ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

13 ಕೋಟಿಗಿಂತಲೂ ಹೆಚ್ಚು ಲಸಿಕಾ ವ್ಯಾಪ್ತಿಯೊಂದಿಗೆ ಭಾರತದ ಹೊಸ ಹೆಗ್ಗುರುತು


ಕಳೆದ 24 ಗಂಟೆಗಳಲ್ಲಿ 29 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ

ಹೊಸ ಪ್ರಕರಣಗಳಲ್ಲಿ 76%ರಷ್ಟು 10 ರಾಜ್ಯಗಳಿಂದ ವರದಿಯಾಗುತ್ತಿವೆ

Posted On: 21 APR 2021 12:23PM by PIB Bengaluru

ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನದ ಭಾಗವಾಗಿ ದೇಶದಲ್ಲಿ ನೀಡಲಾದ ಕೋವಿಡ್-19 ಪ್ರತಿರೋಧಕ ಲಸಿಕೆ ಡೋಸ್‌ಗಳ ಒಟ್ಟು ಸಂಖ್ಯೆ ಇಂದು 13 ಕೋಟಿ  ದಾಟಿದೆ.

ಒಟ್ಟಾರೆಯಾಗಿ, ಇಂದು ಬೆಳಿಗ್ಗೆ 7 ಗಂಟೆಯವರೆಗಿನ ವರದಿಯ ಪ್ರಕಾರ 19,01,413 ಸೆಷನ್‌ಗಳ ಮೂಲಕ 13,01,19,310   ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.  1ನೇ ಡೋಸ್ ತೆಗೆದುಕೊಂಡ 92,01,728  ಆರೋಗ್ಯ ಕಾರ್ಯಕರ್ತರು, (ಎಚ್‌ಸಿಡಬ್ಲ್ಯೂ)  ಮತ್ತು 2ನೇ ಡೋಸ್ ತೆಗೆದುಕೊಂಡ 58,17,262  ಆರೋಗ್ಯ ಕಾರ್ಯಕರ್ತರು;  1ನೇ ಡೋಸ್ ಪಡೆದ 1,15,62,535  ಫ್ರಂಟ್‌ಲೈನ್‌ ವರ್ಕರ್‌ಗಳು,  2ನೇ ಡೋಸ್ ಪಡೆದ 58,55,821 ಫ್ರಂಟ್‌ಲೈನ್‌ ವರ್ಕರ್‌ಗಳು;  1ನೇ ಡೋಸ್ ಪಡೆದ 4,73,55,942  ಮಂದಿ 60 ವರ್ಷ ಮೀರಿದ ವಯೋಮಾನದ ಫಲಾನುಭವಿಗಳು ಮತ್ತು 2ನೇ ಡೋಸ್‌ ಪಡೆದ  53,04,679 ಮಂದಿ 60 ವರ್ಷ ಮೀರಿದ ಫಲಾನುಭವಿಗಳು; 1ನೇ ಡೋಸ್ ಪಡೆದ 45 ರಿಂದ 60  ವರ್ಷ ವಯಸ್ಸಿನ 4,35,25,687  ಫಲಾನುಭವಿಗಳು ಮತ್ತು 2ನೇ ಡೋಸ್‌ ಪಡೆದ ಇದೇ ವಯೋಮಾನದ  14,95,656  ಫಲಾನುಭವಿಗಳು ಇದರಲ್ಲಿ ಸೇರಿದ್ದಾರೆ.

ಆರೋಗ್ಯ ಕಾರ್ಯಕರ್ತರು

ಫ್ರಂಟ್‌ಲೈನ್‌ ವರ್ಕರ್‌ಗಳು

45 ರಿಂದ  60  ವರ್ಷ ವಯೋಮಾನದವರು

60 ವರ್ಷ ಮೀರಿದ ವಯೋಮಾನದವರು

 

ಒಟ್ಟು

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

92,01,728

58,17,262

1,15,62,535

58,55,821

4,35,25,687

14,95,656

4,73,55,942

53,04,679

13,01,19,310

ದೇಶದಲ್ಲಿ ಇಲ್ಲಿಯವರೆಗೆ ನೀಡಲಾದ ಒಟ್ಟು ಡೋಸ್‌ಗಳಲ್ಲಿ ಎಂಟು ರಾಜ್ಯಗಳ ಪಾಲು 59.25% ರಷ್ಟಿದೆ.

ಅಗ್ರ 8 ರಾಜ್ಯಗಳಲ್ಲಿ ನೀಡಲಾದ ಲಸಿಕೆ ಡೋಸ್‌ಗಳನ್ನು ಈ ಕೆಳಗಿನ ಕೋಷ್ಟಕವು ಸೂಚಿಸುತ್ತದೆ.

ಕಳೆದ 24 ಗಂಟೆಗಳಲ್ಲಿ 29 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ಗಳನ್ನು ನೀಡಲಾಗಿದೆ.

ಲಸಿಕಾ ಅಭಿಯಾನದ 95ನೇ ದಿನದಂದು (ಏಪ್ರಿಲ್‌ 20, 2021) 29,90,197 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.  42,384 ಸೆಷನ್‌ಗಳಲ್ಲಿ 19,86,711 ಫಲಾನುಭವಿಗಳು 1ನೇ ಡೋಸ್ ಲಸಿಕೆಯನ್ನು ಮತ್ತು  10,03,486 ಫಲಾನುಭವಿಗಳು 2ನೇ ಡೋಸ್  ಲಸಿಕೆಯನ್ನು ಪಡೆದಿದ್ದಾರೆ.

ದಿನಾಂಕ: 20 ಏಪ್ರಿಲ್2021  (ದಿನ-95)

ಆರೋಗ್ಯ ಕಾರ್ಯಕರ್ತರು

ಫ್ರಂಟ್‌ಲೈನ್‌ ವರ್ಕರ್‌ಗಳು

45ರಿಂದ 60 ವರ್ಷ ವಯೋಮಾನದವರು

60 ವರ್ಷ ಮೀರಿದ ವಯೋಮಾನದವರು

ಒಟ್ಟು ಸಾಧನೆ

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

31,011

49,605

1,29,803

1,69,213

11,52,918

1,84,590

6,72,979

6,00,078

19,86,711

10,03,486

                     

ಕಳೆದ 24 ಗಂಟೆಗಳಲ್ಲಿ2,95,041  ಹೊಸ ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ಕೇರಳ, ಛತ್ತೀಸ್‌ಗಢ, ಮಧ್ಯಪ್ರದೇಶ,  ತಮಿಳುನಾಡು, ಗುಜರಾತ್  ಮತ್ತು ರಾಜಸ್ಥಾನ ಸೇರಿದಂತೆ ಹತ್ತು ರಾಜ್ಯಗಳಿಂದ 76. 32%  ರಷ್ಟು ಹೊಸ ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಇದುವರೆಗಿನ ಗರಿಷ್ಠ 62,097 ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ. 29,574 ಪ್ರಕರಣಳು ವರದಿಯಾಗುವುದರೊಂದಿಗೆ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದರೆ, 28,395 ಹೊಸ ಪ್ರಕರಣಗಳೊಂದಿಗೆ ದೆಹಲಿ ನಂತರದ ಸ್ಥಾನದಲ್ಲಿದೆ.

ಕಳಗೆ ತೋರಿಸಿರುವಂತೆ ಹನ್ನೆರಡು ರಾಜ್ಯಗಳಲ್ಲಿ ಸೋಂಕು ಏರುಮುಖ ಪಥದಲ್ಲಿದೆ.

 

 

ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಹೊರೆ 21,57,538ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿರುವ 13.82% ಒಟ್ಟು ಪಾಸಿಟಿವ್‌ ಪ್ರಕರಣಗಳನ್ನು ಇದು ಒಳಗೊಂಡಿದೆ. ಕಳೆದ 24 ಗಂಟೆಗಳಲ್ಲಿ ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಹೊರೆಯಲ್ಲಿ 1,25,561 ಪ್ರಕರಣಗಳ ನಿವ್ವಳ ಇಳಿಕೆಯಾಗಿದೆ.

ಭಾರತದ ಒಟ್ಟು  ಸಕ್ರಿಯ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಛತ್ತೀಸ್‌ಗಢ,  ಉತ್ತರ ಪ್ರದೇಶ,  ಕರ್ನಾಟಕ  ಮತ್ತು ಕೇರಳ ಈ ಐದು ರಾಜ್ಯಗಳು ಒಟ್ಟು  60.86% ಪಾಲನ್ನು ಹೊಂದಿವೆ.

 

 

ಭಾರತದಲ್ಲಿ ಒಟ್ಟು ಚೇತರಿಕೆ ಪ್ರಕರಣಗಳ ಸಂಖ್ಯೆ ಇಂದು 1,32,76,039ಕ್ಕೆ ತಲುಪಿದೆ. ರಾಷ್ಟ್ರೀಯ ಚೇತರಿಕೆ ದರ 85. 01% ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ 1,67,457  ಚೇತರಿಕೆ ಪ್ರಕರಣಗಳು ವರದಿಯಾಗಿವೆ.

ರಾಷ್ಟ್ರೀಯ ಮರಣ ದರವು ಕುಸಿಯುತ್ತಿದ್ದು, ಪ್ರಸ್ತುತ 1.17% ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ2,023  ಸಾವುಗಳು ವರದಿಯಾಗಿವೆ.

ದೇಶದ ಒಟ್ಟು ಹೊಸ ಸಾವುಗಳ ಪೈಕಿ ಹತ್ತು ರಾಜ್ಯಗಳು 82. 6%  ಪಾಲು ಹೊಂದಿವೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವುಗಳು (519)ಸಂಭವಿಸಿವೆ.  ದೆಹಲಿಯು 277 ಮಂದಿ ಸಾವಿನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಒಂಬತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಕೋವಿಡ್-19 ಸಾವುಗಳು ವರದಿಯಾಗಿಲ್ಲ. ಅವುಗಳೆಂದರೆ ಡಿಯು ಮತ್ತು ಡಮನ್‌, ಮೇಘಾಲಯ, ತ್ರಿಪುರ, ಸಿಕ್ಕಿಂ, ಮಿಜೋರಾಂ, ಲಕ್ಷದ್ವೀಪ, ನಾಗಾಲ್ಯಾಂಡ್‌, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಮತ್ತು ಅರುಣಾಚಲ ಪ್ರದೇಶ.

***


(Release ID: 1713222) Visitor Counter : 253