ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

12.38 ಕೋಟಿ ದಾಟಿದ ಭಾರತದ ಸಮಗ್ರ ಲಸಿಕಾ ವ್ಯಾಪ್ತಿ

ಹೊಸ ಪ್ರಕರಣಗಳಲ್ಲಿ 79% ರಷ್ಟು 10 ರಾಜ್ಯಗಳಿಂದ ವರದಿಯಾಗುತ್ತಿವೆ

 ರಾಷ್ಟ್ರೀಯ ಮರಣ ದರ ಮತ್ತಷ್ಟು ಕುಸಿದು, ಶೇ. 1.19ಕ್ಕೆ ತಲುಪಿದೆ

 ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ವಿಮಾ ಪಾಲಿಸಿ ಕ್ಲೇಮುಗಳ ಇತ್ಯರ್ಥವನ್ನು 2021ರ ಏಪ್ರಿಲ್ 24 ರವರೆಗೆ ಮುಂದುವರಿಸಲಾಗುವುದು, ಆ ಬಳಿಕ ಕೋವಿಡ್ ಯೋಧರಿಗೆ ಹೊಸ ವಿಮಾ ಪಾಲಿಸಿ ಜಾರಿಯಾಗಲಿದೆ

Posted On: 19 APR 2021 10:53AM by PIB Bengaluru

ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನದ ಭಾಗವಾಗಿ ದೇಶದಲ್ಲಿ ನೀಡಲಾದ ಕೋವಿಡ್-19 ಪ್ರತಿರೋಧಕ ಲಸಿಕೆ ಡೋಸ್‌ಗಳ ಒಟ್ಟು ಸಂಖ್ಯೆ ಇಂದು12.38 ಕೋಟಿ ದಾಟಿದೆ.

ಒಟ್ಟಾರೆಯಾಗಿ, ಇಂದು ಬೆಳಗ್ಗೆ 7ಗಂಟೆಯವರೆಗಿನ ವರದಿಯ ಪ್ರಕಾರ, 18,37,373 ಸೆಷನ್‌ಗಳ ಮೂಲಕ 12,38,52,566 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇವುಗಳಲ್ಲಿ 1ನೇ ಡೋಸ್ ತೆಗೆದುಕೊಂಡ 91,36,134 ಆರೋಗ್ಯ ಕಾರ್ಯಕರ್ತರು, 2ನೇ ಡೋಸ್ ಪಡೆದ 57,20,048 ಆರೋಗ್ಯ ಕಾರ್ಯಕರ್ತರು, 1ನೇ ಡೋಸ್‌ ಪಡೆದ   1,12,63,909 ಫ್ರಂಟ್‌ಲೈನ್‌ ವರ್ಕರ್ಸ್‌,  2ನೇ ಡೋಸ್‌ ಪಡೆದ 55,32,396 ಫ್ರಂಟ್‌ಲೈನ್‌ ವರ್ಕರ್ಸ್‌; 60 ವರ್ಷಕ್ಕೂ ಮೇಲ್ಪಟ್ಟ ವಯೋಮಾನದ 1ನೇ ಡೋಸ್‌ ಪಡೆದ 459,05,265 ಫಲಾನುಭವಿಗಳು ಮತ್ತು ಇದೇ ವರ್ಗದಲ್ಲಿ 2ನೇ ಡೋಸ್‌ ಪಡೆದ 40,90,388  ಫಲಾನುಭವಿಗಳು ಹಾಗೂ  45 ರಿಂದ 60 ವರ್ಷ ವಯೋಮಾನದ 4,10,66,462(1ನೇ  ಡೋಸ್) ಮತ್ತು 11,37,964(2ನೇ  ಡೋಸ್) ಫಲಾನುಭವಿಳು ಸೇರಿದ್ದಾರೆ.

ಆರೋಗ್ಯ ಕಾರ್ಯಕರ್ತರು

ಫ್ರಂಟ್ಲೈನ್ವರ್ಕರ್ಗಳು

45 ರಿಂದ 60 ವರ್ಷಗಳ ವಯೋಮಾನದವರು

60 ವರ್ಷ ಮೀರಿದ ವಯೋಮಾನದವರು

 

ಒಟ್ಟು

1ನೇ ಡೋಸ್

2ನೇ  ಡೋಸ್

1ನೇ  ಡೋಸ್

2ನೇ ಡೋಸ್

1ನೇ  ಡೋಸ್

2ನೇ  ಡೋಸ್

1 ನೇ ಡೋಸ್

2ನೇ  ಡೋಸ್

91,36,134

57,20,048

1,12,63,909

55,32,396

4,10,66,462

11,37,964

4,59,05,265

40,90,388

12,38,52,566

ದೇಶದಲ್ಲಿ ಇದುವರೆಗೂ ನೀಡಲಾದ ಒಟ್ಟು ಡೋಸ್‌ಗಳಲ್ಲಿ ಎಂಟು ರಾಜ್ಯಗಳ ಪಾಲು ಶೇ. 59.42% ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ 12 ಲಕ್ಷಕ್ಕೂ ಅಧಿಕ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

ಲಸಿಕೆ ಅಭಿಯಾನದ 93ನೇ ದಿನವಾದ ಏಪ್ರಿಲ್ 18, 2021ರಂದು 12,30,007 ಲಸಿಕೆ ಡೋಸ್‌ಗಳನ್ನು ನೀಡಲಾಯಿತು. 1ನೇ ಡೋಸ್‌ಗಾಗಿ ನಡೆಸಲಾದ 21,905 ಸೆಷನ್‌ಗಳಲ್ಲಿ 9,40,725 ಫಲಾನುಭವಿಗಳು ಲಸಿಕೆ ಪಡದರೆ, 2,89,282 ಫಲಾನುಭವಿಗಳು 2ನೇ  ಡೋಸ್ ಲಸಿಕೆಯನ್ನು ಪಡೆದುಕೊಂಡರು.

 

ದಿನಾಂಕ: 18  ಏಪ್ರಿಲ್2021 (ದಿನ-93)

ಆರೋಗ್ಯ ಕಾರ್ಯಕರ್ತರು

ಫ್ರಂಟ್ಲೈನ್ವರ್ಕರ್ಗಳು

45 ರಿಂದ 60 ವರ್ಷಗಳ ವಯೋಮಾನದವರು

60 ವರ್ಷ ಮೀರಿದ ವಯೋಮಾನದವರು

ಒಟ್ಟು ಸಾಧನೆ

1ನೇ ಡೋಸ್

2ನೇ  ಡೋಸ್

1ನೇ ಡೋಸ್

2ನೇ  ಡೋಸ್

1ನೇ ಡೋಸ್

2ನೇ  ಡೋಸ್

1ನೇ ಡೋಸ್

2ನೇ  ಡೋಸ್

1ನೇ ಡೋಸ್

2ನೇ  ಡೋಸ್

8,000

11,825

30,513

22,158

5,91,469

56,205

3,10,743

1,99,094

9,40,725

2,89,282

ಭಾರತದ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಕಳೆದ 24 ಗಂಟೆಗಳಲ್ಲಿ 2,73,810 ಹೊಸ ಪ್ರಕರಣಗಳು ದಾಖಲಾಗಿವೆ.

ಹೊಸ ಪ್ರಕರಣಗಳಲ್ಲಿ ಶೇ.78.58ರಷ್ಟು ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ಕೇರಳ, ಛತ್ತೀಸ್‌ಗಢ, ಮಧ್ಯಪ್ರದೇಶ, ತಮಿಳುನಾಡು, ಗುಜರಾತ್ ಮತ್ತು ರಾಜಸ್ಥಾನ ಸೇರಿದಂತೆ ಹತ್ತು ರಾಜ್ಯಗಳಿಂದ ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಇದುವರೆಗಿನ ಅತ್ಯಧಿಕ ದೈನಂದಿನ ದಾಖಲೆ 68,631 ಹೊಸ ಪ್ರಕರಣಗಳು ವರದಿಯಾಗಿವೆ. 30,566 ಪ್ರಕರಣಗಳೊಂದಿಗೆ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದರೆ, 25,462 ಪ್ರಕರಣಗಳೊಂದಿಗೆ ದೆಹಲಿಯಲ್ಲಿಆ ನಂತರದ ಸ್ಥಾನದಲ್ಲಿದೆ.

ಕೆಳಗಿನ ಕೋಷ್ಠಕಗಳಲ್ಲಿ ತೋರಿಸಿರುವಂತೆ, ಇಪ್ಪತ್ತು ರಾಜ್ಯಗಳಲ್ಲಿ ದೈನಂದಿನ ಹೊಸ ಪ್ರಕರಣಗಳ ಪಥ ಏರುಮುಖವಾಗಿದೆ.

 

 

 

 

ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಹೊರೆ 19,29,329 ತಲುಪಿದ್ದು, ಇದು ಪ್ರಸ್ತುತ ದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳಲ್ಲಿ ಶೇ. 12.81% ರಷ್ಟನ್ನು ಸೂಚಿಸುತ್ತದೆ. ಕಳೆದ 24 ಗಂಟೆಗಳಲ್ಲಿ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 1,28,013 ಪ್ರಕರಣಗಳ ನಿವ್ವಳ ಇಳಿಕೆ ದಾಖಲಾಗಿದೆ.

ಕೆಳಗಿನ ನಕ್ಷೆಯು ಭಾರತದಲ್ಲಿ ಸಕ್ರಿಯ ಪ್ರಕರಣಗಳ ಪಥವನ್ನು ಸೂಚಿಸುತ್ತದೆ.

ಮಹಾರಾಷ್ಟ್ರ, ಛತ್ತೀಸ್‌ಗಢ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಕೇರಳ ಐದು ರಾಜ್ಯಗಳು ಭಾರತದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 63.18% ರಷ್ಟನ್ನು ಹೊಂದಿದೆ.

ಭಾರತದಲ್ಲಿ ಚೇತರಿಕೆಯಾದ ಒಟ್ಟು ಪ್ರಕರಣಗಳ ಸಂಖ್ಯೆ ಇಂದು 1,29,53,321 ಇದ್ದು, ಪ್ರಸ್ತುತ ರಾಷ್ಟ್ರೀಯ ಚೇತರಿಕೆ ದರ ಶೇ. 86.00ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ 1,44,178  ಚೇತರಿಕೆ ಪ್ರಕರಣಗಳು ದಾಖಲಾಗಿವೆ.

ರಾಷ್ಟ್ರೀಯ ಮರಣ ದರವು ಕುಸಿಯುತ್ತಿದ್ದು, ಪ್ರಸ್ತುತ ಅದು 1.19% ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ 1,619 ಸಾವುಗಳು ವರದಿಯಾಗಿವೆ.

ಹೊಸ ಸಾವುಗಳಲ್ಲಿ ಹತ್ತು ರಾಜ್ಯಗಳ ಪಾಲು 85.11%  ರಷ್ಟಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವುಗಳು (503) ಸಂಭವಿಸಿವೆ. ಛತ್ತೀಸ್‌ಗಢವು 170 ದೈನಂದಿನ ಸಾವುಗಳೊಂದಿಗೆ ನಂತರದ ಸ್ಥಾನದಲ್ಲಿದೆ.

 

ಕಳೆದ 24 ಗಂಟೆಗಳಲ್ಲಿ ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಕೋವಿಡ್-19 ಸಾವುಗಳು ಸಂಭವಿಸಿಲ್ಲ. ಅವುಗಳೆಂದರೆ ಲದಾಖ್ (ಕೇಂದ್ರಾಡಳಿತ ಪ್ರದೇಶ), ಡಿಯು ಮತ್ತು ಡಮನ್‌ ಹಾಗೂ ದಾದ್ರಾ ಮತ್ತು ನಗರ್‌ ಹವೇಲಿ, ತ್ರಿಪುರ, ಸಿಕ್ಕಿಂ, ಮಿಜೋರಾಂ, ಮಣಿಪುರ, ಲಕ್ಷದ್ವೀಪ, ನಾಗಾಲ್ಯಾಂಡ್, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಹಾಗೂ ಅರುಣಾಚಲ ಪ್ರದೇಶ.

ʻಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ʼ (ಪಿಎಂಜಿಕೆಪಿ) ಅನ್ನು ಮಾರ್ಚ್ 2020 ರಂದು ಘೋಷಿಸಲಾಯಿತು ಹಾಗೂ 2021ರ ಏಪ್ರಿಲ್ 24ರವರೆಗೆ ಮೂರು ಬಾರಿ ವಿಸ್ತರಿಸಲಾಗಿದೆ. ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷತಾ ಜಾಲವನ್ನು ಒದಗಿಸಲು ಇದನ್ನು ಪ್ರಾರಂಭಿಸಲಾಗಿದ್ದು,  ಕೋವಿಡ್-19ನಿಂದ ಯಾವುದೇ ಅನಾಹುತ ಉಂಟಾದಲ್ಲಿ, ಅಂತಹ ಕುಟುಂಬಗಳಿಗೆ ಇದರ ಅಡಿಯಲ್ಲಿ ರಕ್ಷಣೆ ಒದಗಿಸಲಾಗುತ್ತದೆ. ʻಪಿಎಂಕೆಜಿಪಿʼ ಯೋಜನೆಯಡಿ 50 ಲಕ್ಷ ರೂ.ಗಳ ವಿಮೆ ನೀಡಲಾಗುತ್ತಿದೆ. ಕೋವಿನಿಂದ ಪ್ರಾಣ ಕಳೆದುಕೊಂಡ ಕೊರೊನಾ ಯೋಧರನ್ನು ಅವಲಂಬಿಸಿದವರಿಗೆ ಸುರಕ್ಷತಾ ಜಾಲವನ್ನು ಇದು ಒದಗಿಸಿದೆ.

ವಿಮಾ ಕಂಪನಿಯು ಇದುವರೆಗೂ 287 ಕ್ಲೇಮುಗಳನ್ನು ಪಾವತಿಸಿದೆ. ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವಲ್ಲಿ ಯೋಜನೆಯು ನಿರ್ಣಾಯಕ ಪಾತ್ರವನ್ನು ವಹಿಸಿದೆ.

ಕೋವಿಡ್ ಯೋಧರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ವಿಮಾ ಪಾಲಿಸಿ ಕ್ಲೇಮುಗಳನ್ನು ಏಪ್ರಿಲ್ 24, 2021ರವರೆಗೆ ಇತ್ಯರ್ಥಗೊಳಿಸಲಾಗುವುದು, ನಂತರ ಕೋವಿಡ್ ಯೋಧರಿಗೆ ಹೊಸ ವಿಮಾ ಪಾಲಿಸಿ ಜಾರಿಗೆ ಬರಲಿದೆ.

***(Release ID: 1712655) Visitor Counter : 72