ಪ್ರಧಾನ ಮಂತ್ರಿಯವರ ಕಛೇರಿ
ಭಾರತ್ ಬಯೋಟೆಕ್ ಮತ್ತು ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆಗಳಿಗೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ದೇಶಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ
ಕೊರೊನಾ ಯೋಧರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ
Posted On:
03 JAN 2021 11:49AM by PIB Bengaluru
ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಲಸಿಕೆಗಳಿಗೆ ಡಿಸಿಜಿಐ ಅನುಮೋದನೆ ದೊರೆತಿರುವುದು ಕೊರೊನಾ ವಿರುದ್ಧದ ಸ್ಫೂರ್ತಿದಾಯಕ ಹೋರಾಟವನ್ನು ಬಲಪಡಿಸುವಲ್ಲಿ ಮಹತ್ವದ ತಿರುವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು ಇದು "ಸ್ಫೂರ್ತಿದಾಯಕ ಹೋರಾಟವನ್ನು ಬಲಪಡಿಸುವ ನಿರ್ಣಾಯಕ ತಿರುವಾಗಿದೆ!
ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಲಸಿಕೆಗಳಿಗೆ ಡಿಸಿಜಿಐ ಅನುಮೋದನೆ ನೀಡಿರುವುದು, ಆರೋಗ್ಯಪೂರ್ಣ ಮತ್ತು ಕೋವಿಡ್ –ಮುಕ್ತ ರಾಷ್ಟ್ರದ ಹಾದಿಗೆ ವೇಗ ನೀಡುತ್ತದೆ. ಅಭಿನಂದನೆಗಳು ಭಾರತ.
ಕಷ್ಟಪಟ್ಟು ಶ್ರಮಿಸಿದ ನಮ್ಮ ವಿಜ್ಞಾನಿಗಳಿಗೆ ಮತ್ತು ನಾವಿನ್ಯದಾರರಿಗೆ ಅಭಿನಂದನೆಗಳು.” ಎಂದು ತಿಳಿಸಿದ್ದಾರೆ.
“ತುರ್ತು ಬಳಕೆಯ ಅನುಮೋದನೆ ನೀಡಲಾಗಿರುವ ಎರಡೂ ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂಬುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ! ಮೂಲದಲ್ಲೇ ಕಾಳಜಿ ಮತ್ತು ಸಹಾನುಭೂತಿ ಹೊಂದಿರುವ ನಮ್ಮ ವೈಜ್ಞಾನಿಕ ಸಮುದಾಯ ಆತ್ಮನಿರ್ಭರ ಭಾರತದ ಕನಸನ್ನು ನನಸಾಗಿಸುವ ಸ್ಫೂರ್ತಿಯನ್ನು ಇದು ಪ್ರದರ್ಶಿಸುತ್ತದೆ.”
“ಪ್ರತೀಕೂಲ ಪರಿಸ್ಥಿತಿಯಲ್ಲೂ ಅದ್ಭುತ ಕಾರ್ಯ ನಿರ್ವಹಿಸಿದ ನಮ್ಮ ವೈದ್ಯರು, ವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ಪೊಲೀಸ್ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು ಮತ್ತು ಎಲ್ಲ ಕೊರೊನಾ ಯೋಧರಿಗೆ ನಾವು ನಮ್ಮ ಕೃತಜ್ಞತೆಗಳನ್ನು ಪುನರುಚ್ಚರಿಸುತ್ತೇವೆ. ಹಲವು ಜೀವಗಳನ್ನು ಉಳಿಸಿದ ಅವರಿಗೆ ನಾವು ಚಿರಋಣಿಯಾಗಿರಬೇಕು.” ಎಂದು ತಿಳಿಸಿದ್ದಾರೆ.
*****
(Release ID: 1685787)
Visitor Counter : 325
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam