ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ದಿವ್ಯಾಂಗರ ಪುನರ್ವಸತಿ ಕುರಿತಂತೆ ಇದೇ ಮೊದಲ ಬಾರಿಗೆ ವಿನೂತನವಾದ ಆರು ತಿಂಗಳ ಸಿಬಿಐಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೇಂದ್ರ ಸರ್ಕಾರ

Posted On: 19 MAY 2021 3:40PM by PIB Bengaluru

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಶ್ರೀ ಕ್ರಿಶನ್ ಪಾಲ್ ಗುರ್ಜಾರ್; ಭಾರತದಲ್ಲಿನ ಆಸ್ಟ್ರೇಲಿಯಾ ಹೈಕಮಿಷನರ್ ಶ್ರೀ ಬ್ಯಾರಿ ಫಾರೆಲ್; ಆಸ್ಟ್ರೇಲಿಯಾದಲ್ಲಿನ ಭಾರತೀಯ ರಾಯಭಾರಿ ಶ್ರೀ ಮನ್ ಪ್ರೀತ್ ವೊಹ್ರಾ; ಭಾರತ ಸರ್ಕಾರದ ಡಿಇಪಿಡಬ್ಲ್ಯೂಡಿ ಕಾರ್ಯದರ್ಶಿ ಶ್ರೀಮತಿ ಅಂಜಲಿ ಭಾವ್ರಾ; ಮತ್ತು ಮೆಲ್ಬೋರ್ನ್ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ|| ಡಂಕನ್ ಮಾಸ್ಕೆಲ್ ಅವರ ಸಮಕ್ಷಮದಲ್ಲಿ ದಿವ್ಯಾಂಗರ ಪುನರ್ವಸತಿ ಕುರಿತಂತೆ ಆರು ತಿಂಗಳ ಸಮುದಾಯ ಆಧಾರಿತ ಸಮಗ್ರ ಅಭಿವೃದ್ಧಿ(ಸಿಬಿಐಡಿ) ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿದರು. ಡಿಇಪಿಡಬ್ಲ್ಯೂಡಿಯ ಜಂಟಿ ಕಾರ್ಯದರ್ಶಿ ಶ್ರೀ ಪ್ರಬೋಧ್ ಸೇತ್ ಮತ್ತು ಮೆಲ್ಬೋರ್ನ್ ವಿಶ್ವವಿದ್ಯಾಲಯದ ಡಾ. ನಾಥನ್ ಗಿಲ್ಸ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂದರ್ಭದಲ್ಲಿ ಮಾತನಾಡಿದ ಡಾ. ಥಾವರ್ ಚಂದ್ ಗೆಹ್ಲೋಟ್, ವಿಶೇಷಚೇತನ ವ್ಯಕ್ತಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸದಾ ಮತ್ತು ನಿರಂತರವಾಗಿ ಪ್ರಥಮ ಆದ್ಯತೆಯನ್ನು ನೀಡಲಾಗುತ್ತಿದೆ ಎಂದರು. ಕೇಂದ್ರ ಸರ್ಕಾರ ವಿಶೇಷಚೇತನ ವ್ಯಕ್ತಿಗಳ ಹಕ್ಕುಗಳ(ಆರ್ ಪಿಡಬ್ಲ್ಯೂಡಿ) ಕಾಯ್ದೆ 2016 ಅನ್ನು ಜಾರಿಗೊಳಿಸಿದ್ದು, ಇದರಡಿ ವಿಶೇಷಚೇತನ ವ್ಯಕ್ತಿಗಳನ್ನೊಳಗೊಂಡಂತೆ ಸಮಾಜದ ಅಭಿವೃದ್ಧಿಯ ಸೇರಿದೆ. ವಿಶೇಷಚೇತನ ವ್ಯಕ್ತಿಗಳು ಅತ್ಯಂತ ಪ್ರಮುಖ ಮಾನವ ಸಂಪನ್ಮೂಲ ಎಂದು ಪುನರುಚ್ಚರಿಸಿದ ಸಚಿವರು, ಅಂತಹವರಿಗೆ ಸೂಕ್ತ ಸೌಕರ್ಯಗಳು/ಅವಕಾಶಗಳನ್ನು ಒದಗಿಸಿದರೆ ಅವರು ಶಿಕ್ಷಣ, ಕ್ರೀಡೆ, ಪ್ರದರ್ಶನ/ಕಲಾ ವಿಭಾಗ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆಗಳನ್ನು ಮಾಡುತ್ತಾರೆ ಎಂದರು. ಇದನ್ನು ಗಮನದಲ್ಲಿರಿಸಿಕೊಂಡು ಮೆಲ್ಬೋರ್ನ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಕೋರ್ಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ದಿವ್ಯಾಂಗರ ಅಭಿವೃದ್ಧಿ ಮತ್ತು ಪುನರ್ ವಸತಿಗೆ ಮಾನವ ಸಂಪನ್ಮೂಲ ತರಬೇತಿ ಅಭಿವೃದ್ಧಿಗೊಳಿಸಲು ನೆರವಾಗಲಿದೆ ಮತ್ತು ದಿವ್ಯಾಂಗರ ಸಬಲೀಕರಣ ಮತ್ತು ಸಮಾಜದಲ್ಲಿ ಅವರ ಒಳಗೊಳ್ಳುವಿಕೆಯನ್ನು ಖಾತ್ರಿಪಡಿಸುತ್ತದೆ ಎಂದು ಸಚಿವರು ವಿವರಿಸಿದರು.

