ಪ್ರಧಾನ ಮಂತ್ರಿಯವರ ಕಛೇರಿ

ಸೆರಂ ಇನ್ಸ್ಟಿಟ್ಯೂಟ್‌ನ ಬೆಂಕಿ ದುರಂತದಲ್ಲಿ ಜೀವ ಹಾನಿ: ಪ್ರಧಾನಮಂತ್ರಿ ಸಂತಾಪ

ಪ್ರಕಟಣಾ ದಿನಾಂಕ: 21 JAN 2021 8:10PM by PIB Bengaluru

ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಅಗ್ನಿ ಅನಾಹುತದಲ್ಲಿ ಜೀವ ಹಾನಿ ದುರ್ಘಟನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದುಃಖ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ, ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಬೆಂಕಿ ಅನಾಹುತದಿಂದ ಜೀವಹಾನಿಯಾಗಿರುವುದು ದುರದೃಷ್ಟಕರ. ಇದು ದುಃಖದ ಸಮಯವಾಗಿದ್ದು, ಜೀವ ಕಳೆದುಕೊಂಡವರ ಕುಟುಂಬದೊಂದಿಗೆ ನಾವಿದ್ದೇವೆ. ಗಾಯಗೊಂಡವರು ಆದಷ್ಟು ಬೇಗ  ಚೇತರಿಸಿಕೊಳ್ಳಲಿ.” ಎಂದು ಪ್ರಾರ್ಥಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1691117) ವಿಸಿಟರ್ ಕೌಂಟರ್ : 184