ರೈಲ್ವೇ ಸಚಿವಾಲಯ

ಕೋವಿಡ್ ಸವಾಲುಗಳ ನಡುವೆಯೂ ಸರಕು ಸಾಗಾಣಿಕೆಯಲ್ಲಿ ಎರಡಂಕಿ ಬೆಳವಣಿಗೆ ಕಾಯ್ದುಕೊಂಡ ರೈಲ್ವೇ


2019-20 ರ ಸಹಜ ವರ್ಷಕ್ಕೆ ಹೋಲಿಸಿದರೆ ಸರಕು ಹೇರಿಕೆಯಲ್ಲಿ 10% ಹೆಚ್ಚಳ

ಹಣಕಾಸು ವರ್ಷ 2021-22 ರಲ್ಲಿ ಭಾರತೀಯ ರೈಲ್ವೇಯ ಒಟ್ಟು ಸರಕು ಹೇರಿಕೆ 203.88 ಮಿಲಿಯನ್ ಟನ್ (ಎಂ.ಟಿ.), ಇದು ಹಣಕಾಸು ವರ್ಷ 2019-20 ರ ಇದೇ ಅವಧಿಯ ಸರಕು ಹೇರಿಕೆ ಅಂಕಿ ಅಂಶ (184.88 ಎಂ.ಟಿ.)ಕ್ಕೆ ಹೋಲಿಸಿದರೆ 10% ನಷ್ಟು ಹೆಚ್ಚು

2021 ರ ಮೇ ತಿಂಗಳಲ್ಲಿ ಭಾರತೀಯ ರೈಲ್ವೇಯು 92.29 ಎಂ.ಟಿ. ಸರಕು ಹೇರಿಕೆ ಮಾಡಿದೆ. 2019ರ ಮೇ ತಿಂಗಳಿಗೆ ( 83.84 ಎಂ.ಟಿ.) ಹೋಲಿಸಿದಾಗ ಇದು 10 % ಅಧಿಕ ಮತ್ತು 2020 ರ ಮೇ ತಿಂಗಳ (64.61 ಎಂ.ಟಿ.) ಇದೇ ಅವಧಿಗೆ ಹೋಲಿಸಿದಾಗ  43 % ಅಧಿಕ.

2021 ರ ಮೇ ತಿಂಗಳಲ್ಲಿ ಭಾರತೀಯ ರೈಲ್ವೇಯು 9278.95 ಕೋ.ರೂ.ಗಳನ್ನು ಸರಕು ಸಾಗಾಣಿಕೆಯಿಂದ ಗಳಿಸಿದೆ

ವ್ಯಾಗನ್ ಗಳು ತಿರುಗಿ ಬರುವ ಸಮಯದಲ್ಲಿ ವ್ಯಾಪಕ ಸುಧಾರಣೆಯಾಗಿದೆ, ಸರಕು ರೈಲುಗಳ ವೇಗ ಹೆಚ್ಚಳವಾಗಿದೆ, ವ್ಯಾಪಾರ ಅಭಿವೃದ್ಧಿ ಘಟಕಗಳ  ಪೂರ್ವಭಾವೀ ಕೆಲಸದಿಂದ ಸರಕು ಸಾಗಾಟದಲ್ಲಿ ಎರಡಂಕಿಯ ಬೆಳವಣಿಗೆ ಸಾಧ್ಯವಾಗಿದೆ

Posted On: 26 MAY 2021 2:57PM by PIB Bengaluru

ಕೋವಿಡ್ ಎದುರು ವಿಶೇಷವಾದ ಪುನಶ್ಚೇತನವನ್ನು ತೋರಿಸಿರುವ ಭಾರತೀಯ ರೈಲ್ವೇಯು ಸರಕು ಸಾಗಾಣಿಕೆಯಲ್ಲಿ ಎರಡು ಅಂಕೆಗಳ ಬೆಳವಣಿಗೆಗಳನ್ನು ಸಾಕ್ಷೀಕರಿಸಿದೆ. ಸರಕು ಸಾಗಾಣಿಕೆ ಅಂಕಿ ಅಂಶಗಳು 2021 ಮೇ ತಿಂಗಳಲ್ಲಿ ಭಾರತೀಯ ರೈಲ್ವೇಯಲ್ಲಿ ಆದಾಯ ಹೆಚ್ಚಳವನ್ನು ಮತ್ತು ಸರಕು ಹೇರಿಕೆ ಹೆಚ್ಚುತ್ತಿರುವುದನ್ನು ತೋರಿಸಿವೆ.

ರೈಲ್ವೇಯು 2019-20 ಸಹಜ ವರ್ಷಕ್ಕೆ ಹೋಲಿಸಿದಾಗ ಸರಕು ಹೇರಿಕೆಯಲ್ಲಿ 10 % ಹೆಚ್ಚಳವನ್ನು ದಾಖಲಿಸಿದೆ. ಹಣಕಾಸು ವರ್ಷ 2021-22 ರಲ್ಲಿ ಭಾರತೀಯ ರೈಲ್ವೇಯು ಒಟ್ಟು 203.88 ಮಿಲಿಯನ್ ಟನ್ (ಎಂ.ಟಿ.) ಸರಕು ಹೇರಿಕೆ ಮಾಡಿದೆ, ಇದು 2019-20 ರಲ್ಲಿ ಇದೇ ಅವಧಿಯ  ಸರಕು ಹೇರಿಕೆ ಅಂಕಿ ಅಂಶಗಳಿಗೆ (184.88 ಎಂ.ಟಿ.) ಹೋಲಿಸಿದರೆ 10 % ಹೆಚ್ಚಳವಾಗಿದೆ.

ಭಾರತೀಯ ರೈಲ್ವೇಯು ಆಂದೋಲನದೋಪಾದಿಯಲ್ಲಿ 2021 ಮೇ ತಿಂಗಳಲ್ಲಿ 92.29 ಎಂ.ಟಿ. ಸರಕು ಸಾಗಣೆ ಮಾಡಿದೆ. 2019 ಮೇ ತಿಂಗಳಿಗೆ ಹೋಲಿಸಿದಾಗ (83.84 ಎಂ.ಟಿ.) ಇದು 10 % ಹೆಚ್ಚಳವಾಗಿದೆ. ಮತ್ತು 2020 ಮೇ ತಿಂಗಳ (64.61 ಎಂ.ಟಿ.) ಇದೇ ಅವಧಿಗೆ ಹೋಲಿಸಿದರೆ 43% ಹೆಚ್ಚಳವಾಗಿದೆ.

2021 ಮೇ ತಿಂಗಳಲ್ಲಿ ಸಾಗಾಣಿಕೆ ಮಾಡಲಾದ ಪ್ರಮುಖ ವಸ್ತುಗಳಲ್ಲಿ 97.06 ಮಿಲಿಯನ್ ಟನ್ ಕಲ್ಲಿದ್ದಲು, 27.14 ಮಿಲಿಯನ್ ಟನ್ ಕಬ್ಬಿಣದ ಅದಿರು, 7.89 ಮಿಲಿಯನ್ ಟನ್ ಆಹಾರ ಧಾನ್ಯಗಳು, 5.34 ಮಿಲಿಯನ್ ಟನ್ ರಸಗೊಬ್ಬರಗಳು, 6.09 ಮಿಲಿಯನ್ ಟನ್ ಖನಿಜ ತೈಲ, 11.11 ಮಿಲಿಯನ್ ಟನ್ ಸಿಮೆಂಟ್ ( ಕಿಟ್ಟವನ್ನು ಹೊರತುಪಡಿಸಿಮತ್ತು 8.2 ಮಿಲಿಯನ್ ಟನ್ ಕಿಟ್ಟ ( ಕ್ಲಿಂಕರ್) ಸೇರಿದೆ.

