ಪ್ರಧಾನ ಮಂತ್ರಿಯವರ ಕಛೇರಿ

ಮಹಿಳೆಯರ ದಿನದಂದು ಮಹಿಳಾ ಉದ್ಯಮಿಗಳಿಂದ ಉತ್ಪನ್ನಗಳನ್ನು ಖರೀದಿಸಿದ ಪ್ರಧಾನಮಂತ್ರಿ

Posted On: 08 MAR 2021 2:00PM by PIB Bengaluru

ಇಂದು, ಮಹಿಳಾ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವಿಧ ಮಹಿಳಾ ಸ್ವ ಸಹಾಯ ಗುಂಪುಗಳು ಮತ್ತು ಉದ್ಯಮಿಗಳಿಂದ ಉತ್ಪನ್ನಗಳನ್ನು ಖರೀದಿಸಿದರು. ಇದು ಮಹಿಳಾ ಉದ್ಯಮಿಗಳಿಗೆ ಮತ್ತು ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ನೀಡುವ ಪ್ರಯತ್ನವಾಗಿದೆ.

ಆತ್ಮನಿರ್ಭರ ಭಾರತದ ಅನ್ವೇಷಣೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾತನಾಡಿದ ಶ್ರೀ ಮೋದಿ, ಅವರು ಟ್ವೀಟ್ ನಲ್ಲಿ “ಆತ್ಮನಿರ್ಭರ ಆಗಬೇಕೆಂಬ ಭಾರತದ ಅನ್ವೇಷಣೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದಂದು, ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ನಾವು ಬದ್ಧರಾಗೋಣ. ಇಂದು ನಾನು, ಮಹಿಳಾ ಉದ್ಯಮ, ಸೃಜನಶೀಲತೆ ಮತ್ತು ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಕೆಲವು ಉತ್ಪನ್ನಗಳನ್ನು ಖರೀದಿಸಿದ್ದೇನೆ. #NariShakti” ಎಂದು ತಿಳಿಸಿದ್ದಾರೆ.

ತಮಿಳುನಾಡಿನ ತೋಡಾ ಬುಡಕಟ್ಟು ಸಮುದಾಯದ ಕುಶಲಕರ್ಮಿಗಳು ತಯಾರಿಸಿದ ಕಸೂತಿ ಶಾಲು ಖರೀದಿಸಿದ ಸಂದರ್ಭದಲ್ಲಿ ಅವರು, “ತಮಿಳುನಾಡಿನ ತೋಡಾ ಬುಡಕಟ್ಟಿನ ಕುಶಲಕರ್ಮಿಗಳು ತಯಾರಿಸಿದ ಸೊಗಸಾದ ಕೈ ಕಸೂತಿಯ ಶಾಲು ಅದ್ಭುತವಾಗಿದೆ.

ನಾನು ಅಂತಹ ಒಂದು ಶಾಲು ಖರೀದಿಸಿದೆ. ಈ ಉತ್ಪನ್ನವನ್ನು ಟ್ರೈಬ್ಸ್ ಇಂಡಿಯಾ ಮಾರಾಟ ಮಾಡಿದೆ. #NariShakti”

ಕೈಯಲ್ಲಿ ಮಾಡಿದ ಗೋಂಡ್ ಕಾಗದದ ಚಿತ್ರದ ಬಗ್ಗೆ ಅವರು ಟ್ವೀಟ್ ಮಾಡಿ “ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಚ್ಚಿನ ವರ್ಣದ ಸೇರ್ಪಡೆ!

ನಮ್ಮ ಬುಡಕಟ್ಟು ಸಮುದಾಯದ ಕಲೆ. ಈ ಕರಕುಶಲ ಗೋಂಡ್ ಕಾಗದದ ಚಿತ್ರ ಬಣ್ಣ ಮತ್ತು ಸೃಜನಾತ್ಮಕತೆಯನ್ನು ಮಿಶ್ರಣ ಮಾಡಲಿದೆ.

ಈ ಕಲಾಕೃತಿಯನ್ನು ಇಂದು ಖರೀದಿಸಿದೆ #NariShakti”

ಪ್ರಧಾನಮಂತ್ರಿಯವರು ನಾಗಾಲ್ಯಾಂಡ್ ನ ಸಾಂಪ್ರದಾಯಿಕ ಶಾಲನ್ನು ಖರೀದಿಸಿದರು. ಟ್ವೀಟ್ ಮಾಡಿರುವ ಅವರು, “ಭಾರತವು ಧೈರ್ಯ, ಸಹಾನುಭೂತಿ ಮತ್ತು ಸೃಜನಶೀಲತೆಗೆ ಸಮಾನಾರ್ಥಕವಾದ ನಾಗಾ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತದೆ.

