ಪ್ರಧಾನ ಮಂತ್ರಿಯವರ ಕಛೇರಿ
ಹವಾಮಾನ ಕುರಿತ ನಾಯಕರ ಶೃಂಗಸಭೆ (22-23, ಏಪ್ರಿಲ್ 2021)
Posted On:
21 APR 2021 5:10PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಮೆರಿಕದ ಅಧ್ಯಕ್ಷರಾದ ಜೋಸೆಫ್ ಆರ್. ಬೈಡೆನ್ ಅವರ ಆಹ್ವಾನದ ಮೇರೆಗೆ 2021ರ ಏಪ್ರಿಲ್ 22-23ರಂದು ವರ್ಚುವಲ್ ರೂಪದಲ್ಲಿ ನಡೆಯಲಿರುವ ಹವಾಮಾನ ಕುರಿತ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿ ಅವರು 2021ರ ಏಪ್ರಿಲ್ 22ರಂದು ಭಾರತೀಯ ಕಾಲಮಾನ ಸಂಜೆ 5.30 ರಿಂದ 7.30ರ ವರೆಗೆ ನಡೆಯಲಿರುವ ನಾಯಕರ ಒಂದನೇ ಗೋಷ್ಠಿಯಲ್ಲಿ “2030ರತ್ತ ನಮ್ಮ ಸಾಮೂಹಿಕ ಓಟ’’ ಕುರಿತು ಮಾತನಾಡುವರು.
ಶೃಂಗಸಭೆಯಲ್ಲಿ ಸುಮಾರು 40 ಇತರ ಜಾಗತಿಕ ನಾಯಕರು ಭಾಗವಹಿಸಲಿದ್ದಾರೆ. ಅವರು ತಮ್ಮ ತಮ್ಮ ದೇಶಗಳನ್ನು ಪ್ರತಿನಿಧಿಸಲಿದ್ದು, ಅವೆಲ್ಲಾ ಪ್ರಮುಖ ಆರ್ಥಿಕ ವೇದಿಕೆಯ ಸದಸ್ಯ ರಾಷ್ಟ್ರಗಳಾಗಿವೆ(ಭಾರತ ಕೂಡ ಅದರ ಸದಸ್ಯ) ಮತ್ತು ಅವೆಲ್ಲಾ ಹವಾಮಾನ ವೈಪರೀತ್ಯಕ್ಕೆ ಗುರಿಯಾಗಿವೆ. ಹವಾಮಾನ ವೈಪರೀತ್ಯ, ಹವಾಮಾನ ವೈಪರೀತ್ಯ ತಡೆಗೆ ಕೈಗೊಳ್ಳಲಿರುವ ಕ್ರಮಗಳು, ಹವಾಮಾನ ವೈಪರೀತ್ಯ ತಡೆಗೆ ಹಣಕಾಸು ಕ್ರೂಢೀಕರಣ, ಪ್ರಕೃತಿ ಆಧಾರಿತ ಪರಿಹಾರಗಳು, ಹವಾಮಾನ ಸುರಕ್ಷತೆ ಮತ್ತು ಶುದ್ಧ ಇಂಧನಕ್ಕಾಗಿ ತಾಂತ್ರಿಕ ಅನ್ವೇಷಣೆಗಳ ಕುರಿತು ನಾಯಕರು ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.
ಅಲ್ಲದೆ ನಾಯಕರು, ರಾಷ್ಟ್ರೀಯ ಸನ್ನಿವೇಶಗಳು ಮತ್ತು ಸುಸ್ಥಿರ ಅಭಿವೃದ್ಧಿ ಆದ್ಯತೆಗಳನ್ನು ಗೌರವಿಸುವಾಗ ಹವಾಮಾನ ಕ್ರಿಯೆಯನ್ನು ಹೇಗೆ ಅಂತರ್ಗತ ಮತ್ತು ಸ್ಥಿತಿ ಸ್ಥಾಪಕತ್ವ ಆರ್ಥಿಕ ಅಭಿವೃದ್ಧಿಯೊಂದಿಗೆ ಹೊಂದಿಸಬಹುದು ಎಂಬ ಕುರಿತು ಸಮಾಲೋಚನೆ ನಡೆಸುವರು.
2021ರ ನವೆಂಬರ್ ನಲ್ಲಿ ನಡೆಯಲಿರುವ ಸಿಒಪಿ26 ಶೃಂಗಕ್ಕೆ ಪೂರ್ವಭಾವಿಯಾಗಿ ಹವಾಮಾನ ಕುರಿತ ವಿಚಾರಗಳಿಗೆ ಒತ್ತು ನೀಡಿ, ನಡೆಸುತ್ತಿರುವ ಜಾಗತಿಕ ಸರಣಿ ಸಭೆಗಳ ಭಾಗ ಈ ಶೃಂಗಸಭೆಯಾಗಿದೆ.
ಎಲ್ಲಾ ಗೋಷ್ಠಿಗಳನ್ನು ಲೈವ್ ಸ್ಟ್ರೀಮ್ ಮಾಡಲಾಗುವುದು ಮತ್ತು ಮಾಧ್ಯಮ ಹಾಗೂ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.
***
(Release ID: 1713288)
Visitor Counter : 217
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam