ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಮ್ಯೂಕರ್ ಮೈಕೋಸಿಸ್ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಆಂಫೊಟೆರಿಸಿನ್-ಬಿ ಔಷಧ ಹೊಸದಾಗಿ ಹಂಚಿಕೆ- ಶ್ರೀ ಡಿ.ವಿ.ಸದಾನಂದ ಗೌಡ

Posted On: 22 MAY 2021 11:47AM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು, ನಾನಾ ರಾಜ್ಯಗಳಲ್ಲಿ ಮ್ಯೂಕರ್ ಮೈಕೋಸಿಸ್ ಪ್ರಕರಣಗಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಆಂಫೊಟೆರಿಸಿನ್-ಬಿ ಔಷಧ ಲಭ್ಯತೆ ಬಗ್ಗೆ  ಸಮಗ್ರ ಪರಿಶೀಲನೆ ನಡೆಸಿದರು. ಆನಂತರ ಅವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಒಟ್ಟು 23,68- ವಯಲ್ಸ್  ಆಂಫೊಟೆರಿಸಿನ್-ಬಿ ಔಷಧವನ್ನು  ಹಂಚಿಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.

 


 

ಅಲ್ಲದೆ, ದೇಶಾದ್ಯಂತ ಒಟ್ಟು 8848 ರೋಗಿಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು,  ಅದಕ್ಕೆ ಅನುಗುಣವಾಗಿ ಔಷಧವನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

https://static.pib.gov.in/WriteReadData/userfiles/image/image001FA8Y.jpg

****

 (Release ID: 1720855) Visitor Counter : 201