ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್ -19ರ ಎರಡನೇ ಅಲೆಯನ್ನು ಪರಿಗಣಿಸಿ ದುರ್ಬಲ ಗುಂಪುಗಳಿಗೆ ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಗೃಹ ಸಚಿವಾಲಯ (ಎಂ.ಎಚ್.ಎ)ದ ಸಲಹೆ
Posted On:
21 MAY 2021 12:44PM by PIB Bengaluru
ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳು ಸೇರಿದಂತೆ ಸಮಾಜದ ದುರ್ಬಲ ವರ್ಗಗಳ ವಿರುದ್ಧದ ಅಪರಾಧಗಳನ್ನು ತಡೆಗಟ್ಟಲು ಮತ್ತು ನಿಭಾಯಿಸಲು ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಲು ಮತ್ತು ನಿಗ್ರಹಿಸಲು ಸಾಂಸ್ಥಿಕ ಕಾರ್ಯವಿಧಾನಗಳನ್ನು ಜಾರಿಗೆ ತರಲು ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ.
ವಿಶೇಷವಾಗಿ ದುರ್ಬಲ ವರ್ಗದವರ ಮೇಲೆ ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯಿಂದ ಉಂಟಾಗಿರುವ ಪರಿಣಾಮವನ್ನು ಪರಿಗಣಿಸಿ, ದುರ್ಬಲ ವರ್ಗಗಳ ಬಗ್ಗೆ ಅದರಲ್ಲೂ ಕೋವಿಡ್ -19 ರಿಂದ ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಬಗ್ಗೆ ಗಮನ ಹರಿಸುವಂತೆ ಎಂ.ಎಚ್.ಎ. ಮತ್ತೊಮ್ಮೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪುನರ್ ಸೂಚನೆ ನೀಡಿದೆ. ದುರ್ಬಲ ಗುಂಪುಗಳಿಗೆ, ವಿಶೇಷವಾಗಿ ಅನಾಥವಾಗಿರುವ ಮಕ್ಕಳಿಗೆ, ಸಮಯೋಚಿತ ಸಹಾಯ ಮತ್ತು ಬೆಂಬಲ (ವೈದ್ಯಕೀಯದ ಜೊತೆಗೆ ಭದ್ರತೆ ಮತ್ತು ಸುರಕ್ಷತೆ) ಅಗತ್ಯವಿರುವ ಹಿರಿಯ ನಾಗರಿಕರಿಗೆ ಮತ್ತು ಸರ್ಕಾರದ ಬೆಂಬಲ ಸೌಲಭ್ಯಗಳನ್ನು ಪಡೆಯಲು ಮಾರ್ಗದರ್ಶನದ ಅಗತ್ಯ ಇರುವ ಪರಿಶಿಷ್ಟ ಜಾತಿ/ಪಂಗಡದ ಸದಸ್ಯರಿಗೆ ಅಸ್ತಿತ್ವದಲ್ಲಿರುವ ಸೌಲಭ್ಯಗಳ ಬಗ್ಗೆ ತಕ್ಷಣದ ಪರಿಶೀಲನೆ ನಡೆಸುವಂತೆ ಎಂ.ಎಚ್.ಎ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಪೊಲೀಸ್ ಸಿಬ್ಬಂದಿಯನ್ನು ಸಂವೇದನಾಶೀಲಗೊಳಿಸಿ, ಈ ನಿಟ್ಟಿನಲ್ಲಿ ಸಂಬಂಧಿತ ವಿವಿಧ ಇಲಾಖೆಗಳು/ಸಂಸ್ಥೆಗಳೊಂದಿಗೆ ಸಮನ್ವಯಕ್ಕಾಗಿ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರ ಮತ್ತು ಜಿಲ್ಲೆಗಳಲ್ಲಿ ಮಾನವ ಕಳ್ಳಸಾಗಣೆ ನಿಗ್ರಹ ಘಟಕಗಳನ್ನು ಪರಿಣಾಮಕಾರಿಯಾಗಿ ನಿಯೋಜಿಸಲು ಎಂ.ಎಚ್.ಎ ರಾಜ್ಯಗಳು/ಕೇಂದ್ರ ಪ್ರದೇಶಗಳಿಗೆ ಸೂಚಿಸಿದೆ.