ನಾಗಾಲ್ಯಾಂಡ್‌ ನಿಂದ ಸಾಂಪ್ರದಾಯಿಕ ಶಾಲು ಖರೀದಿಸಿದೆ. # ನಾರಿಶಕ್ತಿ ”

ಖಾದಿ ಹತ್ತಿಯ ಮಧುಬನಿ ಚಿತ್ತಾರದ ವಸ್ತ್ರ ಖರೀದಿಸಿದ ಪ್ರಧಾನಮಂತ್ರಿಯವರು ಟ್ವೀಟ್ ನಲ್ಲಿ

 “ಖಾದಿ ಮಹಾತ್ಮಾ ಗಾಂಧಿ ಅವರೊಂದಿಗೆ ನಿಕಟ ನಂಟು ಮತ್ತು ಭಾರತದೊಂದಿಗೆ ಶ್ರೀಮಂತ ಇತಿಹಾಸ ಹೊಂದಿದೆ. ನಾನು ಖಾದಿ ಹತ್ತಿಯ ಮಧುಮನಿ ಚಿತ್ತಾರದ ವಸ್ತ್ರವನ್ನು ಖರೀದಿಸಿದೆ. ಇದು ಅತ್ಯುನ್ನತ ಗುಣಮಟ್ಟದ್ದಾಗಿದ್ದು, ನಮ್ಮ ನಾಗರಿಕರ ಸೃಜನಶೀಲತೆಯೊಂದಿಗೆ ಆಪ್ತ ನಂಟು ಹೊಂದಿದೆ. #NariShakti”

ಪಶ್ಚಿಮ ಬಂಗಾಳದ ಕೈಯಲ್ಲಿ ತಯಾರಿಸಿದ ಸೆಣಬಿನ ಕಡತಗಳ ಸಂಪುಟ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ “ನಾನು ಖಂಡಿತವಾಗಿ ಈ ಪಶ್ಚಿಮ ಬಂಗಾಳದ ಕರದಿಂದ ತಯಾರಿಸಿದ ಸೆಣಬಿನ ಕಡತಗಳ ಸಂಪುಟವನ್ನು ಬಳಸುತ್ತೇನೆ.

ರಾಜ್ಯದ ಬುಡಕಟ್ಟು ಸಮುದಾಯ ತಯಾರಿಸಿದ, ಪಶ್ಚಿಮ ಬಂಗಾಳದ ಸೆಣಬು ಉತ್ಪನ್ನಗಳನ್ನು ನೀವೆಲ್ಲರೂ ನಿಮ್ಮ ಮನೆಗಳಲ್ಲಿ ಹೊಂದಿರಬೇಕು!  #NariShakti”

ಪ್ರಧಾನಮಂತ್ರಿಯವರು ಅಸ್ಸಾಂನ ಅಭಿವೃದ್ಧಿಯ ವಿಭಾಗ ಕಕತಿಪಪುಂಗ್ ನ ಸ್ವ ಸಹಾಯ ಗುಂಪುಗಳ ಗಮೂಸಾವನ್ನು ಖರೀದಿಸಿದರು.

 “ನೀವು ನಾನು   ಗಮೂಸಾವನ್ನು ಆಗಾಗ್ಗೆ ಧರಿಸುವುದನ್ನು ನೋಡಿರಬಹುದು. ಅದು ತುಂಬಾ ಆರಾಮದಾಯಕ. ಇಂದು, ಕಕತಿಪಪುಂಗ್ ನ ವಿವಿಧ ಸ್ವಸಹಾಯ ಗುಂಪುಗಳು ತಯಾರಿಸಿದ ಗಮೂಸಾವನ್ನು ಖರೀದಿಸಿದೆ. #NariShakti”

ಕೇರಳ ಮೂಲದ ಮಹಿಳೆಯರು ತಯಾರಿಸಿದ ಶಾಸ್ತ್ರೀಯ ತಾಳೆಯ ಕರಕುಶಲ ಉತ್ಪನ್ನ ನಿಲವಿಲಕ್ಕು ಖರೀದಿಸಿದ ಬಗ್ಗೆಯೂ ಶ್ರೀ ಮೋದಿ ಟ್ವೀಟ್ ಮಾಡಿದ್ದಾರೆ.

“ಕೇರಳ ಮೂಲದ ಮಹಿಳೆಯರು ತಯಾರಿಸಿದ ಶಾಸ್ತ್ರೀಯ ತಾಳೆಯ ಕರಕುಶಲ ಉತ್ಪನ್ನ ನಿಲವಿಲಕ್ಕು ಸ್ವೀಕರಿಸಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ. ನಮ್ಮ #NariShakti ಸ್ಥಳೀಯ ಕರಕುಶಲ ವಸ್ತುಗಳು ಮತ್ತು ಉತ್ಪನ್ನಗಳನ್ನು ಹೇಗೆ ಸಂರಕ್ಷಿಸಿದೆ ಮತ್ತು ಜನಪ್ರಿಯಗೊಳಿಸಿದೆ ಎಂಬುದು ಶ್ಲಾಘನೀಯ.” ಎಂದು ತಿಳಿಸಿದ್ದಾರೆ.

 

 ***




(Release ID: 1703308) Visitor Counter : 239