ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತ ಸರ್ಕಾರವು ಜಾಗತಿಕ ಸಹಾಯದ ವಿತರಣೆಯನ್ನು ಚುರುಕುಗೊಳಿಸುವ  ಮೂಲಕ ಕೋವಿಡ್ ನಿರ್ವಹಣೆಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ತೃತೀಯ ಹಂತದ ವೈದ್ಯಕೀಯ ಆರೈಕೆಯ ವ್ಯವಸ್ಥೆಯನ್ನು ಬಲಪಡಿಸಿದೆ


9,284 ಆಮ್ಲಜನಕ ಸಾಂದ್ರಕಗಳು; 7,033 ಆಮ್ಲಜನಕ ಸಿಲಿಂಡರ್ಗಳು; 19 ಆಮ್ಲಜನಕ ಉತ್ಪಾದನಾ ಘಟಕಗಳು; 5,933 ವೆಂಟಿಲೇಟರ್ಗಳು / ಬೈ ಪಿಎಪಿ; ~3.44 ಎಲ್ ರೆಮ್ಡಿಸಿವಿರ್ ಬಾಟಲುಗಳು ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ ಸಾಮರ್ಥ್ಯವನ್ನು ಹೆಚ್ಚಿಸಲು ತಲುಪಿಸಲಾಗಿದೆ / ರವಾನಿಸಲಾಗಿದೆ

Posted On: 12 MAY 2021 2:53PM by PIB Bengaluru

ಸೌಹಾರ್ದತೆಯಲ್ಲಿ, ಜಾಗತಿಕ ಸಮುದಾಯವು ಭಾರತಕ್ಕೆ ಅಂತರರಾಷ್ಟ್ರೀಯ ದೇಣಿಗೆ ಮತ್ತು ಕೋವಿಡ್-19 ಪರಿಹಾರ ವೈದ್ಯಕೀಯ ಸರಬರಾಜು ಮತ್ತು ಸಲಕರಣೆಗಳನ್ನು ಒದಗಿಸುವರಿಂದಾಗಿ 27 ಏಪ್ರಿಲ್ 2021 ರಿಂದ ಭಾರತಕ್ಕೆ ಕೋವಿಡ್ ನಿರ್ವಹಣೆಯ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತಿವೆ.

ಕೋವಿಡ್   ವಿಪರೀತ ಹೆಚ್ಚಳದ ವಿರುದ್ಧ ಹೋರಾಡುವಲ್ಲಿ ದೇಶದ ಪ್ರಯತ್ನಗಳನ್ನು ಹೆಚ್ಚಿಸಲು ವಿವಿಧ ದೇಶಗಳು / ಸಂಸ್ಥೆಗಳಿಂದ ಬಂದಿರುವ ಜಾಗತಿಕ ಪರಿಹಾರಗಳನ್ನು ತ್ವರಿತವಾಗಿ ತಲುಪಿಸಲುಭಾರತ ಸರ್ಕಾರದ ವಿವಿಧ ಸಚಿವಾಲಯಗಳು / ಇಲಾಖೆಗಳು "ಸಂಪೂರ್ಣ ಸರ್ಕಾರ" ವಿಧಾನದ ಅಡಿಯಲ್ಲಿ ಸುವ್ಯವಸ್ಥಿತ ಮತ್ತು ವ್ಯವಸ್ಥಿತ ಕಾರ್ಯವಿಧಾನದ ಮೂಲಕ  ಅಡೆತಡೆಯಿಲ್ಲದೆ  ಸಹಕರಿಸುತ್ತಿವೆ.

ಏಪ್ರಿಲ್ 27, 2021 ರಿಂದ 11 ಮೇ 2021 ರವರೆಗೆ, ಒಟ್ಟಾಗಿ9,284 ಆಮ್ಲಜನಕ ಸಾಂದ್ರಕಗಳು; 7,033 ಆಮ್ಲಜನಕದ ಸಿಲಿಂಡರ್ಗಳು; 19 ಆಮ್ಲಜನಕ ಉತ್ಪಾದನಾ ಘಟಕಗಳು; 5,933 ವೆಂಟಿಲೇಟರ್ಗಳು / ಬೈ ಪಿಎಪಿ;  ~ 3.44 ಎಲ್ ರೆಮ್ಡಿಸಿವಿರ್ ಬಾಟಲುಗಳು ರಸ್ತೆ ಮತ್ತು ವಿಮಾನದ ಮೂಲಕ ವಿತರಿಸಲ್ಪಟ್ಟವು / ರವಾನಿಸಲ್ಪಟ್ಟವು.

11 ಮೇ 2021 ರಂದು ಯುಕೆ, ಈಜಿಪ್ಟ್, ಕುವೈತ್ ಮತ್ತು ದಕ್ಷಿಣ ಕೊರಿಯಾದಿಂದ ಪಡೆದ ಪ್ರಮುಖ ವಸ್ತುಗಳು:

  • ಆಮ್ಲಜನಕ ಸಾಂದ್ರಕ: 30 + 50 = 80
  • ಆಮ್ಲಜನಕ ಸಿಲಿಂಡರ್: 300 + 1290 = 1590
  • ವೆಂಟಿಲೇಟರ್ / ಬಿಐಪಿಎಪಿ / ಸಿಪಿಎಪಿ: 20

ಸ್ವೀಕರಿಸುವ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಪರಿಣಾಮಕಾರಿ ಹಂಚಿಕೆ ಮತ್ತು ಸುವ್ಯವಸ್ಥಿತ ವಿತರಣೆಯ ಸಂಪೂರ್ಣ ಪ್ರಕ್ರಿಯೆಯ ನಿಯಮಿತ ಸಮಗ್ರ ಮೇಲ್ವಿಚಾರಣೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಮೀಸಲಾದ ವಿಭಾಗವನ್ನು ಸ್ಥಾಪಿಸಿದೆ.  2021 ಏಪ್ರಿಲ್ 26 ರಿಂದ ವಿದೇಶಿ ಕೋವಿಡ್ ಪರಿಹಾರ ಸಾಮಗ್ರಿಗಳ ಪಡೆಯುವಿಕೆ ಮತ್ತು ಹಂಚಿಕೆಯನ್ನು ಸಮನ್ವಯಗೊಳಿಸಲು ರಚಿಸಲಾದ ಮೀಸಲಾದ ಸಮನ್ವಯ ವಿಭಾಗವು 2021 ಏಪ್ರಿಲ್ 26 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.  2021 ಮೇ 2 ರಿಂದ ಆರೋಗ್ಯ ಸಚಿವಾಲಯವು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ರೂಪಿಸಿ ಕಾರ್ಯಗತಗೊಳಿಸಿದೆ.

ಚಿತ್ರ 1. ಕುವೈತ್ ನಿಂದ ಬಂದ ವೈದ್ಯಕೀಯ ಪರಿಹಾರವು ಐಎನ್ಎಸ್ ಕೊಚ್ಚಿಯಲ್ಲಿ 60 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕ, 800 ಆಮ್ಲಜನಕ ಸಿಲಿಂಡರ್ಗಳು ಮತ್ತು 2 ಹೈ-ಫ್ಲೋ ಆಮ್ಲಜನಕ ಸಾಂದ್ರಕಗಳನ್ನು ಒಳಗೊಂಡಿರುವ 3 ಐಎಸ್ಒ ಟ್ಯಾಂಕ್ಗಳನ್ನು ಒಳಗೊಂಡಿದೆ.

ಚಿತ್ರ 2. ವಿವಿಧ ರಾಜ್ಯಗಳಿಗೆ ಹೆಚ್ಚಿನ ವಿತರಣೆಗಾಗಿ ನಿನ್ನೆ ನವ ಮಂಗಳೂರು ಬಂದರಿನಲ್ಲಿ ಇಡಲಾದ ಕುವೈತ್ ನಿಂದ ಬಂದ  ವೈದ್ಯಕೀಯ ಪರಿಹಾರಗಳಾದ 40 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕ ಮತ್ತು 600 ಆಮ್ಲಜನಕ ಸಿಲಿಂಡರ್ಗಳನ್ನು ಒಳಗೊಂಡಿರುವ 2 ಐಎಸ್ಒ ದ್ರವ ವೈದ್ಯಕೀಯ ಆಮ್ಲಜನಕ ಟ್ಯಾಂಕ್ಗಳನ್ನು ಒಳಗೊಂಡಿರುವ ಐಎನ್ಎಸ್ ತಬಾರ್.

ಚಿತ್ರ 3. ಯುನೈಟೆಡ್ ಸ್ಟೇಟ್ಸ್ ಆಫ್  ಅಮೆರಿಕಾದಿಂದ ರೆಮ್ಡಿಸಿವಿರ್   78,595 ಬಾಟಲುಗಳು ನಿನ್ನೆ ರಾತ್ರಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದವುಅವುಗಳನ್ನು ವಿವಿಧ ರಾಜ್ಯಗಳಿಗೆ ವಿತರಿಸಲಾಗುತ್ತಿದೆ.

***



(Release ID: 1718105) Visitor Counter : 225