ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರದಿಂದ ಕೋವಿಡ್-19 ಲಸಿಕೆ ಬಿಡುಗಡೆ


ಕೋ-ವಿನ್ ನಿರ್ವಹಣೆಗೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗದರ್ಶನ

ಉತ್ಕೃಷ್ಟ ತಂತ್ರಜ್ಞಾನದಿಂದ ಭದ್ರ ಅಡಿಪಾಯ ಮತ್ತು ವಿಶ್ವದ ಬೃಹತ್ ಲಸಿಕಾ ಆಂದೋಲನಕ್ಕೆ ಬೆಂಬಲ

Posted On: 10 JAN 2021 2:48PM by PIB Bengaluru

ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕೆಗೆ ಹಾಕಲು ಭರದ ಸಿದ್ಧತೆಗಳು ನಡೆಯುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಾಗೂ ಭಾಗಿದಾರರೊಂದಿಗೆ ನಿಕಟ ಸಹಭಾಗಿತ್ವವನ್ನು ಸಾಧಿಸಿ ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್ ಎಫ್ ಡಬ್ಲೂ) ಇಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳೊಂದಿಗೆ ಲಸಿಕೆ ಹಾಕುವ ಕಾರ್ಯದಲ್ಲಿ ಆರಂಭದಿಂದ ಕೊನೆಯವರೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುವ ಕೋವಿನ್ ಸಾಫ್ಟ್ ವೇರ್ ಕುರಿತು ಸಮಾಲೋಚನೆ ನಡೆಸಿತು.

ಸಭೆಯ ಅಧ್ಯಕ್ಷತೆಯನ್ನು ಕೋವಿಡ್ ನಿಯಂತ್ರಣದ ತಂತ್ರಜ್ಞಾನ ಮತ್ತು ದತ್ತಾಂಶ ನಿರ್ವಹಣೆ ಕುರಿತ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರು, ಕೋವಿಡ್-19 ಲಸಿಕೆ ಆಡಳಿತ ನಿರ್ವಹಣೆಯ ರಾಷ್ಟ್ರೀಯ ತಜ್ಞರ ಸಮಿತಿಯ ಸದಸ್ಯ ಶ್ರೀ ರಾಮ್ ಸೇವಕ್ ಶರ್ಮಾ ಅವರು ವಹಿಸಿದ್ದರು. ಸಭೆಯಲ್ಲಿ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು, ಎನ್ಎಚ್ಎಂ ಮಿಷನ್ ನಿರ್ದೇಶಕರುಗಳು ಮತ್ತು ರಾಜ್ಯ ಲಸಿಕಾ ಅಧಿಕಾರಿಗಳು ಹಾಗೂ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ವೇಳೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಸ್ ಸಾಫ್ಟ್ ವೇರ್ ನಿರ್ವಹಣೆ ಮತ್ತು ಅದರ ಬಳಕೆ, ಅಣಕು ಲಸಿಕೆ ಹಾಕುವ ವೇಳೆ ಹೊರಹೊಮ್ಮಿದ ಅನುಭವ ಮತ್ತಿತರ ವಿಚಾರಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.   

ಶ್ರೀ ಆರ್.ಎಸ್. ಶರ್ಮಾ ಅವರು ಒಟ್ಟಾರೆ ಕೋವಿನ್ ಸಾಫ್ಟ್ ವೇರ್ ಕುರಿತು ಸ್ಥೂಲ ಒಳನೋಟವನ್ನು ನೀಡಿದರು ಮತ್ತು ಲಸಿಕೆ ಹಾಕುವ ಕಾರ್ಯಾಚರಣೆ ವೇಳೆ ತಂತ್ರಜ್ಞಾನ ಬೆಂಬಲದೊಂದಿಗೆ ಯಾವ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು. ಉತ್ಕೃಷ್ಟ, ಅವಲಂಬಿತ ಮತ್ತು ಚುರುಕುಬುದ್ದಿಯ ತಂತ್ರಜ್ಞಾನ ಲಸಿಕೆಗೆ ಭದ್ರ ಬುನಾದಿಯಾಗಲಿದೆ ಮತ್ತು ವಿಶ್ವದಲ್ಲೇ ಅತಿ ದೊಡ್ಡ ಲಸಿಕೆ ಅಭಿಯಾನ ಕೋವಿಡ್-19 ಲಸಿಕೆಗೆ ಬೆನ್ನೆಲುಬಾಗಿದೆ ಎಂದರು. ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಲಸಿಕೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ಭಾಗವಹಿಸಿದವರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಕ್ರಿಯೆ ನಾಗರಿಕ ಕೇಂದ್ರಿತವಾಗಿರಬೇಕು ಮತ್ತು ಯಾವುದೇ ಸಂದರ್ಭದಲ್ಲಿ, ಎಲ್ಲೇ ಆದರೂ ಲಸಿಕೆ ಲಭ್ಯವಾಗಲಿದೆ ಎಂಬ ಮನೋಭಾವವನ್ನು ಸೃಷ್ಟಿಸಬೇಕು ಎಂದರು. ಗುಣಮಟ್ಟಕ್ಕೆ ರಾಜಿಯಾಗದೆ, ಸರಳ ರೀತಿಯಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಬಲವಾಗಿ ಪ್ರತಿಪಾದಿಸಿದರು. ಎಲ್ಲರನ್ನು ಒಳಗೊಳ್ಳುವಿಕೆ, ವೇಗ ಹಾಗೂ ಸುಲಭ ರೀತಿಯಲ್ಲಿ ಸಾಧಿಸಬಹುದಾದ ಅಂಶವನ್ನು ಗಮನದಲ್ಲಿರಿಸಿಕೊಂಡು ವಿಭಿನ್ನ ಡಿಜಿಟಲ್ ವೇದಿಕೆಯನ್ನು ವಿನ್ಯಾಸ ಗೊಳಿಸಲಾಗಿದ್ದು, ಅದು ಪೋರ್ಟಬಲ್ ಆಗಿದೆ, ಹೊಂದಿ ಕೊಳ್ಳುತ್ತದೆ ಮತ್ತು ಅನಗತ್ಯ ಅವಲಂಬನೆಯನ್ನು ತಪ್ಪಿಸುತ್ತದೆ ಎಂದು ಅವರು ಹೇಳಿದರು.  

ಸರಿಯಾದ ಸಮಯದಲ್ಲಿ ಲಸಿಕೆ ದತ್ತಾಂಶವನ್ನು ಸಂಗ್ರಹಿಸುವ ಗಂಭೀರ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಅವರು, ಇದರಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ. ಆನ್ ಲೈನ್ ನಲ್ಲಿ ಅಥವಾ ಆಫ್ ಲೈನ್ ನಲ್ಲಿ ದತ್ತಾಂಶವನ್ನು ಪೋರ್ಟಲ್ ಮೂಲಕ ದಾಖಲಿಸಬಹುದು. ಕೆಲವು ರಾಜ್ಯಗಳಲ್ಲಿ ಸಂಪರ್ಕದ ಕೊರತೆಗಳಿಂದಾಗಿ ದತ್ತಾಂಶ ದಾಖಲೆ ಆಗಲಿದ್ದು, ಅಂತಹ ಸಂದರ್ಭಗಳಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಹೇಳಿದರು.

ಯಾವುದೇ ನಕಲು ಇಲ್ಲದಿರುವುದನ್ನು ಪ್ರತಿಯೊಬ್ಬರೂ ಖಾತ್ರಿಪಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಎಚ್ಚರಿಕೆ ನೀಡಿದರು. ಫಲಾನುಭವಿಗಳನ್ನು ಸಮಾನವಾಗಿ ಯಾವುದೇ ತಾರತಮ್ಯವಿಲ್ಲದೆ ಗುರುತಿಸಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿರು. ಆಧಾರ್ ವೇದಿಕೆ ಬಳಕೆ ಕುರಿತು ಮಾತನಾಡಿದ ಅವರು, ಫಲಾನುಭವಿಗಳು ಸದ್ಯದ ಮೊಬೈಲ್ ಸಂಖ್ಯೆ ಮತ್ತು ಆಧಾರ್ ನೋಂದಣಿಯನ್ನು ಬಳಸಿಕೊಳ್ಳಬೇಕು ಮತ್ತು ಆನಂತರ ಎಸ್ಎಂಎಸ್ ಮೂಲಕ ಸಂಪರ್ಕ ಹೊಂದಿರಬೇಕು. ಆಧಾರ್ ದೃಢೀಕರಣ ವಿಚಾರದಲ್ಲಿ ಯಾವುದೇ ನಕಲುಗೆ ಅವಕಾಶ ನೀಡಬಾರದು ಎಂದರು. ಯಾವ ವ್ಯಕ್ತಿಗೆ ಲಸಿಕೆ ಹಾಕಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸುವ ಅಗತ್ಯವಿದೆ ಎಂದು ಅವರು ಹೇಳಿದರು ಹಾಗೂ ಯಾರಿಂದ ಎಲ್ಲಿ ಮತ್ತು ಯಾವ ಲಸಿಕೆಯನ್ನು ನೀಡಲಾಗಿದೆ ಎಂಬ ಕುರಿತು ಡಿಜಿಟಲ್ ದಾಖಲೆಯನ್ನು ಇಟ್ಟುಕೊಳ್ಳಬೇಕು ಎಂದು ಅವರು ಹೇಳಿದರು. ಅಲ್ಲದೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಿರುವ ದತ್ತಾಂಶ ಸಂಗ್ರಹಣೆಯನ್ನು ಸಹಕಾರಿ ಕೆಲಸಕ್ಕೆ ಬಳಸಿಕೊಳ್ಳಬೇಕು ಮತ್ತು ತಳಮಟ್ಟದಲ್ಲಿ ಅವುಗಳನ್ನು ದೃಢೀಕರಣಗೊಳಿಸಬೇಕು ಎಂದರು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅನುಭವಗಳ ಕುರಿತು ವಿಸ್ತೃತ ಮತ್ತು ಸಮಗ್ರ ಸಮಾಲೋಚನೆಗಳು ನಡೆದವು. ಅವರ ಪ್ರತಿಕ್ರಿಯೆ ಮತ್ತು ಸಾಫ್ಟ್ ವೇರ್ ಹಾಗೂ ಶಿಷ್ಟಾಚಾರಗಳಲ್ಲಿ ನಂತರದ ಬದಲಾವಣೆಗಳನ್ನು ಆಧರಿಸಿ ಕೈಗೊಳ್ಳುವ ಬಗ್ಗೆ ಸಮಾಲೋಚಿಸಲಾಯಿತು. ಲಸಿಕೆ ಹಂಚಿಕೆ/ಯೋಜನೆ/ಸಮಯ ನಿಗದಿ, ಕಾರ್ಯ ವಿಧಾನ ಹಂಚಿಕೆ, ಲಸಿಕೆ ಹಾಕುವವರ ನಿಯೋಜನೆ, ಲಸಿಕೆ ಹಾಕುವವರಿಗೆ ಮತ್ತು ಫಲಾನುಭವಿಗಳಿಗೆ ಎಸ್ಎಂಎಸ್ ಸಂದೇಶ ರವಾನೆ ಮತ್ತು ಸಂಪರ್ಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.

***



(Release ID: 1687595) Visitor Counter : 253