು ವರದಿಯಾಗಿವೆ.

https://static.pib.gov.in/WriteReadData/userfiles/image/image003B4PH.jpg

ಸಾಂಕ್ರಾಮಿಕದ ಆರಂಭದಿಂದ ಸೋಂಕಿಗೆ ಒಳಗಾದವರ ಪೈಕಿ 2,48,93,410 ಜನರು ಈಗಾಗಲೇ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 2,59,459  ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದು ಒಟ್ಟಾರೆ  ಶೇ.90.34ರಷ್ಟು ಚೇತರಿಕೆ ದರವನ್ನು ಸೂಚಿಸುತ್ತದೆ.

https://static.pib.gov.in/WriteReadData/userfiles/image/image004ZN2Q.jpg

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 20,70,508  ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಟ್ಟಾರೆಯಾಗಿ ಭಾರತವು ಇಲ್ಲಿಯವರೆಗೆ 33.90 ಕೋಟಿ ಪರೀಕ್ಷೆಗಳನ್ನು ನಡೆಸಿದೆ.

ಒಂದೆಡೆ ದೇಶಾದ್ಯಂತ ಪರೀಕ್ಷೆಯನ್ನು ಹೆಚ್ಚಿಸಿದರೂ ವಾರದ ಸರಾಸರಿ ಪಾಸಿಟಿವಿಟಿ ದರದಲ್ಲಿ ನಿರಂತರ ಇಳಿಕೆ ಕಂಡುಬಂದಿರುವುದು ಗಮನಾರ್ಹ. ವಾರದ ಸರಾಸರಿ ಪಾಸಿಟಿವಿಟಿ ದರವು ಪ್ರಸ್ತುತ 10.42%  ರಷ್ಟಿದ್ದರೆದೈನಂದಿನ ಪಾಸಿಟಿವಿಟಿ ದರವು ಕಡಿಮೆಯಾಗಿದೆ ಮತ್ತು ಇಂದು ಅದು ಶೇ. 9.00% ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಸತತ 4 ದಿನಗಳಿಂದ ಶೇ. 10ಕ್ಕಿಂತಲೂ ಕಡಿಮೆ ಮಟ್ಟದಲ್ಲೇ ಮುಂದುವರಿದಿದೆ.

  https://static.pib.gov.in/WriteReadData/userfiles/image/image005654I.jpg

ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕೆ ಅಭಿಯಾನ ಅಂಗವಾಗಿ ದೇಶದಲ್ಲಿ 20.57 ಕೋಟಿ ಕೋವಿಡ್-19 ಲಸಿಕೆ ಡೋಸ್ಗಳನ್ನು ನೀಡಲಾಗಿದೆ. ಅಮೆರಿಕದ ನಂತರ, 20 ಕೋಟಿ ಲಸಿಕೆ ನೀಡಿದ ಮೈಲುಗಲ್ಲು ಸಾಧಿಸಿದ ಎರಡನೇ ದೇಶವಾಗಿ ಭಾರತ ಹೊರಹೊಮ್ಮಿದೆ.

ಇಂದು ಬೆಳಿಗ್ಗೆ 7 ಗಂಟೆಯವರೆಗೆ ವರದಿಯ ಪ್ರಕಾರ 29,38,367 ಸೆಷನ್ಗಳ ಮೂಲಕ ಒಟ್ಟು    20,57,20,660 ಲಸಿಕೆ ಡೋಸ್ಗಳನ್ನು ನೀಡಲಾಗಿದೆ.

ಇದರಲ್ಲಿ ಇವುಗಳೂ ಸೇರಿವೆ:

ಆರೋಗ್ಯ ಕಾರ್ಯಕರ್ತರು

1ನೇ  ಡೋಸ್

98,28,401

2ನೇ  ಡೋಸ್

67,48,360

ಮುಂಚೂಣಿ ಕಾರ್ಯಕರ್ತರು

1ನೇ  ಡೋಸ್

1,53,49,658

2ನೇ  ಡೋಸ್

84,25,730

18-44 ವರ್ಷ ವಯೋಮಾನದವರು

1ನೇ  ಡೋಸ್

1,52,65,022

45 ರಿಂದ 60 ವರ್ಷ ವಯೋಮಾನದವರು

1ನೇ  ಡೋಸ್

6,36,22,329

2ನೇ  ಡೋಸ್

1,02,22,521

60 ವರ್ಷ ಮೀರಿದವರು

1ನೇ  ಡೋಸ್

5,77,84,682

2ನೇ  ಡೋಸ್

1,84,73,957

ಒಟ್ಟು

20,57,20,660

 

***(Release ID: 1722454) Visitor Counter : 224