ಪ್ರಧಾನ ಮಂತ್ರಿಯವರ ಕಛೇರಿ

ಡಿಸೆಂಬರ್ 26ರಂದು ಜಮ್ಮು ಮತ್ತು ಕಾಶ್ಮೀರದ ಎಲ್ಲ ನಿವಾಸಿಗಳಿಗೂ ವಿಸ್ತರಿಸಲ್ಪಡುವ ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಸೇಹತ್ ಯೋಜನೆಗೆ ಚಾಲನೆ ನೀಡಲಿರುವ ಪ್ರಧಾನಿ

Posted On: 24 DEC 2020 6:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೇ ಡಿಸೆಂಬರ್ 26ರಂದು ಮಧ್ಯಾಹ್ನ 12 ಗಂಟೆಗೆ ಜಮ್ಮು ಮತ್ತು ಕಾಶ್ಮೀರದ ಎಲ್ಲ ನಿವಾಸಿಗಳಿಗೆ ಆರೋಗ್ಯ ರಕ್ಷಣೆ ವ್ಯಾಪ್ತಿ ವಿಸ್ತರಿಸುವ ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಸೇಹತ್ ಗೆ ವಿಡಿಯೋಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಈ ಯೋಜನೆಯಡಿ ಸಾಮೂಹಿಕ ಆರೋಗ್ಯ ರಕ್ಷಣೆ ಖಾತ್ರಿಪಡಿಸುವುದಲ್ಲದೆ, ಆರ್ಥಿಕ ಅಪಾಯದಿಂದ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಮತ್ತು ಎಲ್ಲ ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ಕೈಗೆಟುಕುವ ದರದಲ್ಲಿ ಅಗತ್ಯ ಆರೋಗ್ಯ ಸೇವೆಗಳು ಲಭ್ಯವಾಗಲಿವೆ. ಕೇಂದ್ರ ಗೃಹ ಸಚಿವರು ಮತ್ತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 ಈ ಯೋಜನೆಯಡಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಎಲ್ಲ ನಿವಾಸಿಗಳು ಉಚಿತ ವಿಮೆ ವ್ಯಾಪ್ತಿಗೆ ಒಳಪಡಲಿದ್ದಾರೆ.  ಇದರಡಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಎಲ್ಲ ನಿವಾಸಿಗಳಿಗೆ ಫ್ಲೋಟರ್ ಆಧಾರದಲ್ಲಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಆರ್ಥಿಕ ಸುರಕ್ಷತೆ ದೊರಕಲಿದೆ. ಅಲ್ಲದೆ,ಪಿಎಂ-ಜೆಎವೈ ವಿಸ್ತರಣೆ ಕಾರ್ಯಾಚರಣೆಯಿಂದ 15 (ಅಂದಾಜು) ಲಕ್ಷ ಕುಟುಂಬಗಳು ಹೆಚ್ಚುವರಿಯಾಗಿ ಯೋಜನೆ ವ್ಯಾಪ್ತಿಗೆ ಒಳಪಡಲಿವೆ. ಈ ಯೋಜನೆ ಪಿಎಂ-ಜೆಎವೈ ಜೊತೆಗೆ ವಿಮಾ ಮಾದರಿಯಲ್ಲೂ ಸಹ ಕಾರ್ಯನಿರ್ವಹಿಸಲಿದೆ. ಯೋಜನೆಯ ಪ್ರಯೋಜನ ದೇಶಾದ್ಯಂತ ಎಲ್ಲಿ ಬೇಕಾದರೂ ಪಡೆಯಬಹುದು. ಪಿಎಂ-ಜೆಎವೈ ಅಡಿಯಲ್ಲಿ ನೋಂದಾಯಿಸಿಕೊಂಡಿರುವ ಆಸ್ಪತ್ರೆಗಳು ಈ ಯೋಜನೆಯಡಿಯಲ್ಲೂ ಸೇವೆ ನೀಡಲಿವೆ.

ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ ಗುರಿ ಸಾಧನೆ

ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ(ಯುಎಚ್ ಸಿ)ಯಲ್ಲಿ ಎಲ್ಲ ಸಂಪೂರ್ಣ ಅಗತ್ಯ ಆರೋಗ್ಯ ಸೇವೆಗಳು, ಗುಣಮಟ್ಟದ ಆರೋಗ್ಯ ಸೇವೆಗಳು, ಆರೋಗ್ಯ ಉತ್ತೇಜನದಿಂದ ಮುನ್ನೆಚ್ಚರಿಕೆ, ಚಿಕಿತ್ಸೆ, ಪುನರ್ವಸತಿ ಮತ್ತು ಆರೋಗ್ಯ ರಕ್ಷಣೆ, ಆರೋಗ್ಯ ಸೇವೆಗಳಿಗೆ ತಗುಲುವ ವೆಚ್ಚವನ್ನು ತಮ್ಮ ಜೇಬುಗಳಿಂದ ಖರ್ಚು ಮಾಡಬೇಕಿಲ್ಲ ಮತ್ತು ಜನರನ್ನು ಬಡತನಕ್ಕೆ ದೂಡುವ ಅಪಾಯ ತಗ್ಗುತ್ತದೆ. ಆಯುಷ್ಮಾನ್ ಭಾರತ್ ಅಡಿ ಎರಡು ಪ್ರಮುಖ ಆಧಾರ ಸ್ಥಂಭಗಳಿವೆ, ಅವುಗಳೆಂದರೆ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು ಮತ್ತು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ- ಇವರೆನ್ನೂ ಯುಎಚ್ ಸಿ ಗುರಿ ಸಾಧನೆಗೆ ರೂಪಿಸಲಾಗಿದೆ.

****



(Release ID: 1684028) Visitor Counter : 211