ಸಾಂಕ್ರಾಮಿಕ ಸ್ಥಿತಿಗತಿಯ ಹಿನ್ನೆಲೆಯಲ್ಲಿ ದಿವ್ಯಾಂಗರಿಗೆ ಪ್ರಾಥಮಿಕ ಮಾರ್ಗದರ್ಶನ/ಆಪ್ತ ಸಮಾಲೋಚನೆ ಅಗತ್ಯತೆಯೂ ಸಹ ಈಗ ಮತ್ತಷ್ಟು ಪ್ರಸ್ತುತವಾಗಿದೆ ಮತ್ತು ಅದಕ್ಕಾಗಿ ಎಷ್ಟು ಸಾಧ್ಯವೋ ಅಷ್ಟು ಶೀಘ್ರವಾಗಿ ಕಾರ್ಯಕ್ರಮವನ್ನು ರೂಪಿಸುವ ಅಗತ್ಯತೆ ಇದೆ ಎಂದರು.

ಶ್ರೀ ಕ್ರಿಶನ್ ಪಾಲ್ ಗುರ್ಜಾರ್  ಅವರು ಮಾತನಾಡಿ ನಮ್ಮ ಸರ್ಕಾರದ ಧ್ಯೇಯ ಸಬ್ ಕಾ ಸಾತ್, ಸಬ್ ಕಾ ವಿಕಾಸ್ಆಗಿದ್ದು, ಅದರ ಅರ್ಥ ಎಲ್ಲರ ಅಭಿವೃದ್ಧಿ ಮತ್ತು ಎಲ್ಲರನ್ನೊಳಗೊಂಡ ಅಭಿವೃದ್ಧಿಎಂಬುದಾಗಿದೆ. ಇದು ನಮ್ಮ ನೀತಿಗಳು ಮತ್ತು ಕಾರ್ಯಕ್ರಮಗಳಲ್ಲಿ ಎಲ್ಲರನ್ನೊಳಗೊಳ್ಳುವಿಕೆಯ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ನಮ್ಮ ನೀತಿಗಳಲ್ಲಿ ದಿವ್ಯಾಂಗರಿಗೆ ಮೊದಲ ಆದ್ಯತೆ ಮುಂದುವರಿದಿದ್ದು, ಅವರ ಒಳಗೊಳ್ಳುವಿಕೆ ಮತ್ತು ಸಮಾಜದಲ್ಲಿ ಸಂಪೂರ್ಣ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸಲಾಗಿದೆ. ಕಾರ್ಯಕ್ರಮ ವಿಭಿನ್ನವಾಗಿದ್ದು, ಇದು ಅಪಾಯದ ಪ್ರಕರಣಗಳನ್ನು ಗುರುತಿಸುವಲ್ಲಿ ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಸೃಷ್ಟಿಸುತ್ತದೆ, ಸಮೀಪದ ಕೇಂದ್ರಗಳ ಮೂಲಕ ಪೋಷಕರು ಮತ್ತು ಪಾಲಕರಿಗೆ ಮಧ್ಯ ಪ್ರವೇಶ ಮತ್ತು ದಿವ್ಯಾಂಗರಿಗೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಮಾರ್ಗದರ್ಶನ ನೀಡುವುದು ಸೇರಿದೆ. ನಮ್ಮ ಸರ್ಕಾರ ಇತರೆ ದೇಶಗಳೊಂದಿಗೆ ಉತ್ತಮ ಪದ್ಧತಿಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲು ಮುಕ್ತವಾಗಿದೆ ಮತ್ತು ನಿಟ್ಟಿನಲ್ಲಿ ದಿವ್ಯಾಂಗರ ವಲಯದಲ್ಲಿ ಆಸ್ಟ್ರೇಲಿಯಾ ಸರ್ಕಾರದ ಸಹಕಾರಕ್ಕಾಗಿ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದು ಗುರ್ಜಾರ್ ಹೇಳಿದರು.

ಡಿಇಪಿಡಬ್ಲ್ಯೂಡಿ ಕಾರ್ಯದರ್ಶಿ ಶ್ರೀ ಅಂಜಲಿ ಭಾವ್ರಾ ಅವರು ಇಂತಹ ಮಹತ್ವದ ಕಾರ್ಯಕ್ರಮ ರೂಪಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ ಆಸ್ಟ್ರೇಲಿಯಾ ಮತ್ತು ಭಾರತದ ತಜ್ಞರನ್ನು ಸ್ವಾಗತಿಸಿದರು. ಸದ್ಯ ದಿವ್ಯಾಂಗರು ಅವರ ಪೋಷಕರು ಮತ್ತು ಸಮುದಾಯ, ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳ ನಡುವೆ ಸಂಪರ್ಕ ಕಲ್ಪಿಸಲು ತರಬೇತಿ ಹೊಂದಿದ ಮಾನವ ಸಂಪನ್ಮೂಲದ ಕೊರತೆ ಇದೆ ಮತ್ತು ಪ್ರಮುಖ ಕಾರ್ಯವನ್ನು ಕೈಗೊಳ್ಳಲು ಅಗತ್ಯವಿರುವ ತರಬೇತಿ ಹೊಂದಿದ ಮಾನವ ಸಂಪನ್ಮೂಲವನ್ನು ಸೃಷ್ಟಿಸುವಲ್ಲಿ ಸಿಬಿಐಡಿ ಕಾರ್ಯಕ್ರಮ ದೀರ್ಘಾವಧಿಯಲ್ಲಿ ನೆರವಾಗಲಿದೆ ಎಂದರು. ಭಾರತೀಯ ಪುನರ್ ವಸತಿ ಮಂಡಳಿ ಮತ್ತು ಮೆಲ್ಬೋರ್ನ್ ವಿಶ್ವವಿದ್ಯಾಲಯ ಕಾರ್ಯಕ್ರಮ ರೂಪಿಸಲು ಕಳೆದ ಎರಡು ವರ್ಷಗಳಿಂದ ಕಾರ್ಯೋನ್ಮುಖವಾಗಿದ್ದವು. ಇಲಾಖೆ, ಭವಿಷ್ಯದಲ್ಲಿ ಕಾರ್ಯಕ್ರಮದ ವಿಸ್ತರಣೆಯಲ್ಲಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಸೇರಿಸಿಕೊಳ್ಳಲಿದೆ ಎಂದು ಕಾರ್ಯದರ್ಶಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಕೋರ್ಸ್ ಪಠ್ಯ ಕ್ರಮದ ಆರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ತಳಮಟ್ಟದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಜೊತೆಗೂಡಿ ನಾನಾ ಬಗೆಯ ದಿವ್ಯಾಂಗರ ವಿಷಯಗಳನ್ನು ನಿರ್ವಹಿಸಲು ಮತ್ತು ದಿವ್ಯಾಂಗ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪುನರ್ ವಸತಿ ಕಾರ್ಯಕರ್ತರ ಸಂಪನ್ಮೂಲ ಸೃಷ್ಟಿಸುವುದು ಇದರ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ತಮ್ಮ ಕರ್ತವ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸಲು  ದಕ್ಷತೆ ಆಧರಿತ ಜ್ಞಾನ ಮತ್ತು ಕೌಶಲವನ್ನು ಒದಗಿಸಲು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಕಾರ್ಯಕರ್ತರನ್ನು ದಿವ್ಯಾಂಗ ಮಿತ್ರಅಂದರೆ ದಿವ್ಯಾಂಗ ವ್ಯಕ್ತಿಗಳ ಮಿತ್ರರು ಎಂದು ಕರೆಯಲಾಗುವುದು.

ಭಾರತೀಯ ಪುನರ್ ವಸತಿ ಮಂಡಳಿ ಆರಂಭದಲ್ಲಿ ಪ್ರಾಯೋಗಿಕವಾಗಿ ಎರಡು ಬ್ಯಾಚ್ ಗಳಲ್ಲಿ ಕೋರ್ಸ್ ಅನ್ನು ದಿವ್ಯಾಂಗರ ಸಬಲೀಕರಣ ಇಲಾಖೆಯ 7 ರಾಷ್ಟ್ರೀಯ ಕೇಂದ್ರಗಳಲ್ಲಿ  ಮತ್ತು ಸಮುದಾಯ ಆಧಾರಿತ ಪುನರ್ ವಸತಿ ಕಾರ್ಯಕ್ರಮದಲ್ಲಿ ಅನುಭವ ಹೊಂದಿದ 7 ರಿಂದ 9 ಸ್ವಯಂ ಸೇವಾ ಸಂಘಟನೆಗಳಲ್ಲಿ ಆರಂಭಿಸಲು ಉದ್ದೇಶಿಸಿದೆ. ಆರಂಭಿಕವಾಗಿ ಕಾರ್ಯಕ್ರಮ ಇಂಗ್ಲಿಷ್, ಹಿಂದಿ ಮತ್ತು 7 ಪ್ರಾದೇಶಿಕ ಭಾಷೆಗಳಾದ ಗುಜರಾತಿ, ಮರಾಠಿ, ಒರಿಯಾ, ಬೆಂಗಾಲಿ, ತೆಲುಗು, ತಮಿಳು ಮತ್ತು ಗಾರೊ ಭಾಷೆಯಲ್ಲಿ ಲಭ್ಯವಿರುತ್ತದೆ. ಮೊದಲ ಬ್ಯಾಚ್ ತರಗತಿಗಳು ಸುಮಾರು 600 ವಿದ್ಯಾರ್ಥಿಗಳಿಗೆ ವರ್ಷದ ಆಗಸ್ಟ್ ನಿಂದ ಆರಂಭವಾಗುವ ಸಾಧ್ಯತೆ ಇದೆ. ಕೋರ್ಸ್ ತರಬೇತಿ ವಿಧಾನದಲ್ಲಿ ಸದ್ಯದ ಕೋವಿಡ್ ಸ್ಥಿತಿಗತಿ ಆಧರಿಸಿ ಆಫ್ ಲೈನ್/ಆನ್ ಲೈನ್ ಎರಡಕ್ಕೂ ಅವಕಾಶ ಕಲ್ಪಿಸಲಾಗಿದೆ.

ಸಿಬಿಐಡಿ ಕೋರ್ಸ್ ಅನ್ನು ಭಾರತೀಯ ಪುನರ್ ವಸತಿ ಮಂಡಳಿ ಮತ್ತು ಮೆಲ್ಬೋರ್ನ್ ವಿಶ್ವವಿದ್ಯಾಲಯ ಜಂಟಿಯಾಗಿ ವಿನ್ಯಾಸಗೊಳಿಸಿದ್ದು, ಇದು ಆಸ್ಟ್ರೇಲಿಯಾ ಸರ್ಕಾರ ಮತ್ತು ಭಾರತ ಸರ್ಕಾರ 2018 ನವೆಂಬರ್ 22ರಂದು ದಿವ್ಯಾಂಗರ ವಲಯದಲ್ಲಿ ಸಹಕಾರ ಕುರಿತಂತೆ ಸಹಿ ಹಾಕಲಾದ ಒಪ್ಪಂದದ ಜಂಟಿ ಉಪಕ್ರಮವಾಗಿದೆ. ಕೋರ್ಸ್ ವಿಷಯ ಮತ್ತು ಪಠ್ಯಕ್ರಮವನ್ನು ಆಸ್ಟ್ರೇಲಿಯಾ ಮತ್ತು ಭಾರತದ ತಜ್ಞರನ್ನೊಳಗೊಂಡ ಸಮಿತಿ ಸಿದ್ಧಪಡಿಸಿದೆ. ಭಾರತೀಯ ಪುನರ್ ವಸತಿ ಮಂಡಳಿಯ ಅಡಿಯಲ್ಲಿ ಬರುವ ರಾಷ್ಟ್ರೀಯ ಪರೀಕ್ಷಾ ಮಂಡಳಿ ಪರೀಕ್ಷೆಗಳನ್ನು ನಡೆಸಲಿದೆ ಮತ್ತು ತೇರ್ಗಡೆ ಹೊಂದುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಿದೆ

***


(Release ID: 1719970) Visitor Counter : 398