ಪ್ರಧಾನ ಮಂತ್ರಿಯವರ ಕಛೇರಿ
ಗುರು ಗೋವಿಂದ ಸಿಂಗ್ ಜೀ ಅವರ ಆದರ್ಶಗಳ ಸ್ಫೂರ್ತಿಯಿಂದ ದೇಶ ಮುಂದೆ ಸಾಗುತ್ತಿದೆ: ಪ್ರಧಾನಿ ನರೇಂದ್ರ ಮೋದಿ
प्रविष्टि तिथि:
20 JAN 2021 3:29PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರು ಗೋವಿಂದ್ ಸಿಂಗ್ ಜೀ ಅವರ ಪ್ರಕಾಶ ಪೂರಬ್ ಸಂದರ್ಭದಲ್ಲಿ ನಮನ ಸಲ್ಲಿಸಿದ್ದಾರೆ. ಈ ಪವಿತ್ರ ಸಂದರ್ಭದಲ್ಲಿ ಅವರು ದೇಶಕ್ಕೆ ಶುಭ ಕೋರಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಂದು ಉತ್ತರ ಪ್ರದೇಶದಲ್ಲಿ ಪ್ರಧಾನಮಂತ್ರಿ ವಸತಿ ಯೋಜನೆ - ಗ್ರಾಮೀಣ ಅಡಿಯಲ್ಲಿ 6 ಲಕ್ಷ ಫಲಾನುಭಾವಿಗಳಿಗೆ ಆರ್ಥಿಕ ನೆರವು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಪ್ರಧಾನಮಂತ್ರಿಯವರು ಫಲಾನುಭವಿಗಳಿಗೆ ಶುಭಕೋರಿ, ಪ್ರಕಾಶ ಪೂರಬ್ ಸಂದರ್ಭದಲ್ಲಿ ಶುಭಾಶಯ ಸಲ್ಲಿಸಿದರು. ಗುರು ಸಾಹೀಬ್ ತಮ್ಮ ಬಗ್ಗೆ ಕೃಪೆ ತೋರಿದೆ ಎಂದ ಅವರು, ಅದರ ಸೇವೆ ಮಾಡಲು ತಮಗೆ ಅಪಾರ ಅವಕಾಶ ನೀಡಿದೆ ಎಂದರು. ಗುರು ಸಾಹೀಬ್ ಅವರ ಜೀವನ ಮತ್ತು ಸಂದೇಶ ಸೇವೆ ಮತ್ತು ಸತ್ಯದ ಮಾರ್ಗದಲ್ಲಿ ಸಾಗುತ್ತಾ ಸವಾಲುಗಳನ್ನು ಎದುರಿಸಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದರು. ಈ ಮಟ್ಟದ ಶಕ್ತಿ ಮತ್ತು ಧೈರ್ಯವು ಸೇವೆ ಮತ್ತು ಸತ್ಯದ ಸ್ಫೂರ್ತಿಯಿಂದ ಹೊರಹೊಮ್ಮುತ್ತದೆ ಮತ್ತು ದೇಶವು ಈ ಹಾದಿಯಲ್ಲಿ ಸಾಗಬೇಕು ಎಂದು ಗುರು ಗೋವಿಂದ್ ಸಿಂಗ್ ಜಿ ತೋರಿಸಿದ್ದಾರೆ ಎಂದು ಶ್ರೀ ಮೋದಿ ಹೇಳಿದರು.
***
(रिलीज़ आईडी: 1690445)
आगंतुक पटल : 200
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam