ಇಂಧನ ಸಚಿವಾಲಯ

ದೇಶದ ಆಮ್ಲಜನಕ ಘಟಕಗಳಿಗೆ 24X7 ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸಲು ಪೂರ್ವಭಾವಿ ಕ್ರಮಗಳನ್ನು ಕೈಗೊಂಡ ವಿದ್ಯುತ್ ಸಚಿವಾಲಯ

Posted On: 12 MAY 2021 11:57AM by PIB Bengaluru

ದೇಶಾದ್ಯಂತ ಕೋವಿಡ್‌-19 ಸಾಂಕ್ರಾಮಿಕದ ಎರಡನೇ ಅಲೆಯ ವ್ಯಾಪಕ ಪರಿಣಾಮದಿಂದಾಗಿ ವೈದ್ಯಕೀಯ ಕೇಂದ್ರಗಳು ಹಾಗೂ ರೋಗಿಗಳ ಮನೆ ಎರಡೂ ಕಡೆಗೆ ಚಿಕಿತ್ಸೆಗಾಗಿ ಆಮ್ಲಜನಕದ ಬೇಡಿಕೆಯಲ್ಲಿ ಹಲವು ಪಟ್ಟು ಹೆಚ್ಚಳ ಕಂಡು ಬಂದಿದೆ. ಹಿನ್ನೆಲೆಯಲ್ಲಿ ರಾಜ್ಯದ ಸ್ಥಾವರಗಳಿಂದ ಆಕ್ಸಿಜನ್ ಘಟಕಗಳಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸಲು ಹಲವಾರು ಪೂರ್ವಭಾವಿ ಮುಂಜಾಗ್ರತಾ ಹಾಗೂ ಪರಿಹಾರ ಕ್ರಮಗಳನ್ನು ವಿದ್ಯುತ್ ಸಚಿವಾಲಯವು ಕೈಗೊಂಡಿದೆ. ವಿದ್ಯುತ್ ಸಚಿವಾಲಯವು ದೇಶಾದ್ಯಂತ ಗುರುತಿಸಲಾದ 73 ಪ್ರಮುಖ ಆಮ್ಲಜನಕ ಘಟಕಗಳಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಇದರಲ್ಲಿ 13 ಆಮ್ಲಜನಕ ಘಟಕಗಳು ಎನ್ಸಿಆರ್ ಪ್ರದೇಶಕ್ಕೆ ಆಮ್ಲಜನಕವನ್ನು ಪೂರೈಸುತ್ತವೆ. ಸಚಿವಾಲಯವು ಕೈಗೊಂಡ ಪೂರ್ವಭಾವಿ ಕ್ರಮಗಳು ಹೀಗಿವೆ:

  1. ವಿದ್ಯುತ್ ಕಾರ್ಯದರ್ಶಿಯಿಂದ ನಿತ್ಯ ಪರಿಶೀಲನೆ: ಅಂತಹ ಎಲ್ಲಾ ಘಟಕಗಳಿಗೆ ವಿದ್ಯುತ್ ಪೂರೈಕೆಯ ಸ್ಥಿತಿಗತಿಯನ್ನು ವಿದ್ಯುತ್ ಸಚಿವಾಲಯದ ಕಾರ್ಯದರ್ಶಿಗಳು ರಾಜ್ಯಗಳ ಸಂಬಂಧಿತ ಇಂಧನ ಕಾರ್ಯದರ್ಶಿಗಳು, ಸಿಎಂಡಿ, ಪಿಒಎಸ್ಒಸಿಒ ಜೊತೆಯಲ್ಲಿ ಪ್ರತಿದಿನ ಪರಿಶೀಲಿಸುತ್ತಾರೆ. ಆಕ್ಸಿಜನ್ ಘಟಕಗಳಿಗೆ 24x7 ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ದೈನಂದಿನ ಸಮಾಲೋಚನೆ ಸಮಯದಲ್ಲಿ ವಿವರವಾಗಿ ಚರ್ಚಿಸಲಾಗುತ್ತದೆ ಮತ್ತು ʻಪಿಒಎಸ್ಒಸಿಒʼ ಹಾಗೂ ಕೇಂದ್ರ ವಿದ್ಯುತ್ ಪ್ರಾಧಿಕಾರದ ಸಹಾಯದಿಂದ ರಾಜ್ಯ ಡಿಸ್ಕಾಂಗಳ ಮೂಲಕ ಕಾಲಮಿತಿಯೊಳಗೆ ಪರಿಹಾರಗಳನ್ನು ಯೋಜಿಸಿ ಕಾರ್ಯಗತಗೊಳಿಸಲಾಗುತ್ತದೆ.
  2. ದಿನದ 24 ಗಂಟೆಯೂ ಕಂಟ್ರೋಲ್ ರೂಮ್ ಕಾರ್ಯಾಚರಣೆ: ಪರಿಹಾರಾತ್ಮಕ ಕಾರ್ಯತಂತ್ರದ ಭಾಗವಾಗಿ, ಆರ್ಇಸಿ ಲಿಮಿಟೆಡ್ಸಂಸ್ಥೆಯಲ್ಲಿ 24 ಗಂಟೆಗಳ ಆಕ್ಸಿಜನ್ ಘಟಕ ಕಂಟ್ರೋಲ್ ರೂಮ್ (ಒಪಿಸಿಆರ್) ಮತ್ತು ಆಂತರಿಕ ನಿಯಂತ್ರಣ ತಂಡವನ್ನು (ಐಸಿಜಿ) ಸ್ಥಾಪಿಸಲಾಗಿದೆ. ಆಕ್ಸಿಜನ್ಘಟಕಗಳಿಗೆ 24x7 ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸಲು ಆಕ್ಸಿಜನ್ ಯೋಜನೆಯ ನೋಡಲ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಜವಾಬ್ದಾರಿಯನ್ನು ಇವುಗಳು ಹೊಂದಿದೆ. ಒಂದು ವೇಳೆ ಆಕ್ಸಿಜನ್ಪೂರೈಕೆಗೆ ಯಾವುದಾದರೂ ಅಡಚಣೆಗಳು ಇದ್ದ ಪಕ್ಷದಲ್ಲಿ, ಡಿಸ್ಕಾಂ ಬದಿಯಿಂದ ಮತ್ತು ಘಟಕದ ಎಲೆಕ್ಟ್ರಿಕಲ್ ಇನ್ಸ್ಟಾಲೇಷನ್ಬದಿಯಿಂದ ತುರ್ತು ಆಧಾರದ ಮೇಲೆ ಅವುಗಳು ಪರಿಹಾರವಾಗುವಂತೆ ಕಾಯ್ದುಕೊಳ್ಳುವ ಹೊಣೆಯನ್ನೂ ಇವುಗಳಿಗೆ ನೀಡಲಾಗಿದೆಒಂದು ವೇಳೆ ಯಾವುದೇ ರೀತಿಯ ಅಡಚಣೆಗಳು ಇರುವ ಬಗ್ಗೆ ʻಪಿಒಎಸ್ಒಸಿಒʼ ಮತ್ತು ರಾಜ್ಯ ಘಟಕಗಳ (ಎಸ್ಟಿಯು ಮತ್ತು ಡಿಸ್ಕಾಂ), ʻಎಸ್ಎಲ್ಡಿಸಿʼಗಳ ವಿಶ್ಲೇಷಣೆಯಿಂದ ತಿಳಿದುಬಂದರೆ, ಕೂಡಲೇ ಅದಕ್ಕೆ ಸಂಬಂಧಿಸಿದ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಮಾರ್ಗಸೂಚಿಗಳನ್ನು ನೀಡಲಾಗುವುದು.
  3. 24x7 ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸಲು ಮುಂಜಾಗ್ರತಾ ಕ್ರಮಗಳು: ಮುಂಜಾಗ್ರತಾ ಕ್ರಮದ ಭಾಗವಾಗಿ, ವಿದ್ಯುತ್ಸ್ಥಾವರಗಳಿಗೆ ವಿದ್ಯುಚ್ಛಕ್ತಿಯನ್ನು ಪೂರೈಸುವ ಎಲ್ಲಾ ವಿದ್ಯುತ್ ಮಾರ್ಗಗಳ ವಿಚಾರವಾಗಿ ಅತ್ಯುತ್ತಮ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳಿಗೆ ಸಲಹೆ-ಸೂಚನೆಗಳನ್ನು ನೀಡಲಾಗಿದೆ. ಆಮ್ಲಜನಕ ಘಟಕಗಳಿಗೆ ವಿದ್ಯುತ್ ಪೂರೈಸುವ ಫೀಡರ್ಗಳನ್ನು ಪ್ರತ್ಯೇಕಿಸುವುದು ಸೇರಿದಂತೆ ಸಮರ್ಪಕ ಪೂರೈಕೆ ಬಾಹುಳ್ಯವನ್ನು ನಿರ್ಮಿಸುವುದು  ಸಹ ಇದರಲ್ಲಿ ಸೇರಿದೆ. ಜೊತೆಗೆ ಬರೋಟಿವಾಲಾ ಘಟಕ (ಹಿಮಾಚಲ ಪ್ರದೇಶ) ಮತ್ತು ʻಕೇರಳ ಖನಿಜ ಮತ್ತು ಲೋಹ ಸ್ಥಾವರʼದಲ್ಲಿ (ಕೇರಳ) ರಿಲೇಗಳನ್ನು ಮರುಸ್ಥಾಪಿಸುವುದು; ಪಕ್ಷಿ ದೋಷಕ್ಕೆ ಒಳಗಾಗುವ ಸಾಧ್ಯತೆಯಿರುವ ಪ್ರದೇಶದಲ್ಲಿರುವ ಉತ್ತರಾಖಂಡದ ಸಲೇಕ್ವಿ ಆಮ್ಲಜನಕ ಘಟಕಕ್ಕೆ 132 ಕಿ.ವಿ ಭೂಗತ ಕೇಬಲ್ ಅನ್ನು ಹಾಕುವುದು ಮುಂತಾದವು ರಚನಾತ್ಮಕ ಕ್ರಮಗಳ ಸಲಹೆಗಳೂ ಇದರಲ್ಲಿ ಸೇರಿವೆ.
  4. ವಿದ್ಯುತ್ ಪೂರೈಕೆಯ ತಾಂತ್ರಿಕ ಲೆಕ್ಕಪರಿಶೋಧನೆ ಮತ್ತು ಪರಿಹಾರ ಕ್ರಮಗಳ ಪೂರ್ವಭಾವಿ ಅನುಷ್ಠಾನ:
  • ವಿದ್ಯುತ್ ವ್ಯವಸ್ಥೆ ಕಾರ್ಯಾಚರಣೆ ನಿಗಮಕ್ಕೆ (ಪಿಒಎಸ್ಒಸಿಒ) ಪ್ರತಿಯೊಂದು ಆಕ್ಸಿಜನ್ ಘಟಕದ ವಿದ್ಯುತ್ಪೂರೈಕೆ ವ್ಯವಸ್ಥೆಯನ್ನು ಅದರಲ್ಲೂ ವಿಶೇಷವಾಗಿ ಎನ್ಸಿಆರ್ಗೆ ಆಮ್ಲಜನಕ ಪೂರೈಸುವ ಘಟಕಗಳ ವಿದ್ಯುತ್ ಪೂರೈಕೆಯನ್ನು ತಾಂತ್ರಿಕ ಲೆಕ್ಕಪರಿಶೋಧನೆಗೆ ಒಳಪಡಿಸುವ ಜವಾಬ್ದಾರಿ ನೀಡಲಾಗಿದೆ. ವಿದ್ಯುತ್ ಪೂರೈಕೆಯ ಸ್ವರೂಪ, ವಿದ್ಯುತ್ ಪೂರೈಕೆಯ ಮೂಲ(ಗಳು), ಪರ್ಯಾಯ ವ್ಯವಸ್ಥೆಗಳ ಲಭ್ಯತೆ, ರಿಲೇ ಸೆಟ್ಟಿಂಗ್ಗಳು ಇತ್ಯಾದಿಗಳನ್ನು ಲೆಕ್ಕಪರಿಶೋಧನೆ ಒಳಗೊಂಡಿರುತ್ತದೆಲೆಕ್ಕಪರಿಶೋಧನಾ ವರದಿಗಳು ವಿದ್ಯುತ್ ಪೂರೈಕೆಯನ್ನು ಸುಧಾರಿಸಲು ದೀರ್ಘಕಾಲೀನ ಮತ್ತು ದೀರ್ಘಕಾಲೀನ ಎರಡೂ ರೀತಿಯ ಕ್ರಮಗಳನ್ನು ಒಳಗೊಂಡಿರುತ್ತವೆ. ಇದುವರೆಗೂ, ದೆಹಲಿ ಮತ್ತು ಎನ್ಸಿಆರ್ ಪ್ರದೇಶಕ್ಕೆ ಆಮ್ಲಜನಕವನ್ನು ಪೂರೈಸುತ್ತಿರುವ 13 ಘಟಕಗಳ ಲೆಕ್ಕಪರಿಶೋಧನೆ ಮಾಡಲಾಗಿದೆ.
  • ತಾಂತ್ರಿಕ ಲೆಕ್ಕಪರಿಶೋಧನಾ ವರದಿಗಳ ಆಧಾರದ ಮೇಲೆ, ವಿದ್ಯುತ್ ಸಚಿವಾಲಯವು ಹಿಮಾಚಲ ಪ್ರದೇಶ, ಉತ್ತರಾಖಂಡ್, ಕೇರಳ, ಹರಿಯಾಣ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯ ಸರಕಾರಗಳಿಗೆ ಪತ್ರ ಬರೆದು, ಅಡಚಣೆರಹಿತ ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸಿಕೊಳ್ಳಲು ಆಯಾ ರಾಜ್ಯ ಘಟಕಗಳು ತೆಗೆದುಕೊಳ್ಳಬೇಕಾದ ಪರಿಹಾರ ಕ್ರಮಗಳನ್ನು ಸೂಚಿಸಿದೆ. ʻಡಿವಿಸಿʼಗೆ ತನ್ನ ವ್ಯಾಪ್ತಿಯಲ್ಲಿ ಆಮ್ಲಜನಕ ಘಟಕಗಳಿಗೆ ವಿದ್ಯುತ್ ಪೂರೈಸುವ ತನ್ನ ಉಪ ಕೇಂದ್ರಗಳ ನಿರ್ವಹಣೆಗಾಗಿ ಪತ್ರ ಬರೆಯಲಾಗಿದೆ.
  • ಹೆಚ್ಚುವರಿಯಾಗಿ 20 ಘಟಕಗಳನ್ನು ಲೆಕ್ಕಪರಿಶೋಧನೆಗೆ ಗುರಿಪಡಿಸಲಾಗಿದೆ ಮತ್ತು ತಾಂತ್ರಿಕ ಲೆಕ್ಕಪರಿಶೋಧನಾ ಫಲಿತಾಂಶಗಳನ್ನು ತುರ್ತು ಕ್ರಮಕ್ಕಾಗಿ ಆಯಾ ರಾಜ್ಯ ಸರಕಾರಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಉಳಿದ ಘಟಕಗಳ ತಾಂತ್ರಿಕ ಲೆಕ್ಕಪರಿಶೋಧನೆ ಮುಂದಿನ 7 ದಿನಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಮೇಲೆ ತಿಳಿಸಲಾದ ವಿದ್ಯುತ್ ಸಚಿವಾಲಯದ ಪೂರ್ವಭಾವಿ ಮತ್ತು ಸಮಗ್ರ ಕಾರ್ಯ ವಿಧಾನಗಳುಸಚಿವಾಲಯವು ಒದಗಿಸಿದ ಮಾಹಿತಿಗಳ ಆಧಾರದ ಮೇಲೆ ರಾಜ್ಯ ಸರಕಾರಗಳು ಪ್ರಾರಂಭಿಸಿದ ಕ್ರಮಗಳು, ಜೊತೆಗೆ ರಾಜ್ಯ ಸರಕಾರಗಳು ತಮ್ಮದೇ ಮಟ್ಟದಲ್ಲಿ ಪ್ರಾರಂಭಿಸಿದ ಕ್ರಮಗಳು ಇವೆಲ್ಲವುಗಳು ಒಟ್ಟಾರೆಯಾಗಿ ವಿದ್ಯುತ್ ಪೂರೈಕೆಯಲ್ಲಿ ಟ್ರಿಪ್ಪಿಂಗ್ ಸಾಧ್ಯವಾದಷ್ಟೂ ಕಡಿಮೆ ಇರುವಂತೆ  ಕಾಯ್ದುಕೊಳ್ಳುತ್ತವೆ. ಮಾತ್ರವಲ್ಲದೆ, ಆಮ್ಲಜನಕ ತಯಾರಕರಿಗೂ ಘಟಕದಲ್ಲಿ ಯಾವುದೇ ಅಡೆತಡೆಗಳಿಲ್ಲದಂತೆ ಕಾಯ್ದುಕೊಳ್ಳಲು ತಮ್ಮ ಮಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂವೇದನೆ ಉಂಟು ಮಾಡುತ್ತವೆ. ಅನೇಕ ಕಾರ್ಯತಂತ್ರಗಳಿಂದಾಗಿ ಆಮ್ಲಜನಕ ಘಟಕಗಳು ತಮ್ಮ ಸಂಪೂರ್ಣ ಸಾಮರ್ಥ್ಯದ ಮಟ್ಟದಲ್ಲಿ ಆಮ್ಲಜನಕವನ್ನು ಉತ್ಪಾದಿಸುವಂತೆ ಖಚಿತಪಡಿಸಲು ನೆರವಾಗುತ್ತವೆ.

***



(Release ID: 1717991) Visitor Counter : 197