ಪ್ರಧಾನ ಮಂತ್ರಿಯವರ ಕಛೇರಿ

ತೇಜ್ ಬಹದ್ದೂರ್ ಜಿ ಅವರ 400ನೇ ಪ್ರಕಾಶ್ ಪುರಬ್ ಅಂಗವಾಗಿ ನಮನ ಸಲ್ಲಿಸಿದ ಪ್ರಧಾನಿ


ಸಿಸ್ ಗಂಜ್ ಸಾಹೀಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ

प्रविष्टि तिथि: 01 MAY 2021 8:49AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತೇಜ್ ಬಹದ್ದೂರ್ ಜಿ ಅವರ 400ನೇ ಪ್ರಕಾಶ್ ಪುರಬ್ ಅಂಗವಾಗಿ ಅವರಿಗೆ ನಮನ ಸಲ್ಲಿಸಿದರು.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ತೇಜ್ ಬಹದ್ದೂರ್ ಜಿ ಅವರ 400ನೇ ಪ್ರಕಾಶ್ ಪುರಬ್ ವಿಶೇಷದ ಅಂಗವಾಗಿ ನಾನು ಅವರಿಗೆ ನಮನ ಸಲ್ಲಿಸುತ್ತೇನೆ. ಶೋಷಿತರಿಗಾಗಿ ಸೇವೆ ಸಲ್ಲಿಸುವ ಅವರ ಪ್ರಯತ್ನಗಳು ಮತ್ತು ಧೈರ್ಯದಿಂದಾಗಿ ಅವರನ್ನು ಜಾಗತಿಕವಾಗಿ ಗೌರವಿಸಲಾಗುತ್ತದೆ. ಅನ್ಯಾಯ ಮತ್ತು ದಬ್ಬಾಳಿಕೆಗೆ ತಲೆಬಾಗಲು ಅವರು ನಿರಾಕರಿಸಿದ್ದರು. ಅವರ ಸರ್ವೋಚ್ಛ ತ್ಯಾಗ ಹಲವರಿಗೆ ಶಕ್ತಿ ಹಾಗೂ ಪ್ರೇರಣೆಯನ್ನು ನೀಡುತ್ತದೆ’’ಎಂದು ಹೇಳಿದ್ದಾರೆ.

 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸಿಸ್ ಗಂಜ್ ಸಾಹೀಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು.

***


(रिलीज़ आईडी: 1716294) आगंतुक पटल : 286
इस विज्ञप्ति को इन भाषाओं में पढ़ें: Odia , Assamese , English , Urdu , हिन्दी , Marathi , Manipuri , Bengali , Punjabi , Gujarati , Tamil , Telugu , Malayalam