ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಐಡಿಬಿಐ ಬ್ಯಾಂಕ್ ಲಿಮಿಟೆಡ್ ನ ಬಂಡವಾಳ ಹಿಂತೆಗೆತ ಕಾರ್ಯತಂತ್ರ ಮತ್ತು ಆಡಳಿತ ನಿಯಂತ್ರಣ ವರ್ಗಾವಣೆ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ

Posted On: 05 MAY 2021 4:02PM by PIB Bengaluru

ಐಡಿಬಿಐ ಬ್ಯಾಂಕ್ ಲಿಮಿಟೆಡ್ ಬಂಡವಾಳ ಹಿಂತೆಗೆತ ಕಾರ್ಯತಂತ್ರದ ಜತೆಗೆ ಆಡಳಿತ ನಿಯಂತ್ರಣವನ್ನು ವರ್ಗಾವಣೆ ಮಾಡುವ ಪ್ರಸ್ತಾವನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆ ತಾತ್ವಿಕ ಅನುಮೋದನೆ ನೀಡಿದೆಆರ್.ಬಿ. ಮತ್ತು ಎಲ್..ಸಿಯೊಂದಿಗೆ ಕೇಂದ್ರ ಸರ್ಕಾರ  ಸಮಾಲೋಚಿಸಿ ವಹಿವಾಟಿನ ಚೌಕಟ್ಟು ಮತ್ತು ಆಯಾ ಷೇರುದಾರರ ಬಗ್ಗೆ ನಿರ್ಧರಿಸಲಿದೆ.

ಐಡಿಬಿಐ ಬ್ಯಾಂಕ್ ಶೇ 94 ಕ್ಕೂ ಹೆಚ್ಚು ಇಕ್ವಿಟಿಯನ್ನು ಭಾರತ ಸರ್ಕಾರ [ಜಿ..] ಮತ್ತು ಎಲ್..ಸಿ [ಜಿ.. ಶೇ 45.48 ರಷ್ಟು, ಎಲ್..ಸಿ ಶೇ 49.24 ರಷ್ಟು] ಹೊಂದಿದೆ. ಎಲ್..ಸಿ ಪ್ರಸ್ತುತ ಐಡಿಬಿಐ ಬ್ಯಾಂಕ್ ಆಡಳಿತ ಮಂಡಳಿ ನಿಯಂತ್ರಣ ಹೊಂದಿದೆ ಮತ್ತು ಭಾರತ ಸರ್ಕಾರ ಸಹ ಪ್ರವರ್ತಕ ಸ್ಥಾನದಲ್ಲಿದೆ.

ಐಡಿಬಿಐ ಬ್ಯಾಂಕ್ ಲಿಮಿಟೆಡ್ ನಲ್ಲಿ ತನ್ನ ಷೇರುಗಳನ್ನು ಕಡಿತಗೊಳಿಸಲು ಎಲ್..ಸಿ ಮಂಡಳಿ ನಿರ್ಣಯ ಅಂಗೀಕರಿಸಿತ್ತು. ಸರ್ಕಾರ ತನ್ನ ಕಾರ್ಯತಂತ್ರದ ಭಾಗವನ್ನು  ಮಾರಾಟ ಮಾಡುವ ಮೂಲಕ ತನ್ನ ಪಾಲನ್ನು ಹಂಚುತ್ತಿದೆ. ಸರ್ಕಾರ ಆಡಳಿತ ನಿಯಂತ್ರಣವನ್ನು ತ್ಯಜಿಸುವ ಉದ್ದೇಶದಿಂದ ಮತ್ತು ಬೆಲೆ, ಮಾರುಕಟ್ಟೆ, ದೃಷ್ಟಿಕೋನ, ಶಾಸನಬದ್ಧ ಷರತ್ತು ಮತ್ತು ಪಾಲಿಸಿದಾರರ ಹಿತಾಸಕ್ತಿಯನ್ನು ಪರಿಗಣಿಸುತ್ತಿದೆ.

ಎಲ್..ಸಿ ಮಂಡಳಿಯ ನಿರ್ಧಾರ ಬ್ಯಾಂಕಿನಲ್ಲಿ ತನ್ನ ಪಾಲನ್ನು ಕಡಿಮೆ ಮಾಡುವ ನಿಯಂತ್ರಣ ಆದೇಶಕ್ಕೆ ಅನುಗುಣವಾಗಿದೆ.

ಐಡಿಬಿಐ ಬ್ಯಾಂಕ್ ಲಿಮಿಟೆಡ್ ಬೆಳವಣಿಗೆ ಮತ್ತು ವ್ಯಾಪಾರ ಸಾಮರ್ಥ್ಯದ ಪ್ರಗತಿಗೆ ಕಾರ್ಯತಂತ್ರದ ಖರೀದಿದಾರರಾಗಿ ಬರುವವರು ಹಣ, ಹೊಸ ತಂತ್ರಜ್ಞಾನ ಮತ್ತು ಉತ್ತಮ ಆಡಳಿತ ನಿರ್ವಹಣೆಯ ಅಭ್ಯಾಸಗಳನ್ನು ತುಂಬುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಎಲ್..ಸಿ ಮತ್ತು ಸರ್ಕಾರದ ನೆರವು/ನಿಧಿಗಳ ಮೇಲೆ ಅವಲಂಬಿತವಾಗದೇ ಹೆಚ್ಚು ವ್ಯಾಪಾರ ಉತ್ತೇಜನ ಮಾಡುವ ನಿರೀಕ್ಷೆ ಹೊಂದಲಾಗಿದೆ. ಸರ್ಕಾರ ಬಂಡವಾಳ ಕಾರ್ಯತಂತ್ರದ ಮೂಲಕ ಸಂಪನ್ಮೂಲ ಸಂಗ್ರಹಿಸಲಿದೆ. ವಹಿವಾಟಿನಿಂದ ಬರುವ ಈಕ್ವಿಟಿ ಮೊತ್ತವನ್ನು ನಾಗರಿಕರಿಗೆ ಅನುಕೂಲವಾಗುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರ ವಿನಿಯೋಗಿಸಲಿದೆ

***


(Release ID: 1716324)