ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

3 ತಿಂಗಳು ಪೂರೈಸಿದ ಜಿಎಸ್‌ಟಿ ಇ-ಇನ್ವಾಯ್ಸ್ ವ್ಯವಸ್ಥೆ; 37,000 ಕ್ಕೂ ಹೆಚ್ಚು ತೆರಿಗೆ ಪಾವತಿದಾರರಿಂದ 1680 ಲಕ್ಷಕ್ಕಿಂತ ಹೆಚ್ಚು ಖರೀದಿ ಪಟ್ಟಿ ಉಲ್ಲೇಖ ಸಂಖ್ಯೆ (ಐಆರ್‌ಎನ್‌) ಗಳು ಸಕ್ರಿಯ

2020 ರ ನವೆಂಬರ್‌ನ 589 ಲಕ್ಷ ಹಾಗೂ 2020 ರ ಡಿಸೆಂಬರ್‌ನಲ್ಲಿ 603 ಲಕ್ಷ ಇ-ಇನ್‌ವಾಯ್ಸ್‌ಗಳನ್ನು ಸಕ್ರಿಯಗೊಳಿಸಲಾಗಿದೆ

Posted On: 02 JAN 2021 1:03PM by PIB Bengaluru

ಜಿಎಸ್‌ಟಿ ವ್ಯವಸ್ಥೆಯಲ್ಲಿ ಬದಲಾವಣೆಗೆ ಕಾರಣವಾಗಿರುವ ಜಿಎಸ್‌ಟಿ ಇ-ಇನ್ವಾಯ್ಸ್ ವ್ಯವಸ್ಥೆಯು ಮೂರು ತಿಂಗಳು ಪೂರೈಸಿದೆ. ಇದು ತೆರಿಗೆ ಪಾವತಿದಾರರನ್ನು ಹೊಸ ವೇದಿಕೆಗೆ ಸುಗಮವಾಗಿ ಬದಲಾಯಿಸಲು ಅನುಕೂಲ ಮಾಡಿಕೊಟ್ಟಿದೆ. ಎನ್‌ಐಸಿ (ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್) ಅಭಿವೃದ್ಧಿಪಡಿಸಿರುವ ಇ-ಇನ್‌ವಾಯ್ಸ್ ವ್ಯವಸ್ಥೆಯಿಂದ ಕಳೆದ ಮೂರು ತಿಂಗಳುಗಳಲ್ಲಿ 37,000 ಕ್ಕೂ ಹೆಚ್ಚು ತೆರಿಗೆ ಪಾವತಿದಾರರು 1680 ಲಕ್ಷಕ್ಕಿಂತ ಹೆಚ್ಚು ಖರೀದಿಪಟ್ಟಿ ಉಲ್ಲೇಖ ಸಂಖ್ಯೆಗಳನ್ನು (ಐಆರ್‌ಎನ್‌ಗಳು) ಸಕ್ರಿಯಗೊಳಿಸಲು ಇದು ಅನುವು ಮಾಡಿಕೊಟ್ಟಿದೆ.

2020 ರ ಅಕ್ಟೋಬರ್‌ನಲ್ಲಿ 495 ಲಕ್ಷದಿಂದ ಪ್ರಾರಂಭವಾದ ಇ-ಇನ್‌ವಾಯ್ಸ್‌ನ ಉತ್ಪಾದನೆಯು, 2020 ರ ನವೆಂಬರ್‌ನಲ್ಲಿ 589 ಲಕ್ಷ ಮತ್ತು 2020 ರ ಡಿಸೆಂಬರ್‌ನಲ್ಲಿ 603 ಲಕ್ಷಗಳಿಗೆ ಏರಿಕೆ ಕಂಡಿದೆ. ಕುತೂಹಲಕಾರಿ ವಿಷಯವೆಂದರೆ. ಎನ್‌ಐಸಿ ಅಭಿವೃದ್ಧಿಪಡಿಸಿರುವ ಇ-ವೇ ಬಿಲ್ ವ್ಯವಸ್ಥೆಯ ಇ-ವೇ ಬಿಲ್ ಉತ್ಪಾದನೆಯು ಹಿಂದಿನ ವರ್ಷದ ಸೆಪ್ಟೆಂಬರ್ ನಿಂದ ಡಿಸೆಂಬರ್ ತಿಂಗಳುಗಳಿಗೆ ಹೋಲಿಸಿದರೆ 2020 ರ ಅವಧಿಯ ಇದೇ ತಿಂಗಳುಗಳಲ್ಲಿ  ಅತ್ಯಧಿಕವಾಗಿದೆ.

 

ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಈ ಅವಧಿಯಲ್ಲಿ ಐಆರ್‌ಎನ್‌ಗಳ ಉತ್ಪಾದನೆಯು ಅಡಚಣೆ ಮುಕ್ತವಾಗಿದೆ. ಆದಾಗ್ಯೂ, ಒಂದೇ ದಾಖಲಾತಿ ಸಂಖ್ಯೆಯಲ್ಲಿ ಪುನರಾವರ್ತಿತ ವಿನಂತಿಗಳು, ಅದೇ ದಾಖಲಾತಿ ಸಂಖ್ಯೆಯಲ್ಲಿ ಏಕಕಾಲಿಕ ವಿನಂತಿಗಳು, ದೃಢೀಕರಣ ವಿನಂತಿಗಳು ಅಥವಾ ಲೆಕ್ಕಾಚಾರದ ತಪ್ಪುಗಳು ಮುಂತಾದ ಸಾಮಾನ್ಯ ದೋಷಗಳು ಕಂಡುಬಂದಿವೆ. ಎನ್ಐಸಿ ಸಹಾಯ ಕೇಂದ್ರವು ತೆರಿಗೆ ಪಾವತಿದಾರರೊಂದಿಗೆ ಇಮೇಲ್, ದೂರವಾಣಿ ಮೂಲಕ ನಡೆಸಿದ ಸಂವಹನ ಸೇರಿದಂತೆ ಕೈಗೊಂಡ ಸಕ್ರಿಯ ಕ್ರಮಗಳು ಈ ದೋಷಗಳನ್ನು ತಗ್ಗಿಸಲು ಅನುಕೂಲ ಮಾಡಿಕೊಟ್ಟಿವೆ. ಐಆರ್‌ಎನ್‌ ಸಕ್ರಿಯಗೊಳಿಸಿದವರಿಗೆ ಐಆರ್‌ಎನ್‌ನ ಸಂಖ್ಯೆ ಮತ್ತು ಮೌಲ್ಯದ ಬಗ್ಗೆ ಎನ್‌ಐಸಿಯು ದೈನಂದಿನ ಅಪ್ ಡೇಟ್ ಕಳುಹಿಸುತ್ತಿದೆ.

ತೆರಿಗೆ ಪಾವತಿದಾರರು ಐಆರ್‌ಎನ್‌ ಸಕ್ರಿಯಗೊಳಿಸಲು ಒಟ್ಟು ವಹಿವಾಟು ಮಿತಿಯನ್ನು ಸರ್ಕಾರ 1 ಜನವರಿ 2020 ರಿಂದ ವಾರ್ಷಿಕ 100 ಕೋಟಿ ರೂ. ಗಳಿಗೆ ತಗ್ಗಿಸಿದೆ. ಈ ತೆರಿಗೆ ಪಾವತಿದಾರರಿಗೆ ಎನ್‌ಐಸಿ ಈಗಾಗಲೇ ಎಪಿಐ ಮತ್ತು ಆಫ್‌ಲೈನ್ ಟೂಲ್ ಆಧಾರಿತ ಸೈಟ್‌ಗಳನ್ನು ಸಕ್ರಿಯಗೊಳಿಸಿದೆ. ಜನವರಿ 1, 2020 ರಿಂದ ಈ ತೆರಿಗೆ ಪಾವತಿದಾರರಿಂದ ಇ-ಇನ್‌ವಾಯ್ಸ್‌ಗಳ ಉತ್ಪಾದನೆಯನ್ನು ನಿರ್ವಹಿಸಲು ಎನ್‌ಐಸಿಯು ಸಾಕಷ್ಟು ಮೂಲಸೌಕರ್ಯಗಳನ್ನು ಸಜ್ಜುಗೊಳಿಸಿದೆ. 500 ಕೋಟಿ ರೂ.ಗಳಿಗಿಂತ ಹೆಚ್ಚಿನ ವಹಿವಾಟು ಹೊಂದಿದ  ದೊಡ್ಡ ತೆರಿಗೆ ಪಾವತಿದಾರರು ತಮ್ಮ ವ್ಯವಸ್ಥೆಗಳಿಂದ ಪೂರೈಕೆದಾರರು ಮತ್ತು ಗ್ರಾಹಕರಿಗೆ ನೇರ ಎಪಿಐ ಪ್ರವೇಶವನ್ನು ಸಕ್ರಿಯಗೊಳಿಸಲು ಎನ್‌ಐಸಿ ಪೋರ್ಟಲ್ ಅನುಕೂಲ ಕಲ್ಪಿಸುತ್ತದೆ. 

ಎನ್‌ಐಸಿಯು ಸಣ್ಣ ತೆರಿಗೆ ಪಾವತಿದಾರರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ಎನ್‌ಐಸಿ-ಜಿಇಪಿಪಿ ಎಂಬ ಆಫ್‌ಲೈನ್ ಎಕ್ಸೆಲ್ ಆಧಾರಿತ ಐಆರ್‌ಎನ್‌ ಉತ್ಪಾದನೆ ಮತ್ತು ಮುದ್ರಣ ಸಾಧನವನ್ನು ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್ ತೆರಿಗೆ ಪಾವತಿದಾರರಿಗೆ ಖರೀದಿಪಟ್ಟಿ ವಿವರಗಳನ್ನು ನಮೂದಿಸಲು, ಎನ್‌ಐಸಿ ಐಆರ್‌ಎನ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಫೈಲ್ ಅನ್ನು ಸಿದ್ಧಪಡಿಸಲು, ಐಆರ್‌ಎನ್‌ ಅನ್ನು ಕ್ಯೂಆರ್ ಕೋಡ್‌ನೊಂದಿಗೆ ಡೌನ್‌ಲೋಡ್ ಮಾಡಲು ಮತ್ತು ಇ-ಇನ್ವಾಯ್ಸ್ ಅನ್ನು ಕ್ಯೂಆರ್ ಕೋಡ್‌ನೊಂದಿಗೆ ಮುದ್ರಿಸಲು ಅನುಮತಿ ನೀಡುತ್ತದೆ.

***



(Release ID: 1685600) Visitor Counter : 250