ಈ ಚಟುವಟಿಕೆಯಲ್ಲಿ ಅನುಕೂಲವಾಗುವಂತೆ ಎನ್.ಸಿ.ಆರ್.ಬಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಲವಾರು ಸಾಧನಗಳನ್ನು ಅಂದರೆ, ಪೊಲೀಸರು ಅಂತರ-ರಾಜ್ಯ ಮಾಹಿತಿಯನ್ನು ಹಂಚಿಕೊಳ್ಳಲು ಅಪರಾಧ ಬಹು ಕೇಂದ್ರ ಸಂಸ್ಥೆ (ಕ್ರಿ-ಎಂಎಸಿ); ಅಪರಾಧ ಮತ್ತು ಅಪರಾಧಿಗಳ ಪತ್ತೆ ಜಾಲ ಮತ್ತು ವ್ಯವಸ್ಥೆ (ಸಿ.ಸಿ.ಟಿ.ಎನ್.ಎಸ್)ಯನ್ನು ಬಳಸಿಕೊಂಡು ಕಾಣೆಯಾದ ಮತ್ತು ಪತ್ತೆಯಾದ ವ್ಯಕ್ತಿಗಳ ಕುರಿತು ಪೊಲೀಸರಿಗೆ ಎಚ್ಚರಿಕೆ ನೀಡುವ ಆನ್ ಲೈನ್ ರಾಷ್ಟ್ರೀಯ ಸೇವೆ, ಮತ್ತು ಮೆಷಿನ್ ಲರ್ನಿಂಗ್ ಮಾದರಿ ಬಳಸಿಕೊಂಡು ಸ್ವಯಂ ಭಾವಚಿತ್ರಗಳನ್ನು ಹೋಲಿಸಿ ಪತ್ತೆ ಮಾಡುವ, ಸಿಸಿಟಿಎನ್‌ಎಸ್.ನಲ್ಲಿರುವ ರಾಷ್ಟ್ರೀಯ ಚಿತ್ರ ಭಂಡಾರದಲ್ಲಿ ಗುರುತಿಸಲಾಗದ ಮೃತ ದೇಹಗಳು, ಕಾಣೆಯಾದ ವ್ಯಕ್ತಿಗಳನ್ನು ಗುರುತಿಸಲು ಪೊಲೀಸ್ ಸಿಬ್ಬಂದಿಯನ್ನು ಶಕ್ತಗೊಳಿಸುವ ಅಂತರ್ಜಾಲ ಆಧಾರಿತ ಆನ್ವಯಿಕ ಯು.ಎನ್.ಐ.ಎಫ್.ವೈ. ಬಿಡುಗಡೆ ಮಾಡಿದೆ.
ಕಾಣೆಯಾದ ವ್ಯಕ್ತಿಗಳ ಬಗ್ಗೆ ಆನ್ ಲೈನ್ ನಲ್ಲಿ ಲಭ್ಯವಿರುವ ಮಾಹಿತಿಯ ಕುರಿತು ಕೇಂದ್ರೀಯ ನಾಗರಿಕ ಸೇವೆಯಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಎಂ.ಎಚ್.ಎ. ಕೋರಿದೆ. ಕೋವಿಡ್-19 ರ ಸಮಯದಲ್ಲಿ ತೃತೀಯ ಲಿಂಗಿಗಳ ಸುರಕ್ಷತೆಗಾಗಿ ಇತ್ತೀಚೆಗೆ ನೀಡಲಾದ ಎಸ್.ಓ.ಪಿ. ಗಳನ್ನು ಸಹ ಎಂ.ಎಚ್.ಎ. ಉಲ್ಲೇಖಿಸಿದೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈ ಸೌಲಭ್ಯಗಳನ್ನು ಜನರ ಅನುಕೂಲಕ್ಕಾಗಿ ಬಳಸುತ್ತಿವೆ.
****
(Release ID: 1720661)
Visitor Counter : 329
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam