ಪ್ರಧಾನ ಮಂತ್ರಿಯವರ ಕಛೇರಿ

“ರೈಸಿನಾ ಡೈಲಾಗ್ 2021” ರ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಮಂತ್ರಿ ಭಾಷಣ

Posted On: 13 APR 2021 8:33PM by PIB Bengaluru

ಗೌರವಾನ್ವಿತರೆ!

ಸ್ನೇಹಿತರೆ, ನಮಸ್ಕಾರ

ಈ ಬಾರಿಯ ರೈಸಿನಾ ಡೈಲಾಗ್ಆವೃತ್ತಿ ಮಾನವೀಯ ಇತಿಹಾಸದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ.  ಜಾಗತಿಕ ಸಾಂಕ್ರಾಮಿಕ ರೋಗ ಕಳೆದೊಂದು ವರ್ಷದಿಂದ ಜಗತ್ತನ್ನು ಹಾಳು ಮಾಡುತ್ತಿದೆ. ಒಂದು ಶತಮಾನದ ಹಿಂದೆ ಇಂತಹ ಕೊನೆಯ ಜಾಗತಿಕ ಸಾಂಕ್ರಾಮಿಕ ವ್ಯಾದಿ ಕಾಣಿಸಿಕೊಂಡಿತ್ತು. ನಂತರದ ಅವಧಿಯಲ್ಲಿ ಮಾನವೀಯ ಜಗತ್ತಿನಲ್ಲಿ ಹಲವಾರು ಸೋಂಕಿನ ರೋಗಗಳು ತಲೆಎತ್ತಿತ್ತು. ಜಗತ್ತು ಕೋವಿಡ್ 19 ಸೋಂಕು ನಿಭಾಯಿಸಲು ಇಂದು ಸಂಪೂರ್ಣವಾಗಿ ಸಿದ್ಧವಾಗಿಲ್ಲ.

ನಮ್ಮ ವಿಜ್ಞಾನಿಗಳು, ಸಂಶೋಧಕರು ಮತ್ತು ಕೈಗಾರಿಕಾ ವಲಯ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

·     ಏನಿದು ವೈರಾಣು?

·     ಹೇಗೆ ಇದು ಹರಡಿತು?

·     ಇದನ್ನು ಹೇಗೆ ನಿಧಾನಗೊಳಿಸಬಹುದು?

·     ನಾವು ಲಸಿಕೆ ಸಿದ್ಧಪಡಿಸುವುದು ಹೇಗೆ?

·     ಲಸಿಕೆಯನ್ನು ನಾವು ತ್ವರಿತವಾಗಿ ಮತ್ತು ವೇಗವಾಗಿ ಹೇಗೆ ನೀಡಬಹುದು?

ಇವು ಮತ್ತು ಇತರ ಹಲವು ಪ್ರಶ್ನೆಗಳಿಗೆ ಹಲವಾರು ಪರಿಹಾರಗಳು ಹೊರ ಹೊಮ್ಮಿವೆ ಮತ್ತು ನಿಸ್ಸಂದೇಹವಾಗಿ ಇನ್ನೂ ಹಲವು ಬರಬೇಕಿವೆ.  ನಾಯಕರು ಇನ್ನೂ ಹಲವು ಪ್ರಶ್ನೆಗಳನ್ನು ಕೇಳಿಕೊಳ‍್ಳಬೇಕು. 

ಒಂದು ವರ್ಷದಿಂದ ನಮ್ಮ ಸಮಾಜದ ಉತ್ತಮ ಮನಸ್ಸುಗಳು ಈ ಸಾಂಕ್ರಾಮಿಕ ರೋಗ ಎದುರಿಸುವಲ್ಲಿ ತೊಡಗಿವೆ. ಜಗತ್ತಿನ ಎಲ್ಲಾ ಸರ್ಕಾರಗಳು ಎಲ್ಲಾ ಹಂತಗಳಲ್ಲೂ ಸೋಂಕು ನಿಯಂತ್ರಿಸಿ ನಿಭಾಯಿಸುವಲ್ಲಿ ತೊಡಗಿವೆ. ಈ ಸೋಂಕು ಏಕೆ ಬಂತು?. ಬಹುಶಃ ಆರ್ಥಿಕಾಭಿವೃದ್ಧಿ ವೇಗದಲ್ಲಿ ಮಾನವೀಯತೆಯ ಕಲ್ಯಾಣದ ಕಾಳಜಿಯೂ ಇದರ ಹಿಂದಿರಬಹುದು.

ಬಹುಶಃ ಸ್ವರ್ಧಾತ್ಮಕ ಯುಗದಲ್ಲಿ ಸಹಕಾರ ಮನೋಭಾವನೆ ಮರೆತುಹೋಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಶ್ನೆಗಳಿಗೆ ನಾವು ಉತ್ತರ ಕಾಣಬಹುದು. ಸ್ನೇಹಿತರೆ ಮೊದಲ ಮತ್ತು ಎರಡನೇ ವಿಶ್ವಯುದ್ಧದ ಭೀಕರತೆಯ ನಂತರ ಹೊಸ ಜಗತ್ತಿನ ಕ್ರಮಾಂಕ ಹೊರ ಹೊಮ್ಮಲು ಕಾರಣವಾಯಿತು. ಎರಡನೇ ವಿಶ್ವ ಯುದ್ಧದ ನಂತರದ ಕೆಲವು ದಶಕಗಳಲ್ಲಿ ಎರಡು ವಿಶ್ವ ಯುದ್ಧದ ನೆರಳಿನಲ್ಲಿ ಹಲವು ಚೌಕಟ್ಟು ಮತ್ತು ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಎರಡು ಯುದ್ಧಗಳ ಉತ್ತರ ಏನಾಗಿತ್ತು ಎಂದರೆ ಮೂರನೇ ವಿಶ್ವಯುದ್ಧವನ್ನು ತಡೆಯುವುದು ಹೇಗೆ ಎನ್ನುವುದೇ ಆಗಿತ್ತು. 

ಇಂದು ತಪ್ಪು ಪ್ರಶ್ನೆಯೊಂದನ್ನು ನಾನು ನಿಮ್ಮ ಮುಂದಿಡಲು ಸಲ್ಲಿಸಲು ಬಯಸುತ್ತೇನೆ. ಎಲ್ಲಾ ಕ್ರಮಗಳನ್ನು ತೆಗೆದುಕೊಂಡ ನಂತರವೂ ರೋಗಿಯ ರೋಗ ಲಕ್ಷಣಗಳಿಗೆ ಮೂಲ ಕಾರಣ ತಿಳಿಸದೇ ಚಿಕಿತ್ಸೆ ನೀಡುವ ಪರಿಸ್ಥಿತಿ ಇದೆ. ಅಥವಾ ತೆಗೆದುಕೊಂಡ ಎಲ್ಲಾ ಕ್ರಮಗಳು ಕೊನೆಯ ಯುದ್ಧವನ್ನು ತಡೆಯುವುದಾಗಿತ್ತು, ಮುಂದಿನ ಯುದ್ಧವಲ್ಲ. ವಾಸ್ತವವಾಗಿ ಮಾನವೀಯ ಜಗತ್ತು ಮೂರನೇ ಯುದ್ಧವನ್ನು ಎದುರಿಸಿಲ್ಲ. ಆದರೆ ಜನರ ಬದುಕಿನಲ್ಲಿ ಹಿಂಸಾಚಾರದ ಬೆದರಿಕೆ ಮಾತ್ರ ಕಡಿಮೆಯಾಗಿಲ್ಲ.  ಹಲವಾರು ಪರೋಕ್ಷ ಯುದ್ಧಗಳು ಮತ್ತು ಕೊನೆಯಿಲ್ಲದ ಭಯೋತ್ಪಾದಕ ದಾಳಿಯೊಂದಿಗೆ ಹಿಂಸಾಚಾರದ ನಿರೀಕ್ಷೆ ಮನಸ್ಸಿನಲ್ಲಿ ಎಂದಿಗೂ ಇರುತ್ತದೆ.

ಹಾಗಾದರೆ ಸರಿಯಾದ ಪ್ರಶ್ನೆ ಯಾವುದು?. ಅವರೆಲ್ಲರೂ ಸಹ ನಮ್ಮನ್ನು ಅನುಸರಿಸಬಹುದಿತ್ತು. ನಮ್ಮಲ್ಲಿ ಕ್ಷಾಮ ಮತ್ತು ಹಸಿವು ಯಾಕೆ?. ನಮ್ಮಲ್ಲಿ ಬಡತನ ಏಕೆ?. ಅಥವಾ ಅತ್ಯಂತ ಮೂಲಭೂತವಾಗಿ ಇಡೀ ಮನುಕುಲಕ್ಕೆ ಧಕ್ಕೆ ತರುವ ಸಮಸ್ಯೆಗಳನ್ನು ಪರಿಹರಿಸಲು ನಾವು ಏಕೆ ಸಹರಿಸಬಾರದು?.

ನನಗೆ ಗೊತ್ತಿದೆ ನಮ್ಮ ಚಿಂತನೆಗಳು ದೀರ್ಘಕಾಲದಿಂದ ಇದೇ ಹಾದಿಯಲ್ಲಿದ್ದಿದ್ದರೆ ವಿಭಿನ್ನ ಪರಿಹಾರಗಳು ಹೊರ ಹೊಮ್ಮುತ್ತದೆ ಎಂಬ ಖಾತ್ರಿಯಿದೆ.

ಸ್ನೇಹಿತರೆ!

ಈಗಲೂ ತುಂಬಾ ವಿಳಂಬವಾಗಿಲ್ಲ. ಕಳೆದ ಏಳು ದಶಕಗಳ ತಪ್ಪುಗಳು ಮತ್ತು ದುಷ್ಕೃತ್ಯಗಳು ಭವಿಷ್ಯದ ನಮ್ಮ ಆಲೋಚನೆಗಳನ್ನು ನಿರ್ಬಂಧಿಸಬೇಕಾಗಿಲ್ಲ. ಜಗತ್ತಿನ ವಿಧಾನಕ್ಕೆ ಮರು ವಿನ್ಯಾಸ ನೀಡಲು ಮತ್ತು ನಮ್ಮ ಆಲೋಚನೆಯನ್ನು ಮರುಹೊಂದಿಸಲು ಕೋವಿಡ್ 19 ಸಾಂಕ್ರಾಮಿಕ ನಮಗೆ ಒಂದು ಅವಕಾಶ ಕೊಟ್ಟಿದೆ. 

ಸಮಸ್ಯೆಗಳಿಗೆ ಇಂದು ಪರಿಹಾರ ಕಂಡುಕೊಳ್ಳಲು ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ನಾವು ಸೂಕ್ತ ವ್ಯವಸ್ಥೆಯನ್ನು ರೂಪುಗೊಳಿಸಬೇಕು. ಮತ್ತು ನಾವು ನಮ್ಮ ಗಡಿಯಲ್ಲಿರುವವರ ಬಗ್ಗೆ ಅಷ್ಟೇ ಅಲ್ಲ, ಇಡೀ ಮಾನವೀಯತೆಯ ಬಗ್ಗೆ ಯೋಚಿಸಬೇಕು. ಒಟ್ಟಾರೆ ನಮ್ಮ ಮಾನವೀಯತೆ ನಮ್ಮ ಆಲೋಚನೆ ಮತ್ತು ಕ್ರಿಯೆಯಲ್ಲಿರಬೇಕು. 

ಸ್ನೇಹಿತರೇ!

ಈ ಸಾಂಕ್ರಾಮಿಕ ಸಂದರ್ಭದಲ್ಲಿ ನಾವು ಭಾರತೀಯರು ನಮ್ಮದೇ ಆದ ವಿನಮ್ರ ರೀತಿಯಲ್ಲಿ ನಮ್ಮದೇ ಆದ ಸೀಮಿತ ಸಂಪನ್ಮೂಲಗಳ ನಡುವೆ ಮಾತುಕತೆ ನಡೆಯನ್ನು ಅನುಸರಿಸಲು ಪ್ರಯತ್ನಿಸಿದ್ದೇವೆ.  ನಮ್ಮ 1.3 ಶತಕೋಟಿ ನಾಗರಿಕರನ್ನು ಸಾಂಕ್ರಾಮಿಕದಿಂದ ರಕ್ಷಿಸಲು ಪ್ರಯತ್ನಿಸಿದ್ದೇವೆ. ಇದೇ ಸಮಯದಲ್ಲಿ ನಾವು ಇತರರ ಸಾಂಕ್ರಾಮಿಕ ನಿಯಂತ್ರಣ ಪ್ರಯತ್ನಗಳನ್ನು ಬೆಂಬಲಿಸಲು ಯತ್ನಿಸಿದ್ದೇವೆ. ನಮ್ಮ ನೆರೆ ಹೊರೆಯಲ್ಲಿ ಬಿಕ್ಕಟ್ಟು ಎದುರಿಸಲು ಪ್ರಾದೇಶಿಕ ಸಮನ್ವಯತೆ ಸಾಧಿಸಲು ನಾವು ಉತ್ತೇಜನ ನೀಡಿದ್ದೇವೆ. ಕಳೆದ ವರ್ಷ 150 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ನಾವು ಔಷಧಗಳನ್ನು, ರಕ್ಷಣಾ ಪರಿಕರಗಳನ್ನು ಹಂಚಿದ್ದೇವೆ. ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ ನಮ್ಮ ಪಾಸ್ ಪೋರ್ಟ್ ಬಣ್ಣವನ್ನು ಲೆಕ್ಕಿಸದೇ ಕಾರ್ಯನಿರ್ವಹಿಸದಿದ್ದರೆ ನಾವೆಲ್ಲರೂ ಎಲ್ಲಡೆಯೂ ಸಾಂಕ್ರಾಮಿಕ ರೋಗವನ್ನು ಸೋಲಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಈ ವರ್ಷ ಅನೇಕ ನಿರ್ಬಂಧಗಳ ಹೊರತಾಗಿಯೂ ನಾವು 80 ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಗಳನ್ನು ಪೂರೈಸಿದ್ದೇವೆ. ಲಸಿಕೆ ಪೂರೈಕೆ ಸಾಧಾರಣವಾಗಿದೆ ಎಂಬುದು ನಮಗೆ ಗೊತ್ತಿದೆ. ಆದರೂ ನಮಗೆ ಗೊತ್ತು ಬೇಡಿಕೆ ದೊಡ್ಡಮಟ್ಟದಲ್ಲಿದೆ. ಸಂಪೂರ್ಣ ಮನುಕುಲ ಲಸಿಕೆ ಪಡೆಯಲು ದೀರ್ಘಕಾಲ ತೆಗೆದುಕೊಳ್ಳುತ್ತದೆ ಎಂಬುದು ತಿಳಿದಿದೆ. ಇದೇ ಸಂದರ್ಭದಲ್ಲಿ ಭರವಸೆ ಅತಿ ಮುಖ್ಯವಾಗುತ್ತದೆ ಎಂಬುದರ ಅರಿವಿದೆ. ಜಗತ್ತಿನ ಶ್ರೀಮಂತ ರಾಷ್ಟ್ರಗಳ ನಾಗರಿಕರು ಕಡಿಮೆ ಅದೃಷ್ಟವಂತರು. ಸಾಂಕ್ರಾಮಿಕದ ವಿರುದ್ಧ ಹೋರಾಟ ಮಾಡಲು ಇಡೀ ಮನುಕುಲಕ್ಕೆ ನಮ್ಮ ಸಂಪನ್ಮೂಲ, ಅನುಭವ  ಮತ್ತು ತಂತ್ರಜ್ಞತೆಯನ್ನು ಹಂಚಿಕೊಳ್ಳುವುದನ್ನು ನಾವು ಮುಂದುವರೆಸುತ್ತೇವೆ.

ಸ್ನೇಹಿತರೆ!

