ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

ಪಕ್ಷಿ ಜ್ವರ: ವರದಿ

Posted On: 11 JAN 2021 3:11PM by PIB Bengaluru

ದೇಶದಲ್ಲಿ ಪಕ್ಷಿ ಜ್ವರ 2021 ಜನವರಿ 11 ವರೆಗೆ 10 ರಾಜ್ಯಗಳಲ್ಲಿ ದೃಢಪಟ್ಟಿದೆ. ರಾಜಸ್ತಾನದ ಬಿಲ್ವಾರ, ಕರವುಲಿ, ಟಾಂಕ್ ಜಿಲ್ಲೆಗಳು ಮತ್ತು ಗುಜರಾತ್ ವಲ್ಸದ್, ವಡೋದರ ಮತ್ತು ಸೂರತ್ ಜಿಲ್ಲೆಗಳಲ್ಲಿ ಕಾಗೆಗಳು ಮತ್ತು ವಲಸೆ ಹಕ್ಕಿಗಳಿಗೆ ಸೋಂಕು ತಗುಲಿರುವುದನ್ನು ಪ್ರಾಣಿಗಳ ರಾಷ್ಟ್ರೀಯ ರೋಗ ಪತ್ತೆ ಮಾಡುವ ಐಸಿಎಆರ್ನಿಶಾದ್ ಸಂಸ್ಥೆ ದೃಢಪಡಿಸಿದೆ.

ಉತ್ತರ ಖಂಡ್ ರಾಜ್ಯದ ಡೆಹ್ರಾಡೂನ್ ಮತ್ತು ಕೋಟ್ವಾರ್ ಜಿಲ್ಲೆಗಳಲ್ಲಿ ಕಾಗೆಗಳು ಮೃತಪಟ್ಟಿರುವುದನ್ನು ಖಚಿತಪಡಿಸಲಾಗಿದೆ. ನವದೆಹಲಿ ಮತ್ತು ಅಲ್ಲಿನ ಸಂಜಯ್ ಕೆರೆ ಪ್ರದೇಶಗಳಲ್ಲಿ ಕಾಗೆಗಳು, ಬಾತು ಕೋಳಿಗಳು ಮೃತಪಟ್ಟಿರುವುದು ದೃಢಪಟ್ಟಿದೆ.

ಮುಂದುವರೆದಂತೆ ಮಹಾರಾಷ್ಟ್ರದ ಪರಬಾನಿ ಜಿಲ್ಲೆಯಲ್ಲಿ ಕೋಳಿಸಾಕಾಣಿಕೆ ಕೇಂದ್ರದಲ್ಲಿ ಸೋಂಕು ಪತ್ತೆಯಾಗಿದ್ದು, ಮುಂಬೈ, ಥಾಣೆ, ಡಪೋಲಿ, ಬೀಡ್ ಜಿಲ್ಲೆಗಳ ಕಾಗೆಗಳಲ್ಲಿ ಪಕ್ಷಿ ಜ್ವರ ಇರುವುದು ಖಚಿತಪಟ್ಟಿದೆ.

ಹರಿಯಾಣದಲ್ಲಿ ಪಕ್ಷಿ ಜ್ವರ ಕಂಡು ಬಂದಿರುವ ಪ್ರದೇಶಗಳಲ್ಲಿ ಪಕ್ಷಿಗಳ ಸಾಮೂಹಿಕ ನಾಶ ಮುಂದುವರೆದಿದ್ದು, ಸೋಂಕು ಮತ್ತಷ್ಟು ಹರಡದಂತೆ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯ ಪ್ರಗತಿಯಲ್ಲಿದೆ. ಕೇಂದ್ರ ತಂಡ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದೆ ಮತ್ತು 2021 ಜನವರಿ 11 ರಂದು ಸೋಂಕಿತ ಪ್ರದೇಶಳಿಗೆ ತೆರಳಿದ್ದು, ಸಾಂಕ್ರಾಮಿಕ ರೋಗಶಾಸ್ತ್ರದ ತನಿಖೆಯಲ್ಲಿ ನಿರತವಾಗಿದೆ.

ಪಕ್ಷಿ ಜ್ವರ ಕುರಿತು ತಪ್ಪು ಮಾಹಿತಿ ಹರಡದಂತೆ ಮತ್ತು ಕುರಿತು ಸೂಕ್ತ ರೀತಿಯಲ್ಲಿ ಜಾಗೃತಿ ಮೂಡಿಸಬೇಕೆಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಜಲ ಮೂಲಗಳು, ಜೀವಂತ ಪಕ್ಷಿಗಳಿರುವ ಮಾರುಕಟ್ಟೆಗಳು, ಕೋಳಿ ಸಾಕಾಣಿಕೆ ಕೇಂದ್ರಗಳು, ಮತ್ತಿತರ ಕಡೆಗಳಲ್ಲಿ ಕಣ್ಗಾವಲು ಹೆಚ್ಚಿಸಬೇಕು. ಕುಕ್ಕುಟ ಉದ್ಯಮ ವಲಯದಲ್ಲಿ ಸೂಕ್ತ ರೀತಿಯಲ್ಲಿ ವಿಲೇವಾರಿ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಜೈವಿಕ ಸುರಕ್ಷತೆಯನ್ನು ಬಲಗೊಳಿಸಬೇಕು ಎಂದು ಹೇಳಿದೆ.

ಸೋಂಕು ನಿಯಂತ್ರಣ ಭಾಗವಾಗಿ ನಡೆಸುವ ಸಾಮೂಹಿಕ ನಾಶ ಕಾರ್ಯಾಚರಣೆ ಸಂದರ್ಭದಲ್ಲಿ ಸುಕ್ಷಿತ ಸಾಧನಗಳಾದ ಪಿಪಿಇ ಕಿಟ್ ಗಳು ಹಾಗೂ ಇತರ ಸಲಕರಣೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಬೇಕು. ಕೇಂದ್ರ ಪಶು ಸಂಗೋಪನೆ ಮತ್ತು ಡೈರಿ ಇಲಾಖೆಯ ಕಾರ್ಯದರ್ಶಿ ಅವರು ರಾಜ್ಯಗಳ ಪಶು ಸಂಗೋಪನಾ ಇಲಾಖೆಗೆ ಸೂಚನೆ ನೀಡಿ, ಆರೋಗ್ಯ ಪ್ರಾಧಿಕಾರಗಳ ಜತೆ ಸೂಕ್ತ ಸಂಪರ್ಕ ಮತ್ತು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಪಕ್ಷಿಜ್ವರದ ಪರಿಸ್ಥಿತಿ ಕುರಿತು ಸೂಕ್ತ ಕಣ್ಗಾವಲು ಹಾಕಬೇಕು ಮತ್ತು ಸೋಂಕು ಮನುಷ್ಯರಿಗೆ ಹರಡಂತೆ ನೋಡಿಕೊಳ್ಳಬೇಕೆಂದು ಸೂಚಿಸಿದ್ದಾರೆ.

***



(Release ID: 1687667) Visitor Counter : 180