ರೈಲ್ವೇ ಸಚಿವಾಲಯ

ದೇಶದಲ್ಲಿ ಮಿಷನ್ ಮೋಡ್ ಮಾದರಿಯಲ್ಲಿ  ಈ ವರೆಗೆ ಸುಮಾರು 200 ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಯಾನ ಪೂರ್ಣ


ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳಲ್ಲಿ 775 ಕ್ಕೂ ಹೆಚ್ಚು ಟ್ಯಾಂಕರ್ ಗಳ ಮೂಲಕ ದೇಶಕ್ಕೆ 12630 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕ ಪೂರೈಕೆ

ಪ್ರಸ್ತುತ 784 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕ ಭರ್ತಿಯಾಗಿರುವ 45 ಟ್ಯಾಂಕರ್ ಗಳನ್ನು ಹೊತ್ತ 10 ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಪ್ರಗತಿಯಲ್ಲಿ

ಇದೀಗ ದೇಶಕ್ಕೆ ಪ್ರತಿದಿನ 800 ಮೆಟ್ರಿಕ್ ಟನ್ ಗೂ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕ ಪೂರೈಸುತ್ತಿರುವ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು: ಉತ್ತರಾಖಂಡ್, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಪರಿಹಾರ

ಈವರೆಗೆ 521 ಮೆಟ್ರಿಕ್ ಟನ್ ಮಹಾರಾಷ್ಟ್ರಕ್ಕೆ, ಉತ್ತರ ಪ್ರದೇಶ ಸುಮಾರು 3189 ಮೆಟ್ರಿಕ್ ಟನ್, ಮಧ್ಯಪ್ರದೇಶ 521 ಮೆಟ್ರಿಕ್ ಟನ್, ಹರ್ಯಾಣ 1549 ಮೆಟ್ರಿಕ್ ಟನ್, ತೆಲಂಗಾಣ 772 ಮೆಟ್ರಿಕ್ ಟನ್, ರಾಜಸ್ಥಾನ 98 ಮೆಟ್ರಿಕ್ ಟನ್, ಕರ್ನಾಟಕ 641 ಮೆಟ್ರಿಕ್ ಟನ್, ಉತ್ತರಾಖಂಡ 320 ಮೆಟ್ರಿಕ್ ಟನ್, ತಮಿಳುನಾಡು 292 ಮೆಟ್ರಿಕ್ ಟನ್, ಪಂಜಾಬ್ 111 ಮೆಟ್ರಿಕ್ ಟನ್, ಕೇರಳ 118 ಮೆಟ್ರಿಕ್ ಟನ್ ಮತ್ತು ದೆಹಲಿಗೆ 3915 ಮೆಟ್ರಿಕ್ ಟನ್ ಗೂ ಹೆಚ್ಚು ಆಮ್ಲಜನಕ ಪೂರೈಕೆ

Posted On: 20 MAY 2021 2:13PM by PIB Bengaluru

ದೇಶದ ವಿವಿಧ ರಾಜ್ಯಗಳಿಗೆ ಎಲ್ಲಾ ಅಡೆತಡೆಗಳನ್ನು ದಾಟಿ, ಹೊಸ ಪರಿಹಾರ ಹುಡುಕುವ ನಿಟ್ಟಿನಲ್ಲಿ  ಭಾರತೀಯ ರೈಲ್ವೆ ದ್ರವ ವೈದ್ಯಕೀಯ ಆಮ್ಲಜನಕ [ಎಲ್.ಎಂ.] ಪೂರೈಸುವ ತನ್ನ ಯಾನವನ್ನು ಮುಂದುವರಿಸಿದೆ. ವರೆಗೆ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳಲ್ಲಿ 775 ಕ್ಕೂ ಹೆಚ್ಚು ಟ್ಯಾಂಕರ್ ಗಳ ಮೂಲಕ ದೇಶಕ್ಕೆ 12630 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡಿದೆ. ದೇಶದಲ್ಲಿ ವರೆಗೆ ಸುಮಾರು 200 ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಯಾನ ಪೂರ್ಣಗೊಳಿಸಿದೆ ಮತ್ತು ರಾಜ್ಯಗಳಿಗೆ ಪರಿಹಾರ ಒದಗಿಸಿದೆ.

