ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ದೇಶದಾದ್ಯಂತ ವೇಗ ಪಡೆದ ಪಿ.ಎಂ.ಜಿ.ಕೆ.ಎ.ವೈ. ಕಾರ್ಯಾಚರಣೆ
ಪಿ.ಎಂ.ಜಿ.ಕೆ.ಎ.ವೈ. ಅಡಿಯಲ್ಲಿ ಮೇ 2021ರ ಶೇ.100ರಷ್ಟು ಉಚಿತ ಆಹಾರ ಧಾನ್ಯವನ್ನು ಎತ್ತವಳಿ ಮಾಡಿದ 31 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು
ಮೇ-ಜೂನ್ 2021ರ ಪೂರ್ಣ ಹಂಚಿಕೆಯನ್ನು ಎತ್ತುವಳಿ ಮಾಡಿದ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಲಕ್ಷದ್ವೀಪ, ಪುದುಚೇರಿ ಮತ್ತು ತೆಲಂಗಾಣ
ಪಿ.ಎಂ.ಜಿ.ಕೆ.ಎ.ವೈ. ಅಡಿಯಲ್ಲಿ 48 ಎಲ್.ಎಂ.ಟಿ. ಉಚಿತ ಆಹಾರ ಧಾನ್ಯವನ್ನು ಎಲ್ಲ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಿದ ಭಾರತೀಯ ಆಹಾರ ನಿಗಮ
ಮೇ 2021ರ ಅವಧಿಯಲ್ಲಿ ಎಫ್.ಸಿ.ಐ. ಒಟ್ಟು 1062 ರೆಕ್ಸ್ ಅಂದರೆ ಪ್ರತಿನಿತ್ಯ ಸರಾಸರಿ 44 ರೇಕ್ ಗಳನ್ನು ತುಂಬಿಸಿದೆ
2020ರ ಮಾರ್ಚ್ ನಿಂದ ಎಫ್.ಸಿ.ಐ. ಒಟ್ಟು 1062 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ವಿವಿಧ ಸರ್ಕಾರಿ ಯೋಜನೆಗಳಡಿ ನೀಡಿದೆ
Posted On:
25 MAY 2021 6:22PM by PIB Bengaluru
ಪ್ರಸಕ್ತ ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ (ಪಿ.ಎಂ.ಜಿ.ಕೆ.ಎ.ವೈ) ಅಡಿಯಲ್ಲಿ ಫಲಾನುಭವಿಗಳಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸುವ ಯೋಜನೆಯು ಅವರಿಗೆ ದೊಡ್ಡ ಪರಿಹಾರ ನೀಡಿದೆ.
2021ರ ಮೇ 24ರವರೆಗೆ ಎಫ್.ಸಿ.ಐ. 48 ಎಲ್.ಎಂ.ಟಿ. ಉಚಿತ ಆಹಾರ ಧಾನ್ಯವನ್ನು ಎಲ್ಲ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡಿದೆ. 5 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅಂದರೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಲಕ್ಷದ್ವೀಪ, ಪುದುಚೇರಿ ಮತ್ತು ತೆಲಂಗಾಣಗಳು 2021ರ ಮೇ-ಜೂನ್ ಹಂಚಿಕೆಯ ಪೂರ್ತಿ ಆಹಾರ ಧಾನ್ಯವನ್ನು ಎತ್ತುವಳಿ ಮಾಡಿದೆ. 26 ರಾಜ್ಯಗಳು/ಕೇಂದ್ರಾಡಳಿತ ಪ್ರದೇಗಳು ಅಂದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂ, ಚಂಡೀಗಢ, ಛತ್ತೀಸಗಢ, ಡಮನ್ ಡಿಯು ಡಿ ಮತ್ತು ಎನ್.ಎಚ್. ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಲಡಾಖ್, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಮ್, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ್, ಪಶ್ಚಿಮ ಬಂಗಾಳಗಳು 2021ರ ಮೇ ತಿಂಗಳ ಶೇ.100 ಹಂಚಿಕೆ ಎತ್ತುವಳಿ ಮಾಡಿವೆ.
