ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಜ್ಯಗಳಿಂದ ಕಪ್ಪು ಶಿಲೀಂಧ್ರ ವರದಿಗಳ ಹಿನ್ನೆಲೆಯಲ್ಲಿ ಭಾರತ ಸರಕಾರದಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ.


ಸೋಂಕು ತಡೆಗೆ ದೃಢ ಪದ್ಧತಿಗಳನ್ನು ಮತ್ತು ನಿಯಂತ್ರಣ ಹಾಗು ನಿರ್ಮಲೀಕರಣ ಮತ್ತು ಆಸ್ಪತ್ರೆಗಳಲ್ಲಿ ದ್ವಿತೀಯ ಮತ್ತು ಅವಕಾಶವಾದಿ ಶಿಲೀಂಧ್ರ ಸೋಂಕು ನಿಯಂತ್ರಣ ಮತ್ತು ತಡೆಗೆ ಸ್ವಚ್ಛತೆಯನ್ನು ಖಾತ್ರಿಪಡಿಸಿ

Posted On: 21 MAY 2021 6:24PM by PIB Bengaluru

ಇತೀಚಿನ ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮ್ಯೂಕರ್ ಮೈಕೋಸಿಸ್  ಅಂದರೆ ಕಪ್ಪು ಶಿಲೀಂಧ್ರ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಶಿಲೀಂಧ್ರದಿಂದ ಬಳಲುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ದ್ವಿತೀಯ ಮತ್ತು ಅವಕಾಶವಾದಿ ಶಿಲೀಂದ್ರ ಸೋಂಕುಗಳು ಹೆಚ್ಚುತ್ತಿದೆ ಮತ್ತು ಮ್ಯೂಕರ್ ಮೈಕೋಸಿಸ್ ಶಿಲೀಂಧ್ರ ಕಳವಳಕ್ಕೆ ಕಾರಣವಾಗುತ್ತಿದೆ.ಇದನ್ನು ಗಮನಿಸಿರುವ  ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಂಕು ತಡೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿ ಹಾಗು ಆಸ್ಪತ್ರೆಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯ ನಿಟ್ಟಿನಲ್ಲಿ ಸಿದ್ಧತಾ ಸ್ಥಿತಿಯ ಬಗ್ಗೆ ಪರಾಮರ್ಶಿಸುವಂತೆ ಸಲಹೆ ಮಾಡಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಆಡಳಿತಾಧಿಕಾರಿಗಳಿಗೆ ಬರೆದ ತಮ್ಮ ಪತ್ರದಲ್ಲಿ ಕೋವಿಡ್ ಆಸ್ಪತ್ರೆಗಳು ಮತ್ತು ಇತರ ಆರೋಗ್ಯ ರಕ್ಷಣಾ ಸೌಲಭ್ಯಗಳಲ್ಲಿ ಸೋಂಕು ತಡೆಗೆ ಮತ್ತು ನಿಯಂತ್ರಣಕ್ಕೆ ಕೆಳಗಿನ ಕಾರ್ಯಚಟುವಟಿಕೆಗಳನ್ನು /ಪದ್ಧತಿಗಳನ್ನು ಕೈಗೆತ್ತಿಕೊಳ್ಳುವಂತೆ ಕೋರಿದ್ದಾರೆ.

 I). ಆಸ್ಪತ್ರೆ ಮುಖ್ಯಸ್ಥರ ಅಥವಾ ಆಡಳಿತಾಧಿಕಾರಿಗಳು ಇಲ್ಲವೇ ಅಧ್ಯಕ್ಷರ ನೇತೃತ್ವದಲ್ಲಿ ಆಸ್ಪತ್ರೆ ಸೋಂಕು ನಿಯಂತ್ರಣ ಸಮಿತಿಗಳನ್ನು ಸ್ಥಾಪಿಸಿ/ಚುರುಕುಗೊಳಿಸುವುದು

ii). ಸೋಂಕುತಡೆ ಮತ್ತು ನಿಯಂತ್ರಣಕ್ಕೆ ನೋಡಲ್ ಅಧಿಕಾರಿಯ ನೇಮಕ-ಸೂಕ್ಷ್ಮಾಣು ಜೀವಶಾಸ್ತ್ರಜ್ಞ ಅಥವಾ ಹಿರಿಯ  ಸೋಂಕು ನಿಯಂತ್ರಣ ನರ್ಸ್ ನೇತೃತ್ವ ಇರುವುದು ಅಪೇಕ್ಷಣೀಯ.

iii). ಆರೋಗ್ಯ ಸೌಲಭ್ಯಗಳಲ್ಲಿ ಸೋಂಕು ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಮಾರ್ಗದರ್ಶಿಗಳಲ್ಲಿ ನೀಡಲಾಗಿರುವ ಮಾರ್ಗದರ್ಶನದನ್ವಯ(https://www.mohfw.gov.in/pdf/National%20Guidelines%20for%20IPC%20in%20HCF%20-%20final(1).pdf ರಲ್ಲಿ ಲಭ್ಯ. ಆಸ್ಪತ್ರೆಗಳು/ಆರೋಗ್ಯ ಸೌಲಭ್ಯಗಳಲ್ಲಿ ಸೋಂಕು ಪ್ರತಿಬಂಧಕ ನಿಯಂತ್ರಣ (.ಪಿ.) ಕಾರ್ಯಕ್ರಮವನ್ನು ತಯಾರಿಸಿ ಅನುಷ್ಠಾನಗೊಳಿಸಬೇಕು. ಇದು ಕೆಳಗಿನ ಪ್ರಮುಖ ಘಟಕಾಂಶಗಳನ್ನು ಒಳಗೊಂಡಿರುತ್ತದೆ.

 

a). ಸೋಂಕು ತಡೆ ಮತ್ತು ನಿಯಂತ್ರಣ ಮಾನ್ಯುವಲ್

b.) ಸೂಕ್ಷ್ಮಾಣುಜೀವಿ ಪ್ರತಿರೋಧಕಗಳ ಬಳಕೆ ಮತ್ತು ನಿರ್ವಹಣಾ ಮಾರ್ಗದರ್ಶಿಗಳು

c). ಶಿಕ್ಷಣ ಕಾರ್ಯಕ್ರಮಗಳು ಮತ್ತು ತಂತ್ರಗಳು

d). ಅಪಾಯ ಮೌಲ್ಯಮಾಪನ ಮತ್ತು ಅಪಾಯ ನಿರ್ವಹಣೆ

e). ಯೋಜನೆ, ನಿಗಾ, ಅಡಿಟ್ ಮತ್ತು ಹಿಮ್ಮಾಹಿತಿ

f). ಅನುಷ್ಠಾನ ವ್ಯೂಹಗಳು.

iv). ಕೋವಿಡ್ -19 ಹಿನ್ನೆಲೆಯಲ್ಲಿ .ಪಿ.ಸಿ.ಗಾಗಿರುವ ಪದ್ಧತಿಗಳು ಮತ್ತು ಪ್ರಕ್ರಿಯೆಗಳಿಗೆ ಒತ್ತು ನೀಡಿ ಬಲಪಡಿಸಿ.

a.) ಆಸ್ಪತ್ರೆಗಳು/ಆರೋಗ್ಯ ಸೌಲಭ್ಯಗಳಿಗೆ ಗುಣಮಟ್ಟದ ಮುಂಜಾಗರೂಕತಾ ಕ್ರಮಗಳು ಅನ್ವಯಿಸುತ್ತವೆ.

b.) ಸೋಂಕು ಹರಡುವಿಕೆ ಆಧಾರಿತ ಮುಂಜಾಗರೂಕತೆಗಳನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ಆರೋಗ್ಯ ರಕ್ಷಣಾ ಕಾರ್ಯಕರ್ತರನ್ನು ರಕ್ಷಿಸಲು  ಮತ್ತು ರೋಗಿಗಳ ಸುರಕ್ಷೆ ಖಾತ್ರಿಪಡಿಸುವ ನಿಟ್ಟಿನಲ್ಲಿ ನೀರಹನಿ, ಗಾಳಿಯ ಮೂಲಕ ಮತ್ತು ಸಂಪರ್ಕ ಮೂಲಕ ಹರಡುವ ಸೋಂಕುಗಳ ಮುಂಜಾಗರೂಕತೆಗೆ ಆದ್ಯತೆ ನೀಡಬೇಕು.

v.) ಪರಿಸರ ಮತ್ತು ಸೌಲಭ್ಯಗಳ ಸುಧಾರಣೆ

 

a.) ನಿಯಂತ್ರಿತ ವ್ಯವಸ್ಥೆ ಅವಶ್ಯ ಇಲ್ಲದಿದ್ದಲ್ಲಿ ಮತ್ತು ಗಾಳಿಯಲ್ಲಿ ಬದಲಾವಣೆ ಸಾಧ್ಯವಿಲ್ಲದೇ ಇದ್ದಲ್ಲಿ ತಾಜಾ ಗಾಳಿ ಮತ್ತು ನೈಸರ್ಗಿಕ ವಾತಾಯನಕ್ಕೆ ಆದ್ಯತೆ ನೀಡಬೇಕು.

b.) ಆಸ್ಪತ್ರೆ ಪರಿಸರದ ಮತ್ತು ಆಗಾಗ ಸ್ಪರ್ಶಿಸುವ ಮೇಲ್ಮೈಗಳ  ಸ್ವಚ್ಚತೆ, ಸೋಂಕುರಹಿತಗೊಳಿಸುವಿಕೆ ಮತ್ತು ನಿರ್ಮಲೀಕರಣವನ್ನು ಶಿಫಾರಸು ಮಾಡಲಾದ ಸೋಂಕು ನಿವಾರಕಗಳಾದಂತಹ 1% ಸೋಡಿಯಂ ಹೈಪೋಕ್ಲೋರೈಟ್ ಅಥವಾ 70% ಆಲ್ಕೋಹಾಲ್  ಒಳಗೊಂಡಂತಹ ದ್ರಾವಣಗಳಿಂದ ಮಾಡಬೇಕು.

c.) ಆಸ್ಪತ್ರೆ ವ್ಯವಸ್ಥೆಗಳಲ್ಲಿ ನೀರಿನಿಂದ ಅಥವಾ ಆಹಾರದಿಂದ ಬರಬಹುದಾದ ರೋಗಗಳ ತಡೆಗೆ ಸುರಕ್ಷಿತ ನೀರು ಮತ್ತು ಆಹಾರ ವ್ಯವಸ್ಥೆ

ಜೈವಿಕ - ವೈದ್ಯಕೀಯ ತ್ಯಾಜ್ಯ ಅವಶ್ಯಕತೆಗಳನ್ನು https://cpcb.nic.in/uploads/Projects/Bio-Medical-Waste/BMW-GUIDELINES-COVID_1.pdf ರಲ್ಲಿ  ಲಭ್ಯ ಇರುವ ಸಿ.ಪಿ.ಸಿ.ಬಿ. ಮಾರ್ಗದರ್ಶಿಗಳ ಅನ್ವಯ ನಿಭಾಯಿಸುವುದು.

vi.) ವೆಂಟಿಲೇಟರ್ ಸಂಬಂಧಿತ ನ್ಯುಮೋನಿಯಾ ಅಥವಾ ಕ್ಯಾಥಟರ್ ಸಂಬಂಧಿತ ರಕ್ತ ಹರಿವು, ಮೂತ್ರ ಸಂಬಂಧಿ ಸೋಂಕು ಇತ್ಯಾದಿಗಳ ತಡೆಗಾಗಿ ಸಲಕರಣೆ ಸಂಬಂಧಿತ ಸೋಕುಗಳನ್ನು ನಿರ್ಬಂಧಿಸಲು ಇಂಟೆನ್ಸಿವ್ ಕೇರ್ ಘಟಕಗಳಲ್ಲಿ (.ಸಿ.ಯು.) ಸೂಕ್ತ ನಿರ್ಧಾರದಿಂದಿಗೆ ಸೋಂಕು ತಡೆ ಮತ್ತು ನಿಯಂತ್ರಣ ಪದ್ಧತಿಗಳನ್ನು ಹೆಚ್ಚಿಸಬೇಕಾದ ಅಗತ್ಯವಿದೆ.

vii.)ಕ್ಲಿನಿಕಲ್ ಪ್ರಯೋಗಾಲಯಗಳಲ್ಲಿ ಮತ್ತು ಆಸ್ಪತ್ರೆಗೆ ಸಂಪರ್ಕಿತ ಕ್ಲಿನಿಕಲ್ ಪ್ರಯೋಗಾಲಯಗಳಲ್ಲಿ ಸೋಂಕು ತಡೆ ಮತ್ತು ನಿಯಂತ್ರಣ ಪ್ರಯೋಗಾಲಯ/ಆಸ್ಪತ್ರೆ ಸಿಬ್ಬಂದಿಗಳ ಸುರಕ್ಷೆ ಮತ್ತು ಸಮುದಾಯದ ಆರೋಗ್ಯ ಭದ್ರತೆಗೆ ಬಹಳ ನಿರ್ಣಾಯಕವಾದುದಾಗಿರುತ್ತದೆ.

