ಹಣಕಾಸು ಸಚಿವಾಲಯ

ರಾಜ್ಯಗಳಿಗೆ 14 ನೇ ಕಂತಿನ ಸರಕು ಮತ್ತು ಸೇವಾ ತೆರಿಗೆ – ಜಿ.ಎಸ್.ಟಿ. ಪರಿಹಾರದ ಕೊರತೆ ನೀಗಿಸಲು 6,000 ಕೋಟಿ ರೂ ಬಿಡುಗಡೆ


ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನಬದ್ಧವಾಗಿ ಈವರೆಗೆ 84,000 ಕೋಟಿ ರೂ ಬಿಡುಗಡೆ

1,06.830 ಕೋಟಿ ರೂ ಹೆಚ್ಚುವರಿ ಸಾಲ ಪಡೆಯಲು ರಾಜ್ಯಗಳಿಗೆ ಅನುಮತಿ

Posted On: 03 FEB 2021 1:14PM by PIB Bengaluru

ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ರಾಜ್ಯಗಳಿಗೆ ಕೊರತೆ ಪರಿಹಾರದ ರೂಪದಲ್ಲಿ 14 ನೇ ವಾರದ ಕಂತು 6,000 ರೂ ಬಿಡುಗಡೆ ಮಾಡಿದೆ. ಇದರಿಂದಾಗಿ 23 ರಾಜ್ಯಗಳಿಗೆ 5,516.60 ಕೋಟಿ ರೂಪಾಯಿ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ 483.40 ಕೋಟಿ ರೂ ಬಿಡುಗಡೆ ಮಾಡಿದಂತಾಗಿದೆ. [ದೆಹಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೆರಿಗಳು ಜಿ.ಎಸ್.ಟಿ. ಮಂಡಳಿಯ ಸದಸ್ಯತ್ವ ಹೊಂದಿವೆ. ಉಳಿದಂತೆ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ರಾಜ್ಯಗಳು ಜಿ.ಎಸ್.ಟಿ ವಲಯದಲ್ಲಿ ಆದಾಯ ಕೊರತೆ ಹೊಂದಿಲ್ಲ.

ಇದರಿಂದಾಗಿ ಈವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶೇ 76 ರಷ್ಟು ಜಿ.ಎಸ್.ಟಿ. ಕೊರತೆ ಮೊತ್ತವನ್ನು ಬಿಡುಗಡೆ ಮಾಡಿದಂತಾಗಿದೆ. ಈ ಪೈಕಿ 76,616,16 ಕೋಟಿ ರೂಪಾಯಿ ರಾಜ್ಯಗಳಿಗೆ ಮತ್ತು 7,383.84 ಕೋಟಿ ರೂಪಾಯಿ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ.

ಕಳೆದ 2020 ರ ಅಕ್ಟೋಬರ್ ನಲ್ಲಿ ಜಿ..ಎಸ್.ಟಿ ವಲಯದಲ್ಲಿ ಎದುರಾಗುವ 1.10 ಲಕ್ಷ ಕೋಟಿ ರೂಪಾಯಿ ಕೊರತೆ ತುಂಬಲು ಕೇಂದ್ರ ಸರ್ಕಾರ ವಿಶೇಷವಾಗಿ ಸಾಲ ಪಡೆಯುವ ಗವಾಕ್ಷಿ ಯೋಜನೆಯನ್ನು ಜಾರಿಗೆ ತಂದಿತ್ತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪರವಾಗಿ ಕೇಂದ್ರ ಸರ್ಕಾರ ಗವಾಕ್ಷಿ ಯೋಜನೆ ಮೂಲಕ ಸಾಲ ಒದಗಿಸುತ್ತಿದೆ. 2020 ರ ಅಕ್ಟೋಬರ್ 23 ರಿಂದ ಆರಂಭವಾದ ಪ್ರಕ್ರಿಯೆಯಲ್ಲಿ 14 ಸುತ್ತು ಪೂರ್ಣಗೊಂಡಿದೆ. ಈ ವಾರ 14 ನೇ ಸುತ್ತಿನಲ್ಲಿ ಹಣ ಒದಗಿಸಲಾಗಿದೆ. ಈ ವಾರ ಶೇ 4.6144 ರಷ್ಟು ಬಡ್ಡಿದರ ನಿಗದಿಮಾಡಲಾಗಿದೆ.

ಕೇಂದ್ರ ಸರ್ಕಾರ ಈವರೆಗೆ 84,000 ಕೋಟಿ ರೂ ಸಾಲ ಒದಗಿಸಿದ್ದು, ಸರಾಸರಿ ಬಡ್ಡಿದರ ಶೇ 4.7395 ರಷ್ಟಾಗಿದೆ.

ಇದರ ಜತೆಗೆ ಕೇಂದ್ರ ಸರ್ಕಾರ ವಿಶೇಷ ಸಾಲ ಒದಗಿಸುವ ವ್ಯವಸ್ಥೆಯಡಿ ರಾಜ್ಯಗಳ ಒಟ್ಟು ನಿವ್ವಳ ಉತ್ಪಾದನೆ [ಜಿ.ಎಸ್.ಡಿ.ಪಿ]ಯ ಶೇ 0.50 ರಷ್ಟು ಹೆಚ್ಚುವರಿ ಸಾಲ ಪಡೆಯಲು ಅವಕಾಶ ಕಲ್ಪಿಸಿದೆ. ಆಯ್ಕೆ-1 ರಲ್ಲಿ ಜಿ.ಎಸ್.ಟಿ. ಕೊರತೆ ಪರಿಹಾರ ವಲಯದಲ್ಲಿ ಹೆಚ್ಚುವರಿ ಹಣಕಾಸು ಸಂಪನ್ಮೂಲ ಕ್ರೋಢೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ರಾಜ್ಯಗಳಿಗೂ ಆಯ್ಕೆ-1 ಅನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಡಿ 28 ರಾಜ್ಯಗಳಿಗೆ ಹೆಚ್ಚುವರಿ ಸಾಲ ಪಡೆಯುವ ಒಟ್ಟು ಮೊತ್ತ 1,06,830 ಕೋಟಿ ರೂ ಆಗಿದೆ. [ಜಿ.ಎಸ್.ಡಿ.ಪಿಯಲ್ಲಿ ಶೇ 0.50 ರಷ್ಟು] 28 ರಾಜ್ಯಗಳಿಗೆ ಹೆಚ್ಚುವರಿ ಸಾಲ ಪಡೆಯಲು ಅನುಮತಿ ನೀಡಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಿರುವ ಮೊತ್ತ ಕೆಳಕಂಡಂತೆ ಇದೆ.

ರಾಜ್ಯವಾರು ಹೆಚ್ಚುವರಿ ಸಾಲದ ಪ್ರಮಾಣ ಜಿ.ಎಸ್.ಡಿ.ಪಿಯಲ್ಲಿ ಶೇ 0.50 ರಷ್ಟು ಅವಕಾಶ ಕಲ್ಪಿಸಲಾಗಿದ್ದು, ವಿಶೇಷ ಗವಾಕ್ಷಿ ವ್ಯವಸ್ಥೆ 01.02.2021 ರಂದು ಅನುಮೋದನೆ ನೀಡಿದೆ.

(ರೂ. ಕೋಟಿಗಳಲ್ಲಿ )

ಕ್ರಮ ಸಂಖ್ಯೆ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹೆಸರು

ಶೇ 50 ಹೆಚ್ಚುವರಿ ಸಾಲವನ್ನು ರಾಜ್ಯಗಳಿಗೆ ಮಂಜೂರು ಮಾಡಲಾಗಿದೆ.

ವಿಶೇಷ ಗವಾಕ್ಷಿ ಮೂಲಕ ಸಂಗ್ರಹಿಸಿದ ನಿಧಿಯ ಮೊತ್ತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಿತರಣೆ

1

ಆಂಧ್ರಪ್ರದೇಶ

5051

1936.53

2

ಅರುಣಾಚಲ ಪ್ರದೇಶ*

143

0.00

3

ಅಸ್ಸಾಂ

1869

833.20

4

ಬಿಹಾರ

3231

3271.94

5

ಚತ್ತೀಸ್ ಗಢ

1792

1523.34

6

ಗೋವಾ

446

703.77

7

ಗುಜರಾತ್

8704

7727.43

8

ಹರಿಯಾಣ

4293

3646.77

9

ಹಿಮಾಚಲ ಪ್ರದೇಶ

877

1438.79

10

ಜಾರ್ಖಂಡ್

1765

827.55

11

ಕರ್ನಾಟಕ

9018

10396.53

12

ಕೇರಳ

4,522

3153.48

13

ಮಧ್ಯ ಪ್ರದೇಶ

4746

3806.03

14

ಮಹಾರಾಷ್ಟ್ರ

15394

10036.53

15

ಮಣಿಪುರ*

151

0.00

16

ಮೇಘಾಲಯ

194

93.79

17

ಮಿಜೋರಾಂ*

132

0.00

18

ನಾಗಾಲ್ಯಾಂಡ್ *

157

0.00

19

ಒಡಿಶಾ

2858

3202.69

20

ಪಂಜಾಬ್

3033

4571.52

21

ರಾಜಸ್ಥಾನ

5462

3162.97

22

ಸಿಕ್ಕಿಂ*

156

0.00

23

ತಮಿಳುನಾಡು

9627

5229.92

24

ತೆಲಂಗಾಣ

5017

1466.01

25

ತ್ರಿಪುರ

297

189.60

26

ಉತ್ತರ ಪ್ರದೇಶ

9703

5033.57

27

ಉತ್ತರಾಖಂಡ

1405

1940.91

28

ಪಶ್ಚಿಮ ಬಂಗಾಳ

6787

2423.29

 

ಒಟ್ಟು [] (A):

106830

76616.16

1

ದೆಹಲಿ

ಅನ್ವಯವಾಗುವುದಿಲ್ಲ.

4914.56

2

ಜಮ್ಮು ಮತ್ತು ಕಾಶ್ಮೀರ

                                             ಅನ್ವಯವಾಗುವುದಿಲ್ಲ.

1903.74

3

ಪುದುಚೇರಿ

ಅನ್ವಯವಾಗುವುದಿಲ್ಲ.

565.54

 

ಒಟ್ಟು [ಬಿ] :

ಅನ್ವಯವಾಗುವುದಿಲ್ಲ.

7383.84

 

ಒಟ್ಟಾರೆ [+ಬಿ]

106830

84000

***



(Release ID: 1696444) Visitor Counter : 196