ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಕೋವಿಡ್-19 ಚಿಕಿತ್ಸೆಗೆ ಅತ್ಯವಶ್ಯಕವಾದ ಪ್ರತಿಯೊಂದು ಔಷಧಗಳ ಪೂರೈಕೆ ಮೇಲೆ ಸರ್ಕಾರ ನಿಗಾ
ಭಾರತದಲ್ಲಿ ಕೋವಿಡ್-19 ಚಿಕಿತ್ಸೆಗೆ ಔಷಧಗಳು ಇದೀಗ ಲಭ್ಯ
Posted On:
19 MAY 2021 1:44PM by PIB Bengaluru
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯ ಅವರು ಇಂದು ಕೋವಿಡ್-19 ಸೋಂಕಿಗೆ ಚಿಕಿತ್ಸೆ ನೀಡುವ ಪ್ರತಿಯೊಂದು ಅತ್ಯವಶ್ಯಕ ಔಷಧಗಳ ಪೂರೈಕೆ ಮೇಲೆ ಸರ್ಕಾರ ನಿಗಾವಹಿಸಿದೆ ಎಂದು ಭರವಸೆ ನೀಡಿದರು. ಕೋವಿಡ್-19 ನಿರ್ವಹಣೆಗೆ ಬಳಕೆ ಮಾಡುವ ಎಲ್ಲ ಔಷಧಗಳು ಇದೀಗ ಭಾರತದಲ್ಲಿ ಲಭ್ಯವಿದೆ ಮತ್ತು ಅವುಗಳ ಉತ್ಪಾದನೆ ವೃದ್ಧಿಸಲಾಗಿದೆ ಮತ್ತು ಆಮದು ಹೆಚ್ಚಿಸಲಾಗಿದೆ. ಮೂರು ಹಂತದ ಕಾರ್ಯತಂತ್ರ ವಿಧಾನ, ಪೂರೈಕೆ ಸರಣಿ ನಿರ್ವಹಣೆ, ಬೇಡಿಕೆ ಆಧರಿತ ನಿರ್ವಹಣೆ ಮತ್ತು ಕೈಗೆಟಕುವ ದರದಲ್ಲಿ ಲಭ್ಯತೆ ಅನುಷ್ಠಾನಗೊಳಿಸುವ ಮೂಲಕ ಈ ಔಷಧಗಳ ಲಭ್ಯತೆಯ ಮೇಲೆ ನಿಗಾ ವಹಿಸಲಾಗುತ್ತಿದೆ.
ಶಿಷ್ಟಾಚಾರದ ಔಷಧಗಳು:
1. ರೆಮ್ ಡಿಸಿವಿರ್
2. ಎನೋಕ್ಸಪರಿನ್
3. ಮೀಥೈಲ್ ಪ್ರೆಡ್ನಿಸೊಲೊನ್
4. ಡೆಕ್ಸಮೆಥಾಸೊನ್
5. ಟೋಸಿಲಿಜುಮಾಬ್
6. ಐವರ್ಮೆಕ್ಟಿನ್
ಶಿಷ್ಟಾಚಾರಕ್ಕೆ ಸೇರದ ಔಷಧಗಳು:
7. ಫವಿಪಿರಾವೀರ್
8. ಆಂಫೊಟೆರಿಸಿನ್
9. ಅಪಿಕ್ಸಮಾಬ್
ಸಿಡಿಎಸ್ ಸಿಒ ಮತ್ತು ಎನ್ ಪಿಪಿಎ ಉತ್ಪಾದಕರೊಂದಿಗೆ ಸಮನ್ವಯ ಸಾಧಿಸಿ, ಉತ್ಪಾದನೆ ಹೆಚ್ಚಳಕ್ಕೆ ಮತ್ತು ಸದ್ಯದ ದಾಸ್ತಾನು ಸ್ಥಿತಿಗತಿ ಅಂಕಿ-ಅಂಶ ಪಡೆಯುವುದು, ಸದ್ಯದ ಸಾಮರ್ಥ್ಯ, ಮೇ 2021ರಲ್ಲಿ ಸಂಭಾವ್ಯ ಉತ್ಪಾದನೆ ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡುತ್ತಿವೆ.
1. ರೆಮ್ ಡಿಸಿವಿರ್:
- ರೆಮ್ ಡಿಸಿವಿರ್ ಉತ್ಪಾದನೆ ಮಾಡುವ ಘಟಕಗಳ ಸಂಖ್ಯೆ 20 ರಿಂದ 60ಕ್ಕೆ ಏರಿಕೆ, ಕೇವಲ 25 ದಿನಗಳಲ್ಲಿ ಅವುಗಳ ಲಭ್ಯತೆ ಮೂರು ಪಟ್ಟು ಹೆಚ್ಚಳ.
- ಉತ್ಪಾದನೆ 10 ಪಟ್ಟು ವೃದ್ಧಿಯಾಗಿದೆ, ಏಪ್ರಿಲ್ 2021ರಲ್ಲಿ ತಿಂಗಳಿಗೆ 10 ಲಕ್ಷ ವಯಲ್ ಇದ್ದದ್ದು, ಮೇ 2021ಕ್ಕೆ ಒಂದು ಕೋಟಿಗೆ ಹೆಚ್ಚಾಗಲಿದೆ.
2. ಟಾಸ್ಸಿಲಿಜುಮಾಬ್ ಇಂಜಕ್ಷನ್:
- ಈ ಔಷಧಿಯನ್ನು ಸಾಮಾನ್ಯ ದಿನಗಳಲ್ಲಿ ಮಾಡಿಕೊಳ್ಳುತ್ತಿದ್ದುದಕ್ಕಿಂತ 20 ಪಟ್ಟು ಹೆಚ್ಚು ಆಮದು ಮಾಡಿಕೊಂಡಿರುವುದರಿಂದ ದೇಶದಲ್ಲಿ ಅವುಗಳ ಲಭ್ಯತೆ ಹೆಚ್ಚಾಗಿದೆ.
3. ಡೆಕ್ಸಾಮೆಥಾಸೊನ್ 0.5 ಎಂಜಿ ಮಾತ್ರೆಗಳು:
- ಉತ್ಪಾದನ ಒಂದೇ ತಿಂಗಳಲ್ಲಿ 6 ರಿಂದ 8 ಪಟ್ಟು ಹೆಚ್ಚಳವಾಗಿದೆ.
4. ಡೆಕ್ಸಾಮೆಥಾಸೊನ್ ಇಂಜಕ್ಷನ್: ಉತ್ಪಾದನೆ ಬಹುತೇಕ ಎರಡು ಪಟ್ಟು ವೃದ್ಧಿ.
5. ಎನೋಕ್ಸಪರಿನ್ ಇಂಜಕ್ಷನ್: ಉತ್ಪಾದನೆ ಒಂದೇ ತಿಂಗಳಲ್ಲಿ ನಾಲ್ಕು ಪಟ್ಟು ಹೆಚ್ಚಳ.
6. ಮೀಥೈಲ್ ಪ್ರೆಡ್ನಿಸೊಲೊನ್:
- ಒಂದೇ ತಿಂಗಳ ಅವಧಿಯಲ್ಲಿ ಉತ್ಪಾದನೆ ಬಹುತೇಕ ಮೂರು ಪಟ್ಟು ಹೆಚ್ಚಳ
7. ಐವರ್ಮೆಕ್ಟಿನ್ 12 ಎಂಜಿ ಮಾತ್ರೆ: ದೇಶದಲ್ಲಿ ಉತ್ಪಾದನೆ ಐದು ಪಟ್ಟು ಹೆಚ್ಚಳ, ಒಂದೇ ತಿಂಗಳ ಅವಧಿಯಲ್ಲಿ ಏಪ್ರಿಲ್ ನಲ್ಲಿ 150 ಲಕ್ಷ ಉತ್ಪಾದನೆ ಇದ್ದದ್ದು, ಮೇ 2021ಕ್ಕೆ 770 ಲಕ್ಷಕ್ಕೆ ಹೆಚ್ಚಳ
8. ಫವಿರ್ಪಿವಿರ:
- ಶಿಷ್ಟಾಚಾರವಿಲ್ಲದ ಔಷಧ ಇದಾಗಿದ್ದು, ಇದನ್ನು ವೈರಾಣುಗಳ ಸಂಖ್ಯೆ ಕಡಿಮೆ ಮಾಡಲು ಬಳಸಲಾಗುತ್ತದೆ.
- ಒಂದೇ ತಿಂಗಳ ಅವಧಿಯಲ್ಲಿ ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಳ
- ಏಪ್ರಿಲ್ 2021ರಲ್ಲಿ 326.5 ಲಕ್ಷದಿಂದ ಮೇ 2021ಕ್ಕೆ 1644 ಲಕ್ಷಕ್ಕೆ ಏರಿಕೆ ಕಂಡುಬಂದಿದೆ
9. ಆಂಪೊಟೆರಿಸಿನ್ ಬಿ ಇಂಜೆಕ್ಷನ್:
- ಉತ್ಪಾದನೆ ಒಂದೇ ತಿಂಗಳಲ್ಲಿ 3 ಪಟ್ಟು ಹೆಚ್ಚಳ
- 3.80 ಲಕ್ಷ ವಯಲ್ ಉತ್ಪಾದನೆ ಮತ್ತು 3 ಲಕ್ಷ ವಯಲ್ಸ್ ಆಮದು
- ದೇಶದಲ್ಲಿ 6.80 ಲಕ್ಷ ವಯಲ್ಸ್ ಲಭ್ಯ.
ಔಷಧ ಹಂಚಿಕೆ ಕುರಿತ ಪಿಪಿಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ
***
(Release ID: 1719917)
Visitor Counter : 320
Read this release in:
English
,
Urdu
,
Marathi
,
Hindi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam