ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಪಾರಾದೀಪ್ ಬಂದರಿನಲ್ಲಿ ಭಾರಿ ಗಾತ್ರದ ಹಡಗುಗಳ ನಿರ್ವಹಣೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಆಧಾರದಲ್ಲಿ ಪೂರ್ವ ಬಂದರು ನಿರ್ಮಾಣ, ನಿರ್ವಹಣೆ ಮತ್ತು ಮೂಲಸೌಕರ್ಯ ವೃದ್ಧಿಗೆ ಕೇಂದ್ರ ಸಂಪುಟ ಅನುಮೋದನೆ
Posted On:
30 DEC 2020 3:51PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ, ಪಾರಾದೀಪ್ ಬಂದರಿನಲ್ಲಿ ಭಾರಿ ಗಾತ್ರದ ಹಡಗುಗಳ ನಿರ್ವಹಣೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಪಿಪಿಪಿ ಆಧಾರದಲ್ಲಿ ಪೂರ್ವ ಬಂದರಿನಲ್ಲಿ ಅಭಿವೃದ್ಧಿ ಸೇರಿ ನಿರ್ಮಾಣ, ನಿರ್ವಹಣೆ ಮತ್ತು ಹಸ್ತಾಂತರ(ಬೂಟ್) ನಡಿ ಬಂದರಿನೊಳಗಿನ ಮೂಲಸೌಕರ್ಯಗಳ ವೃದ್ಧಿ, ಗರಿಷ್ಠ ಬಳಕೆಗೆ ಅನುಮೋದನೆ ನೀಡಿದೆ.
ಆರ್ಥಿಕ ಹೊರೆ:
ಈ ಯೋಜನೆಯ ಅಂದಾಜು ವೆಚ್ಚ 3,004.63 ಕೋಟಿ ರೂ.ಗಳಾಗಿದೆ. ಇದರಲ್ಲಿ ನ್ಯೂ ವೆಸ್ಟರ್ನ್ ಡಾಕ್ ಅನ್ನು ಬೂಟ್ ಆಧಾರದಲ್ಲಿ ಮತ್ತು ಆಯ್ದ ಸಂಸ್ಥೆಗಳಿಗೆ ವಿನಾಯ್ತಿ ಮೂಲಕ ಕ್ರಮವಾಗಿ 2,040 ಕೋಟಿ ಮತ್ತು 352.13 ಕೋಟಿ ಬಂಡವಾಳವನ್ನು ಎತ್ತುವಳಿ ಮಾಡುವುದು ಸೇರಿದೆ ಮತ್ತು ಪಾರಾದೀಪ್ ಬಂದರು ಟ್ರಸ್ಟಿನಿಂದ ಸುಮಾರು 612.50 ಕೋಟಿ ರೂ. ಹೂಡಿಕೆ ಮಾಡಿ ಸಾಮಾನ್ಯ ಬೆಂಬಲ ಯೋಜನಾ ಮೂಲಸೌಕರ್ಯ ಒದಗಿಸಲಾಗುವುದು.
ವಿವರಗಳು:
ಉದ್ದೇಶಿತ ಈ ಯೋಜನೆಯಡಿ ದೊಡ್ಡ ಹಡಗುಗಳನ್ನು ನಿರ್ವಹಿಸಲು ವೆಸ್ಟರ್ನ್ ಡಾಕ್ ಬೇಸಿನ್ ನಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸಲಾಗುವುದು. ಅದಕ್ಕಾಗಿ ಎರಡು ಹಂತಗಳಲ್ಲಿ ತಲಾ 12.50 ಎಂಟಿಪಿಎ ಗಳಲ್ಲಿ ಒಟ್ಟು 25 ಎಂಟಿಪಿಎ (ಮಿಲಿಯನ್ ಟನ್ ಪರ್ ಆನಮ್ ) ಸಾಮರ್ಥ್ಯಕ್ಕಾಗಿ ಆಯ್ದ ಬೂಟ್ ವಿನಾಯ್ತಿಗಳನ್ನು ಆಯ್ಕೆ ಮಾಡಲಾಗುವುದು.
ಈ ವಿನಾಯ್ತಿ ಅವಧಿ ಒಪ್ಪಂದ ಅನುಷ್ಠಾನದಿಂದ 30ವರ್ಷಗಳ ಅವಧಿಯದ್ದಾಗಿರುತ್ತದೆ. ಪಾರಾದೀಪ್ ಬಂದರು ಟ್ರಸ್ಟ್ (ವಿನಾಯ್ತಿ ಪ್ರಾಧಿಕಾರ) ದೊಡ್ಡ ಗಾತ್ರದ ಹಡಗುಗಳ ನಿರ್ವಹಣೆಗೆ ಅಗತ್ಯ ಹಿನೀರು ವಿಸ್ತರಣೆ ಮತ್ತು ಇತರೆ ಕೆಲಸ ಕಾರ್ಯಗಳ ಜೊತೆಗೆ ಸಾಮಾನ್ಯ ಬೆಂಬಲದ ಯೋಜನಾ ಮೂಲಸೌಕರ್ಯಗಳನ್ನು ಒದಗಿಸಲಿದೆ.
ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿ:
ಈ ಯೋಜನೆಯನ್ನು ಬೂಟ್ ಆಧಾರದ ಮೇಲೆ ಆಯ್ದ ಸಂಸ್ಥೆಗಳು ಅಭಿವೃದ್ಧಿಪಡಿಸಲಿವೆ. ಆದರೆ ಬಂದರು, ಸಾಮಾನ್ಯ ಬೆಂಬಲ ಯೋಜನಾ ಮೂಲಸೌಕರ್ಯವನ್ನು ಒದಗಿಸುತ್ತದೆ.
ಪರಿಣಾಮ:
ಈ ಯೋಜನೆ ಕಾರ್ಯಾರಂಭ ಮಾಡಿದ ನಂತರ, ಕಲ್ಲಿದ್ದಲು ಮತ್ತು ಲೈಮ್ ಸ್ಟೋನ್ ಆಮದು ಅಗತ್ಯತೆಗಳನ್ನು ಪೂರೈಸುವ ಜೊತೆಗೆ ದ್ರವೀಕರಿಸಲ್ಪಟ್ಟ ಸ್ಲ್ಯಾಗ್ ಮತ್ತು ಸಿದ್ಧಪಡಿಸಿದ ಉಕ್ಕಿನ ಉತ್ಪನ್ನಗಳಿಗೂ ಸಹ ನೆರವು ನೀಡಬೇಕಾಗುತ್ತದೆ, ಏಕೆಂದರೆ ಪಾರಾದೀಪ್ ಬಂದರಿನ ಸುತ್ತ ಭಾರಿ ಪ್ರಮಾಣದ ಉಕ್ಕಿನ ಘಟಕಗಳು ಸ್ಥಾಪನೆಯಾಗಿವೆ. ಈ ಯೋಜನೆ ಇವುಗಳಿಗೆ ನೆರವಾಗಲಿದೆ. 1) ಬಂದರಿನಲ್ಲಿನ ದಟ್ಟಣೆ ತಗ್ಗಿಸುತ್ತದೆ. 2) ಸಮುದ್ರದ ಮೂಲಕ ಕಲ್ಲಿದ್ದಲು ಆಮದು ವೆಚ್ಚ ಕಡಿಮೆಯಾಗುತ್ತದೆ. 3) ಬಂದರಿನಿಂದಾಗಿ ಕೈಗಾರಿಕಾ ಆರ್ಥಿಕತೆಗೆ ಉತ್ತೇಜನ ದೊರಕುವುದಲ್ಲದೆ, ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.
ಹಿನ್ನೆಲೆ:
ಪಾರಾದೀಪ್ ಬಂದರು ಟ್ರಸ್ಟ್ (ಪಿಪಿಟಿ) ಭಾರತದ ಸರ್ಕಾರದಡಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಬಂದರು ಆಗಿದೆ ಮತ್ತು ಅದನ್ನು ಪ್ರಮುಖ ಬಂದರು ಕಾಯಿದೆ 1963 ರಡಿ ಸ್ಥಾಪಿಸಲಾಗಿದ್ದು, ಅದು 1966ರಲ್ಲಿ ಕಾರ್ಯಾರಂಭ ಮಾಡಿತು, ಮೊದಲಿಗೆ ಅದು ಕೇವಲ ಕಲ್ಲಿದ್ದಲು ರಫ್ತಿಗೆ ಪ್ರಮುಖ ಬಂದರಾಗಿತ್ತು. ಕಳೆದ 54 ವರ್ಷಗಳಲ್ಲಿ, ಬಂದರು ನಾನಾ ಬಗೆಯ ಸರಕುಗಳು ಅಂದರೆ ಕಬ್ಬಿಣದ ಅದಿರು, ಕ್ರೋಮ್ ಅದಿರು, ಅಲ್ಯೂಮಿನಿಯಂ ಘಟ್ಟಿಗಳು, ಕಲ್ಲಿದ್ದಲು, ಪಿಒಎಲ್, ರಸಗೊಬ್ಬರ ಕಚ್ಚಾ ಸಾಮಗ್ರಿ, ಲೈಮ್ ಸ್ಟೋನ್, ಕ್ಲಿಂಕರ್, ಸಿದ್ಧಪಡಿಸಿದ ಉಕ್ಕಿನ ಉತ್ಪನ್ನಗಳು, ಕಂಟೈನರ್ ಗಳು ಸೇರಿ ನಾನಾ ಬಗೆಯ ವಸ್ತುಗಳ ಆಮದು-ರಫ್ತು ನಿರ್ವಹಣೆಯಲ್ಲಿ ಪ್ರಮುಖ ಬಂದರಾಗಿ ರೂಪುಗೊಂಡಿದೆ.
ವಿಶೇಷವಾಗಿ ಕೋಕಿಂಗ್ ಕಲ್ಲಿದ್ದಲು ಮತ್ತು ಪ್ಲೂಕ್ಸಸ್ ಗಳ ಮತ್ತು ಸಿದ್ಧಪಡಿಸಿದ ಉಕ್ಕಿನ ಉತ್ಪನ್ನಗಳ ರಫ್ತಿನಲ್ಲಿ ಭಾರಿ ಬೇಡಿಕೆ ಕಾಯ್ದುಕೊಂಡಿದೆ, ಕಾರಣ ಬಂದರಿನ ಸುತ್ತಮುತ್ತ ಹೆಚ್ಚಿನ ಪ್ರಮಾಣದ ಉಕ್ಕು ಘಟಕಗಳಿವೆ. ಇದರಿಂದಾಗಿ ಅಗತ್ಯತೆಗಳನ್ನು ಪೂರೈಸಲು ಬಂದರಿನ ಸಾಮರ್ಥ್ಯ ಹೆಚ್ಚಳ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
***
(Release ID: 1684869)
Visitor Counter : 239
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam