ಗ್ರಾಮೀಣಾಭಿವೃದ್ಧಿ ಸಚಿವಾಲಯ

ಸಾಂಕ್ರಾಮಿಕದ ನಡುವೆಯೂ ಗ್ರಾಮೀಣಾಭಿವೃದ್ಧಿಯಲ್ಲಿ ಭಾರತದ ಹೊಸ ಮೈಲಿಗಲ್ಲಿನ ಸಾಧನೆ


ಎಂ.ಜಿ. ನರೇಗಾ ಅಡಿಯಲ್ಲಿ 2021ನೇ ಹಣಕಾಸು ವರ್ಷದಲ್ಲಿ 1.85 ಕೋಟಿ ಜನರಿಗೆ ಕೆಲಸ ನೀಡಲಾಗಿದೆ; 2019ರ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.52ರಷ್ಟು ಅಧಿಕ

2021ನೇ ಹಣಕಾಸು ವರ್ಷದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಅಂದಾಜು 56 ಕೋಟಿ ರೂ. ಬಿಡುಗಡೆ; 2020ರ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಹುತೇಕ ದುಪ್ಪಟ್ಟು

ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಅಡಿಯಲ್ಲಿ ಅತಿ ಹೆಚ್ಚು ಉದ್ದದ ರಸ್ತೆಗಳ ಕಾಮಗಾರಿ ಪೂರ್ಣ

ಪ್ರಧಾನಮಂತ್ರಿ ವಸತಿ ಯೋಜನೆ - ಗ್ರಾಮೀಣ ಅಡಿಯಲ್ಲಿ 2021ನೇ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು 5854 ಕೋಟಿ ರೂ. ವೆಚ್ಚ; 2020ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಳ

Posted On: 17 MAY 2021 4:02PM by PIB Bengaluru

ಕೋವಿಡ್ ಸಾಂಕ್ರಾಮಿಕ ರೋಗದ 2ನೇ ಅಲೆ ಗ್ರಾಮೀಣ ಭಾರತಕ್ಕೆ ತೊಡಕಾಗಿದ್ದರೂ, ದೇಶಾದ್ಯಂತ ಅಭಿವೃದ್ಧಿ ಕಾಮಗಾರಿಗಳ ಮೇಲೆ ಪರಿಣಾಮ ಬೀರದಂತೆ ಗ್ರಾಮೀಣಾಭಿವೃದ್ಧಿ ಸಚಿವಾಲಯ ಖಾತ್ರಿಪಡಿಸಿದೆ. ಈ ಅವಧಿಯಲ್ಲಿ, ಸಚಿವಾಲಯದ ವಿವಿಧ ಯೋಜನೆಗಳ ಅಡಿಯಲ್ಲಿ ದೇಶ ತ್ವರಿತ ಪ್ರಗತಿಗೆ ಸಾಕ್ಷಿಯಾಗಿದೆ. ಅಭಿವೃದ್ಧಿ ಕಾಮಗಾರಿಗಳಷ್ಟೇ ಅಲ್ಲದೆ, ಸಚಿವಾಲಯವು ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ 19 ಪರಿಸ್ಥಿತಿ ಎದುರಿಸಲು ರಾಜ್ಯ, ಜಿಲ್ಲೆ ಮತ್ತು ವಿಭಾಗ ಮಟ್ಟದಲ್ಲಿ ನೋಡಲ್ ವ್ಯಕ್ತಿಗಳನ್ನು ತರಬೇತುಗೊಳಿಸಿದೆ.

