ಪ್ರಧಾನ ಮಂತ್ರಿಯವರ ಕಛೇರಿ
ಭಾರತ – ನೆದರ್ಲೆಂಡ್ಸ್ ನಡುವೆ ವರ್ಚುವಲ್ ಸಭೆ
Posted On:
09 APR 2021 9:46PM by PIB Bengaluru
ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿ ಹಾಗೂ ನೆದರ್ಲೆಂಡ್ಸ್ ನ ಗೌರವಾನ್ವಿತ ಪ್ರಧಾನಿ ಶ್ರೀ ಮಾರ್ಕ್ ರುಟ್ಟೆ ನಡುವೆ ವರ್ಚುವಲ್ ಶೃಂಗ ಸಭೆ ನಡೆಯಿತು. 2021 ರ ಮಾರ್ಚ್ ನಲ್ಲಿ ನಡೆದ ಸಾಮಾನ್ಯ ಚುನಾವಣೆಯಲ್ಲಿ ಗೆದ್ದ ನಂತರ ನಡೆದ ಮೊದಲ ವರ್ಚುವಲ್ ಸಭೆ ಇದಾಗಿತ್ತು. ಚುನಾವಣೆಯಲ್ಲಿ ವಿಜಯ ಸಾಧಿಸಿದ ಹಾಗೂ ನೆದರ್ಲೆಂಡ್ಸ್ ನ ಪ್ರಧಾನಮಂತ್ರಿಯಾಗಿ ಸತತ ನಾಲ್ಕನೇ ಬಾರಿಗೆ ಆಯ್ಕೆಯಾದ ಶ್ರೀ ರುಟ್ಟೆ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಭಾರತ – ನೆದರ್ಲೆಂಡ್ಸ್ ನಡುವೆ ಬಲವಾದ ಮತ್ತು ಸ್ಥಿರವಾದ ಬಾಂಧವ್ಯವಿದ್ದು, ಪ್ರಜಾಂತ್ರದ ಪರಸ್ಪರ ವಿನಿಮಯದ ಮೌಲ್ಯಗಳು, ನೆಲದ ಕಾನೂನು, ಮಾನವ ಹಕ್ಕುಗಳಿಗೆ ಗೌರವ ಮತ್ತು ಎರಡೂ ದೇಶಗಳ ನಡುವೆ ಸ್ನೇಹದಿಂದ ಕೂಡಿರುವುದು ವಿಶೇಷವಾಗಿದೆ.
ಶೃಂಗಸಭೆ ಸಂದರ್ಭದಲ್ಲಿ ಇಬ್ಬರೂ ನಾಯಕರು ದ್ವಿಪಕ್ಷೀಯ ಬಾಂಧವ್ಯ ಕುರಿತು ಪ್ರಗತಿ ಪರಿಶೀಲನೆ ಜತೆಗೆ ಸಮಗ್ರ ನೋಟ ಹರಿಸಿದರು. ವ್ಯಾಪಾರ, ಆರ್ಥಿಕತೆ, ಜಲ ನಿರ್ವಹಣೆ, ಕೃಷಿ ವಲಯ, ಸ್ಮಾರ್ಟ್ ನಗರಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ರಕ್ಷಣೆ ಮತ್ತು ಬಾಹ್ಯಾಕಾಶ ವಲಯದ ಸಂಬಂಧವನ್ನು ವೈವಿಧ್ಯಮಯಗೊಳಿಸುವ ಕುರಿತು ಚರ್ಚಿಸಿದರು.
ಇಬ್ಬರೂ ಪ್ರಧಾನಮಂತ್ರಿಗಳು ಜಲ ಸಂಬಂಧಿತ ವಲಯದಲ್ಲಿ ಇಂಡೋ ಡಚ್ ಸಹಕಾರವನ್ನು ಇನ್ನಷ್ಟು ಗಾಢವಾಗಿಸಲು, ನೀರಿನ ಮೇಲಿನ ಕಾರ್ಯತಂತ್ರದ ಸಹಭಾಗಿತ್ವ ಸ್ಥಾಪಿಸಲು ನೀರು ಕುರಿತ ಸಚಿವರ ಮಟ್ಟದ ಜಂಟಿ ಕಾರ್ಯತಂಡವನ್ನು ಮೇಲ್ದರ್ಜೆಗೇರಿಸಲು ಸಮ್ಮತಿಸಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ, ಭಯೋತ್ಪಾದನೆ ನಿಗ್ರಹ ಮತ್ತು ಹವಾಮಾನ ಬದಲಾವಣೆಯಂತಹ ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳ ಕುರಿತು ಈ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಭಾರತ – ಫೆಸಿಫಿಕ್ ಪರಿಸ್ಥಿತಿ, ಪೂರೈಕೆ ಸರಪಳಿಯ ಚೇತರಿಕೆ ಮತ್ತು ಜಾಗತಿಕ ಡಿಜಿಟಲ್ ಆಡಳಿತದಂತಹ ಹೊಸ ವಲಯಗಳಿಗೆ ಇನ್ನಷ್ಟು ತೆರೆದುಕೊಳ್ಳಲು ಇವರು ಸಮ್ಮತಿಸಿದ್ದಾರೆ.
ಅಂತಾರಾಷ್ಟ್ರೀಯ ಸೌರಮೈತ್ರಿ [ಐ.ಎಸ್.ಎ] ಮತ್ತು ವಿಪತ್ತಿನಿಂದ ಮೂಲ ಸೌಕರ್ಯ ಚೇತರಿಸಿ ಕುರಿತ ಮೈತ್ರಿಕೂಟ [ಸಿ.ಡಿ.ಆರ್.ಐ] ವಲಯದಲ್ಲಿ ಭಾರತಕ್ಕೆ ಬೆಂಬಲ ನೀಡಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೆದರ್ಲೆಂಡ್ಸ್ ಗೆ ಧನ್ಯವಾದ ಅರ್ಪಿಸಿದರು. ಭಾರತ - _ಫೆಸಿಫಿಕ್ ನೀತಿ ಮತ್ತು 2023 ರಲ್ಲಿ ಭಾರತದ ಜಿ 20 ಪ್ರಸಿಡೆನ್ಸಿ ವಲಯದಲ್ಲಿ ನೆದರ್ಲೆಂಡ್ಸ್ ನ ಬಯಕೆಯನ್ನು ಶ್ರೀ ನರೇಂದ್ರ ಮೋದಿ ಸ್ವಾಗತಿಸಿದರು.
ಅಂತಾರಾಷ್ಟ್ರೀಯ ಶಾಂತಿ, ಸ್ಥಿರತೆ ಮತ್ತು ಸಮೃದ್ಧತೆ ವಲಯದಲ್ಲಿ ತಮ್ಮ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು ಹಾಗೂ 2021 ರ ಮೇ ನಲ್ಲಿ ಪೋರ್ಚುಗಲ್ ನ ಪೋರ್ಟೋದಲ್ಲಿ ನಡೆಯಲಿರುವ ಭಾರತ – ಐರೋಪ್ಯ ಒಕ್ಕೂಟದ ನಾಯಕರ ಸಭೆಯನ್ನು ಎದುರು ನೋಡುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ.
***
(Release ID: 1711108)
Visitor Counter : 213
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam