ಸಂಪುಟ

5281.94 ಕೋಟಿ ರೂ. ಹೂಡಿಕೆಯ 850 ಮೆಗಾ ವ್ಯಾಟ್ ರಾಟಲ್ ಜಲ ವಿದ್ಯುತ್ ಯೋಜನೆಗೆ ಸಂಪುಟದ ಅನುಮೋದನೆ

Posted On: 20 JAN 2021 5:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕಿಸ್ತ್ವಾರ್ ಜಿಲ್ಲೆಯ ಚೆನಬ್ ನದಿಗೆ ಸಂಬಂಧಿಸಿದ 5281.94 ಕೋಟಿ ರೂ. ಹೂಡಿಕೆಯ 850 ಮೆಗಾ ವ್ಯಾಟ್ ರಾಟೆಲ್ ಜಲ ವಿದ್ಯುತ್ ಯೋಜನೆಗೆ (ಎಚ್.ಇ.)ಗೆ ನೂತನ ಜಂಟಿ ಸಹಯೋಗ ಕಂಪನಿ (ಜೆವಿಸಿ)ಯ ಮೂಲಕ ರಾಷ್ಟ್ರೀಯ ಜಲ ವಿದ್ಯುತ್ ನಿಗಮ (ಎನ್.ಎಚ್.ಪಿ.ಸಿ.) ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯ ಇಂಧನ ಅಭಿವೃದ್ಧಿ ನಿಗಮ ನಿಯಮಿತ  (ಜೆಕೆಎಸ್.ಪಿ.ಡಿ.ಸಿ.) ನಡುವೆ ಅನುಕ್ರಮವಾಗಿ ಶೇ.51 ಮತ್ತು ಶೇ.49 ಈಕ್ವಿಟಿಯೊಂದಿಗೆ ಸ್ಥಾಪಿಸಲು ತನ್ನ ಅನುಮೋದನೆ ನೀಡಿದೆ.
ಪ್ರಮುಖಾಂಶಗಳು
ಭಾರತ ಸರ್ಕಾರ ರಾಟೆಲ್ ಜಲ ವಿದ್ಯುತ್ ಯೋಜನೆ (850 ಮೆ.ವ್ಯಾ.) ಜೆವಿಸಿಯಲ್ಲಿ ಜೆ.ಕೆ.ಎಸ್.ಪಿ.ಡಿ.ಸಿ.ಯ ಈಕ್ವಿಟಿ ಕೊಡುಗೆಗಾಗಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ 776.44 ಕೋಟಿ ರೂ. ಅನುದಾನ ಒದಗಿಸುವ ಮೂಲಕ  ಬೆಂಬಲ ನೀಡುತ್ತಿದೆ. ಎನ್.ಎಚ್.ಪಿ.ಸಿ. ತನ್ನ ಆಂತಕರಿಕ ಮೂಲಗಳಿಂದ 808.14 ಕೋಟಿ ರೂ. ಹೂಡಿಕೆ ಮಾಡುತ್ತಿದ್ದು, ಜಲ ವಿದ್ಯುತ್ ಯೋಜನೆ 60 ತಿಂಗಳುಗಳ ಅವಧಿಯೊಳಗೆ ಕಾರ್ಯಗತವಾಗಲಿದೆ. ಈ ಯೋಜನೆಯಿಂದ ಉತ್ಪಾದಿಸಲಾಗುವ ವಿದ್ಯುತ್ ಗ್ರಿಡ್ ಸಮತೋಲನೆಗೆ ನೆರವಾಗಲಿದ್ದು, ವಿದ್ಯುತ್ ಪೂರೈಕೆ ಸ್ಥಿತಿಯನ್ನು ಉತ್ತಮಪಡಿಸಲಿದೆ.

ಅನುಷ್ಠಾನದ ಕಾರ್ಯತಂತ್ರ

ಯೋಜನೆಯನ್ನು ಕಾರ್ಯಸಾಧ್ಯವಾಗಿಸಲು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಯೋಜನೆಯ ಕಾರ್ಯಗತವಾದ ನಂತರ 10 ವರ್ಷಗಳವರೆಗೆ ನೀರು ಬಳಕೆ ಶುಲ್ಕ ವಿಧಿಸುವುದರಿಂದ ವಿನಾಯಿತಿ ನೀಡುತ್ತದೆ, ಜಿಎಸ್ಟಿ (ಅಂದರೆ ಎಸ್‌.ಜಿ.ಎಸ್‌.ಟಿ) ಯ ರಾಜ್ಯದ ಪಾಲನ್ನು ಮರುಪಾವತಿ ಮಾಡುತ್ತದೆ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಉಚಿತ ವಿದ್ಯುತ್ ಮನ್ನಾವನ್ನು ಕ್ರಮೇಣ ತಗ್ಗಿಸಲಾಗುತ್ತದೆ., ಅಂದರೆ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಉಚಿತ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ 1ನೇ ವರ್ಷದಲ್ಲಿ ಶೇ.1 ಆಗಿರುತ್ತದೆ ಮತ್ತು ವರ್ಷಕ್ಕೆ ಶೇ.1ರಂತೆ 12 ವರ್ಷಕ್ಕೆ ಶೇ. 12ಕ್ಕೆ ಏರಿಸಲಾಗುತ್ತದೆ.
ಉದ್ದೇಶ
ಯೋಜನೆಯ ನಿರ್ಮಾಣ ಚಟುವಟಿಕೆಗಳು ಸುಮಾರು 4000 ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ನೀಡುತ್ತದೆ ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಜೊತೆಗೆ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ರಾಟಲ್ ಜಲ ವಿದ್ಯುತ್ ಯೋಜನೆಯಿಂದ 40 ವರ್ಷಗಳ ಯೋಜನೆಯ ಜೀವಿತಚಕ್ರದಲ್ಲಿ 5289 ಕೋಟಿ ರೂ. ಮೌಲ್ಯದ ಉಚಿತ ವಿದ್ಯುತ್ ಮತ್ತು 9581 ರೂ. ಜಲ ಬಳಕೆ ಶುಲ್ಕ ವಿಧಿಸುವ ಮೂಲಕ ಪ್ರಯೋಜನ ಪಡೆಯಲಿದೆ.

***



(Release ID: 1690496) Visitor Counter : 251