ಭೂವಿಜ್ಞಾನ ಸಚಿವಾಲಯ

ಭಾರತ ಮತ್ತು ಯುಎಇ ನಡುವೆ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 13 JAN 2021 1:03PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ರಾಷ್ಟ್ರೀಯ ಹವಾಮಾನ ಕೇಂದ್ರ (ಎನ್‌.ಸಿ.ಎಂ) ಮತ್ತು ಭಾರತದ ಭೂ ವಿಜ್ಞಾನ ಸಚಿವಾಲಯ (ಎಂಒಇಎಸ್) ನಡುವಿನ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರದ ಕುರಿತ ತಿಳಿವಳಿಕೆ ಒಪ್ಪಂದ (ಎಂ.ಓಯು.)ಕ್ಕೆ ತನ್ನ ಅನುಮೋದನೆ ನೀಡಿದೆ.

ತಿಳಿವಳಿಕೆ ಒಪ್ಪಂದ ಭೂಕಂಪನಶಾಸ್ತ್ರ ಮತ್ತು ಸಾಗರ ಸೇವೆಗಳು, ಅಂದರೆ ರೆಡಾರ್, ಉಪಗ್ರಹ, ಅಲೆಗಳ ಮಾಪನ, ಭೂಕಂಪ ಮತ್ತು ಹವಾಮಾನ ಕೇಂದ್ರಗಳ ಜ್ಞಾನ, ದತ್ತಾಂಶ ಮತ್ತು ಹವಾಮಾನ ಕುರಿತ ಕಾರ್ಯಾಚರಣೆ ಉತ್ಪನ್ನಗಳ ವಿನಿಮಯಕ್ಕೆ ಅವಕಾಶ ನೀಡುತ್ತದೆ.

