ನೀತಿ ಆಯೋಗ

ರಾಷ್ಟ್ರೀಯ ಯುವ ದಿನ: ಅಟಲ್ ಟಿಂಕರಿಂಗ್ ಲ್ಯಾಬ್ ಕೈಪಿಡಿ ಬಿಡುಗಡೆ

Posted On: 12 JAN 2021 7:16PM by PIB Bengaluru

ಅಟಲ್ ಇನೋವೇಷನ್ ಮಿಷನ್ ಮತ್ತು ನೀತಿ ಆಯೋಗದಿಂದ ಹೊಸ ಆವೃತ್ತಿಯ ಅಟಲ್ ಟಿಂಕರಿಂಗ್ ಲ್ಯಾಬ್ ಕೈಪಿಡಿಯನ್ನು ಲೋಕಾರ್ಪಣೆ ಮಾಡಲಾಗಿದೆ. ಇದರಿಂದಾಗಿ ವಿವರವಾಗಿ ಅಟಲ್ ಟಿಂಕರಿಂಗ್ ಲ್ಯಾಬ್ ಗಳ ಸ್ಥಾಪನೆ ಮತ್ತು ಆತ್ಮನಿರ್ಭರ್ ಭಾರತ್ಯಾತ್ರೆಗೆ ನಾವೀನ್ಯತೆ ದೊರೆತಂತಾಗಿದೆ.   

ಕಾಕತಾಳೀಯವೆಂದರೆ ಸ್ವಾಮಿ ವಿವೇಕಾನಂದ ಅವರ ಜನ್ಮದಿನದ ಸಂದರ್ಭದಲ್ಲೇ ಪ್ರಕಟಣೆ ಹೊರ ಬಿದ್ದಿದೆ. ಸ್ವಾಮಿ ವಿವೇಕಾನಂದರ ಜನ್ನ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿಯೂ ಆಚರಿಸುತ್ತಿದ್ದು, ಯುವ ಸಮೂಹ ತಮ್ಮ ಜೀವನದುದ್ದಕ್ಕೂ ಬಲಿಷ್ಠ ದೇಶ ನಿರ್ಮಾಣ ಮಾಡಲು ಪ್ರಮುಖ ಪಾತ್ರ ವಹಿಸಬೇಕು ಎಂದು ಸ್ವಾಮಿ ವಿವೇಕಾಂದರು ಧ್ವನಿ ಎತ್ತಿದ್ದರು

ದಿ ಅಟಲ್ ಟಿಂಕರಿಂಗ್ ಲ್ಯಾಬ್ ಹ್ಯಾಂಡ್ ಬುಕ್ 2.0” ಎನ್ನುವ ಹೆಸರಿನ ಕೈಪಿಡಿ ಇದಾಗಿದ್ದುಮೂಲ ಚೌಕಟ್ಟಿನ ಪ್ರಾಯೋಗಿಕ ಮಾರ್ಗಸೂಚಿ, ಆಯ್ಕೆ, ಸ್ಥಾಪನೆ ಮತ್ತು ಮಹತ್ವಾಕಾಂಕ್ಷಿ ಎಟಿಎಲ್ ಕಾರ್ಯಕ್ರಮದ ಅನುಷ್ಟಾನ, ಆಯಾಮಗಳನ್ನು ಇದು ಒಳಗೊಂಡಿದೆ.

ಕೈಪಿಡಿ ಎಐಎಂನ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿದೆ. ದೇಶದಾದ್ಯಂತ ಶಾಲೆಗಳಿಗೆ  ಕೈಪಿಡಿ  ಸಮಗ್ರವಾಗಿ ಮಾರ್ಗದರ್ಶನ ಮಾಡಲಿದ್ದು, ತಳಮಟ್ಟದಲ್ಲಿ ಎಟಿಎಲ್ ಗಳ ತಾಂತ್ರಿಕತೆ, ದೃಢವಾದ ಕಾರ್ಯವಿಧಾನದ ಬಗ್ಗೆ ತಿಳಿಸಿಕೊಡುತ್ತದೆ.  

ಕಾರ್ಯಕ್ರಮದ ಅಂಗವಾಗಿ ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ವಿಶೇಷ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ. “ ಇಂದು ವಿವೇಕಾನಂದ ಜಯಂತಿ. ನಾವು ಇಂದು 2ನೇ ಆವೃತ್ತಿಯ ಎಟಿಎಲ್ ಕೈಪಿಡಿಯನ್ನು ಬಿಡುಗಡೆ ಮಾಡಿದ್ದು, ಇದು ಕಳೆದ ಮೂರು ವರ್ಷಗಳಲ್ಲಿ ಅಟಲ್ ಇನೋವೇಷನ್ ಮಿಷನ್ ಮಾಡಿರುವ ಕೆಲಸವನ್ನು ಒಳಗೊಂಡಿದೆ. ಜತೆಗೆ ಎಟಿಎಲ್ ತಂಡ ನಾಲ್ಕು ಪ್ರಮುಖ ಆಧಾರ ಸ್ಥಂಭಗಳನ್ನು ರೂಪಿಸಿದೆ. ಆಯ್ಕೆ, ಸ್ಥಾಪನೆಸಕ್ರಿಯಗೊಳಿಸುವಿಕೆ ಮತ್ತು ಆಚರಣೆ ಎಂಬ ಅಂಶಗಳನ್ನು ಒಳಗೊಂಡಿದೆ. ಇದು ನೀತಿ ಆಯೋಗದ ಮತ್ತೊಂದು ಪ್ರಮುಖ ಅಸ್ತ್ರವಾದ ಗುಣಮಟ್ಟದ ನೀತಿ ಕಾರ್ಯಗಳು ಮತ್ತು  ತಳಮಟ್ಟದ ಅನುಭವಗಳು, ಉತ್ತಮ ಅಭ್ಯಾಸಗಳೊಂದಿಗೆ ಬೇರೂರಿದೆಎಂದು ಹೇಳಿದ್ದಾರೆ.

ಅಟಲ್ ಇನೋವೇಷನ್ ಮಿಷನ್ ನಿರ್ದೇಶಕರು ಮತ್ತು ನೀತಿ ಆಯೋಗದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಆರ್. ರಾಮನನ್ ಅವರು ಕೈಪಿಡಿ ಬಿಡುಗಡೆಯ ವರ್ಚುವಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಟಲ್ ಇನೋವೇಷನ್ ಮಿಷನ್ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು. ಅಟಲ್ ಟಿಂಕರಿಂಗ್ ಲ್ಯಾಬ್ ಗಳು ಮತ್ತು ಇದರ ಲಾಭಗಳ ಕುರಿತು ಭಾಗವಹಿಸಿದ್ದವರಿಗೆ ಮಾಹಿತಿ ನೀಡಿದರು

ಪುಸ್ತಕ ಎಲ್ಲಾ ಶಾಲೆಗಳು, ಮಾರ್ಗದರ್ಶಕರು, ಅಟಲ್ ಟಿಂಕರಿಂಗ್ ಲ್ಯಾಬ್ ಕುರಿತು ಹೊಸತನ, ಆಯಾಮಗಳನ್ನು ತಿಳಿದುಕೊಳ‍್ಳುವವರಿಗೆ ಸದುಪಯೋಗವಾಗಲಿದೆ. ಪುಸ್ತಕದ ಬಳಕೆಯನ್ನು ಸರಳೀಕರಣಗೊಳಿಸಲಾಗಿದೆ. ಇಲ್ಲಿರುವ ಕ್ಯೂಆರ್ ಕೋಡ್ ನಿಂದ ಹೆಚ್ಚು ಸಂಪರ್ಕಕೊಂಡಿ ದೊರೆಯಲಿದ್ದು, ಕಾರ್ಯಕ್ರಮದ ಆಯಾಮದ ಬಗ್ಗೆ ಮಾಹಿತಿ ಪಡೆಯಬಹುದುಎಂದು ಮಾಹಿತಿ ನೀಡಿದರು.

