ಪ್ರಧಾನ ಮಂತ್ರಿಯವರ ಕಛೇರಿ

‘ಪರೀಕ್ಷಾ ಪೆ ಚರ್ಚಾ 2021’ ವೇಳೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರೊಂದಿಗೆ ಸಂವಾದ ನಡೆಸಲಿರುವ ಪ್ರಧಾನಮಂತ್ರಿ

Posted On: 18 FEB 2021 3:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಪರೀಕ್ಷಾ ಪೆ ಚರ್ಚಾ 2021’ರ ವೇಳೆ ಆನ್ ಲೈನ್ ಮೂಲಕ ವಿಶ್ವಾದ್ಯಂತದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು,  "ನಮ್ಮ ಧೈರ್ಯಶಾಲಿ #ಪರೀಕ್ಷಾ ಯೋಧರು ಪರೀಕ್ಷೆಗಳಿಗೆ ಸಜ್ಜಾಗುತ್ತಿದ್ದಾರೆ. ‘ಪರೀಕ್ಷಾ ಪೆ ಚರ್ಚಾ 2021’ ಮರಳಿ ಬಂದಿದೆ, ಈ ಬಾರಿ ಸಂಪೂರ್ಣವಾಗಿ ಆನ್ ಲೈನ್ ಆಗಿದ್ದು, ವಿಶ್ವದ ಎಲ್ಲ ವಿದ್ಯಾರ್ಥಿಗಳಿಗೂ ಮುಕ್ತವಾಗಿರುತ್ತದೆ. ಬನ್ನಿ, ನಗುಮೊಗ ಮತ್ತು ಒತ್ತಡ ರಹಿತವಾಗಿ ಚುನಾವಣೆ ಎದುರಿಸೋಣ! #PPC2021

ಜನಪ್ರಿಯ ಬೇಡಿಕೆಯ ಮೇಲೆ  ‘ಪರೀಕ್ಷಾ ಪೆ ಚರ್ಚಾ 2021’ ರಲ್ಲಿ ಪಾಲಕರು ಮತ್ತು ಶಿಕ್ಷಕರನ್ನೂ ಸೇರಿಸಲಾಗುತ್ತಿದೆ. ಇದು ಒಂದು ಗಂಭೀರ ವಿಚಾರದ ಮೇಲೆ ತಮಾಷೆ ಭರಿತ ಚರ್ಚೆಯಾಗಿರುತ್ತದೆ. ನಾನು ನನ್ನ ವಿದ್ಯಾರ್ಥಿ ಸ್ನೇಹಿತರಿಗೆ, ಅವರ ಅದ್ಭುತ ಪಾಲಕರಿಗೆ ಮತ್ತು ಶ್ರಮಪಡುವ ಶಿಕ್ಷಕರಿಗೆ #PPC2021ರಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡುತ್ತೇನೆ." ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿಯವರ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗಿನ ಪ್ರಥಮ ‘ಪರೀಕ್ಷಾ ಪೆ ಚರ್ಚಾ 1.0’ ಕಾರ್ಯಕ್ರಮ ನವದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ 2018ರ ಫೆಬ್ರವರಿ 16ರಂದು ನಡೆದಿತ್ತು. ಎರಡನೇ ಆವೃತ್ತಿಯ ಸಂವಾದ ಕಾರ್ಯಕ್ರಮ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ‘ಪರೀಕ್ಷಾ ಪೆ ಚರ್ಚಾ 2.0’ 2019ರ ಜನವರಿ 29ರಂದು ನವದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲೇ ಜರುಗಿತ್ತು. ಮೂರನೇ  ಆವೃತ್ತಿಯ ‘ಪರೀಕ್ಷಾ ಪೆ ಚರ್ಚಾ 2020’ರಲ್ಲಿ ಪ್ರಧಾನಮಂತ್ರಿಯವರು ಶಾಲಾ ವಿದ್ಯಾರ್ಥಿಗಳೊಂದಿಗೆ 2020ರ ಜನವರಿ 20ರಂದು ನವ ದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ಸಂವಾದ ನಡೆಸಿದ್ದರು.

***



(Release ID: 1699331) Visitor Counter : 149