ಕೋವಿಡ್ ಸಾಂಕ್ರಾಮಿಕದ ನಡುವೆಯೂ 2021ರ ಮೇನಲ್ಲಿ 1.85 ಕೋಟಿ ಜನರಿಗೆ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (ಎಂ.ಜಿ. ನರೇಗಾ) ಅಡಿಯಲ್ಲಿ ಉದ್ಯೋಗ ನೀಡಲಾಗಿದೆ. ಈ ಉದ್ಯೋಗ ನೀಡಿಕೆ  ಪ್ರತಿ ದಿನ 1.22 ಕೋಟಿ ಜನರಂತೆ  2019ರ ಮೇ ತಿಂಗಳಲ್ಲಿ ನೀಡಲಾಗಿದ್ದ ಕೆಲಸಕ್ಕೆ ಹೋಲಿಸಿದರೆ ಶೇ.52ರಷ್ಟು ಅಧಿಕವಾಗಿದೆ, 2021ರ ಮೇ 13ರಲ್ಲಿದ್ದಂತೆ 2.95 ಕೋಟಿ ಜನರಿಗೆ 2021-22ರ ಹಣಕಾಸು ವರ್ಷದಲ್ಲಿ ಉದ್ಯೋಗ ನೀಡಲಾಗಿದ್ದು, 5.98 ಲಕ್ಷ ಆಸ್ತಿಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು 34.56 ಕೋಟಿ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಮುಂಚೂಣಿಯಲ್ಲಿರುವವರೂ ಸೇರಿದಂತೆ ಎಲ್ಲಾ ಹಂತಗಳಲ್ಲಿಯೂ ಕಾರ್ಯಾಚರಣೆಯಲ್ಲಿದ್ದ ಸಿಬ್ಬಂದಿಗಳಲ್ಲಿ ಸಾವು ಅಥವಾ ಸೋಂಕಿನಿಂದ ಸಂಭವಿಸಿದ ಸಾವು ನೋವುಗಳ ಹೊರತಾಗಿಯೂ ಈ ಸಾಧನೆಯನ್ನು ಮಾಡಲಾಗಿದೆ. ಕೋವಿಡ್ -19 ವಿರುದ್ಧ ಗ್ರಾಮೀಣ ಪ್ರದೇಶಗಳಲ್ಲಿನ ಹೋರಾಟದಲ್ಲಿ ಕೋವಿಡ್-19 ಸೂಕ್ತ ನಡೆವಳಿಕೆ, ಲಸಿಕೆ ಮತ್ತು ಲಸಿಕೆ ಹಿಂಜರಿಕೆ ಮತ್ತು ಉತ್ತಮ ಆರೋಗ್ಯ ಪ್ರೋತ್ಸಾಹಿಸಲು – ನಡೆವಳಿಕೆ ಮತ್ತು ರೋಗ ನಿರೋಧಕ ಶಕ್ತಿ ಬೆಳೆಸುವ ಕ್ರಮಗಳನ್ನು 2021ರ ಏಪ್ರಿಲ್ 8-12ರಿಂದ ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ( ಡೇ –ಎನ್.ಆರ್.ಎಲ್.ಎಂ.) ಅಡಿಯಲ್ಲಿ ತರಬೇತುದಾರರಿಗೆ ತರಬೇತಿ ಒದಗಿಸಲಾಗಿದೆ. ಈ ಉಪಕ್ರಮದ ಅಡಿಯಲ್ಲಿ 13,958 ರಾಜ್ಯ, ಜಿಲ್ಲೆ ಮತ್ತು ವಿಭಾಗ ಮಟ್ಟದ ನೋಡಲ್ ವ್ಯಕ್ತಿಗಳಿಗೆ 34 ಎಸ್ಆರ್.ಎಲ್.ಎಂ.ಗಳಲ್ಲಿ, ಮಾಸ್ಟರ್ ತರಬೇತುದಾರರಾಗಿ ತರಬೇತಿ ನೀಡಲಾಗಿದೆ, 1,14,500 ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಸಿಆರ್.ಪಿ.) ಮಾಸ್ಟರ್ ಟ್ರೈನರ್ ಗಳಿಂದ ತರಬೇತಿ ಕೊಡಿಸಲಾಗಿದ್ದು, 2.5 ಕೋಟಿ ಮಹಿಳಾ ಎಸ್.ಎಚ್.ಜಿ. ಸದಸ್ಯರಿಗೆ ಸಿಆರ್.ಪಿ.ಗಳಿಂದ ತರಬೇತಿ ಕೊಡಿಸಲಾಗಿದೆ. ರಾಜ್ಯ ಮತ್ತು ಜಿಲ್ಲಾ ನೋಡಲ್ ವ್ಯಕ್ತಿಗಳಿಗೆ ಡೇ ಎನ್.ಆರ್.ಎಲ್.ಎಂ. ಅಡಿಯಲ್ಲಿ ಕೋವಿಡ್ ನಿರ್ವಹಣೆ ಕುರಿತಂತೆ ಸಾಮರ್ಥ್ಯವರ್ಧನೆ ಮತ್ತು ಸಾಮಾಜಿಕ ಅಭಿವೃದ್ಧಿ ತರಬೇತಿಯನ್ನೂ ನೀಡಲಾಗಿದೆ. ಪರಿಹಾರವನ್ನು ಒದಗಿಸುವ ಮತ್ತು ಉದ್ಯೋಗವನ್ನು ಸೃಷ್ಟಿಸುವ ಗುರಿಯೊಂದಿಗೆ, 2020ರ ಆರ್ಥಿಕ ವರ್ಷದಲ್ಲಿ ಇದೇ ಅವಧಿಯಲ್ಲಿ ನೀಡಲಾಗಿದ್ದ ಅಂದಾಜು 32 ಕೋಟಿ ರೂ.ಗಳಿಗೆ ಹೋಲಿಸಿದರೆ. ಆವರ್ತನನಿಧಿ ಮತ್ತು ಸಮುದಾಯ ಹೂಡಿಕೆ ನಿಧಿ ಸೇರಿ ಸುಮಾರು 56ಕೋಟಿ ರೂ.ಗಳನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ 2021ರ ಹಣಕಾಸು ವರ್ಷದಲ್ಲಿ ಬಿಡುಗಡೆ ಮಾಡಲಾಗಿದೆ. ಸಿಬ್ಬಂದಿ ಮತ್ತು ಸಮುದಾಯ ಕಾರ್ಯಕರ್ತರಿಗೆ ಕೃಷಿ ಮತ್ತು ಕೃಷಿಯೇತರ ಆಧಾರಿತ ಜೀವನೋಪಾಯ ಕುರಿತಂತೆ ಆನ್‌ ಲೈನ್ ತರಬೇತಿ ಮುಂದುವರಿಸಲಾಗಿದೆ ಮತ್ತು ಸ್ವಸಹಾಯ ಗುಂಪುಗಳ ಮೂಲಕ  ಕುಟುಂಬಗಳಿಂದ ಕೃಷಿ-ಪೌಷ್ಟಿಕ ಕೈತೋಟಗಳ ಉತ್ತೇಜನಕ್ಕೂ ಈ ಅವಧಿಯಲ್ಲಿ ತರಬೇತಿ ಮುಂದುವರಿಸಲಾಗಿದೆ.

