ಪ್ರಧಾನ ಮಂತ್ರಿಯವರ ಕಛೇರಿ

ಲಸಿಕೆ ವ್ಯರ್ಥವಾಗುವುದನ್ನು ತಗ್ಗಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಮತ್ತು ಶುಶ್ರೂಷಕಿಯರನ್ನು ಪ್ರಶಂಸಿಸಿದ ಪ್ರಧಾನಮಂತ್ರಿ

Posted On: 05 MAY 2021 12:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಸಿಕೆ ವ್ಯರ್ಥವಾಗುವುದನ್ನು ತಗ್ಗಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಮತ್ತು ಶುಶ್ರೂಷಕಿಯರನ್ನು ಪ್ರಶಂಸಿಸಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರ ಟ್ವೀಟ್ ಉಲ್ಲೇಖಿಸಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು:

ಲಸಿಕೆ ವ್ಯರ್ಥವಾಗುವುದನ್ನು ತಗ್ಗಿಸುವಲ್ಲಿ ನಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ಶುಶ್ರೂಷಕಿಯರು ಮಾದರಿಯಾಗಿದ್ದು ಇದನ್ನು ನೋಡಲು ಉತ್ತಮವೆನಿಸುತ್ತದೆ. ಕೋವಿಡ್ -19 ವಿರುದ್ಧದ ಹೋರಾಟವನ್ನು ಬಲಪಡಿಸಲು ಲಸಿಕೆಯ ವ್ಯರ್ಥವಾಗುವುದನ್ನು ತಗ್ಗಿಸುವುದು ಮಹತ್ವದ್ದಾಗಿದೆ.ಎಂದು ತಿಳಿಸಿದ್ದಾರೆ.

***(Release ID: 1716271) Visitor Counter : 13