ದೇಶದಲ್ಲಿ ಆಹಾರ ಧಾನ್ಯಗಳ ಸುಗಮ ಪೂರೈಕೆಯನ್ನು ಖಾತ್ರಿ ಪಡಿಸಲು, ಎಫ್.ಸಿ.ಐ. ಮುಂಚಿತವಾಗಿಯೇ ಸಾಗಣೆಯನ್ನು ಯೋಜಿಸಿದೆ. ಹಂಚಿಕೆ ಮಾಡಲಾದ ಪಾಲಿನ ಎತ್ತುವಳಿಗೆ ಪ್ರತಿಯಾಗಿ, ನಿಯಮಿತವಾಗಿ ಪುನಃ ಭರ್ತಿ ಮಾಡಲಾಗುತ್ತಿದೆ, ಹೀಗಾಗಿ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾರ್ವಕಾಲಿಕ ಸಾಕಷ್ಟು ಆಹಾರ ಧಾನ್ಯಗಳನ್ನು ನಿರ್ವಹಿಸಲಾಗುತ್ತಿದೆ. 2021 ಮೇನಲ್ಲಿ, ಎಫ್.ಸಿ.ಐ. ಈಗಾಗಲೇ 1062 ರೇಕ್ ಗಳನ್ನು ಅಂದರೆ ದಿನಕ್ಕೆ ಸರಾಸರಿ 44 ರೇಕ್ ಗಳನ್ನು ತುಂಬಿಸಿದೆ. ಪ್ರಸ್ತುತ, 295 ಎಲ್.ಎಂ,ಟಿ, ಗೋಧಿ ಮತ್ತು 597 ಎಲ್,ಎಂ,ಟಿ, ಅಕ್ಕಿ (ಒಟ್ಟು 892 ಎಲ್.ಎಂ.ಟಿ) ಆಹಾರ ಧಾನ್ಯಗಳು ಕೇಂದ್ರೀಯ ಹಂಚಿಕೆ ಅಡಿಯಲ್ಲಿ ಲಭ್ಯವಿದೆ.
ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ, 2020ರ ಮಾರ್ಚ್ 25ರಿಂದ ಎಫ್.ಸಿ.ಐ. ಒಟ್ಟು 1062 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ವಿವಿಧ ಸರ್ಕಾರಿ ಯೋಜನೆ ಅಡಿಯಲ್ಲಿ ನೀಡಿದೆ.
ಬಡವರ ಪರವಾದ ಉಪಕ್ರಮದಲ್ಲಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂ.ಜಿ.ಕೆ.ಎ.ವೈ.) ಅಡಿಯಲ್ಲಿ, ಭಾರತ ಸರ್ಕಾರ ಎರಡು ತಿಂಗಳ ಕಾಲ (ಮೇ –ಜೂನ್ 2021) ಉಚಿತವಾಗಿ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ.ಯಂತೆ ಉಚಿತ ಆಹಾರ ಧಾನ್ಯ ವಿತರಿಸುತ್ತಿದೆ. ಎನ್.ಎಫ್.ಎಸ್.ಎ. ಅಡಿಯಲ್ಲಿ ಅಂದಾಜು 79.39 ಕೋಟಿ ಫಲಾನುಭವಿಗಳು ಈ ವ್ಯಾಪ್ತಿಯಲ್ಲಿದ್ದಾರೆ. ಈ ಹಂಚಿಕೆಯು ನಿಯಮಿತ ಎನ್.ಎಫ್.ಎಸ್.ಎ. ಹಂಚಿಕೆಗೆ ಹೆಚ್ಚುವರಿಯಾಗಿದೆ ಮತ್ತು 79.39 ಎಲ್.ಎಂ.ಟಿ. ಆಹಾರ ಧಾನ್ಯವನ್ನು ಸದರಿ ಯೋಜನೆ ಅಡಿಯಲ್ಲಿ ಪೂರೈಸಲಾಗಿದೆ.
***
(Release ID: 1721756)
Visitor Counter : 224