ನೀತಿ ಆಯೋಗದ ಎಐಎಂ ಮಿಷನ್ ಉನ್ನತ ಮಟ್ಟದ ಸಮಿತಿ, [ಎಂ.ಎಚ್.ಎಲ್.ಸಿ] ಮಂಡಳಿ ಸದಸ್ಯ, ಡಾ. ವಿಜಯ್ ಚವುತಿವಾಲ ಅವರು ಸ್ವಾಮಿ ವಿವೇಕಾನಂದರ ಉಕ್ತಿಯನ್ನು ಉಲ್ಲೇಖಿಸಿದರು. ವಿವೇಕಾನಂದರು ತಮ್ಮ ಭಾಷಣದಲ್ಲಿ ಉನ್ನತ ಆಶಯ ಮತ್ತು ಧೈರ್ಯಶಾಲಿ ಗುರಿಗಳನ್ನು ಸಾಧಿಸಲು ಮುಂದಾಗಬೇಕು ಎಂದು ಹೇಳಿದ್ದು, ಅವರ ಬೋಧನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು

ಎಟಿಎಲ್ ನಮ್ಮೆಲ್ಲರ ಕಲಿಕೆಗೆ ಒಂದು ಉನ್ನತ ಅನುಭವವಾಗಿದ್ದು, ಪರಸರ ಸ್ನೇಹಿ ನಾವಿನ್ಯತೆಯನ್ನು ಯುವ ಮನಸ್ಸುಗಳಿಗೆ ತಲುಪಿಸಲು ಅಟಲ್ ಇನೋವೇಷನ್ ಮಿಷನ್ ಸಾಕ್ಷಿಯಾಗಿದೆ. ಎಲ್ಲಾ ಶಾಲೆಗಳು ಮತ್ತು ವಿದ್ಯಾರ್ಥಿಗಳು ಪ್ರಕಟಣೆಯ ಪೂರ್ಣ ಲಾಭ ಪಡೆಯಬೇಕು. ವಿದ್ಯಾರ್ಥಿಗಳು ಅಪಾಯವನ್ನು ಸ್ವೀಕರಿಸಬೇಕು ಮತ್ತು ವೈಫಲ್ಯಗಳ ಬಗ್ಗೆ ಭೀತಿಗೊಳಗಾಗಬಾರದು ಎಂದು ಕಿವಿ ಮಾತು ಹೇಳಿದರು.

ಕೈಪಿಡಿಯು ಕೆಳಗಿನ ಆನ್ಲೈನ್ ಕೊಂಡಿಯಲ್ಲಿದೆ ಮತ್ತು ಡೌನ್ ಲೋಡ್ ಮಾಡಿಕೊಳ್ಳಬಹುದು. https://aim.gov.in/pdf/ATL_Handbook_2021.pdf

ಎಟಿಎಲ್ ಬಗ್ಗೆ

ಅಟಲ್ ಟಿಂಕರಿಂಗ್ ಲ್ಯಾಬ್ ಯುವ ಮನಸ್ಸುಗಳ ಆಲೋಚನೆಗಳಿಗೆ ಆಕಾರ ನೀಡುತ್ತದೆ. ನಾವಿನ್ಯತೆಯ ಕೌಶಲ್ಯಗಳನ್ನು ಕಲಿಯಲು ಅವಕಾಶ ಕಲ್ಪಿಸುತ್ತದೆ. ಉದ್ಯಮಶೀಲತೆಯನ್ನು ಬೆಳೆಸಲು ಮತ್ತು ನಾವೀನ್ಯತೆ ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ. ನೀತಿ ಆಯೋಗ ದೇಶಾದ್ಯಂತ 7000 ಕ್ಕೂ ಹೆಚ್ಚು ಎಟಿಎಲ್ ಗಳನ್ನು ಸ್ಥಾಪಿಸಿದೆ. ಗ್ರೇಡ್ 6 ರಿಂದ ಗ್ರೇಡ್ 8 ಒಳಗಿನ ಮೂರು ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ನಾವಿನ್ಯ ಮನಸ್ಥಿತಿಯನ್ನು ಹೊಂದಲು ಸಹಕಾರಿಯಾಗಿದೆ

***




(Release ID: 1688156) Visitor Counter : 273