ರೈಲ್ವೇ ಸಚಿವಾಲಯ

ಇಂದು 244 ಟನ್ ಗೂ ಹೆಚ್ಚು ಆಮ್ಲಜನಕ ಸ್ವೀಕರಿಸಲಿರುವ ದೆಹಲಿ:  ಇಂದು ಮುಂಜಾನೆ ಮಾಡಿದ ಪೂರೈಕೆಯೊಂದಿಗೆ  24 ಗಂಟೆಗಳಲ್ಲಿ ದೆಹಲಿ ಒಂದೇ ಪ್ರದೇಶಕ್ಕೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ 450 ಮೆಟ್ರಿಕ್ ಟನ್ ಎಲ್.ಎಂ.ಒ ವಿತರಣೆ 


27 ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ 103 ಟ್ಯಾಂಕರ್ ಗಳಲ್ಲಿ 1585 ಮೆಟ್ರಿಕ್ ಟನ್ ಎಲ್.ಎಂ.ಒ ಪೂರೈಕೆಯಾನ ಪೂರ್ಣ

60 ಮೆಟ್ರಿಕ್ ಟನ್ ಗೂ ಹೆಚ್ಚು ಆಮ್ಲಜನಕ ಸ್ವೀಕರಿಸಿದ ತೆಲಂಗಾಣ

ಹರ್ಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ದೆಹಲಿಗೆ 6 ಆಕ್ಸಿಜನ್ ಎಕ್ಸ್ ಪ್ರೆಸ್ ನಿಂದ 33 ಟ್ಯಾಂಕರ್ ಗಳ ಮೂಲಕ 463 ಮೆಟ್ರಿಕ್ ಟನ್ ಎಲ್.ಎಂ.ಒ ವಿತರಣೆ

ಲಖನೌ [117 ಟನ್ ಗಳು ಅಂದಾಜು], ಫರೀದಾಬಾದ್ [79 ಟನ್ ಗಳು] ಮತ್ತು ಜಬಲ್ಪುರ್ [23 ಟನ್ ಗಳು ಅಂದಾಜು] ಆಕ್ಷಿಜನ್ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಪ್ರಾರಂಭ

ರೈಲ್ವೆ ಆಕ್ಸಿಜನ್ ಎಕ್ಸ್ ಪ್ರೆಸ್ ಅಗತ್ಯಗಳನ್ನು ಪೂರೈಸುತ್ತಿದೆ:  ಒಂದು ಶತಮಾನದ ಸವಾಲನ್ನು ದೇಶ ಎದುರಿಸುತ್ತಿದೆ

Posted On: 04 MAY 2021 4:53PM by PIB Bengaluru

ದೇಶದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಹೊಸ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವ ಭಾರತೀಯ ರೈಲ್ವೆ ವಿವಿಧ ರಾಜ್ಯಗಳಿಗೆ ದ್ರವ ವೈದ್ಯಕೀಯ ಆಮ್ಲಜನಕ [ಎಲ್.ಎಂ.] ತಲುಪಿಸುವ ಮೂಲಕ ಪರಿಹಾರ ತರುವ ತನ್ನ ಯಾನ ಮುಂದುವರಿಸಿದೆ. ಈವರೆಗೆ 103 ಟ್ಯಾಂಕರ್ ಗಳಲ್ಲಿ 1585 ಮೆಟ್ರಿಕ್ ಟನ್ ಎಲ್.ಎಂ. ಪೂರೈಕೆ ಮಾಡಿದೆ. ಈವರೆಗೆ 27 ಆಕ್ಸಿಜನ್ ಎಕ್ಸ್ ಪ್ರೆಸ್ ತನ್ನ ಯಾನ ಪೂರ್ಣಗೊಳಿಸಿದೆ ಮತ್ತು 6 ಕ್ಕೂ ಹೆಚ್ಚು ಆಕ್ಸಿಜನ್ ಎಕ್ಸ್ ಪ್ರೆಸ್ 33 ಟ್ಯಾಂಕರ್ ಗಳ ಮೂಲಕ 463 ಮೆಟ್ರಿಕ್ ಟನ್ [ಅಂದಾಜು] ಎಲ್.ಎಂ. ಪೂರೈಕೆಯಾಗುತ್ತಿದೆ.

ಬೇಡಿಕೆ ಸಲ್ಲಿಸುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಅಗತ್ಯವಿರುವಷ್ಟು ಎಲ್.ಎಂ. ತಲುಪಿಸಲು ಭಾರತೀಯ ರೈಲ್ವೆ ಪ್ರಯತ್ನಶೀಲವಾಗಿದೆ.

ದೆಹಲಿಗೆ ಇಂದು ಹಪ ಮತ್ತು ಮುಂಡ್ರಾದಿಂದ ಇನ್ನೂ ಎರಡು ಆಕ್ಸಿಜನ್ ಎಕ್ಸ್ ಪ್ರೆಸ್ ಗಳು 244 ಮೆಟ್ರಿಕ್ ಟನ್ ಗಿಂತಲೂ ಹೆಚ್ಚಿನ ಪ್ರಮಾಣದ ದ್ರವ ವೈದ್ಯಕೀಯ ಆಮ್ಲಜನಕ ಹೊತ್ತೊಯ್ದಿದ್ದು, ಇಂದು ತಲುಪುವ ನಿರೀಕ್ಷೆಯಿದೆ. ಎರಡಕ್ಕೂ ಹೆಚ್ಚು  ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಬಂದಿಳಿದಿವೆ. ಇದರಿಂದ ಕಳೆದ 24 ಗಂಟೆಗಳಲ್ಲಿ ಇಂದು ಮೇ 4 ಮುಂಜಾನೆ ಮಾಡಿದ ಪೂರೈಕೆಯೊಂದಿಗೆ ದೆಹಲಿ ಒಂದೇ ಪ್ರದೇಶಕ್ಕೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ 450 ಮೆಟ್ರಿಕ್ ಟನ್ ಎಲ್.ಎಂ. ವಿತರಣೆಯಾಗಿದೆ

ರೈಲ್ವೆ ಮೂಲಕ ಇಂದು 382 ಮೆಟ್ರಿಕ್ ಟನ್ ಎಲ್.ಎಂ. ವಿತರಿಸಿದ್ದು, ಪೈಕಿ ದೆಹಲಿಗೆ 244 ಮೆಟ್ರಿಕ್ ಟನ್ ವಿತರಣೆಯಾಗಿದೆ. ದೆಹಲಿಗೆ ಒಂದೇ ದಿನ ಶೇ 64 ರಷ್ಟು ಪ್ರಮಾಣವನ್ನು ಪೂರೈಕೆ ಮಾಡಲಾಗಿದೆ.

ತೆಲಂಗಾಣ ಸಹ ಎರಡನೇ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ 60.23 ಮೆಟ್ರಿಕ್ ಟನ್ ಎಲ್.ಎಂ. ಅನ್ನು ಅಂಗುಲ್ ನಿಂದ ಸ್ವೀಕರಿಸಿದೆ.

ಬೊಕರೋ ನಿಂದ ಹೊರಟ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಲಖನೌ 79 ಟನ್ ಸ್ವೀಕರಿಸಿದೆ.

ಈವರೆಗೆ ಭಾರತೀಯ ರೈಲ್ವೆ 1585 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಪೂರೈಸಿದೆ. ಮಹಾರಾಷ್ಟ್ರಕ್ಕೆ [174 ಮೆಟ್ರಿಕ್ ಟನ್], ಉತ್ತರ ಪ್ರದೇಶ [492 ಮೆಟ್ರಿಕ್ ಟನ್], ಮಧ್ಯಪ್ರದೇಶ [179 ಮೆಟ್ರಿಕ್ ಟನ್]. ದೆಹಲಿ [464 ಮೆಟ್ರಿಕ್ ಟನ್], ಹರ್ಯಾಣ [150 ಮಟ್ರಿಕ್ ಟನ್] ಮತ್ತು ತೆಲಂಗಾಣ [127 ಮೆಟ್ರಿಕ್ ಟನ್].

***


(Release ID: 1716038)