ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ ಮರಣ ಪ್ರಮಾಣ ಸುಸ್ಥಿರ ಇಳಿಕೆ: ಕಳೆದ 16ದಿನಗಳಿಂದ ಪ್ರತಿದಿನ 300ಕ್ಕೂ ಕಡಿಮೆ ಸಾವು
ಬ್ರಿಟನ್ - ರೂಪಾಂತರ ಕೊರೊನಾ ಸೋಂಕಿತರ ಸಂಖ್ಯೆ 90ರಲ್ಲೇ ಸ್ಥಿರ: ಕಳೆದ 24 ಗಂಟೆಗಳಲ್ಲಿ ಹೊಸ ಪ್ರಕರಣವಿಲ್ಲ
Posted On:
10 JAN 2021 12:32PM by PIB Bengaluru
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳ ನಿರ್ದಿಷ್ಟ ಪ್ರಯತ್ನಗಳು ಮತ್ತು ಆಸ್ಪತ್ರೆಗಳಲ್ಲಿ ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆಯಿಂದಾಗಿ ಭಾರತದಲ್ಲಿ ಸೋಂಕಿತರ ಸಾವಿನ ಪ್ರಮಾಣ ಸುಸ್ಥಿರ ರೀತಿಯಲ್ಲಿ ಇಳಿಕೆಯಾಗುತ್ತಿದ್ದು, ಇಂದು ಆ ಪ್ರಮಾಣ ಶೇ.1.44ರಷ್ಟಿದೆ. ಪರಿಣಾಮಕಾರಿ ನಿಯಂತ್ರಣ ಕಾರ್ಯತಂತ್ರ, ಆಕ್ರಮಣಕಾರಿ ಪರೀಕ್ಷೆಗೆ ಮತ್ತು ನಿರ್ದಿಷ್ಟ ಮಾನದಂಡದ ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರ ಪಾಲನೆಯಿಂದಾಗಿ ಮತ್ತು ಸಮಗ್ರ ರಕ್ಷಣಾ ಶಿಷ್ಟಾಚಾರಗಳನ್ನು ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪಾಲನೆ ಮಾಡುತ್ತಿರುವುದರಿಂದ ಹೊಸದಾಗಿ ಸಾವನ್ನಪ್ಪುತ್ತಿರುವ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.
ಕಳೆದ 16 ದಿನಗಳಿಂದೀಚೆಗೆ ದೇಶದಲ್ಲಿ ಪ್ರತಿ ದಿನ 300ಕ್ಕೂ ಕಡಿಮೆ ಸಾವುಗಳು ದಾಖಲಾಗಿವೆ.

ಕೋವಿಡ್-19 ನಿರ್ವಹಣೆ ಮತ್ತು ಪ್ರತಿಸ್ಪಂದನಾ ನೀತಿ ಭಾಗವಾಗಿ ಕೇಂದ್ರ ಸರ್ಕಾರ ಕೇವಲ ಕೋವಿಡ್ ನಿಯಂತ್ರಣಕ್ಕಾಗಿ ಮಾತ್ರ ಆದ್ಯತೆ ನೀಡಿಲ್ಲ, ಜೊತೆಗೆ ಸೋಂಕಿತರ ಸಾವಿನ ಪ್ರಮಾಣ ತಗ್ಗಿಸಲು ಮತ್ತು ಜೀವಗಳನ್ನು ಉಳಿಸಲು ಆದ್ಯತೆ ನೀಡಿ, ಕೋವಿಡ್-19 ಸೋಂಕು ತೀವ್ರವಾಗಿರುವ ವ್ಯಕ್ತಿಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮನ್ವಯದ ಪ್ರಯತ್ನಗಳಿಂದಾಗಿ ದೇಶಾದ್ಯಂತ ಆರೋಗ್ಯ ಸೌಕರ್ಯಗಳು ವ್ಯಾಪಕವಾಗಿ ಬಲವರ್ಧನೆಗೊಂಡಿವೆ.
ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತಿ ಕಡಿಮೆ ಸಾವಿನ ಪ್ರಮಾಣ(109) ಇದೆ. ರಷ್ಯಾ, ಜರ್ಮನಿ, ಬ್ರೆಜಿಲ್, ಫ್ರಾನ್ಸ್, ಅಮೆರಿಕ, ಬ್ರಿಟನ್ ಮತ್ತು ಇಟಲಿ ರಾಜ್ಯಗಳಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಅಧಿಕ ಸಾವಿನ ಪ್ರಮಾಣವಿದೆ.

ಭಾರದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 2,23,335 ಇದ್ದು, ಇದು ಒಟ್ಟಾರೆ ಸಕ್ರಿಯ ಪ್ರಕರಣಗಳಲ್ಲಿ ಶೇ.2.14ರಷ್ಟು ಮಾತ್ರ. ಕಳೆದ 24 ಗಂಟೆಗಳಿಂದೀಚೆಗೆ 19,299 ಪ್ರಕರಣಗಳಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದಾಗಿ ಒಟ್ಟಾರೆ ಸಕ್ರಿಯ ಪ್ರಕರಣಗಳಲ್ಲಿ 855 ಪ್ರಕರಣ ಇಳಿಕೆಯಾಗಿದೆ.
ಕಳೆದ 24 ಗಂಟೆಗಳಿಂದೀಚೆಗೆ ಸಕ್ರಿಯ ಪ್ರಕರಣಗಳ ಅಂಕಿ-ಸಂಖ್ಯೆಯಲ್ಲಿ ಬದಲಾವಣೆಯಾಗಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಸಕಾರಾತ್ಮಕ ಬದಲಾವಣೆಗಳಾಗಿದ್ದು, 1,123 ಪ್ರಕರಣಗಳು ಸೇರ್ಪಡೆಯಾಗಿದ್ದರೆ, ರಾಜಸ್ಥಾನದಲ್ಲಿ ಗರಿಷ್ಠ ನಕಾರಾತ್ಮಕ ಬದಲಾವಣೆ ಕಂಡಿದ್ದು, 672 ಪ್ರಕರಣಗಳು ತಗ್ಗಿವೆ.

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತಿ ಕಡಿಮೆ ಇದೆ. ಭಾರತದಲ್ಲಿ 162 ಇದ್ದರೆ, ಬ್ರೆಜಿಲ್, ರಷ್ಯಾ, ಜರ್ಮನಿ, ಇಟಲಿ, ಬ್ರಿಟನ್, ಅಮೆರಿಕ ರಾಷ್ಟ್ರಗಳಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಅಧಿಕ ಸಕ್ರಿಯ ಪ್ರಕರಣಗಳಿವೆ.

ಇಂದು ಒಟ್ಟು ಗುಣಮುಖವಾಗಿರುವ ಪ್ರಕರಣಗಳು 10,075,950 ತಲುಪಿದೆ. ಚೇತರಿಕೆ ಪ್ರಮಾಣ 96.42%ಗೆ ಏರಿದೆ. ಹೊಸದಾಗಿ ಚೇತರಿಸಿಕೊಂಡಿರುವ ಪ್ರಕರಣಗಳಲ್ಲಿ ಶೇ.79.12% ರಷ್ಟು ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.
ಕೇರಳದಲ್ಲಿ ಕೋವಿಡ್ ನಿಂದ 5,424 ಸೋಂಕಿತರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಕ್ರಮವಾಗಿ 2,401 ಮತ್ತು 1,167 ಹೊಸದಾಗಿ ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಕಳೆದ 24 ಗಂಟೆಗಳಿಂದೀಚೆಗೆ ಹೊಸದಾಗಿ 18,645 ಪ್ರಕರಣಗಳು ವರದಿಯಾಗಿವೆ.
ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ. 82.25% ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.
ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 5,528 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 3,581 ಹೊಸ ಪ್ರಕರಣಗಳು ಮತ್ತು ಛತ್ತೀಸ್ ಗಢದಲ್ಲಿ 1,014 ಪ್ರಕರಣಗಳು ದೃಢಪಟ್ಟಿವೆ.

ಕಳೆದ 24 ಗಂಟೆಗಳಲ್ಲಿ 201 ಸೋಂಕಿತರು ಸಾವನ್ನಪ್ಪಿದ್ದು, ಆ ಪೈಕಿ ಶೇ.73.63ರಷ್ಟು ಪ್ರಕರಣಗಳು ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.
ಮಹಾರಾಷ್ಟ್ರದಲ್ಲಿ ಗರಿಷ್ಠ ಸೋಂಕಿತರ ಸಾವು ಅಂದರೆ 57 ಸಾವು ಸಂಭವಿಸಿವೆ. ಕೇರಳದಲ್ಲಿ 22 ಮತ್ತು ಪಶ್ಚಿಮಬಂಗಾಳದಲ್ಲಿ 20 ಸೋಂಕಿತರು ಸಾವನ್ನಪ್ಪಿದ್ದಾರೆ.
ಈವರೆಗೆ ಬ್ರಿಟನ್ ನಿಂದ ಬಂದವರಲ್ಲಿ ಕಾಣಿಸಿಕೊಂಡಿರುವ ಹೊಸ ಬಗೆಯ ರೂಪಾಂತರಿ ಸೋಂಕಿತರ ಸಂಖ್ಯ ಒಟ್ಟು 90 ತಲುಪಿದೆ.
***
(Release ID: 1687592)
Visitor Counter : 246
Read this release in:
Marathi
,
English
,
Urdu
,
Hindi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu