ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭೂತಾನ್ ಪ್ರಧಾನಿ ಡಾ. ಲೊಟಯ್ ತ್ಸೇರಿಂಗ್ ದೂರವಾಣಿ ಸಮಾಲೋಚನೆ

Posted On: 11 MAY 2021 12:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂತಾನ್ ಪ್ರಧಾನಿ ಲಿಯೋನ್ ಚೆನ್ ಡಾ. ಲೊಟಯ್ ತ್ಸೇರಿಂಗ್ ಅವರೊಂದಿಗೆ ದೂರವಾಣಿ ಸಮಾಲೋಚನೆ ನಡೆಸಿದರು.

ಕೋವಿಡ್-19 ಸಾಂಕ್ರಾಮಿಕದ ಇತ್ತೀಚಿನ ಸಂದರ್ಭದಲ್ಲಿ ಭಾರತದ ಜನತೆ ಮತ್ತು ಸರ್ಕಾರದ ಪ್ರಯತ್ನಗಳು ಒಗ್ಗಟ್ಟಿನಿಂದ ಕೂಡಿವೆ ಎಂದು ಬೂತಾನ್ ಪ್ರಧಾನಿ ಅವರು ಹೇಳಿದರು.    ಬೂತಾನ್ ಸರ್ಕಾರ ಮತ್ತು ಅಲ್ಲಿನ ಜನರ ಶುಭ ಹಾರೈಕೆ ಹಾಗೂ ಬೆಂಬಲಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾ,ಮಾಣಿಕವಾದ ಧನ್ಯವಾದಗಳನ್ನು ತಿಳಿಸಿದರು.

ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿರ್ವಹಿಸುವ ಹೋರಾಟದಲ್ಲಿ ಬೂತಾನ್ ಗೌರವಾನ್ವಿತ ದೊರೆ ಅವರ ನಾಯಕತ್ವವನ್ನು ್ಲಾಘಿಸಿದರು ಮತ್ತು ನಿರಂತರ ಪ್ರಯತ್ನಗಳಿಗಾಗಿ ಲಿಯೋನ್ ಚೆನ್ ಅವರಿಗೆ ಶುಭಾಶಯಗಳನ್ನು ತಿಳಿಸಿದರು.

ಪ್ರಸಕ್ತ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತ ಮತ್ತು ಬೂತಾನ್ ನಡುವಿನ ವಿಶೇಷ ಸ್ನೇಹವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಇದು ಸಹಕಾರಿಯಾಗಲಿದೆ. ಪರಸ್ಪರ ಅರ್ಥಮಾಡಿಕೊಳ್ಳುವ ಮತ್ತು ಗೌರವ, ಸಾಂಸ್ಕೃತಿಕ ಪರಂಪರೆಯನ್ನು ಹಂಚಿಕೊಳ್ಳುವ, ಜನರಿಂದ ಜನರ ನಡುವಿನ ಬಲಿಷ್ಠ ಸಂಪರ್ಕದಂತಹ ವಿಚಾರಗಳನ್ನು ನಾಯಕರು ತಮ್ಮ ಸಮಾಲೋಚನೆ ಸಂದರ್ಭದಲ್ಲಿ ಉಲ್ಲೇಖಿಸಿದರು.

***



(Release ID: 1717730) Visitor Counter : 233