  1. ಸಂಶೋಧನೆ, ತರಬೇತಿ, ಸಮಾಲೋಚನೆ, ಹವಾಮಾನ ಮಾಹಿತಿ ಸೇವೆಗಳ ಮೇಲೆ ಕೇಂದ್ರೀಕರಿಸಿದ, ಈಗ ಪ್ರಸಾರಕ್ಕಾಗಿ ಉಪಗ್ರಹ ದತ್ತಾಂಶ ಬಳಕೆ ಹಾಗೂ ಉಷ್ಣವಲಯದ ಚಂಡಮಾರುತಗಳ ಮುನ್ಸೂಚನೆಗಾಗಿ ವಿಜ್ಞಾನಿಗಳು, ಸಂಶೋಧನಾ ವಿದ್ವಾಂಸರು ಮತ್ತು ತಜ್ಞರು ಇತರರ ಅನುಭವ / ಭೇಟಿಗಳ ವಿನಿಮಯ.
  2. ಸಾಮಾನ್ಯ ಹಿತಾಸಕ್ತಿ ಚಟುವಟಿಕೆಗಳಿಗೆ ಸಂಬಂಧಿಸಿದ ವೈಜ್ಞಾನಿಕ ಮತ್ತು ತಾಂತ್ರಿಕ ಮಾಹಿತಿಯ ವಿನಿಮಯ.
  3. ದ್ವಿಪಕ್ಷೀಯ ವೈಜ್ಞಾನಿಕ ಮತ್ತು ತಾಂತ್ರಿಕ ವಿಚಾರಸಂಕಿರಣಗಳು / ಕಾರ್ಯಾಗಾರಗಳು / ಸಮ್ಮೇಳನಗಳು ಮತ್ತು ತಿಳಿವಳಿಕೆ ಒಪ್ಪಂದದಲ್ಲಿ ಉಲ್ಲೇಖಿಸಲಾದ ಸಹಕಾರ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಎರಡೂ ದೇಶಗಳ ಆಸಕ್ತಿಯ ಕುರಿತ ತರಬೇತಿ ಕೋರ್ಸ್‌ ಗಳ ಆಯೋಜನೆ.
  4. ಇಬ್ಬರೂ ಪಕ್ಷಕಾರರು ಪರಸ್ಪರ ಒಪ್ಪಿದ ಇತರ ಸಹಕಾರ ಕ್ಷೇತ್ರಗಳು.
  5. ಸಾಗರ ಜಲದ ಮೇಲೆ ಪರಸ್ಪರ ಒಪ್ಪಂದದ ಮೇಲೆ ಹವಾಮಾನ ವೀಕ್ಷಣಾ ಜಾಲಗಳ ನಿಯೋಜನೆ.  
  6. ಸುನಾಮಿ ಮಾದರಿಗಳ ವಿಶೇಷ ಸಾಮರ್ಥ್ಯಗಳ ಅಭಿವೃದ್ಧಿಯಲ್ಲಿ ಸಹಕಾರವು ಒಮಾನ್ ಸಮುದ್ರ ಮತ್ತು ಅರಬ್ಬಿ ಸಮುದ್ರದ ಮೂಲಕ ಹರಡುವ ಸುನಾಮಿಗಳ ವೇಗದ ಮತ್ತು ಹೆಚ್ಚು ವಿಶ್ವಾಸಾರ್ಹ ಮುನ್ಸೂಚನೆಗಳಿಗಾಗಿ ಸಂಶೋಧನೆ ನಡೆಸುತ್ತದೆ, ಇದು ಭಾರತದ ಕರಾವಳಿ ಪ್ರದೇಶಗಳು ಮತ್ತು ಯುಎಇಯ ಈಶಾನ್ಯ ಭಾಗದ ಮೇಲೆ ಪರಿಣಾಮ ಬೀರುತ್ತದೆ.
  7. ಸುನಾಮಿ ಮುನ್ನೆಚ್ಚರಿಕೆ ಕಾರ್ಯಾಚರಣೆಯನ್ನು ಬೆಂಬಲಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಮುನ್ನೆಚ್ಚರಿ ಮಾದರಿ ತಂತ್ರಾಂಶ ರೂಪದಲ್ಲಿ ಸುನಾಮಿಯ ಬಗ್ಗೆ ಆದಷ್ಟು ಮೊದಲು ಮುನ್ನೆಚ್ಚರಿಕೆ ನೀಡುವ ಕೇಂದ್ರ (ಟಿಇಯುಸಿ)ವನ್ನು ಬೆಂಬಲಿಸಲು ಸಹಕಾರ.
  8. ಅರಬ್ಬಿ ಸಮುದ್ರ ಮತ್ತು ಒಮಾನ್ ಸಮುದ್ರದಲ್ಲಿ ಸುನಾಮಿಯಿಂದ ಉಂಟಾಗಬಹುದಾದ ಭೂಕಂಪ ಚಟುವಟಿಕೆಗಳ ನಿಗಾಕ್ಕಾಗಿ ಭಾರತದ ದಕ್ಷಿಣ ಮತ್ತು ಪಶ್ಚಿಮ ಮತ್ತು ಯುಎಇಯ ಉತ್ತರ ಭಾಗದಲ್ಲಿರುವ ಕೆಲವು ಭೂಕಂಪನ ಕೇಂದ್ರಗಳ ನೈಜ-ಸಮಯದ ಭೂಕಂಪನ ದತ್ತಾಂಶವನ್ನು ಹಂಚಿಕೊಳ್ಳುವುದು.
  9. ಭೂಕಂಪನಶಾಸ್ತ್ರ ಕ್ಷೇತ್ರದಲ್ಲಿ ಸಹಕಾರ, ಇದರಲ್ಲಿ ಅರಬ್ಬಿ ಸಮುದ್ರ ಮತ್ತು ಓಮನ್ ಸಮುದ್ರದಲ್ಲಿ ಸುನಾಮಿ ಅಲೆಗಳನ್ನು ಎಬ್ಬಿಸುವ ಸಾಮರ್ಥ್ಯ ಹೊಂದಿರುವ ಭೂಕಂಪನ ಚಟುವಟಿಕೆಗಳ ಅಧ್ಯಯನವನ್ನೂ ಒಳಗೊಂಡಿದೆ.
  10. ಜ್ಞಾನ ವಿನಿಮಯದ ಮೂಲಕ ಮರಳು ಮತ್ತು ಧೂಳಿನ ಬಿರುಗಾಳಿಗಳ ಆರಂಭಿಕ ಮುನ್ನೆಚ್ಚರಿಕೆಗಳ ಕುರಿತಂತೆ ಸಹಕಾರ.

ಹಿನ್ನೆಲೆ:

ಹವಾಮಾನ ಅವಲಂಬಿತ ವಲಯಗಳ ಆರ್ಥಿಕತೆಯ ದಕ್ಷತೆ ಹೆಚ್ಚಳಕ್ಕೆ ಹವಾಮಾನ ಸೇವೆಗಳು ನಿರ್ಣಾಯಕ ಕೊಡುಗೆಗಳನ್ನು ನೀಡುತ್ತವೆ; ಮತ್ತು ಹವಾಮಾನ-ಅವಲಂಬಿತ ಆರ್ಥಿಕ ಕ್ಷೇತ್ರಗಳಾದ ಕೃಷಿ, ಸಾರಿಗೆ, ನೀರು ಇತ್ಯಾದಿಗಳಲ್ಲಿ ಅಪಾಯವನ್ನು ನಿರ್ವಹಿಸುವಲ್ಲಿ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಆಧಾರವಾಗಿದೆ. ದೇಶಗಳು ಮುನ್ನೆಚ್ಚರಿಕೆ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವುದರಿಂದ ಮತ್ತು ಹವಾಮಾನ ಮತ್ತು ಮುನ್ಸೂಚನೆ ಸೇವೆಗಳನ್ನು ಆಧುನೀಕರಿಸುವುದರಿಂದ ಪ್ರಾದೇಶಿಕ ಮತ್ತು ಜಾಗತಿಕ ಸಹಕಾರದ ಮೂಲಕ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಬಹುದಾಗಿದೆ. ಹವಾಮಾನದ ವಿಕಸನ ಸ್ವರೂಪದಿಂದಾಗಿ, ಪ್ರಾದೇಶಿಕ ಸಹಯೋಗ ಬದಲಾಗುತ್ತಿರುವ ಹವಾಮಾನ ಮಾದರಿಗಳ ತಿಳಿವಳಿಕೆಯನ್ನು ಸುಧಾರಿಸಲು, ಪರಿಣಾಮಕಾರಿ ಪ್ರತಿಕ್ರಿಯೆ ತಂತ್ರಗಳನ್ನು ರೂಪಿಸಲು, ಕಡಿಮೆ ಹೂಡಿಕೆ ವೆಚ್ಚ ಮತ್ತು ಪ್ರಾದೇಶಿಕವಾಗಿ ಸಂಬಂಧಿಸಿದ ತಾಂತ್ರಿಕ ಆವಿಷ್ಕಾರಗಳನ್ನು ಉತ್ತೇಜಿಸಲು ಮತ್ತು ಹವಾಮಾನ ಸೇವೆಗಳ ಆಧುನೀಕರಣ ಮತ್ತು ಸುಸ್ಥಿರತೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ಬಹು-ಅಪಾಯದ ಮುನ್ನೆಚ್ಚರಿಕೆ ವ್ಯವಸ್ಥೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವಕ್ಕೆ ಸಂಬಂಧಿಸಿದ ಚಟುವಟಿಕೆಗಳ ವಿಷಯದಲ್ಲಿ ಎಂ...ಎಸ್. (ಭಾರತ) ಮತ್ತು ಎನ್.ಸಿ.ಎಂ.-ಯುಎಇಯಲ್ಲಿ ಸಹಭಾಗಿತ್ವವು ಪ್ರದೇಶದ ಆರ್ಥಿಕ ಬೆಳವಣಿಗೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.

ಭಾರತ ಮತ್ತು ಎನ್‌.ಸಿ.ಎಂ-ಯುಎಇಯ ಆಯಾ ಸಂಸ್ಥೆಗಳು ನಡೆಸುತ್ತಿರುವ ವೈಜ್ಞಾನಿಕ ಚಟುವಟಿಕೆಗಳನ್ನು 2019 ನವೆಂಬರ್ 8ರಂದು ಎಂ...ಎಸ್.ನಲ್ಲಿ ಯುಎಇ ನಿಯೋಗದ ಭೇಟಿಯ ಸಂದರ್ಭದಲ್ಲಿ ಚರ್ಚಿಸಲಾಯಿತು ಮತ್ತು ಸಂಶೋಧನೆಯ ಅನೇಕ ಸಾಮಾನ್ಯ ಕ್ಷೇತ್ರಗಳನ್ನು ಕಂಡುಕೊಳ್ಳಲಾಯಿತು. ಭಾರತದ ಕರಾವಳಿ ಪ್ರದೇಶಗಳು ಮತ್ತು ಯುಎಇಯ ಈಶಾನ್ಯದ ಮೇಲೆ ಪರಿಣಾಮ ಬೀರುವ ಒಮಾನ್ ಸಮುದ್ರ ಮತ್ತು ಅರಬ್ಬಿ ಸಮುದ್ರದ ಮೂಲಕ ಸುನಾಮಿಗಳು ಹರಡುವ ವೈಜ್ಞಾನಿಕ ಮತ್ತು ತಾಂತ್ರಿಕ ಸಹಯೋಗಗಳಲ್ಲಿ ಎರಡೂ ಕಡೆಯವರು ಆಸಕ್ತಿ ತೋರಿಸಿದ್ದಾರೆ.

***



(Release ID: 1688288) Visitor Counter : 164