ಪ್ರಧಾನ ಮಂತ್ರಿಯವರ ಕಛೇರಿ

ಭಾರತ- ನೆದರ್ ಲ್ಯಾಂಡ್ಸ್ ನಡುವಿನ ವರ್ಚುವಲ್ ಶೃಂಗಸಭೆಯ ವೇಳೆ ಪ್ರಧಾನಮಂತ್ರಿ ಭಾಷಣ

Posted On: 09 APR 2021 7:32PM by PIB Bengaluru

ಗೌರವಾನ್ವಿತರೇ

ಶುಭಾಶಯಗಳು ಮತ್ತು ನಿಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

ನಿಮ್ಮ ನಾಯಕತ್ವದಲ್ಲಿ ನಿಮ್ಮ ಪಕ್ಷ ಸತತ ನಾಲ್ಕನೇ ಬಾರಿಗೆ ಅದ್ಭುತ ಗೆಲುವು ಸಾಧಿಸಿದೆ. ಅದಕ್ಕಾಗಿ ನಾನು ತಕ್ಷಣವೇ ಟ್ವಿಟರ್ ನಲ್ಲಿ ನಿಮ್ಮನ್ನು ಅಭಿನಂದಿಸಿದ್ದೆನು, ಆದರೆ ಇಂದು ನಾವು ವರ್ಚುವಲ್ ರೂಪದಲ್ಲಿ ಮತ್ತೆ ಭೇಟಿ ಮಾಡುತ್ತಿದ್ದೇವೆ. ಹಾಗಾಗಿ ಅವಕಾಶವನ್ನು ಬಳಸಿಕೊಂಡು ಮತ್ತೊಮ್ಮೆ ನಿಮಗೆ ಶುಭಾಶಯಗಳನ್ನು ಕೋರ ಬಯಸುತ್ತೇನೆ ಮತ್ತು ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ.

ಗೌರವಾನ್ವಿತರೇ,

ನಮ್ಮ ಸಂಬಂಧಗಳು ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮಗಳ ಹಂಚಿಕೆಯನ್ನು ಆಧರಿಸಿವೆಜಾಗತಿಕ ಸವಾಲುಗಳಾದ ಹವಾಮಾನ ವೈಪರೀತ್ಯ, ಭಯೋತ್ಪಾದನೆ, ಸಾಂಕ್ರಾಮಿಕ ಕುರಿತಂತೆ ನಮ್ಮ ಮನೋಭಾವವೂ ಒಂದೇ ಆಗಿದೆ. ಜಾಗತಿಕ ಡಿಜಿಟಲ್ ಆಡಳಿತ ಮತ್ತು ಇಂಡೋ-ಪೆಸಿಫಿಕ್ ಮರುಸ್ಥಿತಿಸ್ಥಾಪಕತ್ವ ಪೂರೈಕೆ ಸರಣಿ ಸೇರಿದಂತೆ ಹಲವು ವಲಯಗಳ ಕುರಿತು ನಮ್ಮ ಚಿಂತನೆಗಳ ನಡುವೆ ಸಹಮತವೂ ಮೂಡುತ್ತಿದೆ. ಇಂದು ನಾವು ನೀರಿಗೆ ಸಂಬಂಧಿಸಿದಂತೆ ಕಾರ್ಯತಾಂತ್ರಿಕ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ನಮ್ಮ ಬಾಂಧವ್ಯಕ್ಕೆ ಹೊಸ ಆಯಾಮ ಬರೆಯುತ್ತಿದ್ದೇವೆ. ಹೂಡಿಕೆಯನ್ನು ಉತ್ತೇಜಿಸಲು ತ್ವರಿತ ಕಾರ್ಯತಂತ್ರ ಸ್ಥಾಪನೆ ನಮ್ಮ ಬಲಿಷ್ಠ ಆರ್ಥಿಕ ಸಹಕಾರಕ್ಕೆ ಹೊಸ ವೇಗವನ್ನು ನೀಡಲಿದೆ. ಕೋವಿಡ್ ನಂತರದ ಜಗತ್ತಿನಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ, ಅವು ನಮ್ಮಂತಹ ರಾಷ್ಟ್ರಗಳ ನಡುವಿನ ಪರಸ್ಪರ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲಿವೆ ಎಂಬ ನಂಬಿಕೆ ನನಗಿದೆ.

ಗೌರವಾನ್ವಿತರೇ,

2019ರಲ್ಲಿ ನೀವು ಭಾರತಕ್ಕೆ ಭೇಟಿ ನೀಡಿದ್ದರಿಂದ ಭಾರತ-ನೆದರ್ ಲ್ಯಾಂಡ್ಸ್ ನಡುವಿನ ಸಂಬಂಧಗಳಿಗೆ ಮತ್ತಷ್ಟು ಉತ್ತೇಜನ ದೊರಕಿತು. ಅಂತೆಯೇ ಇಂದಿನ ವರ್ಚುವಲ್ ಶೃಂಗಸಭೆಯಿಂದ ನಮ್ಮ ಸಂಬಂಧಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ನಾನು ನಂಬಿದ್ದೇನೆ.

ಗೌರವಾನ್ವಿತರೇ,

ನೀವು ಈಗಷ್ಟೇ ಅನಿವಾಸಿ ಭಾರತೀಯರ ಬಗ್ಗೆ ಉಲ್ಲೇಖಿಸಿದ್ದಂತೆ, ಭಾರಿ ಸಂಖ್ಯೆಯ ಭಾರತೀಯ ಮೂಲದ ಜನಸಂಖ್ಯೆ ಯುರೋಪ್ ನಲ್ಲಿ ನೆಲೆಸಿರುವುದು ಸತ್ಯಸಾಂಕ್ರಾಮಿಕದ ಕೊರೊನಾ ಸಮಯದಲ್ಲಿ ನೀವು ಭಾರತೀಯ ಮೂಲದ ಜನರ ಬಗ್ಗೆ ತೋರಿರುವ ಕಾಳಜಿ ಮತ್ತು ಪ್ರೀತಿಗೆ ನಾನು ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ಮುಂಬರುವ ಸಿಒಪಿ-26, ಭಾರತ-ಯುರೋಪ್ ಶೃಂಗಸಭೆ ವೇಳೆ ಐರೋಪ್ಯ ಒಕ್ಕೂಟದ ಜೊತೆ ಇಂತಹ ಹಲವು ವಿಷಯಗಳ ಕುರಿತು ಮಾತನಾಡಲು ನಮಗೆ ಅವಕಾಶ ಸಿಗಲಿದೆ.

ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್ ಅನುವಾದವಲ್ಲಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

***



(Release ID: 1711145) Visitor Counter : 123