2021 ಮೇ ತಿಂಗಳಲ್ಲಿ, ಭಾರತೀಯ ರೈಲ್ವೇಯು ಸರಕು ಸಾಗಣೆಯಿಂದ 9278.95 ಕೋ.ರೂ. ಆದಾಯ ಪಡೆದಿದೆ. ವ್ಯಾಗನ್ ಗಳ ತಿರುಗಿ ಬರುವ ಸಮಯದಲ್ಲಿಯೂ 27 % ಸುಧಾರಣೆಯಾಗಿದೆ. 2021 ಮೇ ತಿಂಗಳಲ್ಲಿ ವ್ಯಾಗನ್ ತಿರುಗಿ ಬರುವ ಸಮಯ 4.83 ದಿನಗಳಾಗಿದ್ದರೆ, 2019 ಮೇ ತಿಂಗಳಲ್ಲಿ ಸಮಯ 6.61 ಆಗಿತ್ತು.

ರೈಲ್ವೇ ಮೂಲಕ ಸರಕು ಸಾಗಾಣಿಕೆಯನ್ನು ಅತ್ಯಾಕರ್ಷಕ ಮಾಡಲು ಭಾರತೀಯ ರೈಲ್ವೇಯು ಹಲವಾರು ರಿಯಾಯತಿಗಳನ್ನು/ದರ ಕಡಿತವನ್ನೂ ಒದಗಿಸುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದಲ್ಲದೆ ಚಾಲ್ತಿಯಲ್ಲಿರುವ ಜಾಲದಲ್ಲಿ ಸರಕು ಸಾಗಾಣಿಕೆ ರೈಲುಗಳ ವೇಗವನ್ನೂ ಹೆಚ್ಚಿಸಲಾಗಿದೆ.

ಸರಕು ಸಾಗಾಣಿಕೆ ರೈಲುಗಳ ವೇಗ ಸುಧಾರಣೆಯಿಂದಾಗಿ ಎಲ್ಲಾ ಭಾಗೀದಾರರಿಗೆ ವೆಚ್ಚದಲ್ಲಿ ಉಳಿತಾಯವಾಗಿದೆ. ಕಳೆದ 18 ತಿಂಗಳಲ್ಲಿ ಸರಕು ಸಾಗಾಣಿಕೆ ವೇಗ ದುಪ್ಪಟ್ಟಾಗಿದೆ.

ಕೆಲವು ವಲಯಗಳು ( ಸುಮಾರು ಆರು ವಲಯಗಳು) ಸರಕು ಸಾಗಾಣಿಕೆ ರೈಲುಗಳ ಸರಾಸರಿ ವೇಗವು ಗಂಟೆಗೆ 50 ಕಿ.ಮಿ.ಗಿಂತಲೂ ಹೆಚ್ಚು ಇರುವುದನ್ನು ದಾಖಲಿಸಿವೆ. ಭೌಗೋಳಿಕ ಪರಿಸ್ಥಿತಿಗಳಿಂದಾಗಿ, ನಿರ್ದಿಷ್ಟ ಸೆಕ್ಷನ್ ಗಳಲ್ಲಿ ಸರಕು ಸಾಗಾಣಿಕೆ ರೈಲುಗಳಿಗೆ ಉತ್ತಮ ವೇಗ ಲಭ್ಯವಾಗುತ್ತದೆ. 2021 ಮೇ ತಿಂಗಳಲ್ಲಿ ಸರಕು ಸಾಗಾಣಿಕೆ ರೈಲುಗಳ ಸರಾಸರಿ ವೇಗ ಗಂಟೆಗೆ 45.42 ಕಿ.ಮೀ. ಇತ್ತು. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದಾಗ 23 % ಅಧಿಕಆಗ ವೇಗವು ಗಂಟೆಗೆ 36.84 ಕಿ.ಮೀ. ಇತ್ತು.

ಭಾರತೀಯ ರೈಲ್ವೇಯು ಕೋವಿಡ್ -19ನ್ನು ದಕ್ಷತೆ ಮತ್ತು ಸಾಧನೆಯ ಸರ್ವಾಂಗೀಣ ಸುಧಾರಣೆಗೆ ಒಂದು ಅವಕಾಶವಾಗಿ ಬಳಸಿಕೊಂಡಿದೆ.

***



(Release ID: 1721965) Visitor Counter : 184