ರೈಲ್ವೇ ಸಚಿವಾಲಯ

ನಾಳೆ ಬೆಳಗ್ಗೆ ವೇಳೆಗೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ 450 ಮಿಲಿಯನ್ ಟನ್ ಗೂ ಅಧಿಕ ಆಮ್ಲಜನಕ ಪೂರೈಕೆ


ಸದ್ಯ ದೆಹಲಿ ಮತ್ತು ಉತ್ತರ ಪ್ರದೇಶದ ನಡುವೆ ಆಕ್ಸಿಜನ್ ರೈಲುಗಳು ಸಂಚಾರ

ಒಂದು ರೈಲು ಹೆಚ್ಚಿನ ಆಮ್ಲಜನಕ ಕೊಂಡೊಯ್ಯಲು ಇಂದು ರಾತ್ರಿ ಲಖನೌದಿಂದ ಬೊಕಾರೊಗೆ ತೆರಳುವ ಸಾಧ್ಯತೆ

Posted On: 26 APR 2021 5:35PM by PIB Bengaluru

ಕೆಲವು ದಿನಗಳ ಹಿಂದೆ ಮುಂಬೈ ಪ್ರದೇಶದಿಂದ ವೈಜಾಗ್ ಗೆ ಮೊದಲ ಖಾಲಿ ಟ್ಯಾಂಕರ್ ಗಳ ರೈಲು ಪ್ರಯಾಣ ಆರಂಭಿಸಿದ ನಂತರ, ಭಾರತೀಯ ರೈಲ್ವೆ ಭಾರತದಾದ್ಯಂತ ಹಲವು ರಾಜ್ಯಗಳಿಗೆ ಸುರಕ್ಷಿತ ಮತ್ತು ಸುಗಮವಾಗಿ 302 ಎಂಟಿ ಗೂ ಅಧಿಕ ಆಕ್ಸಿಜನ್ ಅನ್ನು ಸಾಗಾಣೆ ಮಾಡಿದೆ. ಮತ್ತೆ 154 ಎಂಟಿ ದ್ರವೀಕೃತ ವೈದ್ಯಕೀಯ ಆಕ್ಸಿಜನ್ ಸಾಗಾಣೆ ಹಂತದಲ್ಲಿದೆ. ರೈಲ್ವೆ ಯಾವ ರಾಜ್ಯಗಳಿಗೆ ಆಕ್ಸಿಜನ್ ಬೇಡಿಕೆ ಇತ್ತೋ ಅಂತಹ ರಾಜ್ಯಗಳಿಗೆ ಜೀವರಕ್ಷಕ ಆಮ್ಲಜನಕವನ್ನು ಸಾಗಾಣೆ ಮಾಡುವ ಸವಾಲನ್ನು ಕೈಗೆತ್ತಿಕೊಂಡಿದೆ.

4 ಟ್ಯಾಂಕರ್ ಗಳನ್ನು ಹೊತ್ತ ಒಂದು ಆಕ್ಸಿಜನ್ ರೈಲು ರಾಯಗಢ್(ಛತ್ತೀಸ್ ಗಢ)ದಿಂದ ಹೊರಟಿದ್ದು, ನಾಳೆ ಮುಂಜಾನೆ ದೆಹಲಿ ತಲುಪುವ ಸಾಧ್ಯತೆ ಇದೆ.

ಮಹಾರಾಷ್ಟ್ರದ ನಿವಾಸಿಗಳಿಗಾಗಿ 44 ಎಂಟಿ(3 ಟ್ಯಾಂಕರ್ ಗಳನ್ನು) ಹೊತ್ತ ರೈಲು ಹಪಾ (ರಾಜ್ ಕೋಟ್, ಗುಜರಾತ್)ನಿಂದ ಇಂದು ಹೊರಟು, ಕಲಂಬೋಲಿ(ಮುಂಬೈ ಸಮೀಪ) ತಲುಪಿದೆ.

ಮತ್ತೊಂದು ಆಕ್ಸಿಜನ್ ಎಕ್ಸ್ ಪ್ರೆಸ್ ಸದ್ಯ 90 ಎಂಟಿ ಎಲ್ಎಂಒ ಹೊತ್ತು(5 ಟ್ಯಾಂಕರ್ ಗಳು) ಬೊಕಾರೊ(ಜಾರ್ಖಂಡ್)ದಿಂದ ಹೊರಟಿದ್ದು, ಲಖನೌ(ಉತ್ತರ ಪ್ರದೇಶದತ್ತ ಸಾಗಿದ್ದು, ಆ ರೈಲು ನಾಳೆ ಮುಂಜಾನೆ ಲಖನೌ ತಲುಪುವ ಸಾಧ್ಯತೆ ಇದೆ.

ಮತ್ತೊಂದು ಆಕ್ಸಿಜನ್ ಟ್ಯಾಂಕರ್ ಗಳನ್ನು ಹೊತ್ತ ಖಾಲಿ ರೇಕ್ ಲಖನೌದಿಂದ ಬೊಕಾರೊಗೆ ನಿರ್ಗಮಿಸಲಿದ್ದು, ಅದು ಹೆಚ್ಚು ಆಕ್ಸಿಜನ್ ಟ್ಯಾಂಕರ್ ಗಳನ್ನು ತರಲಿದೆ.

ರೈಲ್ವೆ ಎಲ್ಲಾ ರಾಜ್ಯ ಸರ್ಕಾರಗಳ ಮನವಿಗಳಿಗೆ ಸ್ಪಂದಿಸುತ್ತಿದೆ ಮತ್ತು ಹೆಚ್ಚುವರಿ ಆಕ್ಸಿಜನ್ ರೈಲುಗಳ ಅಗತ್ಯತೆಗಳನ್ನು ಪೂರೈಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.   

***


(Release ID: 1714235) Visitor Counter : 185