ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಸೆಷಲ್ಸ್ ಉನ್ನತ ಮಟ್ಟದ ವರ್ಚುವಲ್ ಕಾರ್ಯಕ್ರಮ (ಏ.8, 2021)

Posted On: 07 APR 2021 5:35PM by PIB Bengaluru

ಸೆಷಲ್ಸ್ ನಲ್ಲಿ ಭಾರತ ಕೈಗೊಂಡಿರುವ ಹಲವು ಯೋಜನೆಗಳನ್ನು ಉದ್ಘಾಟಿಸಲು 2021 ಏಪ್ರಿಲ್ 8ರಂದು ನಡೆಯಲಿರುವ ಉನ್ನತ ಮಟ್ಟದ ವರ್ಚುವಲ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಷಲ್ಸ್ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ವಾವೆಲ್ ರಾಮ್ ಕಲಾವನ್ ಅವರೊಂದಿಗೆ ಭಾಗವಹಿಸಲಿದ್ದಾರೆ

  ಉನ್ನತ ಮಟ್ಟದ ವರ್ಚುವಲ್ ಕಾರ್ಯಕ್ರಮದಲ್ಲಿ ಕೆಳಗಿನ ಅಂಶಗಳು ಒಳಗೊಂಡಿವೆ:

)        ಸೆಷಲ್ಸ್ ನಲ್ಲಿ ಹೊಸದಾಗಿ ನಿರ್ಮಿಸಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಕಟ್ಟಡದ ಜಂಟಿ -ಉದ್ಘಾಟನೆ.

ಬಿ)        ಸೆಷಲ್ಸ್ ಕರಾವಳಿ ಪಡೆಗೆ ಮೊದಲ ಗಸ್ತು ಹಡಗು ಹಸ್ತಾಂತರ.

ಸಿ)        ಒಂದು ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಹಸ್ತಾಂತರ.

ಡಿ)        ಭಾರೀ ಪರಿಣಾಮ ಬೀರಲಿರುವ 10 ಸಮುದಾಯ ಅಭಿವೃದ್ಧಿ ಯೋಜನೆಗಳ(ಎಚ್ಐಸಿಡಿಪಿ) ಉದ್ಘಾಟನೆ.
 

ರಾಜಧಾನಿ ವಿಕ್ಟೋರಿಯಾದಲ್ಲಿ ಹೊಸ ಮ್ಯಾಜಿಸ್ಟ್ರೇಟ್ ಕೋರ್ಟ್ ಕಟ್ಟಡವನ್ನು ನಿರ್ಮಿಸಲಾಗಿದ್ದುಇದು ಭಾರತ ತನ್ನ ಅನುದಾನದ ನೆರವಿನಿಂದ ಸೆಷಲ್ಸ್ ನಲ್ಲಿ ನಿರ್ಮಿಸಿರುವ ಮೊದಲ ಸಿವಿಲ್ ಮೂಲಸೌಕರ್ಯ ಯೋಜನೆಯಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಕಟ್ಟಡ ಅತ್ಯಾಧುನಿಕವಾಗಿದ್ದು, ಇದು ಸೆಷಲ್ಸ್ ನ್ಯಾಯಾಂಗ ವ್ಯವಸ್ಥೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ ಮತ್ತು ಸೆಷಲ್ಸ್ ಜನರಿಗೆ ಉತ್ತಮ ನ್ಯಾಯಾಂಗ ಸೇವೆಯ ದೊರಕಿಸಿಕೊಡಲು ನೆರವಾಗಲಿದೆ.

50 –ಎಂ ವೇಗದ ಪಹರೆ ವಾಹನ ಆಧುನಿಕ ಮತ್ತು ಸಂಪೂರ್ಣ ಸಜ್ಜಾಗಿರುವ ನೌಕಾ ಹಡಗಾಗಿದ್ದು ಇದನ್ನು ಭಾರತದ, ಕೋಲ್ಕತ್ತಾದ ಮೆಸರ್ಸ್ ಜಿಆರ್ ಎಸ್ಇ ಅಭಿವೃದ್ಧಿಪಡಿಸಿದೆ ಮತ್ತು ಅದನ್ನು ಸಾಗರ ಸರ್ವೇಕ್ಷಣಾ ಸಾಮರ್ಥ್ಯವನ್ನು ಬಲವರ್ಧನೆಗೊಳಿಸಲು ಭಾರತದ ಅನುದಾನದ ನೆರವಿನಡಿಯಲ್ಲಿ ಸೆಷಲ್ಸ್ ಗೆ ಉಡುಗೊರೆಯಾಗಿ ನೀಡಲಾಗುವುದು.  

ಸೆಷಲ್ಸ್ ರೊಮೈನ್ ವಿಲೆ ದ್ವೀಪದಲ್ಲಿ ಒಂದು ಮೆಗಾವ್ಯಾಟ್ ಸಾಮರ್ಥ್ಯ ಭೂಮಿಯ ಮೇಲಿನ ಸೌರ ವಿದ್ಯುತ್ ಘಟಕವನ್ನುಸೌರ ಪಿವಿ ಡೆಮೊಕ್ರಟೈಸೇಷನ್ಯೋಜನೆಯ ಭಾಗವಾಗಿ ಪೂರ್ಣಗೊಳಿಸಲಾಗಿದೆ. ಇದನ್ನು ಭಾರತ ಸರ್ಕಾರ ತನ್ನ ಅನುದಾನದ ನೆರವಿನಿಂದ ಸೆಷಲ್ಸ್ ನಲ್ಲಿ ಅನುಷ್ಠಾನಗೊಳಿಸಿದೆ.

ವರ್ಚುವಲ್ ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರ ಕಚೇರಿ, ಸ್ಥಳೀಯ ಸಂಸ್ಥೆಗಳು, ಶೈಕ್ಷಣಿಕ ಮತ್ತು ವೃತ್ತಿಪರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಿರುವ ಭಾರೀ ಪರಿಣಾಮ ಬೀರುವ ಹತ್ತು ಸಮುದಾಯ ಅಭಿವೃದ್ಧಿ ಯೋಜನೆಗಳ(ಎಚ್ಐಸಿಡಿಪಿ)ನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಗುವುದು.

ಪ್ರಧಾನಮಂತ್ರಿಗಳ ದೂರದೃಷ್ಟಿಯಸಾಗರ್’  ‘ಪ್ರದೇಶದ ಎಲ್ಲ ರಾಷ್ಟ್ರಗಳ ಸರ್ವಾಂಗೀಣ ಪ್ರಗತಿ ಮತ್ತು ಭದ್ರತೆಯಲ್ಲಿ ಸೆಷಲ್ಸ್ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಯೋಜನೆಗಳ ಉದ್ಘಾಟನೆಯೊಂದಿಗೆ ಭಾರತ ಸೆಷಲ್ಸ್ ಅನ್ನು ತನ್ನ ವಿಶ್ವಾಸಾರ್ಹ ಮತ್ತು ಸಮಯ ಪರೀಕ್ಷಿತ ಪಾತ್ರವೆಂದು ಪರಿಗಣಿಸಿ, ಅದರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಭದ್ರತಾ ಅಗತ್ಯತೆಗಳನ್ನು ಪೂರೈಸಲು ನೆರವಾಗಲಿದೆ. ಅಲ್ಲದೆ ಭಾರತ ಮತ್ತು ಸೆಷಲ್ಸ್ ಜನರ ನಡುವೆ ಆಳ ಮತ್ತು ಮಿತ್ರ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ.

***(Release ID: 1710374) Visitor Counter : 199