ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೋವಿಡ್ ಸೋಂಕಿತರಿಗೆ ರಸಗೊಬ್ಬರ ಕಂಪೆನಿಗಳಿಂದ ಪ್ರತಿದಿನ 50 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಪೂರೈಕೆ

Posted On: 28 APR 2021 11:47AM by PIB Bengaluru

ಸಾರ್ವಜನಿಕ, ಖಾಸಗಿಯಲ್ಲದೇ ಸಹಕಾರಿ ವಲಯದ ರಸಗೊಬ್ಬರ ಕಂಪೆನಿಗಳ ಘಟಕಗಳಲ್ಲಿ ಆಮ್ಲಜನಕ ಉತ್ಪಾದಿಸುವ ಸಾಧ್ಯತೆಗಳ ಕುರಿತಂತೆ ಇಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ[/ಸಿ] ಹಾಗೂ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವೀಯ ಮಹತ್ವದ ಸಭೆ ನಡೆಸಿದರು.

ಸಾಂಕ್ರಾಮಿಕ ಸಂದರ್ಭದಲ್ಲಿ ರಸಗೊಬ್ಬರ ಕಂಪೆನಿಗಳು ಸಮಾಜಕ್ಕೆ ನೆರವು ನೀಡಲು ಮುಂದಾಗಬೇಕು. ಕಂಪೆನಿಗಳ ಅಸ್ಥಿತ್ವದಲ್ಲಿರುವ ಹಾಲಿ ಆಮ್ಲಜನಕ ಉತ್ಪಾದನಾ ಸಾಮರ್ಥ್ಯವನ್ನು ಮರು ಹೊಂದಿಸಿ ಆಸ್ಪತ್ರೆಗಳಿಗೆ ವೈದ್ಯಕೀಯ ದರ್ಜೆಯ  ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸಬೇಕೆಂದು ಕರೆ ನೀಡಿದ್ದಾರೆಕೇಂದ್ರ ಸಚಿವರ ಕ್ರಮವನ್ನು ರಸಗೊಬ್ಬರ ಕಂಪೆನಿಗಳು ಸ್ವಾಗತಿಸಿದವು ಮತ್ತು ದೇಶದ ಕೋವಿಡ್-19 ಪರಿಸ್ಥಿತಿ ವಿರುದ್ಧ ಹೋರಾಡಲು ಭಾರತ ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸಲು ಆಸಕ್ತಿ ತೋರಿದವು. ಸಭೆಯಲ್ಲಿ ಕೈಗೊಂಡ ತೀರ್ಮಾನಗಳು ಕೆಳಕಂಡಂತೆ ಇವೆ.

  • ಇಫ್ಕೋ ಸಂಸ್ಥೆ ಗುಜರಾತ್ ಕೆ..ಎಲ್..ಎಲ್ ತನ್ನ ಘಟಕದಲ್ಲಿ 200 ಕ್ಯೂಬಿಕ್ ಮೆಟ್ರಿಕ್ ಟನ್ ಸಾಮರ್ಥ್ಯದ ಆಮ್ಲಜನಕ ಘಟಕ ಸ್ಥಾಪಿಸಲಿದೆ ಮತ್ತು ತನ್ನ ದೈನಂದಿನ ಒಟ್ಟಾರೆ ಸಾಮರ್ಥ್ಯವನ್ನು 33,000 ಮೆಟ್ರಿಕ್ ಟನ್ ಗೆ ಹೆಚ್ಚಿಸಿಕೊಳ್ಳಲಿದೆ.
  • ಜಿ.ಎಸ್.ಎಫ್.ಸಿ ತನ್ನ ಘಟಕದಲ್ಲಿ ಸಣ್ಣ ಮಾರ್ಪಾಡು ಮಾಡಲಿದೆ ಮತ್ತು ದ್ರವೀಕೃತ ಆಮ್ಲಜನಕ ಪೂರೈಕೆಯನ್ನು ಆರಂಭಿಸಲಿದೆ
  • ಜಿ.ಎನ್.ಎಫ್.ಸಿ ಸಹ ತನ್ನ ವಾಯು ಪ್ರತ್ಯೇಕಗೊಳಿಸುವ ಘಟಕ ಸ್ಥಾಪಿಸಿದ ನಂತರ ದ್ರವೀಕೃತ ಆಮ್ಲಜಕನವನ್ನು ವೈದ್ಯಕೀಯ ಉದ್ದೇಶಗಳಿಗೆ ಪೂರೈಕೆ ಮಾಡುವುದನ್ನು ಆರಂಭಿಸಿದೆ.
  • ಜಿ.ಎಸ್.ಎಫ್.ಎಸ್ ಮತ್ತು ಜಿ.ಎನ್.ಎಫ್.ಸಿ ತನ್ನ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಕುರಿತು ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ.
  • ಸಾಮಾಜಿಕ ಹೊಣೆಗಾರಿಕೆ ಸಿ.ಎಸ್.ಆರ್. ನಿಧಿಯಿಂದ ಇತರೆ ರಸಗೊಬ್ಬರ ಕಂಪೆನಿಗಳು ದೇಶದ ಆಯ್ದ ಪ್ರದೇಶಗಳು/ ಆಸ್ಪತ್ರೆಗಳಲ್ಲಿ ವೈದ್ಯಕೀಯ ಘಟಕಗಳನ್ನು ಸ್ಥಾಪಿಸಲಿದೆ.

ರಸಗೊಬ್ಬರ ಘಟಕಗಳಿಂದ ಕೋವಿಡ್ ಸೋಂಕಿತರಿಗೆ ಒಟ್ಟಾರೆ ಪ್ರತಿ ದಿನ ಅಂದಾಜು 50 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ದೊರೆಯುವ ನಿರೀಕ್ಷೆಯಿದೆ. ಕ್ರಮಗಳಿಂದ ಮುಂಬರುವ ದಿನಗಳಲ್ಲಿ ದೇಶದ ಆಸ್ಪತ್ರೆಗಳಲ್ಲಿ ವೈದ್ಯಕೀಯ ದರ್ಜೆಯ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ

***


(Release ID: 1714567) Visitor Counter : 243