ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಕೋವಿಡ್ ಲಸಿಕೆ ನೀಡಿಕೆ ಕಿರು ಸರಣಿಯ ನಂತರ ರಕ್ತಸ್ರಾವ ಮತ್ತು ಹೆಪ್ಪುಗಟ್ಟುವ ಪ್ರಕರಣ


ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ವರದಿ ಸಲ್ಲಿಸಿದ ರಾಷ್ಟ್ರೀಯ ಎಇಎಫ್ಐ( ರೋಗ ನಿರೋಧಕತೆಯ ನಂತರ ಪ್ರತಿಕೂಲ ಘಟನೆ) ಸಮಿತಿ.

Posted On: 17 MAY 2021 2:32PM by PIB Bengaluru

ಭಾರತದಲ್ಲಿ ಕೋವಿಡ್ ಲಸಿಕೆ ನಂತರ ರಕ್ತಸ್ರಾವ ಮತ್ತು ಹೆಪ್ಪುಗಟ್ಟುವ ಪ್ರಕರಣ ಕಡಿಮೆ ಮತ್ತು ಅವು ದೇಶಾದ್ಯಂತ ಈ ಸ್ಥಿತಿಗತಿಗಳ ರೋಗಪತ್ತೆ ಪರೀಕ್ಷೆ ಸಂಖ್ಯೆಗೆ ಅನುಗುಣವಾಗಿಯೇ ಇವೆ ಎಂದು ರಾಷ್ಟ್ರೀಯ ಎಇಎಫ್ಐ(ರೋಗ ನಿರೋಧಕತೆಯ ನಂತರದ ಪ್ರತಿಕೂಲ ಘಟನೆ) ಸಮಿತಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ.

2021ರ ಮಾರ್ಚ್ 11ರಂದು ಹಲವು ದೇಶಗಳಲ್ಲಿ ಲಸಿಕೆ ನೀಡಿಕೆ ನಂತರ “ಎಂಬೋಲಿಕ್ ಮತ್ತು ಥ್ರೋಂಬೋಟಿಕ್” ಘಟನೆಗಳ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದ್ದವು. ವಿಶೇಷವಾಗಿ ಆಸ್ಟ್ರಜೆನಿಕ–ಆಕ್ಸ್ ಫರ್ಡ್ ಲಸಿಕೆ(ಭಾರತದಲ್ಲಿ ಕೋವಿಶೀಲ್ಡ್). ಆನಂತರ ಜಾಗತಿಕ ಆತಂಕಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಪ್ರತಿಕೂಲ ಪ್ರಕರಣಗಳ(ಎಇ) ಕುರಿತು ಆಳವಾದ ತುರ್ತು ಅಧ್ಯಯನ ವಿಶ್ಲೇಷಣೆಯನ್ನು ನಡೆಸಲು ತೀರ್ಮಾನಿಸಲಾಯಿತು.

          ರಾಷ್ಟ್ರೀಯ ಎಇಎಫ್ಐ ಸಮಿತಿ 2021ರ ಏಪ್ರಿಲ್ 03ರ ವರೆಗೆ ಉಲ್ಲೇಖಿಸಿದಂತೆ ಒಟ್ಟು 75,435,381 ಡೋಸ್ ಗಳನ್ನು ನೀಡಲಾಗಿದೆ(ಅವುಗಳಲ್ಲಿ ಕೋವಿಶೀಲ್ಡ್ - 68,650,819; ಕೊವ್ಯಾಕ್ಸಿನ್ – 6,784,562). ಆ ಪೈಕಿ 65,944,106 ಮೊದಲ ಡೋಸ್ ಹಾಗೂ 9,491,275 ಎರಡನೇ ಡೋಸ್. ಕೋವಿಡ್-19 ಲಸಿಕೆ ನೀಡಿಕೆ ಆರಂಭವಾದಾಗಿನಿಂದ ದೇಶಾದ್ಯಂತ 753 ಜಿಲ್ಲೆಗಳ ಪೈಕಿ 684ರಲ್ಲಿ ಕೋವಿನ್ ಫ್ಲಾಟ್ ಫಾರಂ ಮೂಲಕ ವರದಿಯಾಗಿರುವುದೆಂದರೆ ಲಸಿಕೆ ನೀಡಿಕೆ ನಂತರ ಸುಮಾರು 23,000 ಪ್ರತಿಕೂಲ ಘಟನೆಗಳು ಸಂಭವಿಸಿವೆ. ಅವುಗಳಲ್ಲಿ ಕೇವಲ 700 ಪ್ರಕರಣಗಳಲ್ಲಿ(ಪ್ರತಿ ಮಿಲಿಯನ್ ಡೋಸ್ ಲಸಿಕೆ ನೀಡಿರುವುದಕ್ಕೆ @ 9.3 ಪ್ರಕರಣಗಳು) ಗಂಭೀರ ಮತ್ತು ತೀವ್ರ ಸ್ವರೂಪದ ಪ್ರಕರಣಗಳು ವರದಿಯಾಗಿವೆ.

ಎಇಎಫ್ಐ ಸಮಿತಿ 498 ಗಂಭೀರ ಮತ್ತು ತೀವ್ರ ಸ್ವರೂಪದ ಘಟನೆಗಳ ಕುರಿತು ಆಳವಾದ ಪರಿಶೀಲನೆ ನಡೆಸಿದೆ. ಆ ಪೈಕಿ 26 ಪ್ರಕರಣಗಳಲ್ಲಿ ಸಂಭಾವ್ಯ ಥ್ರೋಂಬೊಎಂಬೋಲಿಕ್ ಅಂದರೆ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ರಕ್ತ ಮತ್ತೊಂದು ನಾಡಿಗೆ ಹರಿಯುವುದಕ್ಕೆ ತಡೆಯಾಗುವ  ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ತೆಗೆದುಕೊಳ್ಳಲಾಗಿತ್ತು – ಪ್ರತಿ ಮಿಲಿಯನ್ ಡೋಸ್ ಗೆ 0.61 ಪ್ರಕರಣಗಳಲ್ಲಿ ಇದು ವರದಿಯಾಗಿದೆ. 

          ಕೊವ್ಯಾಕ್ಸಿನ್ ಲಸಿಕೆ ಪಡೆದ ನಂತರ ಯಾವುದೇ ರೀತಿಯ ಸಂಭಾವ್ಯ ಥ್ರೋಂಬೊಎಂಬೋಲಿಕ್ ಘಟನೆಗಳು ವರದಿಯಾಗಿಲ್ಲ.

ಎಇಎಫ್ಐ ದತ್ತಾಂಶದ ಪ್ರಕಾರ ಭಾರತದಲ್ಲಿ ಲಸಿಕೆ ನಂತರ ಥ್ರೋಂಬೊಎಂಬೋಲಿಕ್ ಪ್ರಕರಣಗಳು ಕಡಿಮೆ, ಆದರೆ ಖಚಿತವಾದ ಅಪಾಯದ ಸಾಧ್ಯತೆ ಇದೆ ಎಂಬುದನ್ನು ತೋರುತ್ತದೆ. ಭಾರತದಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಿರುವುದು ಪ್ರತಿ ಮಿಲಿಯನ್ ಡೋಸ್ ಗೆ ಸುಮಾರು 0.61ರಷ್ಟು ಮಾತ್ರ. ಬ್ರಿಟನ್ನಿನ ನಿಯಂತ್ರಕ ಸಂಸ್ಥೆ ವೈದ್ಯಕೀಯ ಮತ್ತು ಆರೋಗ್ಯ ನಿಯಂತ್ರಣಾ ಪ್ರಾಧಿಕಾರ(ಎಂಎಚ್ಆರ್ ಎ) ವರದಿ ನೀಡಿರುವಂತೆ ಅಲ್ಲಿ ಪ್ರತಿ ಮಿಲಿಯನ್ ಲಸಿಕೆ ನೀಡಿರುವುದಕ್ಕೆ ನಾಲ್ಕು ಪ್ರಕರಣಗಳು ವರದಿಯಾಗುತ್ತಿವೆ. ಅದಕ್ಕೆ ಹೋಲಿಸಿದರೆ ಭಾರತದಲ್ಲಿ ಅತಿ ಕಡಿಮೆ. ಅಂತೆಯೇ ಜರ್ಮನಿಯಲ್ಲಿ ಪ್ರತಿ ಮಿಲಿಯನ್ ಡೋಸ್ ಗೆ ಹತ್ತು ಘಟನೆಗಳು ವರದಿಯಾಗಿವೆ. 

 ಸಾಮಾನ್ಯ ಜನರಲ್ಲಿ ಇಂತಹ ಥ್ರೋಂಬೊಎಂಬೋಲಿಕ್ ಪ್ರಕರಣಗಳು ಆಗಾಗ್ಗೆ ಘಟಿಸುತ್ತಿರುತ್ತವೆ ಎಂಬುದನ್ನು ನಾವು ಪ್ರಮುಖವಾಗಿ ಗಮನಿಸಬೇಕು. ಆದರೆ  ಅದರ ಹಿನ್ನೆಲೆ ಮತ್ತು ವೈಜ್ಞಾನಿಕ ಸಾಹಿತ್ಯವನ್ನು ಗಮನಿಸಿದರೆ ಐರೋಪ್ಯ ದೇಶಗಳಿಗೆ ಹೋಲಿಸಿದರೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಇಂತಹ ಅಪಾಯದ ಪ್ರಮಾಣ ಬಹುತೇಕ ಶೇ.70ಕ್ಕಿಂತಲೂ ಕಡಿಮೆ ಇದೆ ಎಂಬುದನ್ನು ಸೂಚಿಸುತ್ತದೆ.

          ಕೋವಿಡ್-19 ಲಸಿಕೆ ಪಡೆದ ನಂತರ(ವಿಶೇಷವಾಗಿ ಕೋವಿಶೀಲ್ಡ್) 20 ದಿನಗಳಲ್ಲಿ ಶಂಕಿತ ಥ್ರೋಂಬೊಎಂಬೋಲಿಕ್ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂಬ ಕುರಿತು ಲಸಿಕೆ ಪಡೆದ ಜನರಿಗೆ ಮಾಹಿತಿ ನೀಡಲು ಎಂಒಎಚ್ಎಫ್ ಡಬ್ಲ್ಯೂ, ಆರೋಗ್ಯ ಕಾರ್ಯಕರ್ತರು ಮತ್ತು ಫಲಾನುಭವಿಗಳಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಲಿದೆ ಮತ್ತು ಆ ಬಗ್ಗೆ ಲಸಿಕೆ ಪಡೆದ ಆರೋಗ್ಯ ಸೌಕರ್ಯಕ್ಕೆ ಮಾಹಿತಿ ನೀಡುವಂತೆಯೂ ಸೂಚಿಸಲಿದೆ.

 • ಉಸಿರಾಟದ ತೊಂದರೆ
 • ಎದೆನೋವು
 • ಕೈಕಾಲು ನೋವು/ಕೈಕಾಲು ಒತ್ತುವುದು ಅಥವಾ ಕೈ ಕಾಲುಗಳ ಮೀನಖಂಡ ಅಥವಾ ತೋಳುಗಳಲ್ಲಿ ನೋವು.
 • ಲಸಿಕೆ ಪಡೆದ ಕೈ ಜಾಗದ ಸುತ್ತ ಚರ್ಮದ ಮೇಲೆ ಮೂಗೇಟಿನಂತಹ ಕಲೆ ಅಥವಾ ಕೆಂಪು ಗುಳ್ಳೆಗಳು
 • ನಿರಂತರ ಹೊಟ್ಟೆನೋವು, ವಾಂತಿ ಆಗಬಹುದು ಅಥವಾ ಆಗದೇ ಇರಬಹುದು.
 • ಹಿಂದೆ ಯಾವುದೇ ಸಂದರ್ಭದಲ್ಲಿ ವಾಂತಿ ಅಥವಾ ಇಲ್ಲದ ರೋಗಗಳು ಕಾಣಿಸಿಕೊಳ್ಳುವುದು.
 • ವಾಂತಿ ಅಥವಾ ವಾಂತಿಯಿಲ್ಲದೆ ತೀವ್ರ ಮತ್ತು ನಿರಂತರ ತಲೆನೋವು ( ಮೈಗ್ರೇನ್ ಅಥವಾ ಸುದೀರ್ಘ ತಲೆನೋವು ಇಲ್ಲದವರು)
 • ಅಂಗಗಳ ದೌರ್ಬಲ್ಯ/ ಪಾರ್ಶವಾಯು ಅಥವಾ ಯಾವುದೇ ಒಂದು ಭಾಗ ಅಥವಾ ಇಡೀ ದೇಹದ ಭಾಗ (ಮುಖ ಸೇರಿ)
 • ಯಾವುದೇ ಸ್ಪಷ್ಟ ಕಾರಣವಿಲ್ಲದೆ ನಿರಂತರ ವಾಂತಿ
 • ಮಂದದೃಷ್ಟಿ ಅಥವಾ ಕಣ್ಣಿನಲ್ಲಿ ನೋವು ಅಥವಾ ಎರೆಡೆರಡು ಕಾಣಿಸುವುದು.
 • ಮಾನಸಿಕ ಸ್ಥಿತಿಗತಿ ಬದಲಾವಣೆ ಅಥವಾ ಗೊಂದಲ ಅಥವಾ ಖಿನ್ನತೆಯ ಪ್ರಜ್ಞಾಮಟ್ಟ ಹೊಂದಿರುವುದು
 • ಲಸಿಕೆ ಸ್ವೀಕರಿಸುವವರಿಗೆ ಅಥವಾ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ರೋಗ ಲಕ್ಷಣಗಳು ಅಥವಾ ಆರೋಗ್ಯ ಸ್ಥಿತಿಗತಿ

ಕೋವಿಡ್-19 ಲಸಿಕೆಯಾದ ಕೋವಿಶೀಲ್ಡ್ ಖಂಡಿತ ನಿರ್ದಿಷ್ಠ ಸಕಾರಾತ್ಮಕ ಪ್ರಯೋಜನವಾಗಲಿದ್ದು, ಅದು ಸಂಭಾವ್ಯ ಸೋಂಕುಗಳನ್ನು ತಡೆಯುತ್ತದೆ ಮತ್ತು ಕೋವಿಡ್-19 ಸೋಂಕಿನಿಂದ ಭಾರತ ಮತ್ತು ಜಗತ್ತಿನಾದ್ಯಂತ ಸಾವಿನ ಸಂಖ್ಯೆಯನ್ನು ತಗ್ಗಿಸುತ್ತದೆ. ಭಾರತದಲ್ಲಿ 2021ರ ಏಪ್ರಿಲ್ 27ರ ವರೆಗೆ ಸುಮಾರು 13.4 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗಿದೆ. ಎಂಒಎಚ್ಎಫ್ ಡಬ್ಲ್ಯೂ ನಿರಂತರವಾಗಿ ಕೋವಿಡ್-19 ಲಸಿಕೆ ಪಡೆದ ಎಲ್ಲರ ಸುರಕ್ಷತೆ ಮೇಲೆ ನಿಗಾ ಇರಿಸಿದೆ ಹಾಗು  ಪ್ರತಿಕೂಲ ಘಟನೆ ಸಂಭವಿಸಿದಲ್ಲಿ ಅದನ್ನು ಅರೋಗ್ಯ ಕಾರ್ಯಕರ್ತರ ಗಮನಕ್ಕೆ ತರಬೇಕಾಗುತ್ತದೆ.

****(Release ID: 1719444) Visitor Counter : 428