ಹೇಳಿಕೆ ಬಿಡುಗಡೆ ಮಾಡುವವರೆಗಿನ ಮಾಹಿತಿಯಂತೆ ಪ್ರಸ್ತುತ 784 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕ ಭರ್ತಿಯಾಗಿರುವ 45 ಟ್ಯಾಂಕರ್ ಗಳನ್ನು ಹೊತ್ತ 10 ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಪ್ರಗತಿಯಲ್ಲಿದೆ. ಇದೀಗ ದೇಶಕ್ಕೆ ಪ್ರತಿದಿನ 800 ಮೆಟ್ರಿಕ್ ಟನ್ ಗೂ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು ಆಕ್ಸಿಜನ್ ಎಕ್ಸ್ ಪ್ರೆಸ್ ಗಳು

ಪೂರೈಸುತ್ತಿವೆ.

ವಿನಂತಿಸುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಅಗತ್ಯವಿರುವಷ್ಟು ಎಲ್.ಎಂ. ಅನ್ನು ತಲುಪಿಸಲು ಭಾರತೀಯ ರೈಲ್ವೆ ಕಾರ್ಯೋನ್ಮುಖವಾಗಿವೆ

ಉತ್ತರಾಖಂಡ್, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ರಾಜಸ್ಥಾನ, ತಮಿಳುನಾಡು, ಹರ್ಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ಆಕ್ಸಿಜನ್ ಎಕ್ಸ್ ಪ್ರೆಸ್ ಗಳ ಮೂಲಕ ಪರಿಹಾರ ನೀಡಲಾಗುತ್ತಿದೆ.

ಹೇಳಿಕೆ ಬಿಡುಗಡೆ ಮಾಡಿದ ಸಮಯದವರೆಗಿನ ಮಾಹಿತಿಯಂತೆ ಈವರೆಗೆ 521 ಮೆಟ್ರಿಕ್ ಟನ್ ಮಹಾರಾಷ್ಟ್ರಕ್ಕೆ, ಉತ್ತರ ಪ್ರದೇಶ ಸುಮಾರು 3189 ಮೆಟ್ರಿಕ್ ಟನ್, ಮಧ್ಯಪ್ರದೇಶ 521 ಮೆಟ್ರಿಕ್ ಟನ್, ಹರಿಯಾಣ 1549 ಮೆಟ್ರಿಕ್ ಟನ್, ತೆಲಂಗಾಣ 772 ಮೆಟ್ರಿಕ್ ಟನ್, ರಾಜಸ್ಥಾನ 98 ಮೆಟ್ರಿಕ್ ಟನ್, ಕರ್ನಾಟಕ 641 ಮೆಟ್ರಿಕ್ ಟನ್, ಉತ್ತರಾಖಂಡ 320 ಮೆಟ್ರಿಕ್ ಟನ್, ತಮಿಳುನಾಡು 292 ಮೆಟ್ರಿಕ್ ಟನ್, ಪಂಜಾಬ್ 111 ಮೆಟ್ರಿಕ್ ಟನ್, ಕೇರಳ 118 ಮೆಟ್ರಿಕ್ ಟನ್ ಮತ್ತು ದೆಹಲಿಗೆ 3915 ಮೆಟ್ರಿಕ್ ಟನ್ ಗೂ ಹೆಚ್ಚು ಆಮ್ಲಜನಕ ಪೂರೈಕೆ ಮಾಡಲಾಗಿದೆ.

ದೇಶದಲ್ಲಿ ಬಿಕ್ಕಟ್ಟು ಸೃಷ್ಟಿಯಾದ ನಂತರ ಭಾರತೀಯ ರೈಲ್ವೆ ಪಶ್ಚಿಮ ಭಾಗದಿಂದ ಹಪ ಮತ್ತು ಮುಂದ್ರ ಮತ್ತು ಪೂರ್ವ ಭಾಗದ ರೌರ್ ಕೆಲ, ದೌರಂಗಪುರ್, ಟಾಟಾ ನಗರ್, ಅಂಗುಲ್ ನಿಂದ ವಿವಿಧ ರಾಜ್ಯಗಳಾದ ಉತ್ತರಾಖಂಡ, ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರ್ಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಸನ್ನಿವೇಶಗಳಿಗೆ ಅನುಗುಣವಾಗಿ ಸಂಕಿರ್ಣ ಮಾರ್ಗದಲ್ಲಿ ಆಮ್ಲಜನಕ ಪೂರೈಕೆ ಮಾಡುತ್ತಿದೆ.

ಅತ್ಯಂತ ತ್ವರಿತವಾಗಿ ಸಾಧ್ಯವಾಗುವಂತೆ ಆಮ್ಲಜನಕ ಪರಿಹಾರವನ್ನು ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಹೊಸ ಮಾನದಂಡವನ್ನು ರಚಿಸುತ್ತಿದೆ ಮತ್ತು ಆಕ್ಸಿಜನ್ ಎಕ್ಸ್ ಪ್ರೆಸ್ ಸರಕು ರೈಲುಗಳ ಚಾಲನೆಯಲ್ಲಿ ಅಭೂತಪೂರ್ವ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ನಿರ್ಣಾಯಕ ಸರಕು ರೈಲುಗಳ ಸರಾಸರಿ ವೇಗ ಹೆಚ್ಚಿನ ಸಂದರ್ಭಗಳಲ್ಲಿ 55 ಕಿಲೋಮೀಟರ್ ಗಿಂತ ಹೆಚ್ಚಿರುತ್ತದೆ. ಹೆಚ್ಚಿನ ಆದ್ಯತೆಯ ಗ್ರೀನ್ ಕಾರಿಡಾರ್ ನಲ್ಲಿ ಹೆಚ್ಚಿನ ತುರ್ತು ಪ್ರಜ್ಞೆಯೊಂದಿಗೆ ವಿವಿಧ ವಲಯಗಳ ಕಾರ್ಯಾಚರಣಾ ತಂಡಗಳು ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಿವೆ. ಅತ್ಯಂತ ತ್ವರಿತವಾಗಿ ಆಮ್ಲಜನಕ ತಲುಪಿಸುವುದನ್ನು ಖಚಿತಪಡಿಸಿಕೊಳ್ಳುತ್ತಿದೆ. ವಿವಿಧ ಭಾಗಗಳಲ್ಲಿ ಸಿಬ್ಬಂದಿ ಬದಲಾವಣೆಗಾಗಿ ತಾಂತ್ರಿಕ ನಿಲುಗಡೆಯನ್ನು 1 ನಿಮಿಷಕ್ಕೆ ಇಳಿಸಲಾಗಿದೆ.

ಟ್ರ್ಯಾಕ್ ಗಳನ್ನು ಮುಕ್ತವಾಗಿಡಲಾಗಿದೆ ಮತ್ತು ಆಕ್ಸಿಜನ್ ಎಕ್ಸ್ ಪ್ರೆಸ್ ಸಾಗುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಜಾಗರೂಕತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ.

ಇದೆಲ್ಲವನ್ನೂ ಇತರೆ ಸರಕು ಸಾಗಣೆಗೆ ಕಾರ್ಯಾಚರಣೆಯ ವೇಗ ಕಡಿಮೆಯಾಗದ ರೀತಿಯಲ್ಲಿ ಮಾಡಲಾಗುತ್ತಿದೆ. ಹೊಸ ಆಕ್ಸಿಜನ್ ಎಕ್ಸ್ ಪ್ರೆಸ್ ಕಾರ್ಯಾಚರಣೆ ಬಹಳ ಕ್ರಿಯಾತ್ಮಕ ಕಸರತ್ತಿನಿಂದ ಕೂಡಿದೆ ಮತ್ತು ಎಲ್ಲಾ ಸಮಯದಲ್ಲೂ ಅಂಕಿ ಅಂಶಗಳು ಅಪ್ ಡೇಟ್ ಆಗುತ್ತಿರುತ್ತವೆ. ಹೆಚ್ಚು ಭರ್ತಿಯಾದ ಆಮ್ಲಜನಕ ಎಕ್ಸ್ ಪ್ರೆಸ್ ಗಳು ತಮ್ಮ ಯಾನವನ್ನು ತಡರಾತ್ರಿಯಲ್ಲಿ ಆರಂಭಿಸುತ್ತವೆ. ಆಮ್ಲಜನಕ ಪೂರೈಸುವ ವಿವಿಧ ಮಾರ್ಗಗಳನ್ನು ರೈಲ್ವೆ ಮ್ಯಾಪ್ ಮಾಡಿದೆ ಮತ್ತು ರಾಜ್ಯಗಳ ತುರ್ತು ಅಗತ್ಯಗಳಿಗೆ ಸ್ಪಂದಿಸಲು ತನ್ನನ್ನು ಸದಾ ಸನ್ನದ್ಧಗೊಳಿಸಿಕೊಂಡಿವೆ. ದ್ರವ ವೈದ್ಯಕೀಯ ಆಮ್ಲಜನಕ ಎಲ್.ಎಂ. ಅನ್ನು ತರಲು ರಾಜ್ಯಗಳು ಟ್ಯಾಂಕರ್ ಗಳನ್ನು ಒದಗಿಸಬೇಕಾಗುತ್ತದೆ.

***



(Release ID: 1720451) Visitor Counter : 215