viii.) ಕೋವಿಡ್ -19 ರೋಗಿಗಳು, ಸ್ಟೀರಾಯ್ಡ್ ಚಿಕಿತ್ಸೆಯಲ್ಲಿರುವವರು ಸಹಿತ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ರೋಗಿಗಳಲ್ಲಿ, ಇತರ ರೋಗಗಳು (ಮಧುಮೇಹದಂತಹ ರೋಗಗಳು ಇರುವವರಲ್ಲಿ ) ಸೋಂಕು ತಡೆ ಮತ್ತು ನಿಯಂತ್ರಣಕ್ಕೆ ಸೋಂಕು ತಡೆ ಮತ್ತು ನಿಯಂತ್ರಣ ಕ್ರಮಗಳಿಗೆ ನಿಖರವಾದ ಬದ್ಧತೆಯನ್ನು ಖಾತ್ರಿಪಡಿಸಬೇಕು. ಇದಕ್ಕೆ ಸಂಬಂಧಿಸಿದ ಮಾರ್ಗದರ್ಶಿಗಳು https://www.mohfw.gov.in/pdf/ClinicalGuidanceonDiabetesManagementatCOVID19PatientManagementFacility.pdf).  ರಲ್ಲಿ  ಲಭ್ಯವಿವೆ.

ix). ವೆಂಟಿಲೇಟರಿನಿಂದ ಬರುವ ನ್ಯುಮೋನಿಯಾ, ಕ್ಯಾಥೆಟರ್ ಸಂಬಂಧಿ ರಕ್ತ ಪ್ರವಾಹ ಸೋಂಕು, ಕ್ಯಾಥೆಟರ್ ಸಂಬಂಧಿತ ಮೂತ್ರ ನಾಳ ಸೋಂಕು, ಶಸ್ತ್ರಚಿಕಿತ್ಸೆ ನಡೆಸಿದ ಸ್ಥಳದಲ್ಲಿ ಬರುವ ಸೋಂಕು, ಗ್ಯಾಸ್ಟ್ರೋ ಇಂಟೆಸ್ಟೈನಲ್ ಸಮಸ್ಯೆಗಳು ಇತ್ಯಾದಿ ಆರೋಗ್ಯ ರಕ್ಷಣಾ ಸಂಬಂಧಿತ ಸೋಂಕುಗಳ  ಮೇಲೆ ಕಾಲಾನುಕ್ರಮದಲ್ಲಿ ನಿಗಾವಹಿಸಬೇಕು. ಹೆಚ್ಚಿನ ಮಾರ್ಗದರ್ಶನವನ್ನು  ...ಎಂ.ಎಸ್. ಎಚ್..ಜಾಲದಿಂದ ಪಡೆಯಬಹುದು  ವಿವರಗಳಿಗೆ : https://www.haisindia.com

x.). ಆಸ್ಪತ್ರೆಗಳಲ್ಲಿ ಎಲ್ಲಾ ಸಿಬ್ಬಂದಿ ತಮ್ಮ .ಪಿ.ಸಿ.ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಂತೆ ಅವಶ್ಯ ತರಬೇತಿ ನೀಡುವುದು. ಅವರ ವೈಯಕ್ತಿಕ ದೈನಂದಿನ ಕರ್ತವ್ಯ ಅಲ್ಲದೆ ಆಸ್ಪತ್ರೆ ಸೋಂಕು ನಿಯಂತ್ರಣ ಮಾನ್ಯುವಲ್ ನಲ್ಲಿ ತಿಳಿಸಲಾದ ಪ್ರಕ್ರಿಯೆಗಳು ಮತ್ತು ಶಿಷ್ಟಾಚಾರಗಳ ಬಗ್ಗೆ ತರಬೇತಿ ನೀಡುವುದರಿಂದ ಅವುಗಳ  ಅನುಷ್ಠಾನಕ್ಕೆ ಇದರಿಂದ ಅನುಕೂಲವಾಗುತ್ತದೆ.

xi). ಸೋಂಕು ತಡೆ ಮತ್ತು  ನಿಯಂತ್ರಣ ಅನುಷ್ಠಾನವನ್ನು ನಿಗಾವಹಿಸಲು ಮತ್ತು ರಾಜ್ಯದಲ್ಲಿ .ಪಿ.ಸಿ. ಕಾರ್ಯಕ್ರಮದ ಮೌಲ್ಯಮಾಪನ ಮತ್ತು ಹಿಮ್ಮಾಹಿತಿ ಒದಗಿಸಲು ರಾಜ್ಯ ನೋಡಲ್ ಅಧಿಕಾರಿಯನ್ನು ಗುರುತಿಸಬೇಕು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರೋಗ್ಯ ರಕ್ಷಣಾ ಸೌಲಭ್ಯಗಳಲ್ಲಿ ಸೋಂಕು ತಡೆ ಮತ್ತು ನಿಯಂತ್ರಣಕ್ಕಾಗಿರುವ ಮಾರ್ಗದರ್ಶಿಗಳ ಅನುಷ್ಠಾನಕ್ಕೆ ಅವಶ್ಯವಾದ ನೆರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡುವುದಾಗಿ  ಭರವಸೆ ನೀಡಲಾಗಿದೆ.

****



(Release ID: 1720827) Visitor Counter : 257