ಸಂಪುಟ

ಭಾರತೀಯ ಕರಕುಶಲ ಮತ್ತು ಕೈಮಗ್ಗ ರಫ್ತು ನಿಗಮ ನಿಯಮಿತವನ್ನು ಮುಚ್ಚಲು ಸಂಪುಟದ ಅನುಮೋದನೆ

Posted On: 16 MAR 2021 3:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಕರಕುಶಲ ಮತ್ತು ಕೈಮಗ್ಗ ರಫ್ತು ನಿಗಮ ನಿಯಮಿತ (ಎಚ್.ಎಚ್..ಸಿ.)ವನ್ನು ಮುಚ್ಚಲು ತನ್ನ ಸಮ್ಮತಿ ಸೂಚಿಸಿದೆ. ನಿಗಮವು ಕೇಂದ್ರ ಜವಳಿ ಸಚಿವಾಲಯದ ಆಡಳಿತ ನಿಯಂತ್ರಣದ ಭಾರತ ಸರ್ಕಾರದ ಸ್ವಾಮ್ಯದ ಸಂಸ್ಥೆಯಾಗಿದೆ

ನಿಗಮದಲ್ಲಿ 59 ಖಾಯಂ ನೌಕರರು ಮತ್ತು 6 ಆಡಳಿತ ತರಬೇತುದಾರರು ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲಾ ಖಾಯಂ ನೌಕರರು ಮತ್ತು ನಿರ್ವಹಣಾ ಆಡಳಿತ ತರಬೇತಿದಾರರುಗಳಿಗೆ ಸಾರ್ವಜನಿಕ ಉದ್ಯಮ ಇಲಾಖೆಯು ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯ (ವಿ.ಆರ್.ಎಸ್) ಲಾಭವನ್ನು ಪಡೆಯಲು ಅವಕಾಶ ನೀಡಲಾಗುವುದು.

ಅನುಮೋದನೆಯು ಯಾವುದೇ ಆದಾಯ ಗಳಿಸದ ಮತ್ತು ಕಾರ್ಯಾಚರಣೆಯಲ್ಲಿಲ್ಲದ ನಷ್ಟದಲ್ಲಿರುವ ಸಿ.ಪಿ.ಎಸ್.. ವೇತನ/ಕೂಲಿ ಸೇರಿದಂತೆ ಸಂಚಿತ ವೆಚ್ಚ ತಗ್ಗಿಸುವ ಮೂಲಕ ಸರ್ಕಾರದ ಬೊಕ್ಕಸದ ಹೊರೆ ತಗ್ಗಿಸುತ್ತದೆ

ನಿಗಮವು 2015-16 ಆರ್ಥಿಕ ವರ್ಷದಿಂದ ನಿರಂತರವಾಗಿ ನಷ್ಟವನ್ನು ಅನುಭವಿಸುತ್ತಿದೆ ಮತ್ತು ಅದನ್ನು ನಡೆಸಲು ತಗುಲುತ್ತಿರುವ ವೆಚ್ಚವನ್ನು ಸರಿದೂಗಿಸಲು ಸಾಕಷ್ಟು ಆದಾಯವನ್ನು ಗಳಿಸುತ್ತಿಲ್ಲ. ಅದರ ಪುನಶ್ಚೇತನಕ್ಕೆ ಹೆಚ್ಚಿನ ಅವಕಾಶವಿಲ್ಲ ಹೀಗಾಗಿ ಕಂಪನಿಯನ್ನು ಮುಚ್ಚುವುದು ಅನಿವಾರ್ಯತೆ ಇರುತ್ತದೆ.

***



(Release ID: 1705147) Visitor Counter : 239