ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

2021 ರ ಮೇ ತಿಂಗಳಲ್ಲಿ ನಿಗದಿಯಾಗಿರುವ ಎಲ್ಲಾ ಭೌತಿಕ ಪರೀಕ್ಷೆಗಳನ್ನು ಮುಂದೂಡುವುದು

Posted On: 03 MAY 2021 7:20PM by PIB Bengaluru

ಕೋವಿಡ್-19 ಸೋಂಕಿನ ಎರಡನೇ ಅಲೆ ಹಿನ್ನೆಲೆಯಲ್ಲಿ 2021 ಮೇ ನಲ್ಲಿ ನಿಗದಿಯಾಗಿರುವ ಎಲ್ಲಾ ಭೌತಿಕ ಪರೀಕ್ಷೆಗಳನ್ನು ಮುಂದೂಡುವಂತೆ  ಶಿಕ್ಷಣ ಸಚಿವಾಲಯ ಒತ್ತಾಯಿಸಿದೆ.

ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ್ರೀ ಅಮಿತ್ ಖರೆ ಕೇಂದ್ರೀಯ ನೆರವು ಪಡೆಯುವ ಸಂಸ್ಥೆಗಳ ಎಲ್ಲಾ ಮುಖ್ಯಸ್ಥರಿಗೆ ಪತ್ರ ಬರೆದು 2021 ಮೇ ನಲ್ಲಿ ನಿಗದಿಯಾಗಿರುವ ಎಲ್ಲಾ ಭೌತಿಕ ಪರೀಕ್ಷೆಗಳನ್ನು ಮುಂದೂಡಬೇಕು. ಆನ್ ಲೈನ್ ಪರೀಕ್ಷೆಗಳು, ಇತ್ಯಾದಿಗಳು ಮುಂದುವರಿಯಬಹುದು ಎಂದು ಹೇಳಿದ್ದಾರೆ. ಕುರಿತ ತೀರ್ಮಾನವನ್ನು 2021 ಜೂನ್ ಮೊದಲ ವಾರದಲ್ಲಿ ಪರಿಶೀಲಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸಂಸ್ಥೆಯಲ್ಲಿ ಯಾರಿಗಾದರೂ ಯಾವುದೇ ಸಹಾಯಬೇಕಾದರೆ ತಕ್ಷಣದ ಸಹಾಯ ಒದಗಿಸುವ ಕುರಿತು ಖಚಿತಪಡಿಸಿಕೊಳ್ಳಲು ಮತ್ತಷ್ಟು ಸಲಹೆಗಳನ್ನು ಸಹ ನೀಡಲಾಗಿದೆ. ಇದರಿಂದ ಆಕೆ/ಆತ ತ್ವರಿತವಾಗಿ ತೊಂದರೆಯಿಂದ ಹೊರ ಬರುತ್ತಾರೆ. ಜತೆಗೆ ಅರ್ಹ ವ್ಯಕ್ತಿಗಳನ್ನು ಕೋವಿಡ್ ಲಸಿಕೆ ಪಡೆಯಲು ಪ್ರೋತ್ಸಾಹಿಸಬೇಕು ಮತ್ತು ಕೋವಿಡ್ -19 ಸೂಕ್ತ ನಡಾವಳಿಕೆಯನ್ನು ಅನುಸರಿಸಿ ಇವರು ಸುರಕ್ಷಿತವಾಗಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಎಲ್ಲಾ ಸಂಸ್ಥೆಗಳಿಗೆ ಸೂಚಿಸಲಾಗಿದೆ.

***


(Release ID: 1715779) Visitor Counter : 251