ಗೃಹ ವ್ಯವಹಾರಗಳ ಸಚಿವಾಲಯ

ನಾಗಾ ಗುಂಪಿನ ಜೊತೆಗಿನ ಕದನ ವಿರಾಮ ವಿಸ್ತರಣೆ

Posted On: 12 APR 2021 4:32PM by PIB Bengaluru

ಭಾರತ ಸರ್ಕಾರ ಮತ್ತು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಎನ್ ಎಸ್ ಸಿಎನ್/ಎನ್ ಕೆ), ನ್ಯಾಷನಲ್  ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್/ರಿಫಾರ್ಮೇಷನ್ (ಎನ್ ಎನ್ ಸಿಎನ್/ಆರ್) ಮತ್ತು ನ್ಯಾಷನ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್/ಕೆ-ಖಾಂಗೋ (ಎನ್ ಎಸ್ ಸಿಎನ್/ಕೆ-ಖಾಂಗೋ) ನಡುವೆ ಕದನ ವಿರಾಮ ಒಪ್ಪಂದ ಜಾರಿಯಲ್ಲಿದೆ.

ಈ ಕದನ ವಿರಾಮವನ್ನು ಎನ್ ಎಸ್ ಸಿಎನ್/ಎನ್ ಕೆ ಮತ್ತು ಎನ್ಎಸ್ ಸಿಎನ್/ಆರ್ ಜೊತೆ 2021ರ ಏಪ್ರಿಲ್ 28ರಿಂದ ಅನ್ವಯವಾಗುವಂತೆ 2022ರ ಏಪ್ರಿಲ್ 27ರ ವರೆಗೆ ಮತ್ತು ಎನ್ಎಸ್ ಸಿಎನ್/ಕೆ-ಖಾಂಗೋ ಜೊತೆ 2021ರ ಏಪ್ರಿಲ್ 18ರಿಂದ 2022ರ ಏಪ್ರಿಲ್ 17ರ ವರೆಗೆ ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡಲಾಗಿದೆ. ಈ ಒಪ್ಪಂದಗಳಿಗೆ 2021ರ ಏಪ್ರಿಲ್ 12ರಂದು ಸಹಿ ಹಾಕಲಾಯಿತು.

***


(Release ID: 1711809) Visitor Counter : 261