ಕಳೆದ ಮೂರು ವರ್ಷದ ಅವಧಿಗೆ ಹೋಲಿಸಿದರೆ,20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಲಾಕ್ ಡೌನ್ ಮತ್ತು ಮಾನವರು, ಯಂತ್ರ ಮತ್ತು ಸಾಮಗ್ರಿಗಳ ಸಾಗಾಟದ ತೊಡಕಿನ ನಡುವೆಯೂ ಈ ವರ್ಷ ಅತಿ ಹೆಚ್ಚು ಉದ್ದದ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಏಪ್ರಿಲ್ 1 ರಿಂದ ಮೇ 12 ರವರೆಗೆ ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ (ಪಿ.ಎಂಜಿಎಸ್‌.ವೈ) ಅಡಿಯಲ್ಲಿ ಒಟ್ಟು ಭೌತಿಕ ಪ್ರಗತಿ ಮತ್ತು ಸಂಚಿತ ವೆಚ್ಚ 2021ರ ಹಣಕಾಸು ವರ್ಷದಲ್ಲಿ ಅನುಕ್ರಮವಾಗಿ 1795.9 ಕಿ.ಮೀ ಮತ್ತು 1693.8 ರೂ. ಆಗಿದ್ದು, ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದರೆ ತುಂಬಾ ಹೆಚ್ಚಾಗಿದೆ.

 ಪ್ರಧಾನಮಂತ್ರಿ ವಸತಿ ಯೋಜನೆ – ಗ್ರಾಮೀಣ ಯೋಜನೆಯೂ ಕೋವಿಡ್ -19 ಸಾಂಕ್ರಾಮಿಕದಿಂದ ತೀವ್ರ ಬಾಧಿತವಾಗಿದೆ, ಆದಾಗ್ಯೂ ಸುಗಮ ಕಾರ್ಯ ಚಟಿವಟಿಕೆಯಿಂದಾಗಿ ಸಚಿವಾಲಯವು 2019-20ರಲ್ಲಿ ವೆಚ್ಚ ಮಾಡಿದ್ದ 1411 ಕೋಟಿ ರೂ.,  2020-21ರ ಸಾಲಿನಲ್ಲಿ ವೆಚ್ಚ ಮಾಡಲಾದ 2512 ಕೋಟಿ ರೂ.ಗೆ ಹೋಲಿಸಿದರೆ, ಈ ಹಣಕಾಸು ವರ್ಷದಲ್ಲಿ 5854 ಕೋಟಿ ರೂಗಳನ್ನು ವೆಚ್ಚ ಮಾಡಲು ಶಕ್ತವಾಗಿದೆ, ಇದು 2021-22ರ ಸಾಲಿನಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅನುಕ್ರಮವಾಗಿ ಪ್ರತಿಶತ 43 ಮತ್ತು ಶೇ.24ರಷ್ಟು ಹೆಚ್ಚಳವಾಗಿದೆ.

 

*****

 (Release ID: 1719466) Visitor Counter : 242