ಈ ವರ್ಷ ರೈಸಿನಾ ಡೈಲಾಗ್ ನಲ್ಲಿ ನಾವು ವರ್ಚುವಲ್ ಮೂಲಕ ಭಾಗಿಯಾಗಿದ್ದೇವೆ. ಈ ಸಂವಾದಲ್ಲಿ ನಾವು ವಾಸ್ತವಿಕವಾಗಿ ಒಟ್ಟುಗೂಡುತ್ತಿದ್ದು, ಇದು ಮಾನವ ಕೇಂದ್ರಿತ ಪ್ರಬಲ ಧ್ವನಿಯಾಗಿ ಹೊರ ಹೊಮ್ಮಲಿ ಎಂದು ಕರೆ ನೀಡುತ್ತಿದ್ದೇನೆ. ಯೋಜನೆ ಎ ಮತ್ತು ಯೋಜನೆ ಬಿ ಯನ್ನು ಬೇರೆಡೆ ಬಳಸುತ್ತೇವೆ. ಆದರೆ ಬಿ ಎಂಬ ಗ್ರಹ ಇಲ್ಲ ಇರುವುದು ಪ್ಲಾನೇಟ್ ಇ ಅಂದರೆ ಪ್ಲಾನೆಟ್ ಅರ್ಥ್, ಭೂಮಿ. ಆದ್ದರಿಂದ ನಾವು ಈ ಗ್ರಹವನ್ನು ನಮ್ಮ ಭವಿಷ್ಯದ ಪೀಳಿಗೆಗೆ ಕೇವಲ ಟ್ರಸ್ಟಿಗಳಾಗಿ ಹಿಡಿದಿಟ್ಟುಕೊಂಡಿದ್ದೇವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಈ ಚಿಂತನೆಗಳನ್ನು ನಾನು ನಿಮಗೆ ಬಿಡುತ್ತಿದ್ದೇನೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ತುಂಬಾ ಫಲಪ್ರದ ಚರ್ಚೆಗಳನ್ನು ನಿರೀಕ್ಷಿಸುತ್ತೇನೆ. ಈ ಚರ್ಚೆಗಳಿಗೆ ಧ್ವನಿ ಸೇರಿಸುತ್ತಿರುವ ಎಲ್ಲಾ ಗಣ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಇಲ್ಲಿನ ಅಧಿವೇಶನದಲ್ಲಿ ಮೌಲ್ಯಯುತವಾಗಿ ಉಪಸ್ಥಿತರಿರುವ ಗೌರವಾನ್ವಿತ ರಾಂಡ್ವಾದ ಅಧ್ಯಕ್ಷರು ಮತ್ತು ಡೆನ್ಮಾರ್ಕ್ ನ ಪ್ರಧಾನಮಂತ್ರಿ ಅವರಿಗೆ  ವಿಶೇಷ ಧನ್ಯವಾದಗಳು. ನಂತರ ಈ ಸಂವಾದದಲ್ಲಿ ಭಾಗಿಯಾಗಲಿರುವ ನನ್ನ ಸ್ನೇಹಿತರು ಮತ್ತು ಆಸ್ಟ್ರೇಲಿಯಾ ಪ್ರಧಾನಮಂತ್ರಿ ಹಾಗೂ ಐರೋಪ್ಯ ಒಕ್ಕೂಟದ ಮಂಡಳಿಯ ಅಧ್ಯಕ್ಷರಿಗೆ ಧನ್ಯವಾದಗಳು. 

ಕೊನೆಯದಾಗಿ ಎಲ್ಲಾ ಸಂಘಟಕರಿಗೆ ನನ್ನ ಅಪಾರ ಕೃತಜ್ಞತೆ ಮತ್ತು ಹೃತ್ಪೂರ್ವಕ ಅಭಿನಂದನೆಗಳು. ಎಲ್ಲಾ ರೀತಿಯ ಸವಾಲುಗಳ ನಡುವೆಯೂ ಈ ಬಾರಿಯ ರೈಸಿನಾ ಡೈಲಾಗ್ ಅಧಿವೇಶನದಲ್ಲಿ ಎಲ್ಲರನ್ನು ಒಟ್ಟುಗೂಡಿಸುವಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. 

ಧನ್ಯವಾದಗಳು, ತುಂಬಾ ಧನ್ಯವಾದಗಳು

***


(Release ID: 1711798) Visitor Counter : 268